ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬರ್ಗರ್ ಕಿಂಗ್ IPO: ಪ್ರತಿ ಷೇರಿಗೆ 59-60 ರೂಪಾಯಿಗೆ ಬೆಲೆ ನಿಗದಿ

|
Google Oneindia Kannada News

ಮುಂಬೈ, ನವೆಂಬರ್ 27: ಖಾಸಗಿ ಇಕ್ವಿಟಿ ಸಂಸ್ಥೆ ಎವರ್‌ಸ್ಟೋನ್ ಗ್ರೂಪ್ ಶುಕ್ರವಾರ ಬರ್ಗರ್ ಕಿಂಗ್ ಇಂಡಿಯಾ ಲಿಮಿಟೆಡ್ನ ಆರಂಭಿಕ ಸಾರ್ವಜನಿಕ ಕೊಡುಗೆ (ಐಪಿಒ) ಅನ್ನು ಘೋಷಿಸಿದ್ದು, ಪ್ರತಿ ಷೇರಿಗೆ 59 ರಿಂದ 60 ರೂಪಾಯಿಗೆ ನಿಗದಿಪಡಿಸಿದೆ.

ಡಿಸೆಂಬರ್ 2ರಿಂದ ಪ್ರಾರಂಭವಾಗಲಿರುವ ಐಪಿಒ ಡಿಸೆಂಬರ್ 4ಕ್ಕೆ ಮುಕ್ತಾಯಗೊಳ್ಳಲಿದ್ದು , ತನ್ನ ಪ್ರಪ್ರಥಮ ಐಪಿಒ ಮುಖಾಂತರ ಕಂಪನಿಯು 810 ಕೋಟಿ ರೂಪಾಯಿ ಹಣವನ್ನು ಸಂಗ್ರಹಿಸುತ್ತದೆ.

LIC IPO: ಚುರುಕುಗೊಂಡ ಪ್ರಕ್ರಿಯೆLIC IPO: ಚುರುಕುಗೊಂಡ ಪ್ರಕ್ರಿಯೆ

ಇದರಲ್ಲಿ ಹೊಸ ಷೇರುಗಳ ವಿತರಣೆ 450 ಕೋಟಿ ರೂಪಾಯಿ ಮತ್ತು ಪ್ರವರ್ತಕರಾದ ಕ್ಯೂಎಸ್ಆರ್ ಏಷ್ಯಾ ಪ್ರೈವೇಟ್ ಲಿಮಿಟೆಡ್ 60 ಮಿಲಿಯನ್ ಷೇರುಗಳನ್ನು ಮಾರಾಟ ಮಾಡುತ್ತದೆ.

Burger King India IPO: Price Band Sets Rs 59-60

ಅಮೆರಿಕಾ ಮೂಲದ ಭಾರತೀಯ ಅಂಗಸಂಸ್ಥೆಯಾದ ಬರ್ಗರ್ ಕಿಂಗ್ ಇಂಡಿಯಾ ಲಿಮಿಟೆಡ್ ಒಟ್ಟು 810 ಕೋಟಿ ಸಂಗ್ರಹಿಸುವ ಗುರಿ ಇಟ್ಟುಕೊಂಡಿದ್ದು, ಪ್ರವರ್ತಕರಿಗೆ ಪ್ರತಿ ಷೇರಿಗೆ 44 ರುಪಾಯಿಯಂತೆ 58.08 ಕೋಟಿ ರುಪಾಯಿ ಹಾಗೂ 58.50 ರುಪಾಯಿ ಪ್ರತಿ ಷೇರಿಗೆ ಎಂಬಂತೆ 92 ಕೋಟಿ ರೂ. ಪೂರ್ವ ಐಪಿಒ ಹಣವನ್ನು ಸಂಗ್ರಹಿಸಿದೆ. ಹೀಗಾಗಿ ಷೇರುಗಳ ಹೊಸ ವಿತರಣೆಯು 600 ಕೋಟಿಯಿಂದ 450 ಕೋಟಿ ರೂಪಾಯಿಗೆ ತಲುಪಿದೆ.

ಇನ್ನು ಐಪಿಒಗೆ ಬಿಡ್‌ ಸಲ್ಲಿಸುವವರು ಕನಿಷ್ಠ 250 ಷೇರುಗಳಿಗೆ ಅರ್ಜಿ ಸಲ್ಲಿಸಬೇಕು. ಗರಿಷ್ಠ 3,250 ಷೇರುಗಳನ್ನು ಖರೀದಿ ಮಾಡಲು ಅವಕಾಶವಿದೆ.

ನವೆಂಬರ್ 2014 ರಲ್ಲಿ ತನ್ನ ಮೊದಲ ರೆಸ್ಟೋರೆಂಟ್ ಅನ್ನು ತೆರೆದ ನಂತರ, ಕಂಪನಿಯು ತನ್ನ ಉತ್ತಮ ಕಾರ್ಯ ನಿರ್ವಹಣೆ ಮೂಲಕ ಹೆಸರುವಾಸಿಯಾಗಿದೆ. 30 ಜೂನ್ 2019 ರ ಹೊತ್ತಿಗೆ, ಇದು 16 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಮತ್ತು ಭಾರತದಾದ್ಯಂತ 47 ನಗರಗಳಲ್ಲಿ ಏಳು ಉಪ ಫ್ರ್ಯಾಂಚೈಸ್ಡ್‌ ಬರ್ಗರ್ ಕಿಂಗ್ ರೆಸ್ಟೋರೆಂಟ್‌ಗಳನ್ನು ಒಳಗೊಂಡಂತೆ 202 ರೆಸ್ಟೋರೆಂಟ್‌ಗಳನ್ನು ಹೊಂದಿತ್ತು.

ಹಣಕಾಸು ವರ್ಷ 2020ರಲ್ಲಿ ಬರ್ಗರ್ ಕಿಂಗ್‌ನ ಆದಾಯವು 846.8 ಕೋಟಿಯಷ್ಟಿದ್ದು, ಖರ್ಚು 919 ಕೋಟಿ ರೂ.ನಷ್ಟಿದೆ. ನಿವ್ವಳ ಆದಾಯ - 77.6 ಕೋಟಿ ಹಾಗೂ ನಿವ್ವಳ ಅಂಚು -9.2 ಕೋಟಿಯಷ್ಟಿದೆ.

English summary
Private equity firm Everstone Group promoted Burger King India Ltd on Friday set the price band at ₹59-60 per share for its initial public offering (IPO) which is slated for launch on 2 December.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X