ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಎಸ್‌ಎನ್‌ಎಲ್ : ಲ್ಯಾಂಡ್‌ಲೈನ್ ಗ್ರಾಹಕರಿಗೆ ಉಚಿತ ಕರೆ ಗಿಫ್ಟ್

|
Google Oneindia Kannada News

ನವದೆಹಲಿ, ಏ. 24 : ಬಿಎಸ್‌ಎನ್‌ಎಲ್ ತನ್ನ ಲ್ಯಾಂಡ್‌ಲೈನ್ ಗ್ರಾಹಕರಿಗೆ ಭರ್ಜರಿ ಕೊಡುಗೆ ನೀಡಿದೆ. ರಾತ್ರಿ 9 ರಿಂದ ಬೆಳಗ್ಗೆ 7 ಗಂಟೆಯ ವರೆಗೆ ಉಚಿತವಾಗಿ ಕರೆ ಮಾಡುವ ಸೌಲಭ್ಯ ನೀಡಲಿದೆ. ಮೇ 1ರಿಂದ ಇದು ಜಾರಿಗೆ ಬರಲಿದೆ, ಎಲ್ಲಿಯವರೆಗೆ ಜಾರಿಯಲ್ಲಿರುತ್ತದೆ ಎಂದು ತಿಳಿದುಬಂದಿಲ್ಲ.

ಬಿಎಸ್‌ಎನ್‌ಎಲ್ ಲ್ಯಾಂಡ್ ಲೈನ್ ಗ್ರಾಹಕರನ್ನು ಸೆಳೆಯಲು ಈ ಯೋಜನೆ ಜಾರಿಗೆ ತರುತ್ತಿದೆ. ರಾತ್ರಿ 9 ಗಂಟೆಯ ನಂತರ ನೀವು ಬೆಳಗ್ಗೆ 7 ಗಂಟೆಯ ವರೆಗೆ ಯಾವುದೇ ಕಂಪನಿಯ ಲ್ಯಾಂಡ್ ಲೈನ್ ಅಥವ ಮೊಬೈಲ್‌ಗೆ ಕರೆ ಮಾಡಿ ಉಚಿತವಾಗಿ ಮಾತನಾಡಬಹುದು. [ನೆಟ್ ನ್ಯೂಟ್ರಾಲಿಟಿ ಎಂದರೇನು? ನಾವೇನು ಮಾಡ್ಬೇಕು?]

BSNL

ಕಾಶ್ಮೀರದಿಂದ ಕನ್ಯಾಕುಮಾರಿ ತನಕ ದೇಶದ ಎಲ್ಲಾ ರಾಜ್ಯಗಳಲ್ಲಿಯೂ ಈ ಯೋಜನೆ ಜಾರಿಗೆ ಬರಲಿದೆ. ಮೊಬೈಲ್ ಕಂಪನಿಗಳ ಪೈಪೋಟಿಯಿಂದಾಗಿ ಸ್ಥಿರ ದೂರವಾಣಿ ಮಾರುಕಟ್ಟೆ ಕುಸಿತ ಕಂಡಿದೆ. ಆದ್ದರಿಂದ ಗುರುವಾರ ಬಿಎಸ್‌ಎನ್‌ಎಲ್ ಈ ಯೋಜನೆ ಪ್ರಕಟಿಸಿದೆ. [ಮೊಬೈಲ್ ಗ್ರಾಹಕರಿಗೆ ಕೊಡುಗೆ, ರೋಮಿಂಗ್ ದರ ಕಡಿತ]

ದೇಶಾದ್ಯಂತ ಮೇ 1ರಿಂದ ಈ ಯೋಜನೆ ಜಾರಿಗೆ ಬರಲಿದೆ. ಆದರೆ, ಎಷ್ಟು ದಿನ ಜಾರಿಯಲ್ಲಿರುತ್ತದೆ? ಎಂಬುದು ಮಾತ್ರ ಬಹಿರಂಗಗೊಂಡಿಲ್ಲ. ಬಿಎಸ್‌ಎನ್‌ಎಲ್‌ನ ಈ ಘೋಷಣೆಯಿಂದಾಗಿ ಟೆಲಿಕಾಂ ಕ್ಷೇತ್ರದಲ್ಲಿ ದರ ಸಮರ ಆರಂಭವಾಗುವ ಸಾಧ್ಯತೆ ಇದೆ.

ಬಿಎಸ್‌ಎನ್‌ಎಲ್ ಸ್ಥಿರ ದೂರವಾಣಿ ಉದ್ಯಮದಲ್ಲಿ ನಷ್ಟ ಅನುಭವಿಸುತ್ತಿದೆ. ಕರ್ನಾಟಕದಲ್ಲಿಯೇ 2006ರ ಸಂದರ್ಭದಲ್ಲಿ ಸುಮಾರು 28 ಲಕ್ಷ ದೂರವಾಣಿ ಸಂಪರ್ಕವಿತ್ತು. ಈಗ ಅದು 13 ರಿಂದ 14 ಲಕ್ಷಕ್ಕೆ ಇಳಿಕೆಯಾಗಿದೆ. ವ್ಯಾಪಾರ ವಹಿವಾಟು ಹೆಚ್ಚಿಸಲು ಈ ಉಚಿತ ಕರೆ ಯೋಜನೆಯನ್ನು ಕಂಪನಿ ಪ್ರಕಟಿಸಿದೆ.

English summary
To boost land-line business Bharat Sanchar Nigam Limited (BSNL) announced unlimited free calling scheme during night hours to any operator including mobile phones anywhere in the country from May 1. The scheme would be operational between 9 PM to 7 AM.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X