ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಜೆಟ್ 2021: ಆದಾಯ ತೆರಿಗೆಯಲ್ಲಿ ವಿನಾಯಿತಿ ಸಿಗಬಹುದೇ?

|
Google Oneindia Kannada News

ನವದೆಹಲಿ, ಜನವರಿ 20: ಮುಂಬರುವ ಕೇಂದ್ರ ಬಜೆಟ್ ಮಂಡನೆಗೆ ಕೆಲವೇ ದಿನಗಳು ಬಾಕಿ ಉಳಿದಿವೆ. ಈ ವೇಳೆ ವಿವಿಧ ಕ್ಷೇತ್ರಗಳ ನಿರೀಕ್ಷೆಗಳು ಹೆಚ್ಚಿರುವಂತೆ ಸಾಮಾನ್ಯ ಜನರು ತೆರಿಗೆಯಿಂದ ಯಾವ ಪರಿಹಾರ ಸಿಗಬಹುದು ಎಂದು ನಿರೀಕ್ಷಿಸುತ್ತಾರೆ.

ತೆರಿಗೆ ತಜ್ಞರ ಪ್ರಕಾರ ಸೆಕ್ಷನ್ 80 ಸಿ ಅಡಿಯಲ್ಲಿ ನೀಡಲಾಗುವ ವಿನಾಯಿತಿಯನ್ನು ಈ ಬಾರಿ 2 ಲಕ್ಷ ರೂ.ಗೆ ಹೆಚ್ಚಿಸಬಹುದು ಎಂದು ಅಭಿಪ್ರಾಯ ಪಟ್ಟಿದ್ದಾರೆ. ಏಕೆಂದರೆ ಪ್ರತಿಯೊಬ್ಬ ಸಂಬಳ ಪಡೆಯುವ ಉದ್ಯೋಗಿ ಬಯಸುವುದನ್ನು ಇದೇ ಆಗಿರುವುದರಿಂದ ಈ ಬಾರಿಯು ತೆರಿಗೆ ವ್ಯಾಪ್ತಿಯ ವಿಸ್ತರಣೆಯನ್ನು ನಿರೀಕ್ಷಿಸಲಾಗಿದೆ.

ಬಜೆಟ್ 2021: ಆನ್‌ಲೈನ್ ಶಿಕ್ಷಣದ ನಿರೀಕ್ಷೆಗಳೇನು?ಬಜೆಟ್ 2021: ಆನ್‌ಲೈನ್ ಶಿಕ್ಷಣದ ನಿರೀಕ್ಷೆಗಳೇನು?

ಪ್ರಸ್ತುತ, ಹಣದುಬ್ಬರವು ಉನ್ನತ ಮಟ್ಟದಲ್ಲಿದೆ ಮತ್ತು ಮುಂಬರುವ ಹಣಕಾಸು ವರ್ಷದಲ್ಲಿ ಸಂಬಳ ಪಡೆಯುವ ಜನರ ಆದಾಯದ ಬೆಳವಣಿಗೆಯನ್ನು ಸೀಮಿತಗೊಳಿಸಬಹುದು. ಇದು ಅವರ ಆರ್ಥಿಕ ಸ್ಥಿತಿಯ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ. ತೆರಿಗೆ ಸ್ಲ್ಯಾಬ್ ಮಿತಿಯನ್ನು ಹೆಚ್ಚಿಸುವ ಮೂಲಕ ಬಳಕೆ ಸುಧಾರಿಸಬಹುದು. ಇದರೊಂದಿಗೆ, ಸಂಬಳ ಹೊಂದಿರುವ ಜನರು ಖರ್ಚು ಮಾಡಲು ಹೆಚ್ಚು ಹಣವನ್ನು ಹೊಂದಿರುತ್ತಾರೆ.

Budget 2021: Income Tax Expectations

''ಕಳೆದ ಕೆಲವು ವರ್ಷಗಳಿಂದ ಜೀವನಮಟ್ಟವೂ ಸ್ಥಿರವಾಗಿ ಸುಧಾರಿಸುತ್ತಿದೆ ಮತ್ತು ಆದ್ದರಿಂದ ಹೆಚ್ಚಿನ ನಗರಗಳಲ್ಲಿ ದೈನಂದಿನ ವೆಚ್ಚಗಳು ಹೆಚ್ಚಾಗಿದೆ'' ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ತೆರಿಗೆ ವಿನಾಯಿತಿಗೆ ಸಂಬಂಧಿಸಿದಂತೆ, ಸೆಕ್ಷನ್ 80 ಸಿ ಅಡಿಯಲ್ಲಿ ಹೆಚ್ಚಿನ ಕಡಿತವು ತೆರಿಗೆ ಕಡಿತದ ಲಾಭ ಪಡೆಯಲು ಉತ್ತಮ ನಿರ್ಧಾರವಾಗಿದೆ. ಏಕೆಂದರೆ ಇದು ಹೆಚ್ಚಿನ ಜನರನ್ನು ಉಳಿಸಲು ಮತ್ತು ಹೂಡಿಕೆ ಮಾಡಲು ಪ್ರೋತ್ಸಾಹಿಸುತ್ತದೆ. ಬಿಸಿನೆಸ್ ಟುಡೆ ವರದಿಯ ಪ್ರಕಾರ, ತೆರಿಗೆ ವಿನಾಯಿತಿಯನ್ನು 80 ಸಿ ಅಡಿಯಲ್ಲಿ 2 ಲಕ್ಷ ರೂ.ಗೆ ಹೆಚ್ಚಿಸಬಹುದು.

ಇನ್ನು ಹೊಸ ಮನೆ ಖರೀದಿದಾರರಿಗೆ ಹೆಚ್ಚುವರಿ ತೆರಿಗೆ ಪ್ರಯೋಜನಗಳನ್ನು ನೀಡುವುದರಿಂದ ಸಂಬಳ ಹೊಂದಿರುವ ಒಂದು ಭಾಗದ ಜನರು ಮನೆ ಖರೀದಿಸಲು ಮುಂದಾಗುತ್ತಾರೆ ಎಂದು ತಜ್ಞರು ಹೇಳುತ್ತಾರೆ. ಇದರಿಂದ ರಿಯಲ್ ಎಸ್ಟೇಟ್ ಬೇಡಿಕೆಯು ಹೆಚ್ಚಾಗಬಹುದು.

ಎನ್‌ಪಿಎಸ್‌ಗೆ (ರಾಷ್ಟ್ರೀಯ ಪಿಂಚಣಿ ಯೋಜನೆ)ಹೆಚ್ಚುವರಿ ಕಡಿತದ ಮಿತಿಯನ್ನು 50,000 ರೂ.ಗಳಿಂದ 100,000 ರೂ. ಅಥವಾ 150,000 ರೂ.ಗೆ ಹೆಚ್ಚಿಸಲು ಸರ್ಕಾರ ಪರಿಗಣಿಸಬೇಕು ಎಂಬುದು ಆರ್ಥಿಕ ವಿಶ್ಲೇಷಕರ ಅಭಿಪ್ರಾಯವಾಗಿದೆ. ಏಕೆಂದರೆ ತೆರಿಗೆ ಪಾವತಿದಾರರಿಗೆ ತೆರಿಗೆ ಉಳಿಸಲು ಸೆಕ್ಷನ್ 80 ಸಿ ಅಡಿಯಲ್ಲಿ 1,50,000 ರೂ.ಗಳ ವಿನಾಯಿತಿ ಸಾಕಾಗುವುದಿಲ್ಲ. ಹೆಚ್ಚುವರಿ ಕಡಿತಗಳಿಗಾಗಿ ಎನ್‌ಪಿಎಸ್ ಮಿತಿಯನ್ನು ಹೆಚ್ಚಿಸುವುದರಿಂದ ಜನರು ತೆರಿಗೆ ಉಳಿಸಲು ಮತ್ತು ದೀರ್ಘಾವಧಿಯವರೆಗೆ ಹೂಡಿಕೆ ಮಾಡಲು ಸಹಾಯ ಮಾಡುತ್ತದೆ.

English summary
Income tax exemption up to Rs 3 Lakh Under Section 80C Among Top Budget 2021
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X