ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಎಸ್ಎನ್ಎಲ್ ಇಂಟರ್ನೆಟ್ ಗ್ರಾಹಕರಿಗೆ ಶುಭ ಸುದ್ದಿ

By Mahesh
|
Google Oneindia Kannada News

ಗುರ್ ಗಾಂವ್, ಸೆ.08: ಸರ್ಕಾರಿ ಸ್ವಾಮ್ಯದ ಭಾರತ್ ಸಂಚಾರ್ ನಿಗಮ ನಿಯಮಿತ (ಬಿಎಸ್ಎನ್ಎಲ್) ತನ್ನ ಗ್ರಾಹಕರಿಗೆ ಶುಭ ಸುದ್ದಿ ಕೊಟ್ಟಿದೆ. ಅಕ್ಟೋಬರ್ 1ರಿಂದ ಬ್ರಾಡ್ ಬ್ಯಾಂಡ್ ಹೊಂದಿರುವ ಗ್ರಾಹಕರಿಗೆ 2 ಎಂಬಿಪಿಎಸ್ ವೇಗದಲ್ಲಿ ಅಂತರ್ಜಾಲ ಸಂಪರ್ಕ ಸಿಗಲಿದೆಯಂತೆ.

512 ಕೆಬಿಪಿಎಸ್ ವೇಗದಲ್ಲಿ ಇಂಟರ್ನೆಟ್ ಸಂಕಲ್ಪ ಕಲ್ಪಿಸುತ್ತಿರುವ ಬಿಎಸ್ ಎನ್ ಎಲ್ ಸಂಸ್ಥೆ ತನ್ನ ಎಲ್ಲಾ ನೆಟ್ವರ್ಕ್ ಗಳನ್ನು ಅಪ್ಗ್ರೇಡ್ ಮಾಡಿಕೊಂಡು ಎಲ್ಲೆಡೆ ಬ್ರಾಡ್ ಬ್ಯಾಂಡ್ ಸೌಲಭ್ಯ ಒದಗಿಸಲು ಮುಂದಾಗಿದೆ. ಕನಿಷ್ಠ 2 ಮೆಗಾ ಬೈಟ್ ಪರ್ ಸೆಕೆಂಡ್ (ಎಂಬಿಪಿಎಸ್) ನಂತೆ ಇಂಟರ್ನೆಟ್ ಸಂಪರ್ಕ ಸಿಗಲಿದ್ದು, ಇದಕ್ಕೆ ಯಾವುದೇ ಹೆಚ್ಚುವರಿ ಶುಲ್ಕ ನೀಡಬೇಕಾಗಿಲ್ಲ.

BSNL to offer minimum broadband speed of 2 Mbps from October 1

2014ರ ಮಾರ್ಚ್ ನಿಂದ 2015ರ ಮಾರ್ಚ್ ವೇಳೆಗೆ 1.78 ಕೋಟಿ ಮೊಬೈಲ್ ಮತ್ತು 20 ಲಕ್ಷ ಲ್ಯಾಂಡ್ ಲೈನ್ ಹಾಗೂ ವೈರ್ ಲೆಸ್ ಸೌಲಭ್ಯ ಹೊಂದಿರುವ ಗ್ರಾಹಕರನ್ನು ಕಳೆದುಕೊಂಡಿದೆ. ಇದರಿಂದ ರು.7,600 ಕೋಟಿ ನಷ್ಟವಾಗಿದೆ.

ಹೀಗಾಗಿ ಗ್ರಾಹಕರನ್ನು ಉಳಿಸಿಕೊಳ್ಳಲು ಹೆಚ್ಚುವರಿ ವೇಗದ ಇಂಟರ್ನೆಟ್ ಸೌಲಭ್ಯವನ್ನು ಕಡಿಮೆ ವೆಚ್ಚದಲ್ಲಿ ನೀಡಲು ಮುಂದಾಗಿದೆ. ಟ್ರಾಯ್ ಕೂಡಾ ಬ್ರಾಡ್ ಬ್ಯಾಂಡ್ ವೇಗದ ಮಿತಿ(512 ಕೆಬಿಪಿಎಸ್) ಯನ್ನು ತಿದ್ದುಪಡಿ ಮಾಡಲು ಮುಂದಾಗಿದೆ. ಬಿಎಸ್ ಎನ್ ಎಲ್ ಸದ್ಯಕ್ಕೆ 15 ಲಕ್ಷ ಮೊಬೈಲ್ ಗ್ರಾಹಕರನ್ನು ಇತ್ತೀಚೆಗೆ ಸೇರಿಸಿಕೊಂಡಿದೆ ಎಂದು ಸಂಸ್ಥೆಯ ಸಿಎಂಡಿ ಅನುಪಮ್ ಶ್ರೀವಾಸ್ತವ ಹೇಳಿದ್ದಾರೆ.

English summary
State-run BSNL will offer a minimum broadband speed of 2 mega bit per second (Mbps) from October 1 onwards to its customers, at no extra cost.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X