ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲೋಕಸಭೆ ಚುನಾವಣೆ ಬಳಿಕ 54 ಸಾವಿರ ಉದ್ಯೋಗಿಗಳಿಗೆ ಕೊಕ್

|
Google Oneindia Kannada News

ನವದೆಹಲಿ, ಏಪ್ರಿಲ್ 03: ಲೋಕಸಭೆ ಚುನಾವಣೆ ದೆಸೆಯಿಂದ ಸದ್ಯ ಐಸಿಯುವಿನಲ್ಲಿ ಸರ್ಕಾರಿ ಸ್ವಾಮ್ಯದ ಭಾರತ್ ಸಂಚಾರ್ ನಿಗಮ ನಿಯಮಿತ(ಬಿಎಸ್ಎನ್ಎಲ್) ಸಿಬ್ಬಂದಿಗಳ ಹುದ್ದೆಗಳು ನಂತರ ಒಮ್ಮೆಗೆ ತಮ್ಮ ಸ್ಥಾನ ಕಳೆದುಕೊಳ್ಳಲಿದ್ದಾರೆ ಎಂಬ ಸುದ್ದಿ ಬಂದಿದೆ.

ಸುಮಾರು 54 ಸಾವಿರ ಉದ್ಯೋಗ ಕಡಿತಗೊಳಿಸುವಂತೆ ಬಿಎಸ್ಎನ್ಎಲ್ ಬೋರ್ಡ್ ನಿಂದ ದೂರ ಸಂಪರ್ಕ ಇಲಾಖೆ(ಡಿಒಟಿ)ಗೆ ವರದಿ ಸಲ್ಲಿಸಲಾಗಿದೆ. ಬೋರ್ಡ್ ಸದಸ್ಯರ ಪೈಕಿ 10ರಲ್ಲಿ 3 ಮಂದಿ ಇದಕ್ಕೆ ಸಮ್ಮತಿಸಿದ್ದಾರೆ. ಚುನಾವಣೆ ಬಳಿಕ ಈ ಬಗ್ಗೆ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ.

ಬಿಎಸ್ಎನ್ಎಲ್ ದಿವಾಳಿ?: ಲಕ್ಷಾಂತರ ಉದ್ಯೋಗಿಗಳಿಗೆ ಸಂಬಳ ಸಿಕ್ಕಿಲ್ಲಬಿಎಸ್ಎನ್ಎಲ್ ದಿವಾಳಿ?: ಲಕ್ಷಾಂತರ ಉದ್ಯೋಗಿಗಳಿಗೆ ಸಂಬಳ ಸಿಕ್ಕಿಲ್ಲ

ಉದ್ಯೋಗ ಕಡಿತ ಹೇಗೆ?: ಅನೇಕ ಮಂದಿಗೆ ವಿಆರ್ ಎಸ್ ಪ್ಯಾಕೇಜ್ ಘೋಷಿಸಲಾಗುತ್ತದೆ. ಇನ್ನು ಅನೇಕರಿಗೆ ನೇರವಾಗಿ ಮನೆಗೆ ಕಳಿಸಲಾಗುತ್ತದೆ. ಇದಲ್ಲದೆ, ನಿವೃತ್ತಿ ವಯೋಮಿತಿಯನ್ನು 60 ವರ್ಷಗಳಿಂದ 58 ವರ್ಷಕ್ಕೆ ಇಳಿಸಲು ಕೂಡಾ ಶಿಫಾರಸು ಮಾಡಲಾಗಿದೆ. 50 ವರ್ಷ ಮೇಲ್ಪಟ್ಟವರಿಗೆ ವಾಲೆಂಟರಿ ರಿಟೈರ್ ಮೆಂಟ್ ಸ್ಕೀಂ(ವಿಆರ್ ಎಸ್) ಜಾರಿಗೊಳಿಸಲು ಮುಂದಾಗಿದೆ.

BSNL likely to lay off 31% of its workforce; 54000 employees may lose jobs: Report

ಇದರಿಂದಾಗಿ 54,451 ಬಿಎಸ್ಎನ್ಎಲ್ ಸಿಬ್ಬಂದಿ ಅಥವಾ 1,74,312 ಒಟ್ಟಾರೆ,ಶೇ 31ರಷ್ಟು ಮಂದಿ ಉದ್ಯೋಗ ಕಳೆದುಕೊಳ್ಳಲಿದ್ದಾರೆ. ವಿಆರ್ ಎಸ್, ಉದ್ಯೋಗ ಕಡಿತದ ಬಳಿಕ ಬಿಎಸ್ಎನ್ಎಲ್ ಸಿಬ್ಬಂದಿ ಸಂಖ್ಯೆ 33,568ಗೆ ತಗ್ಗಲಿದೆ ಇದರಿಂದ 13,895 ಕೋಟಿ ರು ಉಳಿತಾಯ ಮಾಡಬಹುದು ಎಂದು ತಿಳಿದು ಬಂದಿದೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಬಿಎಸ್ಎನ್ಎಲ್ ಹಾಗೂ ಎಂಟಿಎನ್ಎಲ್ ತನ್ನ ಸಿಬ್ಬಂದಿಗಳಿಗೆ ಫೆಬ್ರವರಿ ತಿಂಗಳಿನಲ್ಲಿ ಸಂಬಳ ನೀಡಲು ಹಣವಿಲ್ಲದೆ ಸರ್ಕಾರದ ಮೊರೆ ಹೊಕ್ಕಿದ್ದನ್ನು ಇಲ್ಲಿ ಸ್ಮರಿಸಬಹುದು.

ಬಿಎಸ್ಎನ್ಎಲ್ ನಷ್ಟದ ಪ್ರಮಾಣ ವರ್ಷದಿಂದ ವರ್ಷಕ್ಕೆ ಏರಿಕೆ ಆಗುತ್ತಿದೆ. ವರದಿ ಪ್ರಕಾರ, 2018ರಲ್ಲಿ ಸುಮಾರು 8 ಸಾವಿರ ಕೋಟಿ ರು ನಷ್ಟು ನಷ್ಟ ಎದುರಿಸಿದೆ. 2017ರ ಆರ್ಥಿಕ ವರ್ಷದಲ್ಲಿ 4,786 ಕೋಟಿ ರು, 2019ರಲ್ಲಿ 8 ಸಾವಿರ ಕೋಟಿ ರುಗೂ ಅಧಿಕ ನಷ್ಟ ನಿರೀಕ್ಷಿಸಲಾಗಿದೆ.

English summary
As many as 54,000 employees of the state-owned telecom operator Bharat Sanchar Nigam Ltd (BSNL) are likely to lose their jobs as the board of the company has accepted a proposal to lay off approximately 54,000 employees, a report by Deccan Herald said on Wednesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X