ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಎಸ್ಎನ್ಎಲ್ ನಿಂದ ಹೊಸ ಬ್ರಾಡ್ ಬ್ಯಾಂಡ್ ಯೋಜನೆ

|
Google Oneindia Kannada News

ಬೆಂಗಳೂರು, ಡಿಸೆಂಬರ್ 03: ಸರ್ಕಾರಿ ಸ್ವಾಮ್ಯದ ಟೆಲಿಕಾಂ ಕಂಪನಿ ಭಾರತ್ ಸಂಚಾರ್ ನಿಗಮ ನಿಯಮಿತ (ಬಿಎಸ್ಎನ್ಎಲ್) ತನ್ನ ಗ್ರಾಹಕರಿಗೆ ಹೊಸ ಎಂಟ್ರಿ ಲೆವಲ್ ಬ್ರಾಡ್ ಬ್ಯಾಂಡ್ ಯೋಜನೆಯನ್ನು ಘೋಷಿಸಿದೆ.

ಇಂಟರ್ನೆಟ್ ಬ್ರಾಡ್ ಬ್ಯಾಂಡ್ ಕ್ಷೇತ್ರದಲ್ಲಿ ಖಾಸಗಿ ಕಂಪನಿಗಳಿಗೆ ಪೈಪೋಟಿ ನೀಡಲು ಬಿಎಸ್ಎನ್ಎಲ್ ಮುಂದಾಗಿದೆ. ಬಿಎಸ್ಎನ್ಎಲ್ ಶುರು ಮಾಡಿರುವ 299 ರೂಪಾಯಿ ಪ್ಲಾನ್ ನಲ್ಲಿ ಗ್ರಾಹಕರಿಗೆ ಪ್ರತಿ ದಿನ 1.5 ಜಿಬಿ ಡೇಟಾ ಸಿಗಲಿದೆ. ಒಟ್ಟಾರೆ, 45ಜಿಬಿ ಡೇಟಾ ಲಭ್ಯವಾಗಲಿದೆ.

BSNL Launches Rs. 299 Broadband Plan With 8Mbps Download Speed

ಬಿ.ಎಸ್.ಎನ್.ಎಲ್.ಗ್ರಾಹಕರಿಗೆ ಧನಲಕ್ಷ್ಮಿಕೊಡುಗೆ ರಿಯಾಯಿತಿಬಿ.ಎಸ್.ಎನ್.ಎಲ್.ಗ್ರಾಹಕರಿಗೆ ಧನಲಕ್ಷ್ಮಿಕೊಡುಗೆ ರಿಯಾಯಿತಿ

ಆದರೆ, ಹಾಲಿ ಬಿಎಸ್ಎನ್ಎಲ್ ಗ್ರಾಹಕರಿಗೆ ಈ ಹೊಸ ಯೋಜನೆ ಲಭ್ಯವಿರುವುದಿಲ್ಲ. ಹೊಸ ಗ್ರಾಹಕರು ಮಾತ್ರ ಸದ್ಯಕ್ಕೆ ಪಡೆಯಬಹುದಾಗಿದೆ.

299 ರೂಪಾಯಿ ಪ್ಲಾನ್ ನಲ್ಲಿ ಗ್ರಾಹಕರಿಗೆ 8Mbps ವೇಗದ ಇಂಟರ್ನೆಟ್ ಸಿಗಲಿದೆ. 45 ಜಿಬಿ FUP ಲಿಮಿಟ್ ಲಭ್ಯವಾಗಲಿದೆ. ಪ್ರತಿ ದಿನ 1.5 ಜಿಬಿ ಡೇಟಾ ಸಿಗಲಿದ್ದು, ಮಿತಿ ಮುಗಿದ ಬಳಿಕ 1Mbps ಗೆ ತಗ್ಗಲಿದೆ. 299 ರೂಪಾಯಿ ಪ್ಲಾನ್ 30 ದಿನಗಳ ವ್ಯಾಲಿಡಿಟಿ ಹೊಂದಿದೆ.

ಬಿಎಸ್ಎನ್ಎಲ್ ನಿಂದ 299ರು ಗಳ ಹೊಸ ಪೋಸ್ಟ್ ಪೇಯ್ಡ್ ಪ್ಲಾನ್ಬಿಎಸ್ಎನ್ಎಲ್ ನಿಂದ 299ರು ಗಳ ಹೊಸ ಪೋಸ್ಟ್ ಪೇಯ್ಡ್ ಪ್ಲಾನ್

ಈ ಯೋಜನೆಯಲ್ಲಿ ಅನಿಯಮಿತ ಸ್ಥಳೀಯ ಹಾಗೂ ಎಸ್ಟಿಡಿ ವಾಯ್ಸ್ ಕರೆ ಸೌಲಭ್ಯ ಕೂಡಾ ಭಾರತದೊಳಗೆ ಸಿಗಲಿದೆ. ಇತರೆ ನೆಟ್ವರ್ಕ್ ಗಳಿಗೆ ರಾತ್ರಿ 10.30ರಿದ ಬೆಳಗ್ಗೆ 6 ಗಂಟೆ ತನಕ ಭಾನುವಾರದಂದು ಅನಿಯಮಿತ ಕರೆ ಮಾಡಬಹುದು.

English summary
Bharat Sanchar Nigam Limited (BSNL) has brought a new entry-level broadband plan that brings 1.5GB data per day at a monthly billing amount of Rs. 299.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X