ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಎಸ್ಸೆನ್ನೆಲ್ ಗ್ರಾಹಕರಿಗೆ ವಾರಾಂತ್ಯದ ಕೊಡುಗೆ ಮತ್ತೆ ಲಭ್ಯ

By Mahesh
|
Google Oneindia Kannada News

ಬೆಂಗಳೂರು, ಫೆಬ್ರವರಿ 06: ತನ್ನ ಗ್ರಾಹಕರಿಗೆ ನೀಡಿದ್ದ ವಾರಾಂತ್ಯದ ಕೊಡುಗೆಯನ್ನು ಹಿಂಪಡೆಯಲು ಮುಂದಾಗಿದ್ದ ಸರ್ಕಾರಿ ಸ್ವಾಮ್ಯದ ಟೆಲಿಕಾಂ ಸಂಸ್ಥೆ ಬಿಎಸ್ ಎನ್ ಎಲ್ ಈಗ ತನ್ನ ನಿರ್ಧಾರವನ್ನು ಮುಂದೂಡಿದೆ.

ಸದ್ಯಕ್ಕೆ ಲ್ಯಾಂಡ್ ಲೈನ್ ಫೋನ್ ಬಳಸುವ ಗ್ರಾಹಕರಿಗೆ ಉಚಿತ ಕರೆ ಸೌಲಭ್ಯ ಸಿಗಲಿದೆ. ಆದರೆ, ಇದು ಮುಂದಿನ ಮೂರು ತಿಂಗಳಿಗೆ ಮಾತ್ರ ಸೀಮಿತವಾಗಲಿದೆ.

BSNL extends Sunday free voice calling benefits

ಕಳೆದ ವರ್ಷ ಆಗಸ್ಟ್ 21 ರಿಂದ ಉಚಿತ ಕರೆ ಸೌಲಭ್ಯವನ್ನು ಜಾರಿಗೆ ತಂದಿತ್ತು. ಸ್ಥಿರ ದೂರವಾಣಿಗಳಿಗೆ ಭಾನುವಾರ ಉಚಿತ ಕರೆ ಸೌಲಭ್ಯವನ್ನು ನೀಡಲಾಗಿತ್ತು. ಈ ಸೌಲಭ್ಯ ಫೆಬ್ರವರಿ 1 ರಿಂದ ಕಡಿತಗೊಳಿಸಲಾಗುವುದು ಎಂದು ಭಾರತೀಯ ಸಂಚಾರಿ ನಿಗಮ ನಿಯಮಿತ(ಬಿಎಸ್ಎನ್ಎಲ್) ಪ್ರಕಟಿಸಿತ್ತು.

ಮೊದಲಿಗೆ ರಾತ್ರಿ 9 ಗಂಟೆಯಿಂದ ಬೆಳಿಗ್ಗೆ 6 ಗಂಟೆಯವರೆಗೆ ಉಚಿತ ಕರೆ ಸೌಲಭ್ಯವನ್ನು ನೀಡಲಾಗಿತ್ತು. ಆ ಸಮಯವನ್ನು ಇತ್ತೀಚೆಗೆ ಕಡಿತಗೊಳಿಸಿ ರಾತ್ರಿ 10.30 ರಿಂದ ಬೆಳಿಗ್ಗೆ 6 ಗಂಟೆಗೆ ನಿಗದಿ ಮಾಡಲಾಗಿತ್ತು. ಈಗ ಭಾನುವಾರದ ಉಚಿತ ಕರೆ ಸೌಲಭ್ಯವನ್ನೂ ಕೂಡ ಹಿಂಪಡೆಯುವ ನಿರ್ಧಾರ ಕೈಗೊಂಡಿತ್ತು.

ಹೊಸ ವರ್ಷದ ಆರಂಭದಲ್ಲಿ ಅನಿಯಮಿತ ಸ್ಥಳೀಯ ಹಾಗೂ ಎಸ್ ಟಿಡಿ ಕರೆ ಮಾಡುವ ಅವಕಾಶ ನೀಡಲಾಗಿದ್ದು, ಯಾವುದೇ ನೆಟ್ವರ್ಕ್ ಗೆ ಬೇಕಾದರೂ ಕರೆ ಮಾಡಬಹುದಾಗಿದೆ.ಇದು ಪ್ರೀಪೇಯ್ಡ್ ಹಾಗೂ ಪೋಸ್ಟ್ ಪೇಯ್ಡ್ ಗ್ರಾಹಕರಿಬ್ಬರಿಗೂ ಅನ್ವಯವಾಗಲಿದೆ. ಉಚಿತ ಕರೆ ಸೌಲಭ್ಯವನ್ನು ಬಿ.ಎಸ್.ಎನ್.ಎಲ್. ಸ್ಥಗಿತಗೊಳಿಸುತ್ತಿರುವುದಕ್ಕೆ ಸಹಜವಾಗಿ ಗ್ರಾಹಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

English summary
Bharat Sanchar Nigam Ltd(BSNL) extends Sunday free voice calling benefits. BSNL which was supposed to withdraw its free voice calling benefits from landlines on Sundays, has extended the benefits for another 3 months
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X