ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಏರ್ಟೆಲ್, ವೊಡಾಫೋನ್, ಜಿಯೋ ಬಳಿಕ ಈಗ ಬಿಎಸ್‌ಎನ್‌ಎಲ್ ಶಾಕ್

|
Google Oneindia Kannada News

ನವದೆಹಲಿ, ನವೆಂಬರ್ 22: ಡಿಸೆಂಬರ್ ತಿಂಗಳಿನಿಂದ ಮೊಬೈಲ್ ಫೋನ್ ಬಳಕೆದಾರರು ತಮ್ಮ ದೂರಸಂಪರ್ಕ ಸೇವೆಗಳಿಗಾಗಿ ಹೆಚ್ಚು ಹಣ ಖರ್ಚು ಮಾಡುವುದು ಅನಿವಾರ್ಯ. ಇಷ್ಟು ದಿನ ದರ ಇಳಿಕೆಯ ಸಮರ ನಡೆಸಿದ್ದ ದೂರಸಂಪರ್ಕ ಕಂಪೆನಿಗಳು, ಈಗ ಏಕಾಏಕಿ ದರ ಏರಿಕೆಗೆ ಜಿದ್ದಿಗೆ ಬಿದ್ದಿದ್ದಾರೆ.

ಖಾಸಗಿ ದೂರಸಂಪರ್ಕ ಕಂಪೆನಿಗಳು ಮಾತ್ರವಲ್ಲದೆ, ಈಗ ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್ ಕೂಡ ತನ್ನ ಗ್ರಾಹಕರಿಗೆ ಬೆಲೆ ಹೆಚ್ಚಳದ ಬಿಸಿ ಮುಟ್ಟಿಸಲು ಮುಂದಾಗಿದೆ. ಹೀಗಾಗಿ ದೇಶದ ಎಲ್ಲ ನೆಟ್‌ವರ್ಕ್ ಸೇವಾದಾರರ ಗ್ರಾಹಕರೂ ಡಿ.1ರಿಂದ ತಮ್ಮ ಮೊಬೈಲ್ ಸೇವೆಗಳಿಗೆ ಹೆಚ್ಚಿನ ಹಣ ತರಬೇಕಾಗುವುದು ಅನಿವಾರ್ಯ.

ಏರ್‌ಟೆಲ್, ವೊಡಾಫೋನ್ ಬಳಿಕ ಜಿಯೋ ಸರದಿ: ದರ ಹೆಚ್ಚಳ ಮಾಡಲು ಸಿದ್ಧತೆಏರ್‌ಟೆಲ್, ವೊಡಾಫೋನ್ ಬಳಿಕ ಜಿಯೋ ಸರದಿ: ದರ ಹೆಚ್ಚಳ ಮಾಡಲು ಸಿದ್ಧತೆ

ಡಿ.1ರಿಂದ ಅನ್ವಯವಾಗುವಂತೆ ತನ್ನ ಮೊಬೈಲ್ ಟಾರಿಫ್‌ಗಳ ದರ ಏರಿಕೆ ಮಾಡುವುದಾಗಿ ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್ ಪ್ರಕಟಿಸಿದೆ. ಕೆಲವು ದಿನಗಳ ಹಿಂದೆಯಷ್ಟೇ ವೊಡಾಫೋನ್ ಐಡಿಯಾ ಮತ್ತು ಭಾರ್ತಿ ಏರ್‌ಟೆಲ್ ತಮ್ಮ ಪೋಸ್ಟ್‌ ಪೇಯ್ಡ್ ಮತ್ತು ಪ್ರೀಪೇಯ್ಡ್ ಸೇವೆಗಳ ಮೇಲೆ ದರ ಹೆಚ್ಚಳ ಮಾಡುವುದಾಗಿ ಘೋಷಿಸಿದ್ದವು. ಅದರ ಬೆನ್ನಲ್ಲೇ ಒಂದು ಕಾಲದಲ್ಲಿ ಗ್ರಾಹಕರಿಗೆ ಉಚಿತ ಸೇವೆ ನೀಡಿದ್ದ ರಿಲಯನ್ಸ್ ಜಿಯೋ ಸಹ ಮುಂದಿನ ತಿಂಗಳ ಆರಂಭದಿಂದ ಸೇವಾ ದರ ಹೆಚ್ಚಿಸುವುದಾಗಿ ತಿಳಿಸಿತ್ತು.

ಬಿಎಸ್ಎನ್ಎಲ್ ದರ ಏರಿಕೆ

ಬಿಎಸ್ಎನ್ಎಲ್ ದರ ಏರಿಕೆ

ಬಿಎಸ್‌ಎನ್ಎಲ್ ತನ್ನ ಈಗಿನ ಧ್ವನಿ ಮತ್ತು ಡೇಟಾ ಟಾರಿಫ್‌ಗಳ ಪರಾಮರ್ಶೆ ಮಾಡುತ್ತಿದೆ. ತನ್ನ ಪ್ರೀಪೇಯ್ಡ್ ಮತ್ತು ಪೋಸ್ಟ್‌ಪೇಯ್ಡ್‌ ಹಾಗೂ ಡೇಟಾ ಸೇವೆಗಳ ವಿವಿಧ ಟಾರಿಫ್‌ಗಳಲ್ಲಿ ಯಾವ ರೀತಿಯ ಬದಲಾವಣೆಗಳನ್ನು ಮಾಡಬೇಕು ಎಂಬ ಪರಿಶೀಲನೆ ನಡೆಸುತ್ತಿದೆ. ಈ ನಾಲ್ಕೂ ದೂರಸಂಪರ್ಕ ಕಂಪೆನಿಗಳು ಎಷ್ಟು ದರ ಹೆಚ್ಚಳ ಮಾಡಲಾಗುತ್ತದೆ ಎಂಬ ಮಾಹಿತಿ ನೀಡಿಲ್ಲ.

ಎಂಟಿಎನ್ಎಲ್-ಬಿಎಸ್ಎನ್ಎಲ್ ವಿಲೀನ

ಎಂಟಿಎನ್ಎಲ್-ಬಿಎಸ್ಎನ್ಎಲ್ ವಿಲೀನ

ನಷ್ಟದಲ್ಲಿರುವ ಎಂಟಿಎನ್‌ಎಲ್ಅನ್ನು ಬಿಎಸ್‌ಎನ್‌ಎಲ್ ಜತೆ ವಿಲೀನಗೊಳಿಸಲು ಇತ್ತೀಚೆಗಷ್ಟೇ ಸರ್ಕಾರ ಹಸಿರು ನಿಶಾನೆ ತೋರಿಸಿತ್ತು. ಅಲ್ಲದೆ, ಸರ್ಕಾರವು ಸುದೀರ್ಘ ಕಾಲದಿಂದ ಕಾಯುತ್ತಿದ್ದ ಕಂಪೆನಿಗಳಿಗೆ 4ಜಿ ತರಂಗಾಂತರ ಹಂಚಿಕೆ ಮಾಡುವ ವಿಚಾರಕ್ಕೆ ಕೂಡ ಅನುಮತಿ ನೀಡಿತ್ತು. ಎಂಟಿಎನ್‌ಎಲ್-ಬಿಎಸ್ಎನ್ಎಲ್ ಸುಧಾರಣೆಗಾಗಿ ಸರ್ಕಾರವು ಎರಡೂ ಕಂಪೆನಿಗಳ ಸುಮಾರು 38,000 ಕೋಟಿ ರೂ ಮೌಲ್ಯದ ಆಸ್ತಿಗಳನ್ನು ನಗದಾಗಿ ಪರಿವರ್ತಿಸಿ 29,937 ಕೋಟಿ ರೂ. ಹೂಡಿಕೆಗೆ ಚಿಂತನೆ ನಡೆಸಿದೆ. ಎರಡೂ ಕಂಪೆನಿಗಳು ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು 15,000 ಕೋಟಿ ರೂ. ಸಾವರಿನ್ ಬಾಂಡ್ ಎತ್ತಲಿವೆ.

ಗ್ರಾಹಕರಿಗೆ ಶಾಕ್ ನೀಡಿದ ಏರ್‌ಟೆಲ್, ವೊಡಾಫೋನ್ಗ್ರಾಹಕರಿಗೆ ಶಾಕ್ ನೀಡಿದ ಏರ್‌ಟೆಲ್, ವೊಡಾಫೋನ್

ಖಾಸಗಿ ಕಂಪೆನಿಗಳಿಂದ ದರ ಹೆಚ್ಚಳ

ಖಾಸಗಿ ಕಂಪೆನಿಗಳಿಂದ ದರ ಹೆಚ್ಚಳ

ನಷ್ಟದಲ್ಲಿರುವ ಭಾರ್ತಿ ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾ ಸಂಸ್ಥೆಗಳು ಡಿ.1ರಿಂದ ಟಾರಿಫ್ ದರಗಳಲ್ಲಿ ಏರಿಕೆ ಮಾಡುವುದಾಗಿ ತಿಳಿಸಿದ್ದವು. ಎರಡು ದಿನಗಳ ಬಳಿಕ ಜಿಯೋ ಕೂಡ ದರ ಏರಿಕೆಯ ಪ್ರಕಟಣೆ ಮಾಡಿತ್ತು. ಈ ಮೂರೂ ಕಂಪೆನಿಗಳು 92 ಸಾವಿರ ಕೋಟಿ ರೂ. ಎಜಿಆರ್ (ಹೊಂದಾಣಿಕೆಯ ಒಟ್ಟು ಆದಾಯ) ಬಾಕಿ ಉಳಿಸಿಕೊಂಡಿದ್ದು, ಸೀಮಿತ ಅವಧಿಯ ಒಳಗೆ ಸರ್ಕಾರಕ್ಕೆ ಪಾವತಿಸುವಂತೆ ಸುಪ್ರೀಂಕೋರ್ಟ್ ಸೂಚಿಸಿದೆ. ಹೀಗಾಗಿ ಈ ಕಂಪೆನಿಗಳಿಗೆ ಅಧಿಕ ಹೊರೆಯಾಗಿದ್ದು, ಇದಕ್ಕಾಗಿ ದರ ಏರಿಕೆಗೆ ಮುಂದಾಗಿವೆ.

ಬಳಕೆದಾರರ ಸಂಖ್ಯೆ ಇಳಿಕೆ-ಏರಿಕೆ

ಬಳಕೆದಾರರ ಸಂಖ್ಯೆ ಇಳಿಕೆ-ಏರಿಕೆ

ಬೆಲೆ ಏರಿಕೆಯ ನಡುವೆಯೇ ಸಂಸ್ಥೆಗಳು ಇನ್ನಷ್ಟು ಗ್ರಾಹಕರನ್ನು ಕಳೆದುಕೊಳ್ಳುವ ಭೀತಿಯಲ್ಲಿವೆ. ಏರ್‌ಟೆಲ್ 23.8 ಲಕ್ಷ ಮತ್ತು ವೊಡಾಫೋನ್ ಐಡಿಯಾ 25.7 ಲಕ್ಷ ಬಳಕೆದಾರರನ್ನು ಸೆಪ್ಟೆಂಬರ್ ತಿಂಗಳೊಂದರಲ್ಲಿಯೇ ಕಳೆದುಕೊಂಡಿವೆ. ಆದರೆ ಜಿಯೋ ಮತ್ತು ಬಿಎಸ್‌ಎನ್‌ಎಲ್‌ನತ್ತ ಗ್ರಾಹಕರು ಹೆಚ್ಚು ಒಲವು ತೋರಿಸಿದ್ದಾರೆ. ಜಿಯೋ ಸೆಪ್ಟೆಂಬರ್ ತಿಂಗಳಲ್ಲಿ 69.83 ಲಕ್ಷ ಬಳಕೆದಾರರನ್ನು ಹೊಂದಿದ್ದರೆ, ಬಿಎಸ್‌ಎನ್‌ಎಲ್ 7.37 ಲಕ್ಷ ಬಳಕೆದಾರರನ್ನು ಹೆಚ್ಚಿಸಿಕೊಂಡಿದೆ.

ಬಳಕೆದಾರರ ಸಂಖ್ಯೆ: ಜಿಯೋ, ಬಿಎಸ್ಎನ್ಎಲ್ ಏರಿಕೆ, ಐಡಿಯಾ, ಏರ್ಟೆಲ್ ಇಳಿಕೆಬಳಕೆದಾರರ ಸಂಖ್ಯೆ: ಜಿಯೋ, ಬಿಎಸ್ಎನ್ಎಲ್ ಏರಿಕೆ, ಐಡಿಯಾ, ಏರ್ಟೆಲ್ ಇಳಿಕೆ

English summary
State-owned telecom operator BSNL has announced the increase in its tariff prices from December 1. Airtel, Vodafone Idea and Jio had announced the hike in tariff plans recently.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X