ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇಂದ್ರ ಬಜೆಟ್ 2021 ಬಗ್ಗೆ ಸವಾರಿ ಕಾರು ರೆಂಟಲ್ಸ್ ಸಿಇಒ ಪ್ರತಿಕ್ರಿಯೆ

|
Google Oneindia Kannada News

ನವದೆಹಲಿ, ಫೆಬ್ರವರಿ 2: ಕೇಂದ್ರ ಬಜೆಟ್ 2021 ಬಗ್ಗೆ ಸವಾರಿ ಕಾರ್ ರೆಂಟಲ್ಸ್ ಸಿಇಒ ಗೌರವ್ ಅಗರ್ವಾಲ್ ಪ್ರತಿಕ್ರಿಯಿಸಿದ್ದು, ಹೆದ್ದಾರಿ ನಿರ್ಮಾಣ, ಪ್ರವಾಸೋದ್ಯಮಕ್ಕೆ ಒತ್ತು ನೀಡಿರುವುದು ಸ್ವಾಗತ ಎಂದಿದ್ದಾರೆ.

ಮುಂದಿನ ಆರ್ಥಿಕ ವರ್ಷದೊಳಗೆ 8,500 ಕಿ.ಮೀ ಹೆದ್ದಾರಿಗಳನ್ನು ನಿರ್ಮಿಸುವ ಮೂಲಕ ರಸ್ತೆ ಮೂಲಸೌಕರ್ಯವನ್ನು ಹೆಚ್ಚಿಸುವ ಬಗ್ಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಪ್ರಸ್ತಾಪಿಸಿದ್ದಾರೆ. ಇದು ಸಣ್ಣ ಪಟ್ಟಣಗಳು ಮತ್ತು ಹಳ್ಳಿಗಳಿಗೆ ಉತ್ತಮ ಸಂಪರ್ಕ ವನ್ನು ಖಚಿತಪಡಿಸುತ್ತದೆ. ಈ ವರ್ಷ ಜನರ ಪ್ರಯಾಣ ಆಯ್ಕೆಗಳಲ್ಲಿ ಆಮೂಲಾಗ್ರ ಬದಲಾವಣೆ ಮತ್ತು ನಂತರ ರಸ್ತೆ ಪ್ರಯಾಣಗಳ ವಾಪಸಾತಿಯಿಂದ, ಹೆದ್ದಾರಿ ನಿರ್ಮಾಣದಲ್ಲಿ ಹೂಡಿಕೆ ಖಂಡಿತವಾಗಿಯೂ ಒಂದು ಉತ್ತೇಜನಕಾರಿ ನಡೆಯಾಗಿದೆ ಮತ್ತು ಮುಂಬರುವ ವರ್ಷಗಳಲ್ಲಿ ಪ್ರವಾಸ ಮತ್ತು ಪ್ರವಾಸೋದ್ಯಮ ಕ್ಷೇತ್ರಕ್ಕೆ ಪ್ರಮುಖ ಬೆಂಬಲವನ್ನು ಒದಗಿಸಲಿದೆ.

ಇದಲ್ಲದೆ, ಹಳೆಯ ಮತ್ತು ಅಯೋಗ್ಯ ವಾಹನಗಳನ್ನು ಹಂತ ಹಂತವಾಗಿ ಹೊರತರುವ ನಿಟ್ಟಿನಲ್ಲಿ ವಾಹನ ಗಳ ರದ್ದತಿ ನೀತಿಯನ್ನು ಜಾರಿಗೆ ತರುವುದು ಒಂದು ಉತ್ತಮ ಉಪಕ್ರಮವಾಗಿದೆ. ಇದು ಸ್ವಚ್ಛ ಮತ್ತು ಹಸಿರು ಭಾರತ ನಿರ್ಮಾಣಮಾಡುವ ನಿಟ್ಟಿನಲ್ಲಿ ಪರಿಸರ ಸ್ನೇಹಿ ನಡೆ ಮಾತ್ರವಲ್ಲ, ದಕ್ಷ ಇಂಧನ ಬಳಕೆ ಮತ್ತು ಕಡಿಮೆ ನಿರ್ವಹಣಾ ವೆಚ್ಚಗಳನ್ನು ಖಚಿತಪಡಿಸುವ ಮೂಲಕ ವಾಹನ ಮಾಲೀಕರಿಗೆ ಗಮನಾರ್ಹವಾಗಿ ನೆರವಾಗಲಿದೆ.

Budget 2021: Savaari Car CEO reacts to Vehicle Scrapping and

ಹೆದ್ದಾರಿ ಮೂಲಸೌಕರ್ಯದ ಬಗ್ಗೆ ಪ್ರಸ್ತಾಪಿಸಿರುವುದು ಪ್ರವಾಸೋದ್ಯಮ ಮತ್ತು ಆತಿಥ್ಯ ವಲಯಕ್ಕೆ ಕೇಂದ್ರ ಬಜೆಟ್ ನಲ್ಲಿ ಸ್ಥಾನ ಸಿಗದಿರುವುದು ಅಚ್ಚರಿ ಮೂಡಿಸಿದೆ. 2021ರ ಬಹುತೇಕ ಸಮಯದಲ್ಲಿ ಅಂತಾರಾಷ್ಟ್ರೀಯ ಪ್ರಯಾಣವು ಬಹುತೇಕ ವಾಗಿ ತಲುಪಲಾಗದಷ್ಟು ದೂರಉಳಿದಿರುವುದು, ಈ ವರ್ಷ ದೇಶೀಯ ಪ್ರಯಾಣ ದರ ಏರಿಕೆ ಬಗ್ಗೆ ನಾವು ಸಾಕಷ್ಟು ಆಶಾವಾದಿಗಳಾಗಿದ್ದೇವೆ.

ದೇಶೀಯ ಪ್ರವಾಸೋದ್ಯಮವನ್ನು ಮತ್ತಷ್ಟು ಹೆಚ್ಚಿಸಲು ಮತ್ತು ಭಾರತವನ್ನು ವಿಶ್ವದರ್ಜೆಯ ಪ್ರವಾಸಿ ತಾಣವನ್ನಾಗಿ ಮಾಡಲು ಈ ಬಜೆಟ್ ನಲ್ಲಿ ಮೀಸಲಿಟ್ಟಿರುವ ಅನುದಾನವನ್ನು ಶೇ.50ರಿಂದ 2250 ಕೋಟಿಗೆ ಹೆಚ್ಚಿಸಲಾಗುವುದು ಎಂದು ನಾವು ನಿರೀಕ್ಷಿಸಿದ್ದೆವು. ದೇಶದ ಜಿಡಿಪಿಯ ಶೇ.10ರಷ್ಟು ಆದಾಯ ಮತ್ತು ಉದ್ಯೋಗ ಸೃಷ್ಟಿಕರ್ತರಲ್ಲಿ ಈ ಉದ್ಯಮವೂ ಒಂದಾಗಿದ್ದು, ಪ್ರವಾಸೋದ್ಯಮ ಮತ್ತು ಆತಿಥ್ಯ ಉದ್ಯಮ ಗಳು ಅನುಕೂಲಕರ ಸುದ್ದಿಗಾಗಿ ಕಾಯುತ್ತಿದೆ.

COVID-19 ವಿರುದ್ಧ ದೇಶ ವು ಹೋರಾಡುತ್ತಿರುವ ಹಿನ್ನೆಲೆಯಲ್ಲಿ, ಸಾಂಕ್ರಾಮಿಕ ಲಸಿಕೆ ನಿಧಿಗಾಗಿ FM ನ ಘೋಷಣೆಯು ಒಂದು ಆಶಾದಾಯಕ ಸುದ್ದಿಯಾಗಿತ್ತು. ಜನಸಂಖ್ಯೆಯಲ್ಲಿ ಹೆಚ್ಚಿನ ಭಾಗವು ಲಸಿಕೆಯನ್ನು ಪಡೆಯುತ್ತಾ ಹೋದ ಹಾಗೆ, ಜನರು ನಿಧಾನವಾಗಿ ತಮ್ಮ ಸಾಂಕ್ರಾಮಿಕ ರೋಗ ಪೂರ್ವ ಜೀವನಕ್ಕೆ ಮರಳುತ್ತಾರೆ. ಸಹಜ ಸ್ಥಿತಿಗೆ ಮರಳಿರುವುದರಿಂದ, ಪ್ರವಾಸ ಮತ್ತು ಪ್ರವಾಸೋದ್ಯಮ ಸೇರಿದಂತೆ ದೇಶದ ವಿವಿಧ ಉದ್ಯಮಗಳ ಮೇಲೆ ಇದು ಪರಿಣಾಮ ಬೀರುತ್ತದೆ ಮತ್ತು ಉತ್ತೇಜಿಸುತ್ತದೆ ಎಂದು ಹೇಳಿದರು.

English summary
Budget 2021: Savaari Car Rentals CEO reaction to Voluntary Vehicle Scrapping policy which covers 1 crore vehicles.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X