• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬಜೆಟ್‌ 2022: ಜಾಗತಿಕ ಸಾಲ ಹೂಡಿಕೆದಾರರಿಗೆ ತೆರಿಗೆ ವಿನಾಯಿತಿ ಸಿಗುತ್ತಾ?

|
Google Oneindia Kannada News

ನವದೆಹಲಿ, ಜನವರಿ 19: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕೇಂದ್ರ ಬಜೆಟ್‌ನಲ್ಲಿ ಸಾಗರೋತ್ತರ ಸಾಲ ಹೂಡಿಕೆದಾರರಿಗೆ ಬಂಡವಾಳ ಲಾಭದ ತೆರಿಗೆ ಮನ್ನಾವನ್ನು ಪ್ರಸ್ತಾಪ ಮಾಡುವ ಸಾಧ್ಯತೆ ಇದೆ. ಇದರಿಂದಾಗಿ ಜಾಗತಿಕ ಬಾಂಡ್ ಸೂಚ್ಯಂಕಗಳಲ್ಲಿ ಭಾರತದ ಸೇರ್ಪಡೆಗೆ ವೇದಿಕೆ ಲಭ್ಯವಾಗಲಿದೆ ಎಂದು ವರದಿಯು ಉಲ್ಲೇಖ ಮಾಡಿದೆ.

ಜಾಗತಿಕ ಬಾಂಡ್ ಸೂಚ್ಯಂಕಗಳಲ್ಲಿ ಭಾರತೀಯ ಸಾಲ ಮನ್ನಾ ಹಾಗೂ ಪರಿಣಾಮವಾಗಿ ಸೇರ್ಪಡೆಯು ಗಮನಾರ್ಹವಾಗಿ ಸ್ಥಳೀಯ ಸಾಲ ಭದ್ರತೆಗಳಿಗೆ ಬಂಡವಾಳದ ಹರಿವನ್ನು ಉಂಟುಮಾಡುತ್ತದೆ. ಹಾಗೆಯೇ ಏಷ್ಯಾದ ಮೂರನೇ ಅತಿದೊಡ್ಡ ಆರ್ಥಿಕತೆಯಲ್ಲಿ ಹಿನ್ನಡೆಯನ್ನು ಕಡಿಮೆ ಮಾಡಲಿದೆ ಎಂದು ವರದಿಯು ಉಲ್ಲೇಖ ಮಾಡಿದೆ.

 ಬಜೆಟ್‌ 2022: ದ್ವಿಚಕ್ರ ವಾಹನ, ಸೆಕೆಂಡ್‌ಹ್ಯಾಂಡ್‌ ಕಾರುಗಳ ಮೇಲಿನ ಜಿಎಸ್‌ಟಿ ಕಡಿತವಾಗುತ್ತಾ? ಬಜೆಟ್‌ 2022: ದ್ವಿಚಕ್ರ ವಾಹನ, ಸೆಕೆಂಡ್‌ಹ್ಯಾಂಡ್‌ ಕಾರುಗಳ ಮೇಲಿನ ಜಿಎಸ್‌ಟಿ ಕಡಿತವಾಗುತ್ತಾ?

ಜಾಗತಿಕ ಬಾಂಡ್ ಸೂಚ್ಯಂಕಗಳಲ್ಲಿ ಸೇರ್ಪಡೆಗೊಂಡ ನಂತರ ಕಡಲಾಚೆಯ ಹೂಡಿಕೆದಾರರು ಆಯ್ದ ಸವರನ್‌ ಭದ್ರತೆಗಳಲ್ಲಿ ವ್ಯಾಪಾರವನ್ನು ಪ್ರಾರಂಭಿಸುವ ನಿರೀಕ್ಷೆಯಿದೆ. ಮುಂದಿನ ದಶಕದಲ್ಲಿ ಶೇಕಡ 250 ಶತಕೋಟಿಯಷ್ಟು ಹೂಡಿಕೆಯನ್ನು ಸೆಳೆಯುವ ನಿರೀಕ್ಷೆ ಇದೆ. ಭಾರತದ ಸಾಲದ ವೆಚ್ಚವನ್ನು 50 ಬೇಸಿಸ್ ಪಾಯಿಂಟ್‌ಗಳವರೆಗೆ ಕಡಿಮೆ ಮಾಡುತ್ತದೆ ಎಂದು ಮೋರ್ಗನ್ ಸ್ಟಾನ್ಲಿ ಅಂದಾಜಿಸಿದೆ.

"ಪ್ರತಿ ಬಾಂಡ್ ವಹಿವಾಟಿನ ಮೇಲೆ ಬಂಡವಾಳ ಲಾಭದ ತೆರಿಗೆಯನ್ನು ಅನ್ವಯ ಮಾಡಿದರೆ, ಇದು ಜಾಗತಿಕ ಸೂಚ್ಯಂಕಗಳ ವಿರುದ್ಧವಾಗಿ ಲಿಕ್ವಿಡಿಟಿಯನ್ನು (ದ್ರವ್ಯತೆ) ಗಮನಾರ್ಹವಾಗಿ ಅಡ್ಡಿಪಡಿಸುತ್ತದೆ," ಎಂದು ಅಂತರಾಷ್ಟ್ರೀಯ ಸೆಕ್ಯುರಿಟೀಸ್ ಸೆಟಲ್ಮೆಂಟ್ ಪ್ಲಾಟ್‌ಫಾರ್ಮ್ ಯೂರೋಕ್ಲಿಯರ್‌ನ ಜಾಗತಿಕ ಬಂಡವಾಳ ಮಾರುಕಟ್ಟೆಯ ಮುಖ್ಯಸ್ಥ ಸುದೀಪ್ ಚಟರ್ಜಿ ಹೇಳಿದರು. ಪಟ್ಟಿ ಮಾಡಲಾದ ಬಾಂಡ್ ಅನ್ನು 12 ತಿಂಗಳೊಳಗೆ ಮಾರಾಟ ಮಾಡಿದರೆ ಸಾಗರೋತ್ತರ ಹೂಡಿಕೆದಾರರು ಅಲ್ಪಾವಧಿಯ ಬಂಡವಾಳ ಲಾಭದ ತೆರಿಗೆಯನ್ನು ಪಾವತಿಸಬೇಕಾಗುತ್ತದೆ. ಹೂಡಿಕೆದಾರರ ಸ್ವಭಾವಕ್ಕೆ ಅನುಗುಣವಾಗಿ ತೆರಿಗೆ ಪ್ರಮಾಣವು ಶೇಕಡ 30-40 ವ್ಯಾಪ್ತಿಯಲ್ಲಿ ಇರಲಿದೆ. ಯುರೋಕ್ಲಿಯರ್ 49 ವಿವಿಧ ದೇಶಗಳಲ್ಲಿ ಕಾರ್ಯನಿರ್ವಹಿಸುತ್ತದೆ. ಅವುಗಳಲ್ಲಿ ಯಾವುದೂ ಬಾಂಡ್ ವಹಿವಾಟಿನ ಮೇಲೆ ಬಂಡವಾಳ ಲಾಭದ ತೆರಿಗೆಯನ್ನು ಹೊಂದಿಲ್ಲ.

 ಬಜೆಟ್ 2022: ವಿದೇಶದಲ್ಲಿರುವ ಭಾರತೀಯರ ನಿರೀಕ್ಷೆಗಳು ಏನು? ಬಜೆಟ್ 2022: ವಿದೇಶದಲ್ಲಿರುವ ಭಾರತೀಯರ ನಿರೀಕ್ಷೆಗಳು ಏನು?

ಬಜೆಟ್‌ ನಿರೀಕ್ಷೆಗಳು

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಫೆಬ್ರವರಿ 1ರಂದು ಬಜೆಟ್ ಮಂಡನೆ ಮಾಡಲಿದ್ದಾರೆ. ಈ ನಡುವೆ ಹಲವಾರು ವಲಯಗಳು ಹಲವು ನಿರೀಕ್ಷೆಗಳನ್ನು ಇರಿಸಿಕೊಂಡಿದೆ. ಎನ್‌ಆರ್‌ಐಗಳ ಬಹುಕಾಲದ ಬೇಡಿಕೆಗಳು ಇನ್ನೂ ಕೂಡಾ ಈಡೇರಿಕೆ ಆಗಿಲ್ಲ. ಹಾಗಾಗಿ ಹಲವಾರು ಬೇಡಿಕೆಗಳನ್ನು ಸರ್ಕಾರದ ಮುಂದೆ ಇರಿಸಿದೆ. ಇನ್ನು ಹಲವಾರು ವಲಯಗಳು ತಮ್ಮದೇ ಆದ ನಿರೀಕ್ಷೆಯನ್ನು ಹೊಂದಿದೆ. ಈ ಮಧ್ಯೆ ದ್ವಿಚಕ್ರ ವಾಹನ, ಸೆಕೆಂಡ್‌ಹ್ಯಾಂಡ್‌ ಕಾರುಗಳ ಮೇಲಿನ ಜಿಎಸ್‌ಟಿ ಕಡಿತ ಮಾಡುವ ಪ್ರಸ್ತಾಪವನ್ನು ಸರ್ಕಾರದ ಮುಂದೆ ಫೆಡರೇಶನ್ ಆಫ್ ಆಟೋಮೊಬೈಲ್ ಡೀಲರ್ಸ್ ಅಸೋಸಿಯೇಷನ್ ​​(ಎಫ್‌ಎಡಿಎ) ಇಟ್ಟಿದೆ.

ದೇಶದಾದ್ಯಂತ ಆಟೋಮೊಬೈಲ್ ಡೀಲರ್‌ಗಳು ಮತ್ತು ಚಿಲ್ಲರೆ ವ್ಯಾಪಾರಿಗಳನ್ನು ಪ್ರತಿನಿಧಿಸುವ ಉನ್ನತ ಸಂಸ್ಥೆಯಾದ ಫೆಡರೇಶನ್ ಆಫ್ ಆಟೋಮೊಬೈಲ್ ಡೀಲರ್ಸ್ ಅಸೋಸಿಯೇಷನ್ ​​(ಎಫ್‌ಎಡಿಎ) ಮುಂಬರುವ ಕೇಂದ್ರ ಬಜೆಟ್‌ನಲ್ಲಿ ಆಟೋಮೋಟಿವ್ ಉದ್ಯಮಕ್ಕೆ ಸಹಾಯ ಮಾಡಲು ತನ್ನ ಶಿಫಾರಸುಗಳನ್ನು ಸರ್ಕಾರಕ್ಕೆ ನೀಡಿದೆ. ಸರ್ಕಾರ ಈ ಪ್ರಸ್ತಾಪವನ್ನು ಪರಿಗಣಿಸಿದರೆ ದ್ವಿಚಕ್ರ ವಾಹನ, ಸೆಕೆಂಡ್‌ಹ್ಯಾಂಡ್‌ ಕಾರುಗಳ ಮೇಲಿನ ಜಿಎಸ್‌ಟಿ ಕಡಿತವಾಗುವ ನಿರೀಕ್ಷೆ ಇದೆ.

   ಮೋದಿ ಭಾಷಣ ಸಿಕ್ಕಾಪಟ್ಟೆ ಟ್ರೋಲ್:ತಡಬಡಾಯಿಸಿದ ಮೋದಿ ಮಾಡಿದ್ದೇನು? | Oneindia Kannada

   ರಿಯಲ್ ಎಸ್ಟೇಟ್ ವಲಯ ಬಜೆಟ್ ಮೇಲೆ ಅಪಾರ ನಿರೀಕ್ಷೆಯನ್ನು ಇಟ್ಟುಕೊಂಡಿದೆ. ತೆರಿಗೆ ರಿಯಾಯಿತಿ ನೀಡಬೇಕು ಎಂಬುದು ವಲಯದ ಪ್ರಮುಖ ಬೇಡಿಕೆಯಾಗಿದೆ. ಗೃಹ ಸಾಲದ ಬಡ್ಡಿ ಕಡಿತ ಮಿತಿಯನ್ನು 2 ರಿಂದ 5 ಲಕ್ಷ ರೂ.ಗಳಿಗೆ ಏರಿಕೆ ಮಾಡಬೇಕು ಎಂಬುದು ಮೊದಲ ಬೇಡಿಕೆಯಾಗಿದೆ. ಕ್ರೆಡೈ ಅಧ್ಯಕ್ಷ ಹರ್ಷವರ್ಧನ್ ಪಟೋಡಿಯಾ ಈ ಕುರಿತು ಮಾತನಾಡಿದ್ದಾರೆ, "ಪ್ರಧಾನಮಂತ್ರಿಗಳಾದ ಕನಸಾದ ಎಲ್ಲರಿಗೂ ವಸತಿ ಯೋಜನೆ ಜಾರಿಗೊಳಿಸಲು ತೆರಿಗೆ ಸಡಿಲಿಕೆ ನೀತಿ ಸಹಾಯಕವಾಗಲಿದೆ" ಎಂದು ಹೇಳಿದ್ದಾರೆ. ಕನಿಷ್ಠ 50,000 ರೂಪಾಯಿಯಿಂದ ಪ್ರಾರಂಭವಾಗುವ ರಿಯಲ್ ಎಸ್ಟೇಟ್ ಇನ್ವೆಸ್ಟ್‌ಮೆಂಟ್ ಟ್ರಸ್ಟ್‌ಗಳಲ್ಲಿ ಹೂಡಿಕೆಗಳಿಗೆ ತೆರಿಗೆ ವಿನಾಯಿತಿ ನೀಡುವಂತೆ ಕೋರಲಾಗಿದೆ. (ಒನ್‌ಇಂಡಿಯಾ ಸುದ್ದಿ)

   ನಿರ್ಮಲಾ ಸೀತಾರಾಮನ್
   Know all about
   ನಿರ್ಮಲಾ ಸೀತಾರಾಮನ್
   English summary
   Budget 2022: Finance Minister may propose tax relief for global debt investors. ಬಜೆಟ್ 2022
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X