ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಜೆಟ್‌ 2021: ಕೃಷಿ ರಾಸಾಯನಿಕಗಳ ಮೇಲೆ ಜಿಎಸ್‌ಟಿ ತಗ್ಗಿಸುವ ಬೇಡಿಕೆ

|
Google Oneindia Kannada News

ನವದೆಹಲಿ, ಜನವರಿ 22: ಈ ವರ್ಷದ ಕೇಂದ್ರ ಬಜೆಟ್ ಸಾಕಷ್ಟು ನಿರೀಕ್ಷೆಗಳನ್ನು ಹೊಂದಿದ್ದು, ಫೆಬ್ರವರಿ 1 ರಂದು ದೇಶದ ಸಾಮಾನ್ಯ ಬಜೆಟ್ ಮಂಡಿಸಲಾಗುವುದು. ಪ್ರತಿ ಕ್ಷೇತ್ರಗಳಂತೆ ಕೃಷಿ ಕ್ಷೇತ್ರವು ಅಪಾರ ಮಟ್ಟದಲ್ಲಿ ನಿರೀಕ್ಷೆಯ ಜೊತೆಗೆ ಹೊಸ ರಿಯಾಯಿತಿಗಳನ್ನು ಬಯಸುತ್ತಿದೆ.

ಕೀಟನಾಶಕ ತಯಾರಕರ ಸಂಘಟನೆ ಪಿಎಂಎಫ್‌ಐಐ ಈಗಾಗಲೇ ಮುಂಬರುವ ಬಜೆಟ್‌ನಲ್ಲಿ ಬೀಜಗಳು ಮತ್ತು ರಸಗೊಬ್ಬರಗಳಂತಹ ಇತರ ಕೃಷಿ ಒಳಹರಿವುಗಳಿಗೆ ಅನುಗುಣವಾಗಿ ಕೀಟನಾಶಕಗಳ ಮೇಲಿನ ಜಿಎಸ್‌ಟಿಯನ್ನು ಪ್ರಸ್ತುತ ಶೇಕಡಾ 18 ರಿಂದ ಶೇಕಡಾ 5ಕ್ಕೆ ಇಳಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದೆ.

ಬಜೆಟ್‌ 2021: ಎಲೆಕ್ಟ್ರಿಕ್ ವಾಹನ ಕೈಗಾರಿಕೆಗಳ ನಿರೀಕ್ಷೆಗಳೇನು?ಬಜೆಟ್‌ 2021: ಎಲೆಕ್ಟ್ರಿಕ್ ವಾಹನ ಕೈಗಾರಿಕೆಗಳ ನಿರೀಕ್ಷೆಗಳೇನು?

ಇನ್ನು 2021-22ರ ಬಜೆಟ್‌ನಲ್ಲಿ ಕೃಷಿ ರಾಸಾಯನಿಕಗಳ ಮೇಲಿನ ಜಿಎಸ್‌ಟಿಯನ್ನು ಶೇಕಡಾ 12ಕ್ಕೆ ಇಳಿಸಬೇಕು ಎಂದು ಕ್ರಾಪ್‌ಲೈಫ್ ಇಂಡಿಯಾ ಒತ್ತಾಯಿಸಿದೆ.

 Budget 2021: PMFAI Demand GST Reduction On Pesticides From 18 To 5 Percent

ಈ ರೀತಿಯಾಗಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಕಡಿತಗೊಳಿಸುವುದರಿಂದ ಕೃಷಿ ರಾಸಾಯನಿಕಗಳ ಬೆಲೆಯನ್ನು ಕಡಿಮೆ ಮಾಡುತ್ತದೆ ಮತ್ತು ರೈತರಿಗೆ ಅನುಕೂಲವಾಗುತ್ತದೆ ಎಂದು ಹೇಳಿಕೆ ನೀಡಿದೆ. ಪ್ರಸ್ತುತ, ಕೃಷಿ ರಾಸಾಯನಿಕಗಳ ಮೇಲೆ ಜಿಎಸ್‌ಟಿಯನ್ನು ಶೇಕಡಾ 18 ದರದಲ್ಲಿ ವಿಧಿಸಲಾಗುತ್ತದೆ. ಕ್ರಾಪ್‌ಲೈಫ್ ಇಂಡಿಯಾ ಎಂಬುದು ಬೆಳೆ ಸಂರಕ್ಷಣೆಗೆ ಸಂಬಂಧಿಸಿದಂತೆ ಸಂಶೋಧನೆ ಮತ್ತು ಅಭಿವೃದ್ಧಿಯನ್ನು ಹೊಂದಿರುವ ಕಂಪನಿಗಳ ಸಂಘವಾಗಿದೆ.

ಕ್ರಾಪ್‌ಲೈಫ್ ಇಂಡಿಯಾದ ಸಿಇಒ ಪ್ರಕಾರ, ಜಿಎಸ್‌ಟಿ ನಿಯಮಗಳನ್ನು ಸರ್ಕಾರ ಸಡಿಲಿಸಬೇಕು. ಜಿಎಸ್‌ಟಿ ಸೆಂಟ್ರಲ್ ಲೆವಿ ಆಗಿದ್ದರೆ, ಒಂದು ರಾಜ್ಯದ ಇನ್ಪುಟ್ ಕ್ರೆಡಿಟ್ ಅನ್ನು ಮತ್ತೊಂದು ರಾಜ್ಯದಲ್ಲಿ ತೆರಿಗೆ ಪಾವತಿಸಬೇಕಾದ ಸ್ಥಿತಿಗೆ ಹೊಂದಿಸಲು ಕಂಪನಿಗಳಿಗೆ ಅವಕಾಶ ನೀಡಬೇಕು ಎಂದು ಅವರು ಹೇಳಿದ್ದಾರೆ. ತಾಂತ್ರಿಕ ಕಚ್ಚಾ ವಸ್ತುಗಳು ಮತ್ತು ಸಿದ್ಧಪಡಿಸಿದ ಉತ್ಪನ್ನಗಳಿಗೆ (ಸಿದ್ಧಪಡಿಸಿದ ಉತ್ಪನ್ನಗಳು) ಸರ್ಕಾರವು ಶೇಕಡಾ 10ರಷ್ಟು ಏಕರೂಪದ ಸುಂಕವನ್ನು ವಿಧಿಸಬೇಕೆಂದು ಕ್ರಾಪ್‌ಲೈಫ್ ಇಂಡಿಯಾ ಒತ್ತಾಯಿಸಿದೆ.

ಕ್ರಾಪ್‌ಲೈಫ್ ಇಂಡಿಯಾ ಬಜೆಟ್‌ನಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ (ಆರ್ & ಡಿ) ಬಗ್ಗೆ ಗಮನಹರಿಸಬೇಕೆಂದು ಸರ್ಕಾರವನ್ನು ಕೋರಿದೆ. ಕೃಷಿ ರಾಸಾಯನಿಕ ಕಂಪನಿಗಳಿಗೆ ಆರ್ & ಡಿ ಮೇಲಿನ ವೆಚ್ಚದ ಮೇಲೆ ಶೇಕಡಾ 200ರಷ್ಟು ಕಡಿತವನ್ನು ಪಾವತಿಸಲು ಕೋರಲಾಗಿದೆ. ಇದು ರೈತರಿಗೂ ಅನುಕೂಲವಾಗಲಿದೆ ಎಂದು ಉದ್ಯಮ ಸಂಸ್ಥೆ ನಂಬಿದೆ. ಅದೇ ಸಮಯದಲ್ಲಿ, ಕನಿಷ್ಟ ಸ್ಥಿರ ಆಸ್ತಿ 50 ಕೋಟಿ ರೂ.ಗಿಂತ ಹೆಚ್ಚಿರುವ ಮತ್ತು 10 ಕೋಟಿ ರೂ.ಗಿಂತ ಹೆಚ್ಚಿನ ವೆಚ್ಚವನ್ನು ಹೊಂದಿರುವ ಘಟಕಗಳಿಗೆ ಸರ್ಕಾರವು ಲಾಭವನ್ನು ನೀಡಬಹುದು ಎಂದು ಅವರು ಹೇಳಿದರು.

English summary
The PMFAI on demanded that the government in the forthcoming Budget should reduce GST to 5 percent from the current 18 percent on pesticides
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X