ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಜೆಟ್ 2021: ಆದಾಯ ತೆರಿಗೆದಾರರಿಗೆ ರೀಲಿಫ್ ಇಲ್ಲ, ಮತ್ತೇನಿದೆ?

|
Google Oneindia Kannada News

ಪ್ರತಿ ಬಜೆಟ್‌ನಂತೆ ಈ ಬಾರಿಯೂ ದೇಶದ ಆರ್ಥಿಕ ಪರಿಸ್ಥಿತಿ ಸುಧಾರಣೆ ಕ್ರಮದ ಬಗ್ಗೆ ಹೆಚ್ಚಿನ ಮಹತ್ವ ಇರಬಹುದಾರೂ ತೆರಿಗೆದಾರರಿಗೆ ಎಂದಿನಂತೆ ನಿರೀಕ್ಷೆಗಳು ಇದ್ದೆ ಇವೆ. ಮುಖ್ಯವಾಗಿ ಮೂಲ ತೆರಿಗೆ ಪಾವತಿ ಮಿತಿ ಹೆಚ್ಚಳವಾಗುವುದೆ? ಎಂಬ ನಿರೀಕ್ಷೆಯಿದೆ.

ಬಜೆಟ್ ಮಂಡಿಸಲಿರುವ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಧ್ಯಮವರ್ಗೀಯ ಸಂಬಳದಾರರಿಗೆ ಏನೆಲ್ಲ ನೀಡಬಹುದು ಎಂಬ ಕುತೂಹಲವಿದೆ. ತೆರಿಗೆ ಸ್ಲ್ಯಾಬ್ ಮಿತಿಯನ್ನು ಹೆಚ್ಚಿಸುವ ಮೂಲಕ ಬಳಕೆ ಸುಧಾರಿಸಬಹುದು. ಇದರೊಂದಿಗೆ, ಸಂಬಳ ಹೊಂದಿರುವ ಜನರು ಖರ್ಚು ಮಾಡಲು ಹೆಚ್ಚು ಹಣವನ್ನು ಹೊಂದಿರುತ್ತಾರೆ ಎಂಬ ಚರ್ಚೆಯಿದೆ. ಆದರೆ, ಈಗಾಗಲೇ ಸರ್ಕಾರಿ ನೌಕರರಿಗೆ ಹಾಗೂ ಉದ್ಯೋಗಸ್ಥರ ಕೊಳ್ಳುವಿಕೆ, ಖರೀದಿ ಸಂಸ್ಕೃತಿಗೆ ಬೇಕಾದ ವ್ಯವಸ್ಥೆ ಹಾಗೂ ಮಾರ್ಗವನ್ನು ಸರ್ಕಾರ ತೋರಿಸಿದ್ದು, ಅನೇಕ ಆರ್ಥಿಕ ಪ್ಯಾಕೇಜ್ ಗಳನ್ನು ಕೊವಿಡ್ 19 ಸಂದರ್ಭದಲ್ಲಿ ನೀಡಿದೆ.

 ಬಜೆಟ್ 2021: ಆದಾಯ ತೆರಿಗೆಯಲ್ಲಿ ವಿನಾಯಿತಿ ಸಿಗಬಹುದೇ? ಬಜೆಟ್ 2021: ಆದಾಯ ತೆರಿಗೆಯಲ್ಲಿ ವಿನಾಯಿತಿ ಸಿಗಬಹುದೇ?

ಜನರಿಗೆ ನೇರವಾಗಿ ಅನುಕೂಲವಾಗುವ ಆದಾಯ ತೆರಿಗೆ ಮಿತಿ ಹೆಚ್ಚಳ ಸೇರಿದಂತೆ ತೆರಿಗೆ ಭಾರ ಇಳಿಸುವ ನಿರೀಕ್ಷೆ ಈಗಾಗಲೇ ಈಡೇರಿದೆ. ವೃತ್ತಿಪರರ ತೆರಿಗೆದಾರ, ಸಣ್ಣ ತೆರಿಗೆದಾರರಿಗೆ ಅನುಕೂಲವಾಗಲು ಆದಾಯ ತೆರಿಗೆ ಇಲಾಖೆಯಿಂದ ಇ -ಸಹಯೋಗ ಯೋಜನೆ ಜಾರಿಗೊಳಿಸಲಿದೆ.

 ಮೂಲ ತೆರಿಗೆ ಪಾವತಿ ಮಿತಿ : 5 ಲಕ್ಷ ರು ತನಕ ತೆರಿಗೆ

ಮೂಲ ತೆರಿಗೆ ಪಾವತಿ ಮಿತಿ : 5 ಲಕ್ಷ ರು ತನಕ ತೆರಿಗೆ

ಮೂಲ ತೆರಿಗೆ ಪಾವತಿ ಮಿತಿ : 5 ಲಕ್ಷ ರು ತನಕ ತೆರಿಗೆ ಪಾವತಿಸುವಂತಿಲ್ಲ, ಇನ್ನೊಂದಿಷ್ಟು ಉಳಿತಾಯ ತೋರಿಸಿದರೆ 9 ಲಕ್ಷ ರು ತನಕ ತೆರಿಗೆ ಕಟ್ಟದೆ ಇರಬಹುದು ಎಂದು ಸಂಬಳದಾರರಿಗೆ ಮೋದಿ ಸರ್ಕಾರ ಸಿಹಿ ಸುದ್ದಿಯನ್ನು ನೀಡಿದೆ. ಆದರೆ, ತೆರಿಗೆ ಪಾವತಿ ಮೂಲ ಮಿತಿಯಾದ 2.5 ಲಕ್ಷ ರುಗಳನ್ನು 2014ರಿಂದ ಇಲ್ಲಿ ತನಕ ಬದಲಾಯಿಸಿಲ್ಲ. ಪ್ರಸ್ತುತ ಬಜೆಟ್ ನಲ್ಲಿ ಈ ಮಿತಿಯನ್ನು 3 ಲಕ್ಷ ರುಗಳಿಗೆ ಏರಿಸಲು ಬೇಡಿಕೆ ಬಂದಿದೆ. ಆದರೆ, ಈಗಾಗಲೇ ವೈಯಕ್ತಿಕ ಆದಾಯ 5 ಲಕ್ಷರು ತನಕ ಹೊಂದಿರುವವರು ಸೆಕ್ಷನ್ 87ಎ ಅಡಿಯಲ್ಲಿ ಪೂರ್ತಿ ತೆರಿಗೆ ರಿಬೇಟ್ ಪಡೆಯಬಹುದಾಗಿದೆ. ಹೀಗಾಗಿ, 2021-22ರ ಅವಧಿಗೆ ಮೂಲ ಮಿತಿಯನ್ನು ಬದಲಾಯಿಸುವ ಸಾಧ್ಯತೆ ಕಡಿಮೆ.

 ವೈಯಕ್ತಿಕ ತೆರಿಗೆ ಹಿಂಪಡೆಯುವ ಮಿತಿ

ವೈಯಕ್ತಿಕ ತೆರಿಗೆ ಹಿಂಪಡೆಯುವ ಮಿತಿ

ಕಳೆದ ಬಜೆಟ್ ನಲ್ಲಿ ರಿಬೇಟ್ ದರ ಮಿತಿ ಏರಿಕೆಯಾಗಿತ್ತು
* 5 ಲಕ್ಷ ರು ನಿಂದ 10 ಲಕ್ಷ ರು ತನಕ ಆದಾಯ ಹೊಂದಿರುವವರ ತೆರಿಗೆ ಶೇ 20.
* 50 ಲಕ್ಷ ದಿಂದ 1 ಕೋಟಿ ರು ವಾರ್ಷಿಕ ಆದಾಯ ಇರುವವರಿಗೆ ಶೇ10 ರಷ್ಟು ಸರ್ ಚಾರ್ಜ್
* ಕಡಿಮೆ ಆದಾಯ ಗಳಿಸುವ ಉದ್ಯೋಗಿಗಳ ವೈಯಕ್ತಿಕ ತೆರಿಗೆ ಹಿಂಪಡೆಯುವ (rebate) ಮಿತಿಯಲ್ಲಿ ಬದಲಾವಣೆ ಕಂಡು ಬಂದಿದೆ. ವಾರ್ಷಿಕವಾಗಿ 5 ಲಕ್ಷ ಆದಾಯ(Taxable Income) ಹೊಂದಿರುವವರಿಗೆ ಈ ಮೊತ್ತ 2,000 ರು ನಿಂದ 5,000 ರು ಗೆ ಏರಿಸಲಾಗಿದೆ.
* ಮನೆ ಬಾಡಿಗೆ ಭತ್ಯೆ ಮಿತಿ ಹೆಚ್ಚಳ: HRA ದರ 24,000 ರು ನಿಂದ 60,000 ರು ಗೆ ಏರಿಸಲಾಗಿದೆ.

ಬಜೆಟ್ ನಿರೀಕ್ಷೆ 2021; ಉದ್ಯೋಗ ಸೃಷ್ಟಿಗೆ ವಿಶೇಷ ಗಮನ ಬೇಕುಬಜೆಟ್ ನಿರೀಕ್ಷೆ 2021; ಉದ್ಯೋಗ ಸೃಷ್ಟಿಗೆ ವಿಶೇಷ ಗಮನ ಬೇಕು

 ಮನೆ ಖರೀದಿಗೆ ಪ್ರೋತ್ಸಾಹ, 80 ಸಿ ಮಿತಿ ಏರಿಕೆ?

ಮನೆ ಖರೀದಿಗೆ ಪ್ರೋತ್ಸಾಹ, 80 ಸಿ ಮಿತಿ ಏರಿಕೆ?

ಕೊವಿಡ್ 19 ದೆಸೆಯಿಂದ ಕಳೆದ ಒಂದು ವರ್ಷದಲ್ಲಿ ರಿಯಲ್ ಎಸ್ಟೇಟ್ ವ್ಯವಹಾರ ಕುಸಿತ ಕಂಡಿದ್ದು, ವಸತಿ ಕ್ಷೇತ್ರದ ಅಭಿವೃದ್ಧಿಗಾಗಿ ಮನೆ ಖರೀದಿಗೆ ಪ್ರೋತ್ಸಾಹ ನೀಡಲು ಸರ್ಕಾರ ಮುಂದಾಗುವ ಸಾಧ್ಯತೆಯಿದೆ. ಜೊತೆಗೆ 80ಸಿ ಮಿತಿಯನ್ನು 1.5 ಲಕ್ಷ ರುನಿಂದ 2 ಲಕ್ಷಕ್ಕೇರಿಸುವ ಸಾಧ್ಯತೆಯಿದೆ.
ಹೊಸ ಮನೆ ಖರೀದಿದಾರರಿಗೆ ಹೆಚ್ಚುವರಿ ತೆರಿಗೆ ಪ್ರಯೋಜನಗಳನ್ನು ನೀಡುವ ಮೂಲಕ ಈ ಕ್ಷೇತ್ರದಲ್ಲಿ ಖರೀದಿದಾರರನ್ನು ಹೆಚ್ಚಿಸಲು ಸರ್ಕಾರ ಮುಂದಾಗುವ ಸಾಧ್ಯತೆಯೂ ಇದೆ.

 ಸೆಕ್ಷನ್ 80ಡಿ ವಿಮೆ ಮಿತಿ ಏರಿಕೆ?

ಸೆಕ್ಷನ್ 80ಡಿ ವಿಮೆ ಮಿತಿ ಏರಿಕೆ?

ಸಿಎನ್ ಬಿಸಿ ವರದಿ ಪ್ರಕಾರ, ಆದಾಯ ತೆರಿಗೆ ಮಿತಿ ಹೆಚ್ಚಳ ಮಾಡುವ ಸಾಧ್ಯತೆ ಇಲ್ಲ. ಆದರೆ, 80 ಡಿ ಅಡಿಯಲ್ಲಿ ಬರುವ ಆರೋಗ್ಯ ವಿಮೆ ಪ್ರೀಮಿಯಂ ಮಿತಿಯನ್ನು 25,000 ರುನಿಂದ ಏರಿಕೆ ಮಾಡುವ ಸಾಧ್ಯತೆ ಹೆಚ್ಚಿದೆ ಎಂದಿದೆ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಫೆಬ್ರವರಿ 1, 2021ರಂದು ಕೇಂದ್ರ ಬಜೆಟ್ ಮಂಡಿಸಲಿದ್ದಾರೆ.

ಇದಲ್ಲದೆ,ಎನ್‌ಪಿಎಸ್‌ಗೆ (ರಾಷ್ಟ್ರೀಯ ಪಿಂಚಣಿ ಯೋಜನೆ)ಹೆಚ್ಚುವರಿ ಕಡಿತದ ಮಿತಿಯನ್ನು 50,000 ರೂ.ಗಳಿಂದ 100,000 ರೂ. ಅಥವಾ 150,000 ರೂ.ಗೆ ಹೆಚ್ಚಿಸಲು ಸರ್ಕಾರ ಪರಿಗಣಿಸಬೇಕು ಎಂಬ ಬೇಡಿಕೆ ಇದ್ದೇ ಇದೆ.

ಸರ್ಕಾರಿ ನೌಕರರಿಗೆ ಡಬ್ಬಲ್ ಧಮಾಕ, ಡಿಎ, ಸಂಬಳ ಏರಿಕೆ!ಸರ್ಕಾರಿ ನೌಕರರಿಗೆ ಡಬ್ಬಲ್ ಧಮಾಕ, ಡಿಎ, ಸಂಬಳ ಏರಿಕೆ!

English summary
The Centre is unlikely to modify personal income tax slabs during the upcoming Budget for 2021-22 financial year, CNBC-TV18 reported.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X