ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಜೆಟ್ 2021: ಟೆಲಿಕಾಂ ಕಂಪನಿಗಳ ನಿರೀಕ್ಷೆ ಏನು?

|
Google Oneindia Kannada News

ನವ ದೆಹಲಿ, ಜನವರಿ 25: ಟೆಲಿಕಾಂ ಕಂಪನಿಗಳು ಈ ಬಾರಿಯ ಬಜೆಟ್‌ನಲ್ಲಿ ಭಾರಿ ರಿಯಾಯಿತಿಯನ್ನು ನಿರೀಕ್ಷಿಸುತ್ತಿವೆ. ಈಗಾಗಲೇ ಕಂಪನಿಗಳು ತಮ್ಮ ಮೇಲೆ ಭಾರೀ ಆರ್ಥಿಕ ಒತ್ತಡವಿದೆ ಎಂದು ಹೇಳುತ್ತಿದ್ದು, ಇದರಿಂದ ತಪ್ಪಿಸಲು ತಮಗೆ ವಿನಾಯಿತಿ ಬೇಕು ಎಂದು ಕೇಳಿವೆ. ಬಜೆಟ್‌ನಲ್ಲಿ ಕಂಪನಿಗಳ ಪರವಾನಗಿ ಶುಲ್ಕವನ್ನು ಕಡಿಮೆ ಮಾಡಲು, ಸ್ಪೆಕ್ಟ್ರಮ್ ಬಳಕೆಯ ಮೇಲಿನ ಜಿಎಸ್‌ಟಿಯನ್ನು ರದ್ದುಗೊಳಿಸಲು ಮತ್ತು ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ ಮರುಪಾವತಿ ಮಾಡಲು ಕೇಳಿಕೊಳ್ಳಲಾಗಿದೆ.

ಟೆಲಿಕಾಂ ಕಂಪನಿಗಳು ಹೆಚ್ಚು ತೆರಿಗೆಯಿಂದ ತೊಂದರೆಗೊಳಪಟ್ಟಿದ್ದು, ಇಂತಹ ಪರಿಸ್ಥಿತಿಯಲ್ಲಿ ಟೆಲಿಕಾಂ ಉದ್ಯಮವೂ ಬಜೆಟ್‌ನಲ್ಲಿ ಸರ್ಕಾರದಿಂದ ಹೆಚ್ಚಿನ ಪರಿಹಾರವನ್ನು ನಿರೀಕ್ಷಿಸುತ್ತಿದೆ. ಒಟ್ಟಾರೆಯಾಗಿ 58,000 ಕೋಟಿ ರೂಪಾಯಿಗಳನ್ನು ತೆರಿಗೆಯಾಗಿ ಪಾವತಿಸಲಾಗುತ್ತಿದೆ. ಹೀಗಾಗಿ ಕಂಪನಿಗಳು ತಮ್ಮ ಮೇಲೆ ತೆರಿಗೆ ಹೊರೆ ಹೆಚ್ಚಿದ್ದು, ಕಡಿಮೆ ಮಾಡಬೇಕು ಎಂದು ಹೇಳಲಾಗಿದೆ.

ಬಜೆಟ್ 2021: ಮೂಲ ಸೌಕರ್ಯ ಯೋಜನೆಗಾಗಿ ರಾಷ್ಟ್ರೀಯ ಬ್ಯಾಂಕ್‌ ಸ್ಥಾಪನೆ?ಬಜೆಟ್ 2021: ಮೂಲ ಸೌಕರ್ಯ ಯೋಜನೆಗಾಗಿ ರಾಷ್ಟ್ರೀಯ ಬ್ಯಾಂಕ್‌ ಸ್ಥಾಪನೆ?

ಪರವಾನಗಿ ಶುಲ್ಕವನ್ನು ಶೇಕಡಾ 8 ರಿಂದ 5 ಅಥವಾ 6 ಕ್ಕೆ ಇಳಿಸಬೇಕು ಎಂದು ಟೆಲಿಕಾಂ ಕಂಪನಿಗಳು ಸರ್ಕಾರದಿಂದ ಒತ್ತಾಯಿಸುತ್ತಿವೆ. ಇದಲ್ಲದೆ, ಹೊಂದಾಣಿಕೆಯ ಒಟ್ಟು ಆದಾಯವು ಶೇಕಡಾ 8ರಷ್ಟನ್ನು ಸರ್ಕಾರವು ಕಡಿಮೆ ಮಾಡಬೇಕು. ಇದಲ್ಲದೆ, ಕಂಪನಿಗಳು ಸ್ಪೆಕ್ಟ್ರಮ್ ಬಳಕೆಯ ಶುಲ್ಕದ ಶೇಕಡಾ 3ರಷ್ಟು ಸಹ ಪಾವತಿಸುತ್ತವೆ, ಇದನ್ನು ಸಹ ಕಡಿಮೆ ಮಾಡಬೇಕು. ಸ್ಪೆಕ್ಟ್ರಮ್ ಸ್ವಾಧೀನ ಶುಲ್ಕದ ಮೇಲೆ ಪ್ರತ್ಯೇಕ ಜಿಎಸ್‌ಟಿಯನ್ನು ಸಹ ನೀಡುತ್ತೇವೆ ಎಂದು ಕಂಪನಿಗಳು ಹೇಳುತ್ತವೆ.

Budget 2021: Telecom Sector Expectations

ಇನ್ನು ಕಂಪನಿಗಳು ಯುನಿವರ್ಸಲ್ ಸರ್ವಿಸ್ ಆಬ್ಲಿಗೇಶನ್ ಫಂಡ್‌ಗೆ ಶೇಕಡಾ 5ರಷ್ಟು ಕೊಡುಗೆ ನೀಡುತ್ತಿದ್ದು, ಇದನ್ನೂ ಸಹ ಕಡಿಮೆ ಮಾಡಬೇಕು ಎಂದು ಹೇಳಿವೆ. ಅದೇ ಸಮಯದಲ್ಲಿ, ಟೆಲಿಕಾಂ ಕಂಪನಿಗಳು ಕೊರೊನಾದಿಂದ ಮನೆಯಿಂದ ಕೆಲಸ ಮಾಡುವ ಜನರಿಗೆ ಹೊಸ ಲೈಫ್ ಲೈನ್‌ಗಳನ್ನು ನೀಡಿವೆ. ಸರ್ಕಾರವು ಈ ಕಂಪನಿಗಳಿಗೆ ಬಜೆಟ್‌ನಲ್ಲಿ ಪರಿಹಾರ ನೀಡಿದರೆ, ಕಂಪನಿಗಳು ಹೆಚ್ಚು ಹೂಡಿಕೆ ಮಾಡಲು ಸಾಧ್ಯವಾಗುತ್ತದೆ ಮತ್ತು ಸೇವೆಗಳ ಮಟ್ಟವನ್ನು ಸುಧಾರಿಸುತ್ತದೆ.

English summary
Here The india's Telecom companies expectations on upcoming Union Budget 2021
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X