• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ವರ್ಚುವಲ್ ಡಿಜಿಟಲ್ ಅಸೆಟ್ ವರ್ಗಾವಣೆಗೆ ಶೇ.30ರಷ್ಟು ತೆರಿಗೆ

|
Google Oneindia Kannada News

ಕ್ರಿಪ್ಟೋಕರೆನ್ಸಿ ಮಸೂದೆ ಎಲ್ಲಾ ಖಾಸಗಿ ಕ್ರಿಪ್ಟೋಕರೆನ್ಸಿಗಳ ಮೇಲೆ ನಿಷೇಧವನ್ನು ಹೇರುವ ಅಥವಾ ನಿಯಂತ್ರಣ ಮಾಡುವ ಮಸೂದೆ ಜಾರಿಯಾಗುವ ಮೊದಲೇ ಕ್ರಿಪ್ಟೋಕರೆನ್ಸಿಯಂಥ ವರ್ಚುವಲ್ ಡಿಜಿಟಲ್ ಅಸೆಟ್ ಮೇಲೆ ತೆರಿಗೆ ವಿಧಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಮ್ಮ 2022ನೇ ಸಾಲಿನ ಬಜೆಟ್ ಭಾಷಣದಲ್ಲಿ ಈ ಬಗ್ಗೆ ಪ್ರಸ್ತಾಪಿಸಿದ್ದಾರೆ.

ವರ್ಚುವಲ್ ಡಿಜಿಟಲ್ ಅಸೆಟ್​ (ಕ್ರಿಪ್ಟೋಕರೆನ್ಸಿಯಂಥದ್ದಕ್ಕೆ) ತೆರಿಗೆ ವಿಧಿಸಲಾಗುತ್ತದೆ. ಯಾವುದೇ ವರ್ಚುವಲ್ ಡಿಜಿಟಲ್ ಅಸೆಟ್ ವರ್ಗಾವಣೆಗೆ ಶೇ.30ರ ತೆರಿಗೆ ಕಡಿತಗೊಳ್ಳಲಿದೆ. ಇದರಲ್ಲಿ ಯಾವುದೇ ಡಿಡಕ್ಷನ್ ಇಲ್ಲ. ಆದಾಯ ಯಾವುದೇ ಹೊಂದಾಣಿಕೆಗೆ ಅವಕಾಶ ಇಲ್ಲ. ವರ್ಚುವಲ್ ಡಿಜಿಟಲ್ ಅಸೆಟ್​ (ಕ್ರಿಪ್ಟೋಕರೆನ್ಸಿಯಂಥದ್ದಕ್ಕೆ) ಕೊಡುಗೆ(ಗಿಫ್ಟ್ ಮಾಡಿದರೂ) ಪಡೆಯುವವರಿಗೆ ಕೂಡ ತೆರಿಗೆ ಆಗುತ್ತದೆ. ವರ್ಚುವಲ್ ಡಿಜಿಟಲ್ ಅಸೆಟ್​ (ಕ್ರಿಪ್ಟೋಕರೆನ್ಸಿಯಂಥದ್ದಕ್ಕೆ) ಶೇ.1ರಷ್ಟು ಟಿಡಿಎಸ್​ ಪ್ರಸ್ತಾವಿಸಲಾಗಿದೆ ಎಂದು ನಿರ್ಮಲಾ ಹೇಳಿದರು.

   Budgetನಲ್ಲಿ ಕೇಳಿಬಂದ Digital Rupee. ಏನಿದು ಹೊಸ ದುಡ್ಡು | Oneindia Kannada

   ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಕ್ರಿಪ್ಟೋವನ್ನು ನಿಯಂತ್ರಿಸುವ ಮತ್ತು ಅದನ್ನು ಡಿಜಿಟಲ್ ಆಸ್ತಿಯಾಗಿ ವರ್ಗೀಕರಿಸುವ ಉದ್ದೇಶ ಹೊಂದಿರುವ ಬಗ್ಗೆ ಪ್ರಸ್ತಾಪವನ್ನು ಮಾಡಿದರು.

   ನಿರೀಕ್ಷೆಯಂತೆ ತೆರಿಗೆ: ಕ್ರಿಪ್ಟೋ ಸ್ವತ್ತುಗಳಿಗೆ ನಿರ್ದಿಷ್ಟವಾಗಿ ಆದಾಯ ಮತ್ತು ಲಾಭಗಳ ವ್ಯಾಖ್ಯಾನವನ್ನು ಉತ್ತಮಗೊಳಿಸಲು ಸರ್ಕಾರವು ಮುಂದಾಗುತ್ತಿದೆ. ಇದರರ್ಥ ಹೂಡಿಕೆದಾರರು ಅಥವಾ ವ್ಯಾಪಾರಿಗಳಿಗೆ ಆದಾಯದ ಮೇಲಿನ ಆದಾಯ ತೆರಿಗೆಯು 35% ರಿಂದ 42% ವರೆಗೆ ಬೀಳಲಿದೆ ಎಂಬ ವರದಿ ಬಜೆಟ್ ಮಂಡನೆಗೂ ತಿಂಗಳುಗಳ ಮುಂಚಿತವಾಗಿ ಬಹಿರಂಗವಾಗಿತ್ತು. ಅದರಂತೆ ಸರ್ಕಾರ ಶೇ 30ರಷ್ಟು ತೆರಿಗೆ ವಿಧಿಸಿದೆ.

   "ಯಾವುದೇ ಸ್ವತ್ತಿನ ಪಾವತಿ, ಪೇಂಟಿಂಗ್ ಅಥವಾ ಇನ್ನೊಂದು ಕ್ರಿಪ್ಟೋ ಆಸ್ತಿಯನ್ನು ಕ್ರಿಪ್ಟೋಕರೆನ್ಸಿಗಳಲ್ಲಿ ಮಾಡಿದರೂ, ಅದು ಸ್ವೀಕರಿಸುವವರ ಕೈಯಲ್ಲಿ ಇನ್ನೂ ಆದಾಯವಾಗಿರುತ್ತದೆ. ಕ್ರಿಪ್ಟೋಕರೆನ್ಸಿಯು ಭಾರತೀಯ ರೂಪಾಯಿಯಲ್ಲಿ ಆಧಾರವಾಗಿರುವ ಮೌಲ್ಯವನ್ನು ಹೊಂದಿರುವುದರಿಂದ, ಅದನ್ನು ಆದಾಯವಾಗಿ ತೆರಿಗೆ ವಿಧಿಸಬೇಕು. ," ಎಂದು EY ಇಂಡಿಯಾದ ತೆರಿಗೆ ವಿಭಾಗದ ರಾಷ್ಟ್ರೀಯ ಪ್ರಮುಖರಾದ ಸುಧೀರ್ ಕಪಾಡಿಯಾ ಹೇಳಿದ್ದಾರೆ.

   ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ತನ್ನದೇ ಡಿಜಿಟಲ್ ಕರೆನ್ಸಿ ಪ್ರಾಯೋಗಿಕವಾಗಿ ಕೆಲ ತಿಂಗಳಲ್ಲೇ ಹೊರ ತರಲಿದ್ದು, ಅದಕ್ಕೆ ಹಾಕುವ ನೀತಿ ನಿಯಮ ಬಳಕೆ ಮಾರ್ಗಸೂಚಿಯನ್ನೇ ಕ್ರಿಪ್ಟೋಕರೆನ್ಸಿಗೂ ಅಳವಡಿಸಬಹುದು ಎಂಬ ಸುದ್ದಿಯಿದೆ.

   ಹೀಗಾಗಿ, ಕ್ರಿಪ್ಟೋಕರೆನ್ಸಿಗಳಿಗೆ ಬಂದಾಗ ನೇರ ತೆರಿಗೆ ಅಥವಾ ಪರೋಕ್ಷ ತೆರಿಗೆಯ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲ. ಇದು ಮುಖ್ಯವಾಗಿ ಏಕೆಂದರೆ ಇದು ಕರೆನ್ಸಿ, ಆಸ್ತಿ, ಸರಕು ಅಥವಾ ಸೇವೆ ಎಂದು ವ್ಯಾಖ್ಯಾನಿಸಲಾಗಿಲ್ಲ.

   ಕ್ರಿಪ್ಟೋಕರೆನ್ಸಿ ಬಳಕೆಗೆ ಮಾರ್ಗಸೂಚಿಯಿಲ್ಲ:
   2018ರ ಏಪ್ರಿಲ್ 6ರಂದು ಅಧಿಸೂಚನೆ ಹೊರಡಿಸಿದ ಆರ್ ಬಿಐ, ಕ್ರಿಪ್ಟೋಕರೆನ್ಸಿ ಬಳಕೆ, ವ್ಯವಹಾರ, ಪ್ರಚಾರ ಎಲ್ಲಕ್ಕೂ ನಿಷೇಧ ಹೇರಿತ್ತು. ದೇಶದಲ್ಲಿ ಬಿಟ್ ಕಾಯಿನ್ ವ್ಯವಹಾರವನ್ನು ಕಾನೂನು ಬಾಹಿರ ಎಂದು ಪರಿಗಣಿಸಲಾಗಿತ್ತು. ಹೀಗಾಗಿ, ಸೂಕ್ತ ಮಾರ್ಗಸೂಚಿ ಮೂಲಕ ಆರ್ ಬಿಐ ಮಾನ್ಯತೆ ಪಡೆದ ಡಿಜಿಟಲ್ ಕರೆನ್ಸಿ ಮಾತ್ರ ಬಳಕೆ ಮಾಡಲು ಅನುಮತಿ ನೀಡಲು ಕಾನೂನು ರೂಪಿಸಲು ಸರ್ಕಾರ ಮುಂದಾಗಿದೆ.

   ಬಿಟ್ ಕಾಯಿನ್ ಸೇರಿದಂತೆ ಕ್ರಿಪ್ಟೋಕರೆನ್ಸಿ ಬಳಕೆ ಮೇಲೆ ಭಾರತೀಯ ರಿಸರ್ವ್ ಬ್ಯಾಂಕ್ ಹೇರಿದ್ದ ನಿಷೇಧವನ್ನು ಸುಪ್ರೀಂಕೋರ್ಟ್ ತೆರವುಗೊಳಿಸಿದೆ. ಆದರೆ, ಭರ್ಜರಿಯಾಗಿ ವಹಿವಾಟು ಕಾಣುತ್ತಿರುವ ಡಿಜಿಟಲ್ ಕರೆನ್ಸಿ ಬಳಸಲು ಸರಿಯಾದ ಮಾರ್ಗಸೂಚಿಯಾಗಲಿ, ಕಾನೂನಾಗಲಿ ಇಲ್ಲ, ಈ ಹಿನ್ನೆಲೆ ಸರ್ಕಾರವು ಕ್ರಿಪ್ಟೋಕರೆನ್ಸಿ ಮತ್ತು ಅಧಿಕೃತ ಡಿಜಿಟಲ್ ಕರೆನ್ಸಿಯ ನಿಯಂತ್ರಣ ಮಸೂದೆ, 2021 ಅನ್ನು ಜಾರಿ ಮಾಡಲು ಮುಂದಾಗಿತ್ತು. ಆದರೆ ಈ ಕ್ರಿಪ್ಟೋಕರೆನ್ಸಿ ಬಿಲ್‌ನ ವಿಷಯವು ಚರ್ಚೆಯಲ್ಲಿದೆ ಎಂದು ತಜ್ಞರು ಹೇಳಿದ್ದಾರೆ. ಈ ಬಗ್ಗೆ ಹೆಚ್ಚಾಗಿ ಚರ್ಚೆ ನಡೆಯುತ್ತಿದೆ. ಚರ್ಚೆಯಲ್ಲಿ ಮುಖ್ಯವಾಗಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಪರಿಚಯಿಸಲಿರುವ ಸೆಂಟ್ರಲ್ ಬ್ಯಾಂಕ್ ಡಿಜಿಟಲ್ ಕರೆನ್ಸಿ (ಸಿಬಿಡಿಸಿ) ಒಂದು ಭಾಗವಾಗಬೇಕೇ ಎಂಬುದನ್ನು ಒಳಗೊಂಡಿರುತ್ತದೆ.

   ನಿರ್ಮಲಾ ಸೀತಾರಾಮನ್
   Know all about
   ನಿರ್ಮಲಾ ಸೀತಾರಾಮನ್
   English summary
   Budget 2022: Any income from the transfer of virtual digital assets will be taxed at 30%. Tax on gift of such assets to be paid by recipient, says FM.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X