ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Budget 2023: ಚಿನ್ನ, ಬೆಳ್ಳಿ, ವಜ್ರಗಳ ಬೆಲೆ ಮತ್ತೆ ದುಬಾರಿ- ಆಭರಣ ಪ್ರಿಯರಿಗೆ ಬಿಗ್‌ ಶಾಕ್‌

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು 'Union Budget 2023' ಅನ್ನು ಮಂಡಿಸಿದ್ದಾರೆ. ಈ ವೇಳೆ, ಚಿನ್ನ, ಬೆಳ್ಳಿ, ವಜ್ರಗಳ ಬೆಲೆ ಮತ್ತಷ್ಟು ದುಬಾರಿಯಾಗಲಿದೆ ಎಂದು ತಿಳಿಸಿದ್ದಾರೆ. ಇದು ಚಿನ್ನ ಪ್ರಿಯರಿಗೆ ಆಘಾತ ನೀಡಿದೆ. ಇಲ್ಲಿದೆ ಮಾಹಿತಿ

|
Google Oneindia Kannada News

ನವದೆಹಲಿ, ಫೆಬ್ರುವರಿ 01: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು 'Union Budget 2023' ಅನ್ನು ಮಂಡಿಸಿದ್ದಾರೆ. ಈ ವೇಳೆ, ಚಿನ್ನ, ಬೆಳ್ಳಿ, ವಜ್ರಗಳ ಬೆಲೆ ಮತ್ತಷ್ಟು ದುಬಾರಿಯಾಗಲಿದೆ ಎಂದು ತಿಳಿಸಿದ್ದಾರೆ. ಇದು ಚಿನ್ನ ಪ್ರಿಯರಿಗೆ ಆಘಾತ ನೀಡಿದೆ. ಈಗಾಗಲೇ ಚಿನ್ನ ಹಾಗೂ ಬೆಳ್ಳಿಯ ದರಗಳು ಮುಗಿಲು ಮುಟ್ಟಿವೆ. ಈ ಸಂದರ್ಭದಲ್ಲಿ ಚಿನ್ನ, ಬೆಳ್ಳಿ ದರವನ್ನು ಏರಿಸುತ್ತಿರುವ ಕೇಂದ್ರ ಸರ್ಕಾರದ ನಿರ್ಧಾರವು ಬಂಗಾರ ಪ್ರಿಯರಿಗೆ ಶಾಕ್‌ ನೀಡಿದೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.

ಇಂದು ಪ್ರತಿ 10 ಗ್ರಾಂ ಚಿನ್ನಕ್ಕೆ ರೂ 56,916 ಕ್ಕೆ ವಹಿವಾಟು ನಡೆಯುತ್ತಿದೆ. ರೂ 6 ಅಥವಾ ಶೇ 0.01 ರಷ್ಟು ಹೆಚ್ಚಾಗಿದೆ. ಬೆಳ್ಳಿಯು ಮಾರ್ಚ್ ಫ್ಯೂಚರ್ಸ್ ಎಂಸಿಎಕ್ಸ್‌ನಲ್ಲಿ ಪ್ರತಿ ಕೆಜಿಗೆ ರೂ 140 ಕಡಿಮೆಯಾಗಿ ರೂ 68,689ರಷ್ಟು ವಹಿವಾಟು ನಡೆಸುತ್ತಿದೆ.

Gold Price Today : ಚಿನ್ನ, ಬೆಳ್ಳಿ ದರ ಏರಿಕೆ: ಜನವರಿ 24ರ ಬೆಲೆ ಪರಿಶೀಲಿಸಿ, ಯಾವ ನಗರದಲ್ಲಿ ಎಷ್ಟು?Gold Price Today : ಚಿನ್ನ, ಬೆಳ್ಳಿ ದರ ಏರಿಕೆ: ಜನವರಿ 24ರ ಬೆಲೆ ಪರಿಶೀಲಿಸಿ, ಯಾವ ನಗರದಲ್ಲಿ ಎಷ್ಟು?

ಕೇಂದ್ರದ ಬಜೆಟ್‌ನಲ್ಲಿ ಯಾವ ವಸ್ತುಗಳು ದುಬಾರಿಯಾಗಿವೆದುಬಾರಿಯಾಗುವುದು ಇಲ್ಲಿದೆ:

* ಚಿನ್ನ
* ಬೆಳ್ಳಿ
* ವಜ್ರಗಳು
* ಪ್ಲಾಟಿನಂ
* ಸಿಗರೇಟ್ ಮೇಲಿನ ಕಸ್ಟಮ್ ಡ್ಯೂಟಿ ಹೆಚ್ಚಳ
* ಸಂಯೋಜಿತ ರಬ್ಬರ್
* ಎಲೆಕ್ಟ್ರಿಕ್ ಕಿಚನ್ ಚಿಮಣಿ
* ತಾಮ್ರದ ತುಣುಕು

Budget 2023: Silver, Gold and Diamond become expensive

ಯಾವ ವಸ್ತುಗಳು ಅಗ್ಗವಾಗಲಿದೆ

* ಮೊಬೈಲ್
* ಕ್ಯಾಮೆರಾ ಲೆನ್ಸ್‌ಗಳು
* ಟಿವಿ
* ಬ್ಲೆಡ್ಡ್ ಸಿಎನ್‌ಜಿ
* ಪ್ರಯೋಗಾಲಯದಲ್ಲಿ ವಜ್ರಗಳ ತಯಾರಿಕೆಯಲ್ಲಿ ಬಳಸುವ ವಸ್ತುಗಳ ಮೇಲಿನ ಮೂಲ ಕಸ್ಟಮ್ಸ್ ಸುಂಕವನ್ನು ಕಡಿಮೆ ಮಾಡಲು ಸರ್ಕಾರ ನಿರ್ಧರಿಸಿದೆ
* ಲಿಥಿಯಂ-ಐಯಾನ್ ಕೋಶವನ್ನು ತಯಾರಿಸಲು ಸರಕುಗಳು/ಯಂತ್ರಗಳು
* ವಿದ್ಯುತ್ ಅಡಿಗೆ ಚಿಮಣಿಗಳ ತಯಾರಿಕೆಗಾಗಿ ಶಾಖ ಸುರುಳಿ
* ಡಿನೇಚರ್ಡ್ ಈಥೈಲ್ ಆಲ್ಕೋಹಾಲ್
* ವಜ್ರಗಳ ತಯಾರಿಕೆಯಲ್ಲಿ ಬಳಸುವ ಬೀಜಗಳು
* ಆಸಿಡ್ ದರ್ಜೆಯ ಫ್ಲೋರ್ಸ್ಪಾರ್
* ರಫ್ತು ಉತ್ತೇಜಿಸಲು ಸೀಗಡಿ ಆಹಾರದ ಮೇಲಿನ ಕಸ್ಟಮ್ಸ್ ಸುಂಕವನ್ನು ಕಡಿಮೆ ಮಾಡಲು ಸರ್ಕಾರ ಯೋಚಿಸಿದೆ.
* ಆಟಿಕೆಗಳು ಮತ್ತು ಆಟಿಕೆಗಳ ಭಾಗ
* ಸೈಕಲ್

Budget 2023: Silver, Gold and Diamond become expensive

ವಜ್ರಗಳ ಉತ್ಪಾದನೆ ಮತ್ತು ಮಾರಾಟವನ್ನು ಉತ್ತೇಜಿಸಲು (ವಜ್ರಗಳನ್ನು ಕೃತಕವಾಗಿ ಉತ್ಪಾದಿಸಲಾಗುತ್ತದೆ. ಇವು ನೈಸರ್ಗಿಕ ವಜ್ರಗಳಂತೆಯೇ ಗುಣಲಕ್ಷಣಗಳನ್ನು ಹೊಂದಿರುತ್ತದೆ ಮತ್ತು ವೆಚ್ಚವೂ ಪರಿಣಾಮಕಾರಿಯಾಗಿದೆ). ಸರ್ಕಾರವು ಆರ್ & ಡಿ ಅನುದಾನವನ್ನು ನೀಡುತ್ತದೆ ಮತ್ತು ಪ್ರಮುಖ ಕಚ್ಚಾ ವಸ್ತುಗಳ (ಲ್ಯಾಬ್ ಬೆಳೆದ ಬೀಜಗಳು) ಕಸ್ಟಮ್ ಸುಂಕ ಕಡಿತವನ್ನು ಪರಿಗಣಿಸುತ್ತದೆ. ವಜ್ರಗಳು ದೇಶೀಯ ಮತ್ತು ರಫ್ತು ಮಾರುಕಟ್ಟೆಗಳಲ್ಲಿ ದೊಡ್ಡ ಸಾಮರ್ಥ್ಯವನ್ನು ಹೊಂದಿವೆ.

English summary
Union Finance Minister Nirmala Sitharaman presented the 'Union Budget 2023'. In this case, the price of gold, silver and diamonds will become more expensive. This has shocked gold lovers,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X