ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಂಬಳದಾರರಿಗೆ ಬಲಗೈಯಲ್ಲಿ ಕೊಟ್ಟು, ಎಡಗೈಯಲ್ಲಿ ಕಿತ್ಕೊಂಡ್ರು!

By Mahesh
|
Google Oneindia Kannada News

ನವದೆಹಲಿ, ಫೆಬ್ರವರಿ 01: ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರದ 2018-19ನೇ ಸಾಲಿನ ಪ್ರಧಾನ ಆಯವ್ಯಯ ಪತ್ರವನ್ನು ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಸೋಮವಾರ (ಫೆಬ್ರವರಿ 01) ಸಂಸತ್ತಿನಲ್ಲಿ ಮಂಡಿಸಿದ್ದಾರೆ. ಜೇಟ್ಲಿ ಅವರು ಸಂಬಳದಾರರಿಗೆ ಸಂತಸದ ಸುದ್ದಿ ಕೊಟ್ಟಿದ್ದಾರೆ ಎಂದು ತೆರಿಗೆ ಲೆಕ್ಕ ಹಾಕಲು ಕೂತರೆ ಗೊಂದಲ ಮೂಡುತ್ತಿದೆ.

ಜೇಟ್ಲಿ ಬಜೆಟ್ ನಂತರ ತೆರಿಗೆ ಲೆಕ್ಕಾಚಾರ ಮಾಡುವುದು ಹೇಗೆ?ಜೇಟ್ಲಿ ಬಜೆಟ್ ನಂತರ ತೆರಿಗೆ ಲೆಕ್ಕಾಚಾರ ಮಾಡುವುದು ಹೇಗೆ?

ಈ ಬಾರಿ ಬಜೆಟ್ ನಲ್ಲಿ ತೆರಿಗೆ ಪಾವತಿ ಮಿತಿ ಬದಲಾಯಿಸಿಲ್ಲ. ಆದರೆ, ಸ್ಟಾಂಡರ್ಡ್ ಡಿಡಕ್ಷನ್ ಮತ್ತೆ ಪರಿಚಯಿಸಲಾಗಿದೆ. 2005ರ ಬಜೆಟ್ ನಂತರ standard deduction ತೆಗೆದು ಹಾಕಲಾಗಿತ್ತು.

Budget 2018: Jaitley reintroduces standard deduction of Rs 40,000 for salaried individuals

ಈಗ ಇದ್ದ ಮಿತಿಯನ್ನು 30 ಸಾವಿರ ರುಪಾಯಿ ಅಥವಾ (ಸಂಬಳದ ಶೇ40 ರಷ್ಟು- 5 ಲಕ್ಷ ರು ಸಂಬಳ ಮಿತಿ ತನಕ)ಯಿಂದ 40 ಸಾವಿರ ರುಪಾಯಿಗೆ ಏರಿಸಲಾಗಿದೆ.

ನಿರಾಶೆ! ಆದಾಯ ತೆರಿಗೆ ವಿನಾಯಿತಿ ಮಿತಿ ಏರಿಕೆ ಇಲ್ಲನಿರಾಶೆ! ಆದಾಯ ತೆರಿಗೆ ವಿನಾಯಿತಿ ಮಿತಿ ಏರಿಕೆ ಇಲ್ಲ

ಹೀಗಾಗಿ ಸಂಬಳದಾರರು ತಮ್ಮ ಸಂಬಳದಲ್ಲಿ ಕಡಿತಗೊಳ್ಳುವ ಮೊತ್ತದಲ್ಲಿ ಮೆಡಿಕಲ್ ಹಾಗೂ ಸಾರಿಗೆ ಖರ್ಚು ರೂಪದಲ್ಲಿ 40 ಸಾವಿರ ರು ತನಕ ತೋರಿಸಬಹುದು ಎಂಬ ಲೆಕ್ಕಾಚಾರವಿತ್ತು. ಆದರೆ, ಇದು ಸುಳ್ಳಾಗಿದೆ. ಆದಾಯ ತೆರಿಗೆ ವಿನಾಯಿತಿ ಮಿತಿ ಏರಿಕೆ ನಿರೀಕ್ಷೆ ಇತ್ತು. ಆದರೆ, ವಿನಾಯಿತಿ ಮಿತಿ ಏರಿಕೆ ಮಾಡಿಲ್ಲ.

English summary
Finance Minister Arun Jaitley has reintroduced standard deduction of Rs 40,000 for salaried individuals.There was a long-standing demand to bring back standard deduction.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X