• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

2020ರ ಜೂನ್ ಹೊತ್ತಿಗೆ ಕಾಗ್ನಿಜಂಟ್ ನ 7000 ಹುದ್ದೆಗಳಿಗೆ ಕತ್ತರಿ

|
Google Oneindia Kannada News

ನವದೆಹಲಿ, ಅಕ್ಟೋಬರ್ 31: ಮಾಹಿತಿ ತಂತ್ರಜ್ಞಾನ ಸೇವೆ ಒದಗಿಸುವ ಕಾಗ್ನಿಜಂಟ್ ಕಂಪೆನಿಯಿಂದ ಅಂದಾಜು ಐದರಿಂದ ಏಳು ಸಾವಿರ ಹುದ್ದೆಗಳನ್ನು ಕಡಿತ ಮಾಡಲು ತೀರ್ಮಾನಿಸಲಾಗಿದೆ. ಹೀಗೆ ಕಡಿತ ಮಾಡುವ ಹುದ್ದೆಗಳ ಕೊರತೆಯನ್ನು ಐದು ಸಾವಿರ ಮಂದಿ ಈಗಾಗಲೇ ಕೆಲಸ ಮಾಡುತ್ತಿರುವ ಅಸೋಸಿಯೇಟ್ ಮಟ್ಟದವರಿಗೆ ಪುನರ್ ಕೌಶಲ ತರಬೇತಿ ನೀಡಿ, ಸರಿದೂಗಿಸಲು ನಿರ್ಧರಿಸಲಾಗಿದೆ.

ಒಟ್ಟು ಹನ್ನೆರಡು ಸಾವಿರ ಹುದ್ದೆಗಳನ್ನು ಮುಂದಿನ ವರ್ಷದ ಹೊತ್ತಿಗೆ ಕಡಿತ ಮಾಡಲು ನಿರ್ಧಾರ ಕೈಗೊಳ್ಳಲಾಗಿದೆ. ಮಧ್ಯಮ ಹಂತದಿಂದ ಹಿರಿಯ ಮಟ್ಟದ ಅಧಿಕಾರಿಗಳು ಈ ವೆಚ್ಚ ಕಡಿತದ ತಾಲೀಮಿನಲ್ಲಿ ಕೆಲಸ ಕಳೆದುಕೊಳ್ಳಲಿದ್ದಾರೆ. ಕಾಗ್ನಿಜಂಟ್ ಕಂಪೆನಿಯನ್ನು ಪ್ರಗತಿಯ ಪಥದಲ್ಲಿ ನಡೆಸಲು ಮುಂದಿನ ಎರಡು ವರ್ಷಗಳ ಕಾಲ ಮುಖ್ಯ ನಿರ್ಧಾರಗಳನ್ನು ಜಾರಿಗೆ ತರಲಾಗುತ್ತದೆ.

ನಿಜವಾದ ಮುನ್ಸೂಚನೆ, ಕಾಗ್ನಿಜೆಂಟ್ ಹಿರಿಯ ಅಧಿಕಾರಿ ಹೊರಕ್ಕೆನಿಜವಾದ ಮುನ್ಸೂಚನೆ, ಕಾಗ್ನಿಜೆಂಟ್ ಹಿರಿಯ ಅಧಿಕಾರಿ ಹೊರಕ್ಕೆ

ಉದ್ಯೋಗ ಕಡಿತ, ಮಾರಾಟಕ್ಕಾಗಿ ಹೂಡಿಕೆ ಮತ್ತು ಡಿಜಿಟಲ್ ಪ್ರಗತಿ ಬಗ್ಗೆ ಹೆಚ್ಚಿನ ಗಮನ ಕೇಂದ್ರೀಕರಿಸುವುದು ಕಂಪೆನಿಯ ಉದ್ದೇಶಗಳಲ್ಲಿ ಸೇರಿದೆ. ಒಟ್ಟಾರೆ ಕಾಗ್ನಿಜಂಟ್ ಕಂಪೆನಿಯ ಕೆಲಸದ ವಿಧಾನ ಸರಳ ಮಾಡುವುದು, ಹಣ ಹೂಡಿಕೆ ಮತ್ತು ವೆಚ್ಚದ ರಚನೆಯನ್ನು ಇಳಿಸುವುದು ಗುರಿಯಾಗಿದೆ. ಈ ಪ್ರಯತ್ನದಲ್ಲಿ ಮಧ್ಯಮ ಹಂತದಿಂದ ಉನ್ನತ ಹುದ್ದೆಯ ತನಕ ಜವಾಬ್ದಾರಿ ನಿರ್ವಹಿಸುತ್ತಿರುವ ಹತ್ತರಿಂದ ಹನ್ನೆರಡು ಸಾವಿರ ಮಂದಿ ತಮ್ಮ ಹುದ್ದೆಯನ್ನು ಕಳೆದುಕೊಳ್ಳಲಿದ್ದಾರೆ.

2019ರ ಸೆಪ್ಟೆಂಬರ್ ಕೊನೆ ಹೊತ್ತಿನ ಅಂಕಿ- ಅಂಶದ ಪ್ರಕಾರ, ಕಾಗ್ನಿಜಂಟ್ ಕಂಪೆನಿಯಲ್ಲಿ 2,89,900 ಉದ್ಯೋಗಿಗಳಿದ್ದಾರೆ. ಕಾಗ್ನಿಜಂಟ್ ಕಂಪೆನಿಯಿಂದ ಹೂಡಿಕೆಯ ಸರಣಿ ಅವಕಾಶಗಳನ್ನು ಗುರುತಿಸಲಾಗಿದೆ. ಅದಕ್ಕಾಗಿ ಹಣದ ಅಗತ್ಯ ಇದೆ. ಇದರ ಜತೆಗೆ ಆದಾಯ ತರುವಂಥ ಐನೂರು ಸಿಬ್ಬಂದಿಯನ್ನು ಮುಂಬರುವ ದಿನಗಳಲ್ಲಿ ನೇಮಕ ಮಾಡಿಕೊಳ್ಳಲಾಗುತ್ತದೆ ಎಂದು ಕಂಪೆನಿ ಸಿಇಒ ತಿಳಿಸಿದ್ದಾರೆ.

ಇನ್ನು ಕಾಗ್ನಿಜಂಟ್ ಅಕಾಡೆಮಿ ಮೇಲೆ ಕಂಪೆನಿ ಹೂಡಿಕೆ ಮಾಡುತ್ತಿದೆ. ಇದು ಆಂತರಿಕವಾಗಿ ಕಂಪೆನಿಯ ಸಿಬ್ಬಂದಿಗಾಗಿಯೇ ಇರುವಂಥದ್ದು. ಡಿಜಿಟಲ್ ಕೆಲಸಗಳಿಗೆ ಬೇಕಾದ ತರಬೇತಿಯನ್ನು ಇಲ್ಲಿ ನೀಡಲಾಗುತ್ತದೆ. ಆಟೋಮೆಷನ್, ಮಾರ್ಕೆಟಿಂಗ್ ಹಾಗೂ ಬ್ರ್ಯಾಂಡಿಂಗ್ ಮೇಲೆ ಹೂಡಿಕೆ ಹೆಚ್ಚು ಮಾಡಲಾಗುತ್ತದೆ.

ಭವಿಷ್ಯದ ಅಭಿವೃದ್ಧಿ ಡಿಜಿಟಲ್ ಮೇಲೆ ನಿಂತಿದೆ. ಆದ್ದರಿಂದ ಡೇಟಾ, ಡಿಜಿಟಲ್ ಎಂಜಿನಿಯರಿಂಗ್, ಕ್ಲೌಡ್ ಮತ್ತು ಇಂಟರ್ನೆಟ್ ಆಫ್ ಥಿಂಗ್ಸ್ (ಐಒಟಿ) ಈ ನಾಲ್ಕು ಕ್ಷೇತ್ರದಲ್ಲಿ ಕಾಗ್ನಿಜಂಟ್ ಗೆಲ್ಲಲು ಬಯಸುತ್ತದೆ ಎಂದು ಸಿಇಒ ಹೇಳಿದ್ದಾರೆ.

English summary
The 5,000 to 7,000 employees will exit Cognizant by mid-2020. This is one of the cost cutting efforts by company.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X