ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆದಾಯ ತೆರಿಗೆ ಮಿತಿ, ಮೋದಿ ಸರ್ಕಾರ 2.0 ಬಜೆಟ್ ನಿರೀಕ್ಷೆಯೇನು?

|
Google Oneindia Kannada News

Recommended Video

Budget 2019: ನಿರ್ಮಲಾ ಸೀತಾರಾಮನ್ ಸಾರಥ್ಯದಲ್ಲಿ ಬಜೆಟ್

ಲೋಕಸಭೆ ಚುನಾವಣೆಯಲ್ಲಿ ಭರ್ಜರಿ ಜಯದೊಂದಿಗೆ ಮೋದಿ ಸರ್ಕಾರ್ 2.0 ಸ್ಥಾಪನೆಯಾಗಿದೆ. ಮಧ್ಯಂತರ ಬಜೆಟ್ ಮಂಡನೆಯಾದ ಕೆಲ ತಿಂಗಳುಗಳಲ್ಲೇ ಹೊಸ ಸರ್ಕಾರ, ಹೊಸ ವಿತ್ತ ಸಚಿವರಿಂದ ಪೂರ್ಣಾವಧಿ ಬಜೆಟ್ ಮಂಡನೆಯನ್ನು ದೇಶ ಎದುರು ನೋಡುತ್ತಿದೆ. ಈ ಬಾರಿಯ ಬಜೆಟ್ ನಲ್ಲಿ ದೇಶದ ಆರ್ಥಿಕ ಪರಿಸ್ಥಿತಿ ಸುಧಾರಣೆ ಕ್ರಮದ ಬಗ್ಗೆ ಹೆಚ್ಚಿನ ಮಹತ್ವ ಇದ್ದರೂ, ತೆರಿಗೆದಾರರಿಗೆ ಎಂದಿನಂತೆ ನಿರೀಕ್ಷೆಗಳು ಇದ್ದೆ ಇವೆ.

ಮೋದಿ ಸರಕಾರದಿಂದ ಆದಾಯ ತೆರಿಗೆದಾರರಿಗೆ ಸೂಪರ್ ಗಿಫ್ಟ್ಮೋದಿ ಸರಕಾರದಿಂದ ಆದಾಯ ತೆರಿಗೆದಾರರಿಗೆ ಸೂಪರ್ ಗಿಫ್ಟ್

17ನೇ ಲೋಕಸಭೆಯ ಮೊದಲ ಅಧಿವೇಶನವು ಜೂನ್ 17ರಿಂದ ಜುಲೈ 26ರ ತನಕ ನಿಗದಿಯಾಗಿದೆ. ಜುಲೈ 05ರಂದು ಚೊಚ್ಚಲ ಬಜೆಟ್ ಮಂಡಿಸಲಿರುವ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಧ್ಯಮವರ್ಗೀಯ ಸಂಬಳದಾರರಿಗೆ ಏನೆಲ್ಲ ನೀಡಬಹುದು ಎಂಬ ಕುತೂಹಲವಿದೆ. ಮೋದಿ ಸರ್ಕಾರ ಕಳೆದ ಮಧ್ಯಂತರ ಬಜೆಟ್ ನಲ್ಲೇ ಸಂಬಳದಾರರಿಗೆ ಭರಪೂರ ಕೊಡುಗೆ ಘೋಷಿಸಿರುವುದರಿಂದ ಈ ಬಾರಿ ಹೆಚ್ಚಿನ ಕೊಡುಗೆ ಸಿಗುವ ನಿರೀಕ್ಷೆಗಳಿಲ್ಲ.

2019-20ನೇ ಸಾಲಿನ ಆಯವ್ಯಯ ಪತ್ರದಲ್ಲಿ ಉದ್ಯೋಗ ಅವಕಾಶ ಸೃಷ್ಟಿಗೆ ಹೆಚ್ಚಿನ ಮಹತ್ವ ನೀಡುವಂತೆ ಪ್ರಧಾನಿ ನರೇಂದ್ರ ಮೋದಿ ಸಲಹೆ ನೀಡಿದ್ದಾರೆ. ಮಧ್ಯಂತರ ಬಜೆಟ್ ನಲ್ಲಿ ಸೂಚಿತ ಅನುದಾನಗಳನ್ನು ಮುಂದುವರೆಸುವ ಸಾಧ್ಯತೆಯಿದೆ.

ಜನರಿಗೆ ನೇರವಾಗಿ ಅನುಕೂಲವಾಗುವ ಆದಾಯ ತೆರಿಗೆ ಮಿತಿ ಹೆಚ್ಚಳ ಸೇರಿದಂತೆ ತೆರಿಗೆ ಭಾರ ಇಳಿಸುವ ನಿರೀಕ್ಷೆ ಈಗಾಗಲೇ ಈಡೇರಿದೆ. ವೃತ್ತಿಪರರ ತೆರಿಗೆದಾರ, ಸಣ್ಣ ತೆರಿಗೆದಾರರಿಗೆ ಅನುಕೂಲವಾಗಲು ಆದಾಯ ತೆರಿಗೆ ಇಲಾಖೆಯಿಂದ ಇ -ಸಹಯೋಗ ಯೋಜನೆ ಜಾರಿಗೊಳಿಸಲಿದೆ.

ಕೇಂದ್ರ ಬಜೆಟ್ 2019 : ಮೋದಿ ಕನಸಿನ ಬಜೆಟ್ ವಿನ್ಯಾಸದಲ್ಲಿ ನಿರ್ಮಲಾ ಹಾಗೂ ತಂಡಕೇಂದ್ರ ಬಜೆಟ್ 2019 : ಮೋದಿ ಕನಸಿನ ಬಜೆಟ್ ವಿನ್ಯಾಸದಲ್ಲಿ ನಿರ್ಮಲಾ ಹಾಗೂ ತಂಡ

ಕಳೆದ ಬಾರಿ ಬಜೆಟ್ ನಲ್ಲಿ ತೆರಿಗೆ ಪಾವತಿ ಮಿತಿ ಏರಿಕೆಯಾಗಿದೆ. ತೆರಿಗೆ ಪಾವತಿ, ಪಾವತಿ ವಿಧಾನ ಮಾತ್ರ ಬದಲಾವಣೆ ಘೋಷಣೆಯಾಗಿದೆ.

ಕಳೆದ ಬಜೆಟ್ ತೆರಿಗೆದಾರರಿಗೆ ಮುಖ್ಯಾಂಶಗಳು

ಕಳೆದ ಬಜೆಟ್ ತೆರಿಗೆದಾರರಿಗೆ ಮುಖ್ಯಾಂಶಗಳು

* ಐಟಿ ರಿಟರ್ನ್ಸ್ ಎಲ್ಲಾ ವಿಧಾನಗಳನ್ನು ಡಿಜಿಟಲೀಕರಣ ಮಾಡಲಾಗುತ್ತಿದ್ದು, ಕೃತಕ ಬುದ್ಧಿಮತ್ತೆ(AI)ಬಳಸಿಕೊಂಡು ತೆರಿಗೆ ಪಾವತಿ ವ್ಯವಸ್ಥೆಯನ್ನು ಅಧಿಕಾರಿಗಳು ರಹಿತ, ಆನ್ ಲೈನ್ ವ್ಯವಸ್ಥೆಯಾಗಿ ಬದಲಾಯಿಸಲಾಗುತ್ತದೆ.
* 5 ಲಕ್ಷ ರು ತನಕ ತೆರಿಗೆ ಪಾವತಿಸಬೇಕಾಗಿಲ್ಲ.
* ಭವಿಷ್ಯ ನಿಧಿ ಹಾಗೂ ವಿಮೆ ಯಲ್ಲಿ ಹೂಡಿಕೆ ಮಾಡಿದರೆ 6.25 ಲಕ್ಷ ರು ತನಕ ತೆರಿಗೆ ವಿನಾಯಿತಿ ಇರುತ್ತದೆ.
* TDS ಅಡಿಯಲ್ಲಿ ಗೃಹಸಾಲದ ಮಿತಿ 1.5 ಲಕ್ಷರು ನಿಂದ 2 ಲಕ್ಷ ರುಗೆ ಏರಿಕೆ.
* ಸ್ಟಾಡರ್ಡ್ ಡಿಡಕ್ಷನ್ 40 ಸಾವಿರ ರು ನಿಂದ 50 ಸಾವಿರ ರು ಗೆ ಏರಿಕೆ.

ಮೂಲ ತೆರಿಗೆ ಪಾವತಿ ಮಿತಿ ಏರಿಕೆ?

ಮೂಲ ತೆರಿಗೆ ಪಾವತಿ ಮಿತಿ ಏರಿಕೆ?

ಮೂಲ ತೆರಿಗೆ ಪಾವತಿ ಮಿತಿ : 5 ಲಕ್ಷ ರು ತನಕ ತೆರಿಗೆ ಪಾವತಿಸುವಂತಿಲ್ಲ, ಇನ್ನೊಂದಿಷ್ಟು ಉಳಿತಾಯ ತೋರಿಸಿದರೆ 9 ಲಕ್ಷ ರು ತನಕ ತೆರಿಗೆ ಕಟ್ಟದೆ ಇರಬಹುದು ಎಂದು ಸಂಬಳದಾರರಿಗೆ ಮೋದಿ ಸರ್ಕಾರ ಸಿಹಿ ಸುದ್ದಿಯನ್ನು ನೀಡಿದೆ. ಆದರೆ, ತೆರಿಗೆ ಪಾವತಿ ಮೂಲ ಮಿತಿಯಾದ 2.5 ಲಕ್ಷ ರುಗಳನ್ನು 2014ರಿಂದ ಇಲ್ಲಿ ತನಕ ಬದಲಾಯಿಸಿಲ್ಲ. ಪ್ರಸ್ತುತ ಬಜೆಟ್ ನಲ್ಲಿ ಈ ಮಿತಿಯನ್ನು 3 ಲಕ್ಷ ರುಗಳಿಗೆ ಏರಿಸಲು ಬೇಡಿಕೆ ಬಂದಿದೆ.

ಆದರೆ, ಈಗಾಗಲೇ ವೈಯಕ್ತಿಕ ಆದಾಯ 5 ಲಕ್ಷರು ತನಕ ಹೊಂದಿರುವವರು ಸೆಕ್ಷನ್ 87ಎ ಅಡಿಯಲ್ಲಿ ಪೂರ್ತಿ ತೆರಿಗೆ ರಿಬೇಟ್ ಪಡೆಯಬಹುದಾಗಿದೆ. ಹೀಗಾಗಿ, ಮೂಲ ಮಿತಿಯನ್ನು ಬದಲಾಯಿಸುವ ಸಾಧ್ಯತೆ ಕಡಿಮೆ.

ತೆರಿಗೆದಾರರ ಸಂಖ್ಯೆ ಹೆಚ್ಚಳಕ್ಕೆ ಆದ್ಯತೆ

ತೆರಿಗೆದಾರರ ಸಂಖ್ಯೆ ಹೆಚ್ಚಳಕ್ಕೆ ಆದ್ಯತೆ

ಬಜೆಟ್ ಪೂರ್ವ ಸಭೆಯಲ್ಲಿ ಉಪಸ್ಥಿತರಿದ್ದ ಆರ್ಥಿಕ ತಜ್ಞರು, ಆದಾಯ ತೆರಿಗೆ ಪಾವತಿ ಮೂಲ ಮಿತಿ 2.5 ಲಕ್ಷ ರು ಗಳನ್ನು ಬದಲಾಯಿಸದಂತೆ ಶಿಫಾರಸು ಮಾಡಿದ್ದಾರೆ. ನರೇಂದ್ರ ಮೋದಿ ಸರ್ಕಾರವು 2014ರಿಂದಲೂ ದೇಶದ ತೆರಿಗೆದಾರರ ಸಂಖ್ಯೆ ಹೆಚ್ಚಳ ಮಾಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಾ ಬಂದಿದ್ದು, ಈ ಬಾರಿ ಕೂಡಾ ತೆರಿಗೆದಾರರ ಸಂಖ್ಯೆ ಹೆಚ್ಚಳಕ್ಕೆ ಬೇಕಾದ ಅಗತ್ಯ ಕ್ರಮಗಳತ್ತ ವಿತ್ತ ಸಚಿವರು ಗಮನ ಹರಿಸಲಿದ್ದಾರೆ.

ಜನರಿಗೆ ನೇರವಾಗಿ ಅನುಕೂಲವಾಗುವ ಆದಾಯ ತೆರಿಗೆ ಮಿತಿ ಹೆಚ್ಚಳ ಸೇರಿದಂತೆ ತೆರಿಗೆ ಭಾರ ಇಳಿಸುವ ನಿರೀಕ್ಷೆ ಈಗಾಗಲೇ ಈಡೇರಿದೆ. ವೃತ್ತಿಪರರ ತೆರಿಗೆದಾರ, ಸಣ್ಣ ತೆರಿಗೆದಾರರಿಗೆ ಅನುಕೂಲವಾಗಲು ಆದಾಯ ತೆರಿಗೆ ಇಲಾಖೆಯಿಂದ ಇ -ಸಹಯೋಗ ಯೋಜನೆ ಜಾರಿಗೊಳಿಸಲಿದೆ. ತೆರಿಗೆ ಪಾವತಿ ಸರಳಗೊಳಿಸುವುದು, ತೆರಿಗೆ ವಂಚಕರ ನಿಯಂತ್ರಣ, ಪಾವತಿದಾರರ ಹೆಚ್ಚಳಕ್ಕೆ ಆದ್ಯತೆ ನೀಡಲಾಗುತ್ತದೆ.

ರಿಬೇಟ್ ದರ ಮಿತಿ ಏರಿಕೆಯಾಗಿತ್ತು

ರಿಬೇಟ್ ದರ ಮಿತಿ ಏರಿಕೆಯಾಗಿತ್ತು

* 5 ಲಕ್ಷ ರು ನಿಂದ 10 ಲಕ್ಷ ರು ತನಕ ಆದಾಯ ಹೊಂದಿರುವವರ ತೆರಿಗೆ ಶೇ 20.
* 50 ಲಕ್ಷ ದಿಂದ 1 ಕೋಟಿ ರು ವಾರ್ಷಿಕ ಆದಾಯ ಇರುವವರಿಗೆ ಶೇ10 ರಷ್ಟು ಸರ್ ಚಾರ್ಜ್
* ಕಡಿಮೆ ಆದಾಯ ಗಳಿಸುವ ಉದ್ಯೋಗಿಗಳ ವೈಯಕ್ತಿಕ ತೆರಿಗೆ ಹಿಂಪಡೆಯುವ (rebate) ಮಿತಿಯಲ್ಲಿ ಬದಲಾವಣೆ ಕಂಡು ಬಂದಿದೆ. ವಾರ್ಷಿಕವಾಗಿ 5 ಲಕ್ಷ ಆದಾಯ(Taxable Income) ಹೊಂದಿರುವವರಿಗೆ ಈ ಮೊತ್ತ 2,000 ರು ನಿಂದ 5,000 ರು ಗೆ ಏರಿಸಲಾಗಿದೆ.
* ಮನೆ ಬಾಡಿಗೆ ಭತ್ಯೆ ಮಿತಿ ಹೆಚ್ಚಳ: HRA ದರ 24,000 ರು ನಿಂದ 60,000 ರು ಗೆ ಏರಿಸಲಾಗಿದೆ.

English summary
With just a week to prepare the budget for fiscal year 2019-20 (FY20), which will be presented on 5 July, there is a huge expectation from the new Finance Minister Nirmala Sitharaman who will set the stage for reforms over the next five years, especially regarding the income tax exemptions.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X