ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿಷೇಧದ ಹೊರತಾಗಿಯೂ ಟಿಕ್‌ಟಾಕ್ ಭಾರತೀಯ ಉದ್ಯೋಗಿಗಳಿಗೆ 4 ಲಕ್ಷ ರೂ. ಬೋನಸ್

|
Google Oneindia Kannada News

ನವ ದೆಹಲಿ, ಸೆಪ್ಟೆಂಬರ್ 28: ಚೀನಾದ ಮೂಲದ ಟಿಕ್‌ಟಾಕ್ ಮತ್ತು ಹೆಲೋ ಆ್ಯಪ್‌ಗಳ ಮಾತೃ ಸಂಸ್ಥೆಯಾದ ಬೈಟ್‌ಡ್ಯಾನ್ಸ್‌ ಭಾರತದಲ್ಲಿನ ತನ್ನ ಉದ್ಯೋಗಿಗಳಿಗೆ 4 ಲಕ್ಷ ರೂ.ಗಳ ನಗದು ಬೋನಸ್ ನೀಡಿದೆ.

ಕಂಪನಿಯ ಉದ್ಯೋಗಿಗಳು ವಿದೇಶಿ ಒಪ್ಪಂದದ ನಂತರ ಬೀಜಿಂಗ್ ಮೂಲದ ಕಂಪನಿಯ ವೇತನದಾರರಿಗೆ ಸೇರುವ ನಿರೀಕ್ಷೆಯಿತ್ತು. ಕೊರೊನಾವೈರಸ್ ಸಾಂಕ್ರಾಮಿಕ ಮತ್ತು ಬದಲಾಗುತ್ತಿರುವ ಆರ್ಥಿಕ ಪರಿಸ್ಥಿತಿಯಿಂದ ಉಂಟಾಗುವ ಸವಾಲುಗಳನ್ನು ನಿವಾರಿಸಲು ನೌಕರರಿಗೆ ಬೋನಸ್ ನೀಡುವುದಾಗಿ ಬೈಟ್‌ಡ್ಯಾನ್ಸ್ ಈ ಹಿಂದೆ ಆಂತರಿಕ ಜ್ಞಾಪಕ ಪತ್ರದ ಮೂಲಕ ಘೋಷಿಸಿತ್ತು.

ಟಿಕ್ ಟಾಕ್ Oracle, ವಾಲ್ಮಾರ್ಟ್ ಡೀಲ್ ಓಕೆ ಎಂದ ಅಧ್ಯಕ್ಷ ಟ್ರಂಪ್ ಟಿಕ್ ಟಾಕ್ Oracle, ವಾಲ್ಮಾರ್ಟ್ ಡೀಲ್ ಓಕೆ ಎಂದ ಅಧ್ಯಕ್ಷ ಟ್ರಂಪ್

ಜುಲೈ ಮತ್ತು ಆಗಸ್ಟ್ ನಡುವೆ 26 ಅಥವಾ ಹೆಚ್ಚಿನ ಕೆಲಸದ ದಿನಗಳಲ್ಲಿ ಕೆಲಸ ಮಾಡುವ ಎಲ್ಲಾ ಸಾಮಾನ್ಯ ಉದ್ಯೋಗಿಗಳಿಗೆ ಅವರ ಆಗಸ್ಟ್ ಮೂಲ ವೇತನದ ಅರ್ಧದಷ್ಟು ಬೋನಸ್ ನೀಡಲಾಗುತ್ತಿದೆ ಎಂದು ಹೇಳಲಾಗಿದೆ.

ಭಾರತೀಯ ಉದ್ಯೋಗಿಗಳಿಗೆ ಎಷ್ಟು ಬೋನಸ್?

ಭಾರತೀಯ ಉದ್ಯೋಗಿಗಳಿಗೆ ಎಷ್ಟು ಬೋನಸ್?

ಎಕನಾಮಿಕ್ ಟೈಮ್ಸ್‌ ವರದಿ ಪ್ರಕಾರ, ವಿಷಯದ ಬಗ್ಗೆ ತಿಳಿದಿರುವ ಜನರ ಪ್ರಕಾರ, ಮಧ್ಯಮದಿಂದ ಹಿರಿಯ ಉದ್ಯೋಗಿಗಳಿಗೆ 50,000 ರೂ.ಗಳಿಂದ 4 ಲಕ್ಷ ರೂ. ವರೆಗೆ ಬೀಜಿಂಗ್ ಮೂಲದ ತಂತ್ರಜ್ಞಾನ ಕಂಪನಿಯು ಬೋನಸ್ ನೀಡಿದೆ. ಈ ಕಂಪನಿಯು ಭಾರತದಲ್ಲಿ 2,000 ಕ್ಕೂ ಹೆಚ್ಚು ಉದ್ಯೋಗಿಗಳನ್ನು ಹೊಂದಿದೆ.

ಬೋನಸ್ ಅನ್ನು ಕಂಪನಿಯು ದೃಢಪಡಿಸಿದೆ, ಆದರೆ ಯಾವುದೇ ವಿವರವನ್ನು ನೀಡಿಲ್ಲ. ಸೆಪ್ಟೆಂಬರ್ 8 ರಂದು ತನ್ನ ಉದ್ಯೋಗಿಗಳಿಗೆ ನೀಡಿದ ಪತ್ರದಲ್ಲಿ '' ನಿಮ್ಮ ಪ್ರಯತ್ನ ಮತ್ತು ಸಮರ್ಪಣೆಗೆ ಎಲ್ಲರಿಗೂ ಧನ್ಯವಾದಗಳು'' ಎಂದು ಹೇಳಿದೆ. ಎಲ್ಲಾ ಅರ್ಹ ಉದ್ಯೋಗಿಗಳಿಗೆ ನಾವು ನಗದು ಬೋನಸ್ ನೀಡುತ್ತೇವೆ ಎಂದು ತಿಳಿಸಿದೆ.

ಅಮೇರಿಕನ್ ಕಂಪನಿಯೊಂದಿಗೆ ವ್ಯವಹಾರ

ಅಮೇರಿಕನ್ ಕಂಪನಿಯೊಂದಿಗೆ ವ್ಯವಹಾರ

ಈ ತಿಂಗಳ ಆರಂಭದಲ್ಲಿ, ಕಿರು ವೀಡಿಯೊ ಹಂಚಿಕೆ ಅಪ್ಲಿಕೇಶನ್‌ನ ಚೀನಾದ ಮಾಲೀಕರು ತನ್ನ ಯುಎಸ್ ವ್ಯವಹಾರಕ್ಕಾಗಿ ಮೈಕ್ರೋಸಾಫ್ಟ್ ಬದಲಿಗೆ ಒರಾಕಲ್ ಜೊತೆ ಒಪ್ಪಂದವನ್ನು ಅನುಮೋದಿಸಿದರು. ಈ ಆ್ಯಪ್ ಅನ್ನು ಯಾವುದೇ ಅಮೆರಿಕನ್ ಕಂಪನಿಗೆ ಮಾರಾಟ ಮಾಡದಿದ್ದರೆ ಅದನ್ನು ನಿಷೇಧಿಸಲಾಗುವುದು ಎಂದು ಟ್ರಂಪ್ ಆಡಳಿತ ಘೋಷಿಸಿತ್ತು.

ಟ್ರಂಪ್ ಆಡಳಿತವು ನಿಗದಿಪಡಿಸಿದ ಗಡುವಿನ ಮೊದಲು ಕಂಪನಿಯು ಒಪ್ಪಂದವನ್ನು ತಲುಪಿತು. ತನ್ನ ತಂತ್ರಜ್ಞಾನವನ್ನು ರಫ್ತು ಮಾಡಲು ಬೈಟ್ ಡ್ಯಾನ್ಸ್ ಇತ್ತೀಚೆಗೆ ಚೀನಾ ಸರ್ಕಾರದಿಂದ ಅನುಮತಿ ಕೋರಿತು. ಏಕೆಂದರೆ ಇದರ ಉದ್ದೇಶವು ಟಿಕ್‌ಕಾಕ್ ಅನ್ನು ಅಮೆರಿಕಾದಲ್ಲಿ ಒಪ್ಪಂದದ ಮೂಲಕ ನಿಷೇಧಿಸದಂತೆ ಉಳಿಸುವುದು. ಆದಾಗ್ಯೂ, ಚೀನಾದ ರಾಜ್ಯ ಮಾಧ್ಯಮವು ಒರಾಕಲ್ ಮತ್ತು ವಾಲ್ಮಾರ್ಟ್‌ನೊಂದಿಗಿನ ಬೈಟ್‌ಡ್ಯಾನ್ಸ್ ಒಪ್ಪಂದಕ್ಕೆ ವಿರುದ್ಧವಾಗಿದೆ ಮತ್ತು ಅದನ್ನು ಅನ್ಯಾಯವೆಂದು ಹೇಳಿದೆ. ಶ್ವೇತಭವನದ ಬೆಂಬಲದೊಂದಿಗೆ ಈ ಒಪ್ಪಂದವನ್ನು ಅನುಮೋದಿಸಲು ಬೀಜಿಂಗ್‌ಗೆ ಯಾವುದೇ ಕಾರಣವಿಲ್ಲ ಎಂದು ಚೀನಾದ ಮಾಧ್ಯಮ ಹೇಳಿದೆ.

ಭಾರತದಲ್ಲಿ ಈಗಾಗಲೇ ಟಿಕ್‌ಟಾಕ್ ನಿಷೇಧ

ಭಾರತದಲ್ಲಿ ಈಗಾಗಲೇ ಟಿಕ್‌ಟಾಕ್ ನಿಷೇಧ

ಜೂನ್ 29 ರಂದು ಭಾರತವು ಟಿಕ್‌ಟಾಕ್, ಶೇರ್ ಇಟ್, ಯುಸಿ ಬ್ರೌಸರ್, ಬೈದು ನಕ್ಷೆ, ಹೆಲೋ, ಮಿ ಸಮುದಾಯ, ಕ್ಲಬ್ ಫ್ಯಾಕ್ಟರಿ, ವೀಚಾಟ್ ಮತ್ತು ಯುಸಿ ನ್ಯೂಸ್ ಸೇರಿದಂತೆ ಚೀನಾ ಲಿಂಕ್‌ಗಳೊಂದಿಗಿನ 59 ಆ್ಯಪ್‌ಗಳನ್ನು ನಿಷೇಧಿಸಿದೆ. ಭಾರತದ ಸಾರ್ವಭೌಮತ್ವ ಮತ್ತು ಸಮಗ್ರತೆ, ಭಾರತದ ರಕ್ಷಣೆ, ರಾಜ್ಯದ ಭದ್ರತೆ ಮತ್ತು ಸಾರ್ವಜನಿಕ ಸುವ್ಯವಸ್ಥೆ ಅಡಿಯಲ್ಲಿ ಈ ಆ್ಯಪ್‌ಗಳನ್ನು ನಿಷೇಧ ಮಾಡಲಾಗಿದೆ. ಆ ಸಮಯದಲ್ಲಿ ಟಿಕ್‌ಟಾಕ್ ಭಾರತದಲ್ಲಿ 200 ದಶಲಕ್ಷಕ್ಕೂ ಹೆಚ್ಚು ಬಳಕೆದಾರರನ್ನು ಹೊಂದಿತ್ತು.

ಟಿಕ್‌ ಟಾಕ್ ನಿಷೇಧದಿಂದ 45,000 ಕೋಟಿ ನಷ್ಟ

ಟಿಕ್‌ ಟಾಕ್ ನಿಷೇಧದಿಂದ 45,000 ಕೋಟಿ ನಷ್ಟ

ಚೀನಾದ ಸರ್ಕಾರಿ ಮಾಧ್ಯಮ ದಿ ಗ್ಲೋಬಲ್ ಟೈಮ್ಸ್ ಪ್ರಕಟಿಸಿದ ವರದಿಯ ಪ್ರಕಾರ, ಟಿಕ್‌ಟಾಕ್ ಮತ್ತು ಹೆಲೋ ಅಪ್ಲಿಕೇಶನ್‌ಗಳ ಮೂಲ(Parent) ಕಂಪನಿಯಾದ ಬೈಟ್‌ಡ್ಯಾನ್ಸ್‌ಗೆ ಈ ಆ್ಯಪ್‌ಗಳ ನಿಷೇಧದಿಂದಾಗಿ 6 ಬಿಲಿಯನ್ ಡಾಲರ್ (ಸುಮಾರು 45 ಸಾವಿರ ಕೋಟಿ) ವರೆಗೆ ನಷ್ಟವಾಗಬಹುದು ಎನ್ನಲಾಗಿದೆ.

English summary
Amid the ongoing ban on TikTok and Helo, Bytedance has issued cash bonuses up to Rs 4 lakh to employees in India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X