ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇನ್ಮುಂದೆ ದೇಶದೆಲ್ಲೆಡೆ ಬಿಎಸ್ಎನ್ಎಲ್ ವೈಫೈ ಜಾಲ

By Mahesh
|
Google Oneindia Kannada News

ಆಗ್ರಾ, ಜೂ.17: ಸರ್ಕಾರಿ ಸ್ವಾಮ್ಯದ ಬಿಎಸ್​ಎನ್​ಎಲ್ ಮುಂಬರುವ ದಿನಗಳಲ್ಲಿ ದೇಶದೆಲ್ಲೆಡೆ 40 ಸಾವಿರಕ್ಕೂ ಅಧಿಕ ವೈಫೈ ಹಾಟ್​ಸ್ಪಾಟ್​ಗಳನ್ನು ಸ್ಥಾಪಿಸುವ ಯೋಜನೆ ಹಾಕಿಕೊಂಡಿದೆ. ಡಿಜಿಟಲ್ ಇಂಡಿಯಾ ಯೋಜನೆಯ ಭಾಗವಾದ ಈ ಜಾಲ ಸ್ಥಾಪನೆಗೆ ಸುಮಾರು 6,000 ಕೋಟಿ ರೂ. ಬಂಡವಾಳ ಹೂಡಲಾಗುತ್ತದೆ.

ವಿಶ್ವಪ್ರಸಿದ್ಧ ತಾಜ್ ಮಹಲ್ ವೀಕ್ಷಣೆಗೆ ಬರುವ ಪ್ರವಾಸಿಗರಿಗೆ ಉಚಿತ ವೈಫೈ ಸೇವೆ ಉದ್ಘಾಟಿಸಿದ ನಂತರ ಮಾತನಾಡಿದ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಈ ವಿಷಯ ತಿಳಿಸಿದರು.

ಡಿಜಿಟಲ್ ಇಂಡಿಯಾ ಭಾಗವಾಗಿ ದೇಶಾದ್ಯಂತ ವೈಫೈ ಜಾಲ ನಿರ್ಮಿಸುವ ಸಲುವಾಗಿ ವೈಫೈ ಹಾಟ್ ಸ್ಪಾಟ್ ಸ್ಥಾಪಿಸಲು ಸಿದ್ಧತೆ ನಡೆದಿದೆ. ಜುಲೈನಲ್ಲಿ ಟೆಂಡರ್ ಪ್ರಕ್ರಿಯೆಗೆ ಚಾಲನೆ ಸಿಗಲಿದ್ದು, 2018ರ ವೇಳೆಗೆ ಕಾಮಗಾರಿ ಪೂರ್ಣಗೊಳ್ಳುವ ವಿಶ್ವಾಸವಿದೆ ಎಂದು ಕೆಂದ್ರ ಟೆಲಿಕಾಂ ಸಚಿವ ರವಿಶಂಕರ್ ಪ್ರಸಾದ್ ಹೇಳಿದ್ದಾರೆ.

BSNL to invest Rs 6,000 cr for setting up 40,000 wi-fi hotspots by 2018 across India

ಈ ವರ್ಷಾಂತ್ಯದ ವೇಳೆಗೆ 250 ಸ್ಥಳಗಳಲ್ಲಿ 2500 ವೈಫೈ ಹಾಟ್​ಸ್ಪಾಟ್ ಸ್ಥಾಪಿಸಲು ಉದ್ದೇಶಿಸಲಾಗಿದೆ.ಈಗಾಗಲೇ ದೇಶಾದ್ಯಂತ 200 ವೈಫೈ ಹಾಟ್​ಸ್ಪಾಟ್​ಗಳನ್ನು ಸ್ಥಾಪಿಸಲಾಗಿದೆ ಎಂದರು. ಬಿಎಸ್​ಎನ್​ಎಲ್ ಮೊದಲ 30 ನಿಮಿಷದವರೆಗೆ ವೈಫೈ ಸೌಲಭ್ಯವನ್ನು ಉಚಿತವಾಗಿ ನೀಡಲಿದ್ದು, ನಂತರ ಪಾವತಿ ಮಾಡಿ ವೈಫೈ ಸೌಲಭ್ಯ ಪಡೆಯಬಹುದು ಎಂದು ಬಿಎಸ್​ಎನ್​ಎಲ್ ಸಿಎಂಡಿ ಅನುಪಮ್​ ಶ್ರೀವಾಸ್ತವ ತಿಳಿಸಿದರು.

20 ರು, 30 ರು, 50 ರು ಹಾಗೂ 70 ರು ನಂತೆ ರೀಚಾರ್ಜ್ ಮಾಡಿಸಿ 30 ನಿಮಿಷ, 60,120 ಅಥವಾ ಪೂರ್ತಿ ದಿನಕ್ಕೆ ವೈ ಫೈ ಸೌಲಭ್ಯ ಪಡೆದುಕೊಳ್ಳಬಹುದು. ಪ್ರವಾಸಿ ತಾಣಗಳಾದ ಖಜುರಾಹೋ, ಜಗನ್ನಾಥ್ ದೇಗುಲ ಸೇರಿದಂತೆ ಅನೇಕ ಕಡೆಗಳಲ್ಲಿ ನೆಟ್ವರ್ಕ್ ಸುಧಾರಣೆ ಕಾರ್ಯ ಜಾರಿಯಲ್ಲಿದೆ ಎಂದು ಅನುಪಮ್ ಹೇಳಿದರು. (ಪಿಟಿಐ)

English summary
State-run BSNL will set up 40,000 wi-fi hotspots across the country, entailing an investment of about Rs 6,000 crore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X