ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಜೆಟ್‌ 2021: ಎಲೆಕ್ಟ್ರಿಕ್ ವಾಹನ ಕೈಗಾರಿಕೆಗಳ ನಿರೀಕ್ಷೆಗಳೇನು?

|
Google Oneindia Kannada News

ನವದೆಹಲಿ, ಜನವರಿ 22: ಮುಂಬರುವ ಕೇಂದ್ರ ಬಜೆಟ್‌ ಮೇಲೆ ವಾಹನ ತಯಾರಕ ಕಂಪನಿಗಳು ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿವೆ. ಕಳೆದ ವರ್ಷ ಅನುಭವಿಸಿದ ಭಾರೀ ನಷ್ಟದ ನಡುವೆ ಆಟೋಮೊಬೈಲ್ ಉದ್ಯಮವು ಬಜೆಟ್‌ ಮೇಲೆ ಸಾಕಷ್ಟು ಭರವಸೆಯನ್ನು ಇಟ್ಟುಕೊಂಡಿದೆ.

ಸದ್ಯ ಕೇಂದ್ರ ಸರ್ಕಾರವು ಎಲೆಕ್ಟ್ರಿಕ್ ವಾಹನಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿರುವುದರಿಂದ ಜಿಎಸ್‌ಟಿ ದರದಲ್ಲಿ ಕಡಿತವನ್ನು ನಿರೀಕ್ಷಿಸಲಾಗಿದೆ. ಕಳೆದ ಬಾರಿ ಬಜೆಟ್‌ನಲ್ಲೂ ಕೂಡ ವಾಹನಗಳ ಮೇಲಿನ ಜಿಎಸ್‌ಟಿ ದರ ಕಡಿತವನ್ನು ನಿರೀಕ್ಷಿಸಲಾಗಿತ್ತು. ಆದರೆ ಎಲೆಕ್ಟ್ರಿಕ್ ವಾಹನಗಳಿಗೆ ಹೆಚ್ಚಿನ ಒತ್ತು ನೀಡಲಾಗಿತ್ತು.

ಕೋವಿಡ್-19 ಲಾಕ್‌ಡೌನ್‌ನಿಂದ ಬಳಲಿರುವ ಉದ್ಯಮ

ಕೋವಿಡ್-19 ಲಾಕ್‌ಡೌನ್‌ನಿಂದ ಬಳಲಿರುವ ಉದ್ಯಮ

ಆಟೋಮೊಬೈಲ್ ಕ್ಷೇತ್ರವು ಕೋವಿಡ್-19 ಲಾಕ್‌ಡೌನ್‌ನಿಂದಾಗಿ ಹೆಚ್ಚಿನ ತೊಂದರೆ ಅನುಭವಿಸಿದೆ. 2020 ರ ಮೊದಲಾರ್ಧದಲ್ಲಿ ಸಾಂಕ್ರಾಮಿಕ ರೋಗದ ಪ್ರತಿಕೂಲ ಪರಿಣಾಮ ವಾಹನಗಳ ಉತ್ಪಾದನೆ ಮತ್ತು ಮಾರಾಟದ ಮೇಲೆ ಪರಿಣಾಮ ಬೀರಿದೆ. ಹೀಗಾಗಿ ಫೆಬ್ರವರಿ 1ರಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಲಿರುವ ಬಜೆಟ್‌ ಮೇಲೆ ಆಟೋಮೊಬೈಲ್ ಕ್ಷೇತ್ರದ ನಿರೀಕ್ಷೆಗಳು ದುಪ್ಪಟ್ಟಾಗಿವೆ.

ಬಜೆಟ್ 2021: ಆದಾಯ ತೆರಿಗೆಯಲ್ಲಿ ವಿನಾಯಿತಿ ಸಿಗಬಹುದೇ?ಬಜೆಟ್ 2021: ಆದಾಯ ತೆರಿಗೆಯಲ್ಲಿ ವಿನಾಯಿತಿ ಸಿಗಬಹುದೇ?

ಅದರಲ್ಲೂ ಭಾರತದಲ್ಲಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಮಾರಾಟ 2020 ರಲ್ಲಿ ಶೇಕಡಾ 5.46ರಷ್ಟು ಇಳಿದು 25,735 ಕ್ಕೆ ತಲುಪಿದ್ದು, 2019 ರಲ್ಲಿ 27,224 ಯುನಿಟ್ ಮಾರಾಟವಾಗಿದೆ. ಹೀಗಾಗಿ ಕಂಪನಿಗಳು 2021 ರಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಅದ್ಭುತ ವರ್ಷವನ್ನು ನಿರೀಕ್ಷಿಸುತ್ತಿವೆ.

ಅಸ್ತಿತ್ವದಲ್ಲಿರುವ ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆಗೆ ವೇಗ ನೀಡುವ ಸಾಧ್ಯತೆ

ಅಸ್ತಿತ್ವದಲ್ಲಿರುವ ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆಗೆ ವೇಗ ನೀಡುವ ಸಾಧ್ಯತೆ

ಭಾರತದಲ್ಲಿ ಅಸ್ತಿತ್ವದಲ್ಲಿರುವ ಎಲೆಕ್ಟ್ರಿಕ್ ವಾಹನಗಳ (FAME) -II ಪ್ರೋಗ್ರಾಂ ಅನ್ನು ವೇಗವಾಗಿ ಅಳವಡಿಸಿಕೊಳ್ಳುವುದು ಅಥವಾ ತಯಾರಿಸಲು ಮತ್ತೆ ಪರಿಚಯಿಸುವ ಅಗತ್ಯವಿದೆ. ಬ್ಯಾಟರಿ ವಿನಿಮಯ ಸೌಲಭ್ಯಗಳ ಮೇಲಿನ ಜಿಎಸ್‌ಟಿಯನ್ನು ಶೇಕಡಾ 18 ರಿಂದ 5ಕ್ಕೆ ಇಳಿಸಬೇಕು.

ಎಲೆಕ್ಟ್ರಿಕ್ ವಾಹನಗಳನ್ನು ವ್ಯಾಪಕವಾಗಿ ಅಳವಡಿಸಿಕೊಳ್ಳುವುದನ್ನು ಚುರುಕುಗೊಳಿಸಲು ಕ್ಲೀನ್ ಏರ್ ಮತ್ತು ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ ಕಾರ್ಯಕ್ರಮಗಳ ಅಡಿಯಲ್ಲಿ ಸ್ವಚ್ ಭಾರತ್ ಮಿಷನ್‌ನಲ್ಲಿ ಎಲೆಕ್ಟ್ರಿಕ್ ವಾಹನ ವಲಯವನ್ನು ಸರ್ಕಾರ ಸೇರಿಸಿಕೊಳ್ಳಬಹುದು.

ಉತ್ಪಾದನೆಗೆ ಸಂಬಂಧಿತ ಪ್ರೋತ್ಸಾಹಕ ಕ್ರಮಗಳು

ಉತ್ಪಾದನೆಗೆ ಸಂಬಂಧಿತ ಪ್ರೋತ್ಸಾಹಕ ಕ್ರಮಗಳು

ಎಲೆಕ್ಟ್ರಿಕ್ ವಾಹನಗಳ ಉತ್ಪಾನೆಗೆ ಸಂಬಂಧಪಟ್ಟ ಪ್ರೋತ್ಸಾಹಕ ಕಾರ್ಯಕ್ರಮದ ಕುರಿತು ಹೆಚ್ಚಿನ ಮಾಹಿತಿಯನ್ನು ಬಜೆಟ್ ಒದಗಿಸಬೇಕಾಗಿದೆ. ಎಲೆಕ್ಟ್ರಿಕ್ ವಾಹನಗಳಿಗಾಗಿ ಆಕರ್ಷಕ ಹಣಕಾಸು ಆಯ್ಕೆಯನ್ನು ಬಜೆಟ್‌ನಲ್ಲಿ ಸೇರಿಸಬೇಕು ಮತ್ತು ತೆರಿಗೆ ಮರುಪಾವತಿ ಮತ್ತು ಪ್ರೋತ್ಸಾಹಕಗಳನ್ನು ತ್ವರಿತವಾಗಿ ಹೊರತರಬೇಕು.

ಬಜೆಟ್ 2021: ಆನ್‌ಲೈನ್ ಶಿಕ್ಷಣದ ನಿರೀಕ್ಷೆಗಳೇನು?ಬಜೆಟ್ 2021: ಆನ್‌ಲೈನ್ ಶಿಕ್ಷಣದ ನಿರೀಕ್ಷೆಗಳೇನು?

ಕಡಿಮೆ ಬಡ್ಡಿ ದರದಲ್ಲಿ ಬ್ಯಾಂಕುಗಳು ಸಾಲ ನೀಡಬೇಕು

ಕಡಿಮೆ ಬಡ್ಡಿ ದರದಲ್ಲಿ ಬ್ಯಾಂಕುಗಳು ಸಾಲ ನೀಡಬೇಕು

ಬೆಂಗಳೂರು ಮೂಲದ ಮೈಕ್ರೋ ಮೊಬಿಲಿಟಿ ಸೇವಾ ಪೂರೈಕೆದಾರ ಯುಲು ಸಹ-ಸಂಸ್ಥಾಪಕ ಮತ್ತು ಸಿಇಒ ಅಮಿತ್ ಗುಪ್ತಾ ಅವರ ಪ್ರಕಾರ, ಎಲೆಕ್ಟ್ರಿಕ್ ವಾಹನಗಳನ್ನು ಹೆಚ್ಚಿಸಲು ಮತ್ತು ಗ್ರಾಹಕರನ್ನು ಆಕರ್ಷಿಸಲು ಇ-ಮೊಬಿಲಿಟಿ ಸೇವಾ ಪೂರೈಕೆದಾರರಿಗೆ ಕಡಿಮೆ ಬಡ್ಡಿದರದಲ್ಲಿ ಸಾಲ ನೀಡುವಂತೆ ಸರ್ಕಾರ ಬ್ಯಾಂಕುಗಳಿಗೆ ನಿರ್ದೇಶನ ನೀಡಬೇಕು. ಕಡಿಮೆ ವೇಗದ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳಿಗೆ (ಇ -2 ಡಬ್ಲ್ಯೂ) ಸಬ್ಸಿಡಿಗಳನ್ನು ವಿಸ್ತರಿಸಬೇಕೆಂಬ ಅಭಿಪ್ರಾಯ ಕೇಳಿಬಂದಿದೆ.

ಇವಿ ತಂತ್ರಜ್ಞಾನಕ್ಕೆ ಹೆಚ್ಚಿನ ಪ್ರೋತ್ಸಾಹ

ಇವಿ ತಂತ್ರಜ್ಞಾನಕ್ಕೆ ಹೆಚ್ಚಿನ ಪ್ರೋತ್ಸಾಹ

ಡಿಜಿಟಲೀಕರಣವನ್ನು ವೇಗಗೊಳಿಸಲು, ಸರ್ಕಾರವು ಐಟಿ ಹಬ್‌ಗಳಿಗೆ ಪ್ರೋತ್ಸಾಹಿಸಿದಂತೆ, ಎಲೆಕ್ಟ್ರಿಕ್ ವಾಹನಗಳ ವಿಭಾಗಗಳ ಅಭಿವೃದ್ಧಿಗೆ ಇವಿ ಪಾರ್ಕ್‌ಗಳನ್ನು ನಿರ್ಮಿಸಲು ಅನುವು ಮಾಡಿಕೊಡಬೇಕಾಗಿದೆ ಮತ್ತು ಆರಂಭಿಕ ಐದು ವರ್ಷಗಳವರೆಗೆ ತೆರಿಗೆ ವಿನಾಯಿತಿಗಳನ್ನು ನೀಡಬಹುದು. ಮುಂಬರುವ ವರ್ಷದಲ್ಲಿ ಇನ್ನೂ 5,000 ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸುವುದರಿಂದ ಎಲೆಕ್ಟ್ರಿಕ್ ವಾಹನಗಳಿಗೆ ವೇಗವನ್ನು ನೀಡಬಹುದು.

English summary
Here the details of what the electric vehicle industry wants from central budget 2021
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X