ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಎಸ್‌ಎನ್‌ಎಲ್ ಮೊಬೈಲ್ ಕರೆ ದರ ಶೇ. 80 ಕಡಿತ

|
Google Oneindia Kannada News

ನವದೆಹಲಿ, ಡಿಸೆಂಬರ್, 21: ಹೊಸ ವರ್ಷಕ್ಕೆ ಭಾರತೀಯ ಸಂಚಾರ ನಿಗಮ(ಬಿಎಸ್ ಎನ್ ಎಲ್) ತನ್ನ ಗ್ರಾಹಕರಿಗೆ ಭರ್ಜರಿ ಕೊಡುಗೆ ನೀಡಿದೆ. ರಾತ್ರಿ ವೇಳೆ ಸ್ಥಿರ ದೂರವಾಣಿ ಬಳಕೆದಾರರಿಗೆ ಉಚಿತ ಕರೆ ಕೊಡುಗೆ ನೀಡಿದ್ದ ಬಿಎಸ್ ಎನ್ ಎಲ್ ಇದೀಗ ಮೊಬೈಲ್ ಕರೆ ದರ ಗಳನ್ನು ಶೇ. 80 ರಷ್ಟು ಕಡಿತ ಮಾಡಲು ಮುಂದಾಗಿದೆ.

ಹೊಸ ಬಿಎಸ್ ಎಸ್ ಎಲ್ ಸಂಪರ್ಕ ಪಡೆಯುವವರಿಗೆ ಈ ನಿಯಮ ಅನ್ವಯವಾಗಲಿದೆ. ಹೊಸ ಮೊಬೈಲ್ ಗ್ರಾಹಕರಿಗೆ ಮೊದಲ 2 ತಿಂಗಳು ಮಾತ್ರ ಈ ಸೌಲಭ್ಯ ಲಭ್ಯವಾಗಲಿದೆ.[ಬಿಎಸ್ ಎನ್ ಎಲ್ ಮೊಬೈಲ್ ಗ್ರಾಹಕರಿಗೂ ಪುಕ್ಕಟೆ ಕರೆ ಖುಷಿ]

bsnl

ಬಿಎಸ್‍ಎನ್‍ಎಲ್ ಸಂಪರ್ಕ ಪಡೆಯಲು ಇಚ್ಛಿಸುವ ಹೊಸ ಗ್ರಾಹಕರು ಪರ್ ಸೆಕೆಂಡ್ ಯೋಜನೆಯಡಿ 36 ರು. ವೋಚರ್ ಹಾಗೂ ಪರ್ ಮಿನಿಟ್ ಆಧಾರದಲ್ಲಿ 37ರು. ವೋಚರ್ ಅನ್ನು ಪಡೆಯಬೇಕು ಎಂದು ಬಿಎಸ್ ಎನ್ ಎಲ್ ಎಂಡಿ ಅನುಪಮ್ ಶ್ರೀವಾತ್ಸವ ತಿಳಿಸಿದ್ದಾರೆ.

37ರ ಯೋಜನೆ ಪಡೆದವರಿಗೆ ಬಿಎಸ್ ಎನ್ ಎಲ್ ಟು ಬಿಎಸ್ ಎನ್ ಎಲ್ ಸ್ಥಳೀಯ ಹಾಗೂ ಎಸ್ ಟಿಡಿ ಕರೆ ದರ ನಿಮಿಷಕ್ಕೆ 10 ಪೈಸೆ ಮಾತ್ರ. ಇತರೆ ನೆಟರ್ ವರ್ಕ್ ಗೆ ನಿಮಿಷಕ್ಕೆ 30 ಪೈಸೆ ಇರುತ್ತದೆ. 36 ರು. ಯೋಜನೆ ಪಡೆದವರಿಗೆ ಸ್ಥಳೀಯ ಮತ್ತು ಎಸ್ ಟಿಡಿ ಕರೆಗಳು ಪ್ರತಿ 3 ಸೆಕೆಂಡಿಗೆ 1 ಪೈಸೆ ತಗುಲುತ್ತದೆ. ಇತರೆ ನೆಟ್ ವರ್ಕ್ ಗೆ ಪ್ರತಿ 3 ಸೆಕೆಂಡಿಗೆ 2 ಪೈಸೆ ತಗಲುತ್ತದೆ ಎಂದು ದೂರ ಸಂಚಾರ ನಿಗಮ ಅಧಿಕಾರಿಗಳು ತಿಳಿಸಿದ್ದಾರೆ.[ವರ್ಷದಲ್ಲಿ ಬಿಎಸ್ ಎನ್ ಎಲ್ ತೊರೆದವರು 2 ಕೋಟಿ !]

ಜುಲೈ ಮತ್ತು ನವೆಂಬರ್ ನಡುವಿನ ಅವಧಿಯಲ್ಲಿ 1,57,564 ಜನ ಬಿಎಸ್ ಎನ್ ಎಲ್ ಗೆ ಪೋರ್ಟ್ ಆಗಿದ್ದಾರೆ. ಅದರಂತೆ 1,24,158 ಗ್ರಾಹಕರು ಬಿಎಸ್ ಎನ್ ಎಲ್ ಬೇಡ ಎಂದು ಹೊರಕ್ಕೆ ಹೋಗಿದ್ದಾರೆ. ಸೆಪ್ಟೆಂಬರ್ ಅಂತ್ಯಕ್ಕೆ ಲೆಕ್ಕ ಹಾಕಿದರೆ 79.6 ಮಿಲಿಯನ್ ಗ್ರಾಹಕರು ಬಿಎಸ್ ಎನ್ ಎಲ್ ಸೇವೆಯನ್ನು ಬಳಸಿಕೊಳ್ಳುತ್ತಿದ್ದಾರೆ.

English summary
Bharat Sanchar Nigam Limited (BSNL) has slashed mobile rates by up to 80 per cent for the first two months under a scheme for new customers. We have decided to cut mobile call rates by up to 80 per cent for new customer so that they get experience of our revamped services," BSNL Chairman and Managing Director Anupam Shrivastava told.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X