ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಜೆಟ್ 2022: ವಾಣಿಜ್ಯ ಬಳಕೆ ಸಿಲಿಂಡರ್ ಬೆಲೆ ಇಳಿಕೆ

|
Google Oneindia Kannada News

ನವದೆಹಲಿ, ಫೆಬ್ರವರಿ 1: ಕೇಂದ ಬಜೆಟ್ ಮಂಡನೆ ದಿನವಾದ ಇಂದು ಗ್ರಾಹಕರಿಗೆ ಕೊಂಚ ನೆಮ್ಮದಿ ಸುದ್ದಿ ಸಿಕ್ಕಿದೆ. ಕೊರೊನಾವೈರಸ್ ಕಠಿಣ ನಿರ್ಬಂಧದಿಂದ ತತ್ತರಿಸಿದ್ದ ಹೋಟೆಲ್ ಉದ್ಯಮಕ್ಕೆ ನೆಮ್ಮದಿ ಸಿಕ್ಕಿದೆ. ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಫೆಬ್ರವರಿ 1, 2022 ರಿಂದ ಜಾರಿಗೆ ಬರುವಂತೆ 19 ಕೆಜಿ ವಾಣಿಜ್ಯ ಎಲ್ ಪಿಜಿ ಸಿಲಿಂಡರ್ ಬೆಲೆಯನ್ನು ರೂ 91.50 ರಷ್ಟು ಕಡಿತಗೊಳಿಸಿವೆ ಇಂದಿನಿಂದ ದೆಹಲಿಯಲ್ಲಿ 19 ಕೆಜಿ ವಾಣಿಜ್ಯ ಸಿಲಿಂಡರ್ ಬೆಲೆ ರೂ 1907 ಆಗಲಿದೆ ಎಂದು ಮೂಲಗಳು ಎಎನ್ಐಗೆ ತಿಳಿಸಿವೆ.

ನ್ಯಾಷನಲ್ ಆಯಿಲ್ ಮಾರ್ಕೆಟಿಂಗ್ ಕಂಪನಿಗಳು ಜನವರಿ 1, 2022 ರಿಂದ ಜಾರಿಗೆ ಬರುವಂತೆ 19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆಯನ್ನು 102.50 ರೂಪಾಯಿ ಕಡಿತಗೊಳಿಸಿದ್ದವು, ನಂತರ ಬೆಲೆ ಏರಿಕೆಯಾಗಿತ್ತು.

ದೆಹಲಿಯಲ್ಲಿ ಸಬ್ಸಿಡಿ ರಹಿತ (14.2 ಕೆಜಿ) ಇಂಡೇನ್ ದೇಶೀಯ ಸಿಲಿಂಡರ್ ರೂಪಾಯಿ 899.50ಕ್ಕೆ ಲಭ್ಯವಿರುತ್ತದೆ.

ಇದೇ ಸಮಯದಲ್ಲಿ, ಕೋಲ್ಕತ್ತಾದ ಜನರು 14.2 ಕೆಜಿಯ ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್ ಅನ್ನು 926 ಗೆ ಪಡೆಯಬಹುದಾಗಿದೆ. ಮುಂಬೈನಲ್ಲಿ ಸಬ್ಸಿಡಿ ರಹಿತ ಎಲ್‌ಪಿಜಿ ಸಿಲಿಂಡರ್‌ನ ಬೆಲೆ ದೆಹಲಿಯಂತೆಯೇ ಇದ್ದರೆ, ಚೆನ್ನೈನಲ್ಲಿ ಇದರ ಬೆಲೆ ರೂಪಾಯಿ 915.50 ಆಗಿದೆ.

ಕಳೆದ ಬಾರಿ ಪರಿಷ್ಕರಣೆ ಆಗಿ ಬೆಲೆ ಇಳಿಕೆ ಆದ ಸಂದರ್ಭದಲ್ಲಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 19 ಕೆಜಿ ತೂಕದ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆ 1998.50 ರೂಪಾಯಿ ಆಗಿದೆ.19 ಕೆಜಿ ಸಿಲಿಂಡರ್‌ನ ಅತಿದೊಡ್ಡ ಬಳಕೆದಾರರ ವಿಭಾಗವಾಗಿರುವ ರೆಸ್ಟೋರೆಂಟ್‌ಗಳು, ಹೋಟೆಲ್ ಮತ್ತು ಟೀ ಸ್ಟಾಲ್‌ಗಳು ಬೆಲೆ ಕಡಿತಗೊಂಡ ಕೊಂಚ ನಿರಾಳರಾಗಿದ್ದಾರೆ.

ಡಿಸೆಂಬರ್ 1ರಂದು, 19 ಕೆಜಿ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು 100 ರೂ.ಗಳಷ್ಟು ಹೆಚ್ಚಿಸಲಾಯಿತು. ಇದರಿಂದ ದೆಹಲಿಯಲ್ಲಿ 19 ಕೆಜಿ ವಾಣಿಜ್ಯ ಸಿಲಿಂಡರ್‌ಗಳ ಬೆಲೆಯು 2,101 ರೂಪಾಯಿ ಆಗಿತ್ತು. 2012-13ರ ನಂತರ 19 ಕೆಜಿ ವಾಣಿಜ್ಯ ಸಿಲಿಂಡರ್‌ನ ಎರಡನೇ ಅತ್ಯಂತ ಗರಿಷ್ಠ ಬೆಲೆಯಾಗಿತ್ತು. ಇದಕ್ಕೂ ಮೊದಲು 2,200 ರೂಪಾಯಿ ಗರಿಷ್ಠ ಬೆಲೆಯಾಗಿದೆ.

Budget 2022: Commercial LPG cylinder prices slashed by Rs 91.50

ಭಾರತದಲ್ಲಿ ಯಾವುದೇ ದೇಶೀಯ ಸಿಲಿಂಡರ್‌ಗಳ ಬೆಲೆಯಲ್ಲಿ ಇಳಿಕೆಯಾಗಿಲ್ಲ. ಗೃಹ ಬಳಕೆಯ 14.2 ಕೆಜಿ, 5 ಕೆಜಿ, 10 ಕೆಜಿ ಕಾಂಪೋಸಿಟ್ ಅಥವಾ 5 ಕೆಜಿ ಕಾಂಪೋಸಿಟ್ ಸಿಲಿಂಡರ್‌ಗಳ ಬೆಲೆಯಲ್ಲಿ ಯಾವುದೇ ಇಳಿಕೆ ಇಲ್ಲ, ಅವುಗಳ ಬೆಲೆಗಳು ಒಂದೇ ಆಗಿರುತ್ತವೆ. ಈ ಹಿಂದೆ ಅಕ್ಟೋಬರ್ 1ರಂದು 19 ಕೆಜಿ ಸಿಲಿಂಡರ್‌ಗಳ ಬೆಲೆಯನ್ನು 43 ರೂ ಮತ್ತು ಅಕ್ಟೋಬರ್ 6 ರಂದು 19 ಕೆಜಿ ವಾಣಿಜ್ಯ ಸಿಲಿಂಡರ್‌ನ ಬೆಲೆ 2.50 ರೂ ಇಳಿಕೆ ಮಾಡಲಾಗಿತ್ತು. ಸೆಪ್ಟೆಂಬರ್ 1 ರಂದು 19 ಕೆಜಿ ಸಿಲಿಂಡರ್ ಬೆಲೆ 75 ರೂಪಾಯಿ ಇಳಿಸಲಾಗಿತ್ತು.

19 ಕೆಜಿ ಸಿಲಿಂಡರ್‌ನ ಅತಿದೊಡ್ಡ ಬಳಕೆದಾರರ ವಿಭಾಗವಾಗಿರುವ ರೆಸ್ಟೋರೆಂಟ್‌ಗಳು, ಹೋಟೆಲ್ ಮತ್ತು ಟೀ ಸ್ಟಾಲ್‌ಗಳು ಬೆಲೆ ಕಡಿತಗೊಂಡ ಕೊಂಚ ನಿರಾಳರಾಗಿದ್ದಾರೆ. ಎಲ್‌ಪಿಜಿ ಸಿಲಿಂಡರ್ ದರವನ್ನು ಭಾರತದ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಪ್ರತಿ ತಿಂಗಳಿಗೊಮ್ಮೆ ಪರಿಷ್ಕರಿಸಲಾಗುತ್ತದೆ.

Recommended Video

Budget ಇತಿಹಾಸದಲ್ಲಿ ಏನೇನೆಲ್ಲಾ ನಡೆದಿದೆ ಗೊತ್ತಾ | Oneindia Kannada

ಗೃಹ ಬಳಕೆಯ 14.2 ಕೆಜಿ, 5 ಕೆಜಿ, 10 ಕೆಜಿ ಕಾಂಪೋಸಿಟ್ ಅಥವಾ 5 ಕೆಜಿ ಕಾಂಪೋಸಿಟ್ ಸಿಲಿಂಡರ್‌ಗಳ ಬೆಲೆಯಲ್ಲಿ ಯಾವುದೇ ಇಳಿಕೆ ಇಲ್ಲ, ಬೆಲೆಗಳು ಯಥಾಸ್ಥಿತಿಯಲ್ಲಿರಲಿವೆ.

ಲಾಕ್‌ಡೌನ್ ಬಳಿಕ ದಿನೇ ದಿನೇ ದೇಶದಲ್ಲಿ ದಿನಬಳಕೆ ವಸ್ತುಗಳ ಬೆಲೆ ಏರಿಕೆಯಾಗುತ್ತಿದೆ. ತೈಲ, ತರಕಾರಿ ಸೇರಿದಂತೆ ದಿನ ಬಳಕೆ ವಸ್ತುಗಳ ಬೆಲೆ ಏರಿಕೆಯಿಂದ ಗ್ರಾಹಕರು ಈಗಾಗಲೇ ಕಂಗಾಲಾಗಿದ್ದಾರೆ. ಈ ನಡುವೆಯೇ ಇಂದಿನಿಂದ ವಾಣಿಜ್ಯ ಸಿಲಿಂಡರ್ ಬೆಲೆಯನ್ನು ತಗ್ಗಿಸಿರುವುದು ಕೊಂಚ ರಿಲೀಫ್ ನೀಡಿದಂತೆ ಆಗಿದೆ. ವಾಣಿಜ್ಯ ಸಿಲಿಂಡರ್‌ ಬೆಲೆ ಹೆಚ್ಚಳವಾದ ಹಿನ್ನೆಲೆಯಲ್ಲಿ ಹೋಟೆಲ್, ರೆಸ್ಟೋರೆಂಟ್‌ನಲ್ಲಿ ಆಹಾರ ಮತ್ತು ಪಾನೀಯಗಳ ಬೆಲೆ ಕೂಡ ದುಬಾರಿಯಾಗಿತ್ತು.

English summary
Budget 2022: In relief for consumers, National Oil Marketing companies have slashed the prices of 19 kg commercial LPG cylinder cost by Rs 91.50 effective from February 1, 2022. The 19 kg commercial cylinder will cost Rs 1907 in Delhi from today, sources told ANI.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X