ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

BSNL ಹೊಸ ಬ್ರ್ಯಾಡ್‌ಬ್ಯಾಂಡ್ ಯೋಜನೆ: ದಿನಕ್ಕೆ 22 ಜಿಬಿ ಡೇಟಾ

|
Google Oneindia Kannada News

ನವದೆಹಲಿ, ಜುಲೈ 21: ಬಿಎಸ್‌ಎನ್‌ಎಲ್ ಬಳಕೆದಾರರಿಗೆ ಗುಡ್‌ನ್ಯೂಸ್ ಇಲ್ಲಿದೆ.ಮನೆಯಿಂದ ಕೆಲಸ ಮಾಡುವ ಗ್ರಾಹಕರಿಗೆ ಬಿಎಸ್‌ಎನ್ಎಲ್ ಅನೇಕ ಬ್ರಾಡ್‌ಬ್ಯಾಂಡ್ ಯೋಜನೆಗಳನ್ನು ಪರಿಚಯಿಸಿದೆ. ಆದರೆ ಎಲ್ಲಕ್ಕಿಂತ ಉತ್ತಮವಾದದ್ದು ಬಿಎಸ್‌ಎನ್‌ಎಲ್ 22 ಜಿಬಿ ಸಿಯುಎಲ್ ಯೋಜನೆ.

ಹೌದು, ಕಂಪನಿಯು ತನ್ನ ಹೊಸ ಬಿಎಸ್‌ಎನ್‌ಎಲ್ 22 ಜಿಬಿ ಸಿಯುಎಲ್ ಬ್ರಾಡ್‌ಬ್ಯಾಂಡ್ ಯೋಜನೆಯಲ್ಲಿ ಪ್ರತಿದಿನ 22 ಜಿಬಿ ಡೇಟಾವನ್ನು ನೀಡುತ್ತಿದೆ.

ಪ್ರತಿದಿನ 22 GB ಡೇಟಾ ಸೌಲಭ್ಯ

ಪ್ರತಿದಿನ 22 GB ಡೇಟಾ ಸೌಲಭ್ಯ

ಬಿಎಸ್‌ಎನ್‌ಎಲ್‌ನ ಈ ಬ್ರಾಡ್‌ಬ್ಯಾಂಡ್ ಯೋಜನೆಯ ಬೆಲೆ 1,299 ರುಪಾಯಿ. ಈ ಯೋಜನೆಯನ್ನು 1 ಜುಲೈ 2020 ರಂದು ಪ್ರಾರಂಭಿಸಿದೆ. ಯೋಜನೆಯಲ್ಲಿ 10Mbps ವರೆಗಿನ ವೇಗದೊಂದಿಗೆ, ಬಳಕೆದಾರರು ಪ್ರತಿದಿನ 22 GB ಡೇಟಾವನ್ನು ಪಡೆಯುತ್ತಾರೆ. ಡೇಟಾ ಮಿತಿ ಮುಗಿದ ನಂತರ ವೇಗವು 2Mbps ಗೆ ಕಡಿಮೆಯಾಗುತ್ತದೆ. ಜೊತೆಗೆ ಬಳಕೆದಾರರು ಈ ಯೋಜನೆಯಲ್ಲಿ ಅನಿಯಮಿತ ಕರೆ ಸೌಲಭ್ಯವನ್ನು ಪಡೆಯುತ್ತಾರೆ.

ತನ್ನ ಗ್ರಾಹಕರಿಗೆ ವಿಶೇಷ ಸೌಲಭ್ಯ ನೀಡಿದೆ ಬಿಎಸ್‌ಎನ್‌ಎಲ್: 97 ರಿಂದ 1,999 ರುಪಾಯಿ ಯೋಜನೆತನ್ನ ಗ್ರಾಹಕರಿಗೆ ವಿಶೇಷ ಸೌಲಭ್ಯ ನೀಡಿದೆ ಬಿಎಸ್‌ಎನ್‌ಎಲ್: 97 ರಿಂದ 1,999 ರುಪಾಯಿ ಯೋಜನೆ

ಹೊಸ ಯೋಜನೆಯು ಎಲ್ಲೆಲ್ಲಿ ಲಭ್ಯವಿದೆ?

ಹೊಸ ಯೋಜನೆಯು ಎಲ್ಲೆಲ್ಲಿ ಲಭ್ಯವಿದೆ?

ಬಿಎಸ್ಎನ್ಎಲ್‌ನ ಈ ಯೋಜನೆ ಅಂಡಮಾನ್ ಮತ್ತು ನಿಕೋಬಾರ್ ಹೊರತುಪಡಿಸಿ ಎಲ್ಲಾ ವಲಯಗಳಲ್ಲಿ ಲಭ್ಯವಿದೆ. ಈ ಯೋಜನೆಯನ್ನು ಆಯ್ಕೆ ಮಾಡಲು ಬಳಕೆದಾರರು ನಾಲ್ಕು ಆಯ್ಕೆಗಳನ್ನು ಪಡೆಯುತ್ತಾರೆ. ಮೊದಲ ಆಯ್ಕೆ ಎಂದರೆ ಇದಕ್ಕಾಗಿ ನೀವು ಪ್ರತಿ ತಿಂಗಳು 1,299 ರುಪಾಯಿ. ಎರಡನೆಯ ಆಯ್ಕೆ ವಾರ್ಷಿಕ ಚಂದಾದಾರಿಕೆಯನ್ನು ತೆಗೆದುಕೊಳ್ಳುವುದಾಗಿದೆ.

ವಾರ್ಷಿಕ ಚಂದಾದಾರಿಕೆ 12,990 ರುಪಾಯಿ

ವಾರ್ಷಿಕ ಚಂದಾದಾರಿಕೆ 12,990 ರುಪಾಯಿ

ಹೌದು, ಈ ಯೋಜನೆಯ ವಾರ್ಷಿಕ ಚಂದಾದಾರಿಕೆಗೆ 12,990 ರುಪಾಯಿ ಆಗಿದ್ದು, ಮಾಸಿಕ ಬಾಡಿಗೆಗೆ ಹೋಲಿಸಿದರೆ, ವಾರ್ಷಿಕ ಚಂದಾದಾರಿಕೆ 2,598 ರೂ. ಮುಂಗಡ ಪಾವತಿ ನೀಡುವ ಮೂಲಕ ಬಿಎಸ್‌ಎನ್‌ಎಲ್‌ನ ಈ ಯೋಜನೆಯನ್ನು ಎರಡು ಅಥವಾ ಮೂರು ವರ್ಷಗಳವರೆಗೆ ಚಂದಾದಾರರಾಗಬಹುದು. ಬಳಕೆದಾರರು ಎರಡು ವರ್ಷಕ್ಕೆ 24,681 ರುಪಾಯಿ ಮತ್ತು ಮೂರು ವರ್ಷಕ್ಕೆ 36,372 ರುಪಾಯಿ

ಚೀನಾಗೆ ಸಾವಿರಾರು ಕೋಟಿ ರು ನಷ್ಟ, ಭಾರತದಿಂದ 4ಜಿ ಅಸ್ತ್ರ!ಚೀನಾಗೆ ಸಾವಿರಾರು ಕೋಟಿ ರು ನಷ್ಟ, ಭಾರತದಿಂದ 4ಜಿ ಅಸ್ತ್ರ!

1 ಜಿಬಿ ಉಚಿತ ಕ್ಲೌಡ್ ಸಂಗ್ರಹ

1 ಜಿಬಿ ಉಚಿತ ಕ್ಲೌಡ್ ಸಂಗ್ರಹ

ಈ ಯೋಜನೆಯೊಂದಿಗೆ, ಬಳಕೆದಾರರು ಇಮೇಲ್ ವಿಳಾಸದೊಂದಿಗೆ 1 ಜಿಬಿ ಉಚಿತ ಕ್ಲೌಡ್ ಸಂಗ್ರಹವನ್ನು ಸಹ ಪಡೆಯುತ್ತಾರೆ. ಇದಲ್ಲದೆ, ಬಳಕೆದಾರರು ಬಯಸಿದರೆ, ಅವರು 2 ಸಾವಿರ ರೂ. ಪಾವತಿಸಿ ವರ್ಷಕ್ಕೆ ಸ್ಥಿರ ಐಪಿ ವಿಳಾಸವನ್ನು ಸಹ ಖರೀದಿಸಬಹುದು. ಇದಕ್ಕಾಗಿ, ಒಂದು ತಿಂಗಳ ಬಾಡಿಗೆಯನ್ನು ಭದ್ರತೆಯಾಗಿ ನೀಡಬೇಕಾಗುತ್ತದೆ. ಯೋಜನೆಯಲ್ಲಿ ಕಂಪನಿಯು ಅನಿಯಮಿತ ಕರೆಗಳನ್ನು ಸಹ ನೀಡುತ್ತಿದೆ. ಇದಕ್ಕಾಗಿ, ಪ್ರತಿ ಸಂಪರ್ಕವನ್ನು ಹೊಂದಿರುವ ಲ್ಯಾಂಡ್‌ಲೈನ್ ಫೋನ್ ಅನ್ನು ಸಹ ನೀಡಲಾಗುತ್ತಿದೆ.

English summary
BSNL has brought in a broadband plan offering users 22GB daily data for Rs 1299 a month. with up to 10Mbps download speed.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X