ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

"ಬಿಟ್‌ಕಾಯಿನ್, ಎಥೆರಿಯಮ್ ಕಾನೂನುಬದ್ಧವಲ್ಲ": ಹಣಕಾಸು ಕಾರ್ಯದರ್ಶಿ ಮಹತ್ವದ ಹೇಳಿಕೆ

|
Google Oneindia Kannada News

ನವದೆಹಲಿ, ಫೆಬ್ರವರಿ 03: ಬಿಟ್‌ಕಾಯಿನ್ ಅಥವಾ ಎಥೆರಿಯಮ್‌ನಂತಹ ಕ್ರಿಪ್ಟೋಕರೆನ್ಸಿಗಳು ಎಂದಿಗೂ ಕಾನೂನುಬದ್ಧ ಆಗುವುದಿಲ್ಲ ಎಂದು ಹಣಕಾಸು ಕಾರ್ಯದರ್ಶಿ ಟಿವಿ ಸೋಮನಾಥನ್ ಮಹತ್ವದ ಹೇಳಿಕೆಯನ್ನು ನೀಡಿದ್ದಾರೆ. ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ನೀಡಿದ ಡಿಜಿಟಲ್ ರೂಪಾಯಿ ಮಾತ್ರ ಕಾನೂನುಬದ್ಧ ಆಗಿರುತ್ತದೆ ಎಂದು ಈ ಸಂದರ್ಭದಲ್ಲೇ ಸ್ಪಷ್ಟಪಡಿಸಿದ್ದಾರೆ.

ಈ ಬಗ್ಗೆ ಎಎನ್‌ಐ ಜೊತೆ ಮಾತನಾಡಿದ ಹಣಕಾಸು ಕಾರ್ಯದರ್ಶಿ ಟಿವಿ ಸೋಮನಾಥನ್, "ಡಿಜಿಟಲ್ ರೂಪಾಯಿಯನ್ನು ಆರ್‌ಬಿಐ ಬೆಂಬಲಿಸುತ್ತದೆ, ಅದು ಎಂದಿಗೂ ತಪ್ಪು ಅಲ್ಲ. ಹಣ ಆರ್‌ಬಿಐದ್ದು ಆಗಿರುತ್ತದೆ ಆದರೆ ಸ್ವರೂಪ ಡಿಜಿಟಲ್ ಆಗಿರುತ್ತದೆ. ಆರ್‌ಬಿಐ ನೀಡುವ ಡಿಜಿಟಲ್ ರೂಪಾಯಿ ಕಾನೂನುಬದ್ಧ ಆಗಿರುತ್ತದೆ," ಎಂದು ತಿಳಿಸಿದ್ದಾರೆ.

 ಐಟಿಆರ್‌ ಫಾರ್ಮ್‌ನಲ್ಲಿ ಇನ್ಮುಂದೆ ಕ್ರಿಪ್ಟೋ ಆದಾಯಕ್ಕಾಗಿ ಪ್ರತ್ಯೇಕ ಕಾಲಮ್‌! ಐಟಿಆರ್‌ ಫಾರ್ಮ್‌ನಲ್ಲಿ ಇನ್ಮುಂದೆ ಕ್ರಿಪ್ಟೋ ಆದಾಯಕ್ಕಾಗಿ ಪ್ರತ್ಯೇಕ ಕಾಲಮ್‌!

"ನಾವು ಆರ್‌ಬಿಐ ನೀಡುವ ಡಿಜಿಟಲ್ ರೂಪಾಯಿಯನ್ನು ಖರೀದಿ ಮಾಡಬಹುದು. ಡಿಜಿಟಲ್ ಸ್ವತ್ತುಗಳು ಡಿಜಿಟಲ್ ರೂಪಾಯಿಯೊಂದಿಗೆ ನಾವು ಐಸ್ ಕ್ರೀಮ್ ಅಥವಾ ಇತರ ವಸ್ತುಗಳನ್ನು ನಮ್ಮ ವ್ಯಾಲೆಟ್ ಬಳಸಿ ಅಥವಾ ಯುಪಿಐ ಪ್ಲಾಟ್‌ಫಾರ್ಮ್ ಮೂಲಕ ಖರೀದಿ ಮಾಡುತ್ತೇವೆ. ಉಳಿದಂತೆ ಬಿಟ್‌ಕಾಯಿನ್ ಅಥವಾ ಎಥೆರಿಯಮ್‌ನಂತಹ ಕ್ರಿಪ್ಟೋಕರೆನ್ಸಿಗಳು ಎಂದಿಗೂ ಕಾನೂನುಬದ್ಧ ಆಗುವುದಿಲ್ಲ," ಎಂದಿದ್ದಾರೆ.

Budget 2022: Bitcoin, Ethereum Will Never Be Legal Tender Says Finance Secretary TV Somanath

"ಖಾಸಗಿ ಕ್ರಿಪ್ಟೋ ಮೇಲೆ ಹೂಡಿಕೆ ಮಾಡಿ ಹಣ ನಷ್ಟವಾದರೆ ಸರ್ಕಾರ ಜವಾಬ್ದಾರಿಯಲ್ಲ"

"ಕ್ರಿಪ್ಟೋ ಸ್ವತ್ತುಗಳು ಆಸ್ತಿಗಳಾಗಿದ್ದು, ಅದರ ಮೌಲ್ಯವನ್ನು ಎರಡು ಜನರ ನಡುವೆ ನಿರ್ಧರಿಸಲಾಗುತ್ತದೆ. ನೀವು ಚಿನ್ನ, ವಜ್ರ ಮತ್ತು ಕ್ರಿಪ್ಟೋ ಆಸ್ತಿಗಳನ್ನು ಖರೀದಿಸಬಹುದು. ಆದರೆ ಆ ಮೌಲ್ಯಕ್ಕೆ ಸರ್ಕಾರದಿಂದ ಅಧಿಕೃತತೆ ಇರುವುದಿಲ್ಲ. ಖಾಸಗಿ ಕ್ರಿಪ್ಟೋದಲ್ಲಿ ಹೂಡಿಕೆ ಮಾಡುವ ಜನರು ಅದು ಸರ್ಕಾರದ ಅಧಿಕಾರವನ್ನು ಹೊಂದಿಲ್ಲ ಎಂದು ಅರ್ಥಮಾಡಿಕೊಳ್ಳಬೇಕು. ನಿಮ್ಮ ಹೂಡಿಕೆಗಳು ಯಶಸ್ವಿಯಾಗುತ್ತವೆಯೋ ಇಲ್ಲವೋ ಎಂಬುದಕ್ಕೆ ಯಾವುದೇ ಗ್ಯಾರಂಟಿ ಇಲ್ಲ. ಹಣವನ್ನು ಕಳೆದುಕೊಳ್ಳಬಹುದು ಮತ್ತು ಇದಕ್ಕೆ ಸರ್ಕಾರವು ಜವಾಬ್ದಾರರಾಗಿರುವುದಿಲ್ಲ," ಎಂದು ಈ ಸಂದರ್ಭದಲ್ಲೇ ಹಣಕಾಸು ಕಾರ್ಯದರ್ಶಿ ಟಿವಿ ಸೋಮನಾಥನ್ ಎಚ್ಚರಿಕೆ ನೀಡಿದ್ದಾರೆ.

ವರ್ಚುವಲ್ ಡಿಜಿಟಲ್ ಅಸೆಟ್ ವರ್ಗಾವಣೆಗೆ ಶೇ.30ರಷ್ಟು ತೆರಿಗೆವರ್ಚುವಲ್ ಡಿಜಿಟಲ್ ಅಸೆಟ್ ವರ್ಗಾವಣೆಗೆ ಶೇ.30ರಷ್ಟು ತೆರಿಗೆ

"ಕಾನೂನುಬಾಹಿರ ಎಂದು ಅರ್ಥವಲ್ಲ"

"ಕಾನೂನುಬದ್ಧವಲ್ಲದ ವಿಷಯಗಳು ಕಾನೂನುಬಾಹಿರ ಎಂದು ಅರ್ಥವಲ್ಲ. ನಾನು ಬಿಟ್‌ಕಾಯಿನ್ ಅಥವಾ ಎಥೆರಿಯಮ್ ಕಾನೂನುಬಾಹಿರ ಎಂದು ಹೇಳುತ್ತಿಲ್ಲ. ಆದರೆ ಅದು ಕಾನೂನುಬದ್ಧ ಅಲ್ಲ ಎಂದು ಮಾತ್ರ ಹೇಳುತ್ತೇವೆ. ಕ್ರಿಪ್ಟೋಕರೆನ್ಸಿಗೆ ನಿಯಂತ್ರಣ ಬಂದರೆ ಆಗಲೂ ನಾನು ಹೇಳಬಲ್ಲೆ. ಇದು ಕಾನೂನುಬದ್ಧ ಆಗುವುದಿಲ್ಲ," ಎಂದು ಸ್ಪಷ್ಟಪಡಿಸಿದ್ದಾರೆ.

"ಕ್ರಿಪ್ಟೋಕರೆನ್ಸಿ ನಿಯಂತ್ರಣ ಬಂದರೆ, ಈ ಕಾನೂನಿನ ಪ್ರಕಾರ ಜನರು ಕ್ರಿಪ್ಟೋಕರೆನ್ಸಿ ಹೂಡಿಕೆಗೆ ಕೆವೈಸಿಗೆ ಒಳಗಾಗಬೇಕಾಗಬಹುದು. ಮಾರಾಟಗಾರರ ಪರವಾನಗಿಯನ್ನು ಪಡೆಯಬೇಕಾಗಬಹುದು. ಆದರೆ ಮಧ್ಯಸ್ಥಗಾರರೊಂದಿಗೆ ಚರ್ಚೆ ನಡೆಸಿಯೇ ಸರ್ಕಾರ ಅಂತಿಮ ನಿರ್ಧಾರವನ್ನು ಕೈಗೊಳ್ಳಲಿದೆ. ಬೇರೆ ದೇಶಗಳಲ್ಲಿ ಏನಾಗುತ್ತಿದೆ ಎಂಬುದನ್ನು ನಾವೂ ಕೂಡಾ ಗಮನಿಸಿ ನಿರ್ಧಾರ ತೆಗೆದುಕೊಳ್ಳುತ್ತೇವೆ," ಎಂದರು.

ಡಿಜಿಟಲ್ ರೂಪಾಯಿಗಳ ಬಗ್ಗೆ ಹೆಚ್ಚು ವಿವರಿಸಿದ ಸೋಮನಾಥನ್, "ಡಿಜಿಟಲ್ ರೂಪಾಯಿ ಬಿಟ್‌ಕಾಯಿನ್ ಮತ್ತು ಎಥೆರಿಯಮ್‌ನಂತೆ ಇರುವುದಿಲ್ಲ. ಡಿಜಿಟಲ್ ರೂಪಾಯಿ ಮೂಲಕ, ನೀವು ಪ್ರಸ್ತುತ ನಿಮ್ಮ ಡಿಜಿಟಲ್ ವ್ಯಾಲೆಟ್‌ಗಳಾದ ಪೇಟಿಎಂ, ಯುಪಿಐ ಮೂಲಕ ಮಾಡುತ್ತಿರುವಂತೆಯೇ ನಿಮ್ಮ ವ್ಯವಹಾರವನ್ನು ನೀವು ಮಾಡುತ್ತೀರಿ. ಡಿಜಿಟಲ್ ರೂಪಾಯಿ ಕಾನೂನುಬದ್ಧ ಮತ್ತು ನಾವು ಮಾಡುವ ನಗದು ಪಾವತಿಗೆ ಸಮಾನವಾಗಿದೆ," ಎಂದು ಹಣಕಾಸು ಕಾರ್ಯದರ್ಶಿ ಕೂಡ ಸ್ಪಷ್ಟಪಡಿಸಿದ್ದಾರೆ.

ಈಗಾಗಲೇ ಕ್ರಿಪ್ಟೋಕರೆನ್ಸಿಗಳು ಮತ್ತು ಎನ್‌ಎಫ್‌ಟಿ ಸೇರಿದಂತೆ ಡಿಜಿಟಲ್ ಆಸ್ತಿ ವಹಿವಾಟುಗಳ ಲಾಭದ ಮೇಲೆ ಏಪ್ರಿಲ್ 1 ರಿಂದ ಶೇಕಡಾ 30 ತೆರಿಗೆಯನ್ನು ವಿಧಿಸಲಿದೆ ಎಂದು ಬಜೆಟ್‌ ಭಾಷಣದಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಘೋಷಣೆ ಮಾಡಿದ್ದಾರೆ. ಈ ಮೂಲಕ ಕ್ರಿಪ್ಟೋಕರೆನ್ಸಿ ನಿಯಂತ್ರಣ ಮಾಡಲು ಸರ್ಕಾರ ಮುಂದಾದಂತೆ ಕಂಡು ಬಂದಿದೆ. (ಒನ್‌ಇಂಡಿಯಾ ಸುದ್ದಿ)

English summary
Finance Secretary TV Somanath makes big statement, Says Bitcoin, Ethereum will never be legal tender.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X