ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಜೆಟ್ 2021: ಆಮದು ಸುಂಕ ಹೆಚ್ಚಳ, ಮೊಬೈಲ್‌ಗಳ ಬೆಲೆ ಹೆಚ್ಚಾಗಲಿದೆ!

|
Google Oneindia Kannada News

2021 ರ ಬಜೆಟ್‌ನಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಆಮದಾಗುವ ಕೆಲವೊಂದು ವಸ್ತುಗಳ ಸುಂಕವನ್ನು ಹೆಚ್ಚಿಸಲು ಪ್ರಸ್ತಾಪಿಸಿದ್ದಾರೆ. ಇದರಿಂದಾಗಿ ವಿದೇಶದಿಂದ ಆಮದಾಗುವ ಬಿಡಿಭಾಗಗಳು ಸೇರಿದಂತೆ ಇತರೆ ಸರಕುಗಳು ದುಬಾರಿಯಾಗಬಹುದು.

ಹಣಕಾಸು ಸಚಿವರ ಘೋಷಣೆಯ ನಂತರ ಆಮದು ಸುಂಕವು ಶೇಕಡಾ 2.5 ರಷ್ಟು ಹೆಚ್ಚಾಗಲಿದೆ. ಆಮದು ಸುಂಕದ ದರ ಹೆಚ್ಚಳವು ವಿದೇಶಿ ಮೊಬೈಲ್ ಫೋನ್ ಮತ್ತು ಚಾರ್ಜರ್‌ಗಳ ಬೆಲೆಯನ್ನು ಹೆಚ್ಚಿಸುತ್ತದೆ. ಇವುಗಳಲ್ಲದೆ, ಮೊಬೈಲ್ ಬಿಡಿ ಭಾಗಗಳು ಸಹ ದುಬಾರಿಯಾಗುತ್ತವೆ. ಆಮದು ಸುಂಕದ ಹೆಚ್ಚಳವು ಮಧ್ಯಮ ವರ್ಗದ ಮೇಲೆ ನೇರ ಪರಿಣಾಮ ಬೀರಲಿದ್ದು , ಲ್ಲಿಯವರೆಗೆ ಆಮದು ಸುಂಕದಿಂದ ವಿನಾಯಿತಿ ಹೊಂದಿದ್ದ ಕ್ಯಾಮೆರಾ ಬಿಡಿ ಭಾಗಗಳು ಮತ್ತು ಮೊಬೈಲ್ ಫೋನ್‌ಗಳಿಗೆ ಕನೆಕ್ಟರ್‌ಗಳನ್ನು ಮೊಬೈಲ್ ಚಾರ್ಜರ್‌ಗಳ ಬೆಲೆ ಹೆಚ್ಚಲಿದೆ.

ಉದ್ಯೋಗಾವಕಾಶ ಹೆಚ್ಚಳ, ಅಪ್ರೆಂಟಿಸ್ ಶಿಪ್ ಕಾಯ್ದೆ ಪರಿಷ್ಕರಣೆಉದ್ಯೋಗಾವಕಾಶ ಹೆಚ್ಚಳ, ಅಪ್ರೆಂಟಿಸ್ ಶಿಪ್ ಕಾಯ್ದೆ ಪರಿಷ್ಕರಣೆ

ಈಗಾಗಲೇ ಅನೇಕ ಮೊಬೈಲ್ ಕಂಪನಿಗಳು ಚಾರ್ಜರ್ ಇಲ್ಲದೆ ಮೊಬೈಲ್ ಮಾರಾಟಕ್ಕೂ ಇಳಿದಿವೆ. ಚಾರ್ಜರ್ ಬೆಲೆ ದುಬಾರಿಯಾದ ಪರಿಣಾಮ ಈ ಹೆಜ್ಜೆ ಇಟ್ಟಿವೆ. ಇದಲ್ಲದೆ, ಟಿವಿ ಸೇರಿದಂತೆ ಇತರ ಎಲೆಕ್ಟ್ರಾನಿಕ್ ವಸ್ತುಗಳ ಬೆಲೆಯೂ ಹೆಚ್ಚಾಗುವ ನಿರೀಕ್ಷೆಯಿದೆ. ಇದರೊಂದಿಗೆ ಚಿನ್ನ ಮತ್ತು ಬೆಳ್ಳಿಯ ಮೇಲಿನ ಕಸ್ಟಮ್ ಸುಂಕವನ್ನು ಕಡಿಮೆ ಮಾಡಲಾಗಿದೆ. ಉಕ್ಕಿನ ಮೇಲಿನ ಕಸ್ಟಮ್ ಸುಂಕವನ್ನು ಶೇಕಡಾ 7.5ಕ್ಕೆ ಇಳಿಸಲಾಗಿದೆ ಎಂದು ವರದಿ ಮಾಡಿದೆ.

Budget 2021: Mobile Phones To Cost More, More Companies To Sell Without Charger

ವಾಸ್ತವವಾಗಿ, 2021-22ರ ಹಣಕಾಸು ವರ್ಷದಲ್ಲಿ ಮೊಬೈಲ್ ಫೋನ್ ಮತ್ತು ಬ್ಯಾಟರಿ ಚಾರ್ಜರ್‌ಗಳ ಸಾಧನಗಳಲ್ಲಿನ ಮೂಲ ಕಸ್ಟಮ್ ಸುಂಕವನ್ನು ಶೇಕಡಾ 2.5 ರಷ್ಟು ಹೆಚ್ಚಿಸಲು ಸರ್ಕಾರ ಬಜೆಟ್‌ನಲ್ಲಿ ಘೋಷಿಸಿದೆ. ಈ ಹೆಚ್ಚಳದಿಂದಾಗಿ ಸಾಧನಗಳು ಮತ್ತು ಎಲೆಕ್ಟ್ರಾನಿಕ್ ವಸ್ತುಗಳು ದುಬಾರಿಯಾಗಬಹುದು.

ಉತ್ತಮ ಮೌಲ್ಯವರ್ಧನೆಗಾಗಿ, ನಾವು ಚಾರ್ಜರ್ ಮತ್ತು ಮೊಬೈಲ್‌ನ ಕೆಲವು ಬಿಡಿ ಭಾಗಗಳನ್ನು ವಿನಾಯಿತಿಗಳನ್ನು ತೆಗೆದುಹಾಕುತ್ತಿದ್ದೇವೆ ಎಂದು ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಹೇಳಿದರು. ಇದಲ್ಲದೆ, ಕೆಲವು ಮೊಬೈಲ್ ಭಾಗಗಳನ್ನು ನಿಲ್(Nil) ದರದಿಂದ ಮಧ್ಯಮಕ್ಕೆ (2.5%) ಇಳಿಸಲಾಗಿದೆ.

ಕೇಂದ್ರ ಬಜೆಟ್ 2021: ಯಾವುದರ ಬೆಲೆ ಏರಿಕೆ? ಯಾವುದು ಇಳಿಕೆ? ಕೇಂದ್ರ ಬಜೆಟ್ 2021: ಯಾವುದರ ಬೆಲೆ ಏರಿಕೆ? ಯಾವುದು ಇಳಿಕೆ?

ಪ್ರಸ್ತುತ ಬ್ಯಾಟರಿ ಚಾರ್ಜರ್ ಮೇಲೆ 15 ರಿಂದ 20 ಪ್ರತಿಶತದಷ್ಟು ಕಸ್ಟಮ್ ಸುಂಕವನ್ನು ವಿಧಿಸುತ್ತದೆ . ಜೊತೆಗೆ ಹ್ಯಾಂಡ್‌ಸೆಟ್ ಕಸ್ಟಮ್ ಸುಂಕ 22.5 ಪ್ರತಿಶತದಷ್ಟು ಹೊಂದಿದೆ. ಅದೇ ಸಮಯದಲ್ಲಿ, ಪ್ರದರ್ಶನ ಫಲಕ, ಪಿಸಿಬಿ, ಮೆಕ್ಯಾನಿಕ್ಸ್ ಮತ್ತು ಡೈ ಕಟ್ ಭಾಗದಲ್ಲಿ ಶೇಕಡಾ 10 ರಷ್ಟು ಹೊಂದಿದೆ.

ಕಳೆದ ಕೆಲವು ವರ್ಷಗಳಲ್ಲಿ ಮೊಬೈಲ್ ಫೋನ್ ಮಾರುಕಟ್ಟೆ ಭಾರಿ ಪ್ರಮಾಣದಲ್ಲಿ ಬೆಳೆದಿರುವುದರಿಂದ ದೇಶೀಯ ಉತ್ಪಾದನೆಗೆ ಹೆಚ್ಚಿನ ಉತ್ತೇಜನ ನೀಡುವುದು ಸರ್ಕಾರದ ಪ್ರಯತ್ನವಾಗಿದೆ ಎಂದು ವಿತ್ತ ಸಚಿವರು ಹೇಳಿದರು. ಪ್ರಸ್ತುತ ದೇಶದ ಹಲವು ಕಂಪನಿಗಳು ಮೊಬೈಲ್ ಫೋನ್ ಉತ್ಪಾದಿಸುತ್ತಿವೆ.

English summary
Smartphone prices in India may be set for a hike in the near term, after the central government announced the removal of key exemptions for mobile phone and electronics manufacturers in India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X