ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಂಟರ್ನೆಟ್ ಟೆಲಿಫೋನಿ ಸೇವೆ ಆರಂಭಿಸಿದ ಬಿಎಸ್ಎನ್ಎಲ್

By Mahesh
|
Google Oneindia Kannada News

ಬೆಂಗಳೂರು, ಜುಲೈ 12: ದೇಶದ ಮೊಟ್ಟ ಮೊದಲ ಇಂಟರ್ನೆಟ್ ಟೆಲಿಫೋನಿ ಆರಂಭಿಸಿರುದಾಗಿ ಸರ್ಕಾರಿ ಸ್ವಾಮ್ಯದ ಭಾರತ್ ಸಂಚಾರ್ ನಿಗಮ ನಿಯಮಿತ(ಬಿಎಸ್ಎನ್ಎಲ್) ಬುಧವಾರದಂದು ಘೋಷಿಸಿದೆ.

ಬಿಎಸ್ಎನ್ಎಲ್ ನ ವಿಂಗ್ಸ್ ಅಪ್ಲಿಕೇಷನ್ ಬಳಸಿ, ಯಾವುದೇ ಟೆಲಿಫೋನ್ ಸಂಖ್ಯೆಗೆ ಕರೆ ಮಾಡಬಹುದು. ಜುಲೈ 25ರಿಂದ ಈ ಹೊಸ ಸೇವೆ ಗ್ರಾಹಕರಿಗೆ ಲಭ್ಯವಾಗಲಿದೆ.

ಜಿಯೋ ವೇಗಕ್ಕೆ ಬಿಎಸ್ಸೆನ್ನೆಲ್ ಸ್ಪರ್ಧೆ ಒಡ್ಡಬಹುದೇ?ಜಿಯೋ ವೇಗಕ್ಕೆ ಬಿಎಸ್ಸೆನ್ನೆಲ್ ಸ್ಪರ್ಧೆ ಒಡ್ಡಬಹುದೇ?

ವಾರ್ಷಿಕವಾಗಿ 1,099 ರು ಪಾವತಿಸಿ, ಇಂಟರ್ನೆಟ್ ಅಥವಾ ವೈಫೈ ಇದ್ದವರು ಇಂಟರ್ನೆಟ್ ಟೆಲಿಫೋನಿ ಸೇವೆ ಬಳಸಬಹುದಾಗಿದೆ. ವಾಯ್ಸ್ ಕಾಲ್ ಕೂಡಾ ಮಾಡಬಹುದು.

ಜಿಯೋ ವೇಗಕ್ಕೆ ಬಿಎಸ್ಸೆನ್ನೆಲ್ ಸ್ಪರ್ಧೆ ಒಡ್ಡಬಹುದೇ? ಜಿಯೋ ವೇಗಕ್ಕೆ ಬಿಎಸ್ಸೆನ್ನೆಲ್ ಸ್ಪರ್ಧೆ ಒಡ್ಡಬಹುದೇ?

BSNL starts first internet telephony service in India

ಮೊಬೈಲ್ ಅಪ್ಲಿಕೇಷನ್ ಹಾಗೂ ನಿಮ್ಮ ಬಿಎಸ್ಎನ್ಎಲ್ ಸಿಮ್ ವುಳ್ಳ ಮೊಬೈಲ್ ಸಂಖ್ಯೆಯನ್ನು ಜೋಡಿಸಬೇಕಾಗುತ್ತದೆ. ಆದರೆ, ವಿಂಗ್ಸ್ ಅಪ್ಲಿಕೇಷನ್ಸ್ ಬಳಕೆದಾರರು ಅದರಲ್ಲೂ ಬಿಎಸ್ಎನ್ಎಲ್ ಲ್ಯಾಂಡ್ ಲೈನ್ ಗ್ರಾಹಕರು ಒಳಬರುವ ಕರೆಗಳನ್ನು ಆಪ್ ಮೂಲಕ ಸ್ವೀಕರಿಸಬಹುದು ಎಂದು ಬಿಎಸ್ಎನ್ಎಲ್ ಚೇರ್ಮನ್ ಅನುಪಮ್ ಶ್ರೀವಾಸ್ತವ ಹೇಳಿದರು.

English summary
State-owned BSNL today unveiled the country's first internet telephony service that will allow users to dial any telephone number in India through its mobile app, starting from July 25.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X