ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೀನಾಗೆ ಸಾವಿರಾರು ಕೋಟಿ ರು ನಷ್ಟ, ಭಾರತದಿಂದ 4ಜಿ ಅಸ್ತ್ರ!

|
Google Oneindia Kannada News

ನವದೆಹಲಿ, ಜುಲೈ 2: ನಿರೀಕ್ಷೆಯಂತೆ ಸರ್ಕಾರಿ ಸ್ವಾಮ್ಯದ ಭಾರತ್ ಸಂಚಾರ್ ನಿಗಮ್ ನಿಯಮಿತ(ಬಿಎಸ್ ಎನ್ ಎಲ್) 4ಜಿ ಟೆಲಿಕಾಂ ನೆಟ್ವರ್ಕ್ ಅಪ್ ಗ್ರೇಡ್ ಟೆಂಡರ್ ರದ್ದುಗೊಳಿಸಿದೆ. ಕೇಂದ್ರ ಸರ್ಕಾರದ ಸೂಚನೆಯಂತೆ ಟೆಂಡರ್ ರದ್ದಾಗಿದ್ದು, ಇದರಿಂದ ಚೀನಾ ಮೂಲದ ಕಂಪನಿಗಳಿಗೆ ಭಾರಿ ಹೊಡೆತ ಬಿದ್ದಿದೆ.

4ಜಿ ಹೊಸ ಟೆಂಡರ್ ಪ್ರಕ್ರಿಯೆಯಲ್ಲೂ ಚೀನಾ ಕಂಪನಿಗಳಿಗೆ ಪಾಲ್ಗೊಳ್ಳದಂತೆ ನಿರ್ಬಂಧಿಸಲಾಗಿದೆ. ಕಳೆದ ವಾರವೇ ಈ ಬಗ್ಗೆ ದೂರಸಂಪರ್ಕ ಇಲಾಖೆ (ಡಿಒಟಿ) ಶಿಫಾರಸು ಮಾಡಿತ್ತು.

ಟಿಕ್‌ ಟಾಕ್ ಬ್ಯಾನ್: ಬೈಟ್‌ ಡ್ಯಾನ್ಸ್ ಕಂಪನಿಗೆ 45,000 ಕೋಟಿ ನಷ್ಟ ಸಾಧ್ಯತೆಟಿಕ್‌ ಟಾಕ್ ಬ್ಯಾನ್: ಬೈಟ್‌ ಡ್ಯಾನ್ಸ್ ಕಂಪನಿಗೆ 45,000 ಕೋಟಿ ನಷ್ಟ ಸಾಧ್ಯತೆ

ಸುಮಾರು 7000-8000 ಕೋಟಿ ರೂ. ವೆಚ್ಚದ ಹೊಸ ಟೆಂಡರ್ ನಿಯಮಗಳನ್ನು ಸರ್ಕಾರ ನಿರ್ಧರಿಸಲಿದೆ. ಬಿಎಸ್‌ಎನ್‌ಎಲ್‌ನ 4 ಜಿ ನೆಟ್‌ವರ್ಕ್ ಅಪ್‌ಗ್ರೇಡ್ ಟೆಂಡರ್‌ನಿಂದ ಚೀನಾದ ಕಂಪನಿಗಳನ್ನು ಹೊರಗಿಡುವ ಮೂಲಕ ವಿದೇಶಿ ಖಾಸಗಿ ಟೆಲಿಕಾಂ ಕಂಪೆನಿಗಳ ಮೇಲಿನ ಅವಲಂಬನೆ ಕಡಿಮೆ ಮಾಡುವುದು, ಮೇಕ್ ಇನ್ ಇಂಡಿಯಾ, ಮೇಡ್ ಇನ್ ಇಂಡಿಯಾ ಉಪಕರಣ, ಸಾಧನ, ಬಳಕೆ ಹೆಚ್ಚಿಸುವುದು ಸರ್ಕಾರದ ಉದ್ದೇಶ ಎಂದು ದೂರ ಸಂಪರ್ಕ ಇಲಾಖೆ ಹೇಳಿದೆ.

BSNL cancels 4G tender after DoT directs it not to use Chinese telecom gear

ಕರೋನಾ ವೈರಸ್ ಸೋಂಕು ಭೀತಿಯಿಂದ 5 ಜಿ ಹರಾಜು ಪ್ರಕ್ರಿಯೆಯನ್ನು ಮುಂದಿನ ವರ್ಷಕ್ಕೆ ಮುಂದೂಡಲಾಗಿದೆ. ಸದ್ಯಕ್ಕೆ 4ಜಿ ನೆಟ್ವರ್ಕ್ ಅಪ್ ಗ್ರೇಡ್ ಬಗ್ಗೆ ಮಾರ್ಚ್ ತಿಂಗಳಿನಲ್ಲಿ ನೀಡಿದ್ದ ಅಧಿಸೂಚನೆಯನ್ನು ಬದಲಾಯಿಸಿ, ಹೊಸ ಟೆಂಡರ್ ಬಗ್ಗೆ ಆದೇಶಿಸಲಾಗಿದೆ.

ಚೀನಾ ಆಪ್ ನಿಷೇಧ ಬೆನ್ನಲ್ಲೆ ಗಟ್ಟಿ ಸಂದೇಶ ರವಾನಿಸಿದ ಮೋದಿಚೀನಾ ಆಪ್ ನಿಷೇಧ ಬೆನ್ನಲ್ಲೆ ಗಟ್ಟಿ ಸಂದೇಶ ರವಾನಿಸಿದ ಮೋದಿ

ಚೀನಾದ ಕಂಪನಿಗಳಿಂದ ಉಪಕರಣಗಳನ್ನು ಖರೀದಿಸುವುದನ್ನು ಬಿಎಸ್ಎನ್ಎಲ್ ಮತ್ತು ಎಂಟಿಎನ್ಎಲ್ ನಿರ್ಬಂಧಿಸಿವೆ ಎಂದು ದೃಢಿಕರಿಸಿವೆ ಎಂದು ದೂರಸಂಪರ್ಕ ಇಲಾಖೆಯು ಪ್ರಧಾನ ಮಂತ್ರಿ ಕಚೇರಿ (ಪಿಎಂಒ) ಮತ್ತು ಗೃಹ ಸಚಿವಾಲಯಕ್ಕೆ (ಎಂಎಚ್‌ಎ) ವರದಿಯನ್ನು ಸಲ್ಲಿಸಿದೆ.

ನೆಟ್ವರ್ಕ್ ಅಪ್ ಗ್ರೇಡ್ ಗಾಗಿ ಟೆಂಡರ್:
4ಜಿ ಯೋಜನೆ, ಇಂಜಿನಿಯರಿಂಗ್ ಪೂರೈಕೆ, ಸ್ಥಾಪನೆ, ಪರೀಕ್ಷೆ, ವಾರ್ಷಿಕ ನಿರ್ವಹಣೆ ಎಲ್ಲವನ್ನು ಟೆಂಡರ್ ಪಡೆದುಕೊಳ್ಳುವ ಸಂಸ್ಥೆಗೆ ನೀಡಲಾಗುತ್ತದೆ. ಬಿಎಸ್ ಎನ್ ಎಲ್ ನ ಉತ್ತರ, ದಕ್ಷಿಣ, ಪೂರ್ವ ಹಾಗೂ ಪಶ್ಚಿಮ ವಲಯ, ದೆಹಲಿ, ಮುಂಬೈನ ಎಲ್ ಎಸ್ ಎ(ಎಂಟಿ ಎನ್ ಎಲ್) ಗಳಲ್ಲಿ ಟರ್ನ್ ಕೀ ಆಧಾರದ ಮೇಲೆ ಕಾರ್ಯ ನಿರ್ವಹಿಸಬೇಕಾಗುತ್ತದೆ ಎಂದು ಆದೇಶದಲ್ಲಿ ಹೇಳಲಾಗಿದೆ.

English summary
State-owned BSNL on Wednesday cancelled a multi-crore tender for 4G telecom network upgrade after the government asked the firm not to use any Chinese equipment.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X