ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಆತ್ಮನಿರ್ಭರ್' ನೀತಿಯಿಂದ ಸಂಕಷ್ಟಕ್ಕೆ ಸಿಲುಕಿದ ಚೀನಾ ಕಂಪೆನಿಗಳು

|
Google Oneindia Kannada News

ನವದೆಹಲಿ, ಆಗಸ್ಟ್ 15: ಭಾರತ ಮತ್ತು ಚೀನಾ ನಡುವೆ ಲಡಾಖ್‌ನ ಗಡಿಯಲ್ಲಿ ಸಂಭವಿಸಿದ ಸಂಘರ್ಷದ ಬಳಿಕ ಉಭಯ ದೇಶಗಳ ಸಂಬಂಧ ಮತ್ತಷ್ಟು ಹಳಸಿದೆ. ಅದರ ಬೆನ್ನಲ್ಲೇ ಚೀನಾದ ವಿರುದ್ಧ ಸೇಡು ತೀರಿಸಿಕೊಳ್ಳಲು ಭಾರತ ವಿವಿಧ ಕ್ರಮಗಳನ್ನು ಕೈಗೊಂಡಿದೆ. ಚೀನಾದ ವಿರುದ್ಧ ಆರ್ಥಿಕ ಯುದ್ಧವೂ ಅದರಲ್ಲಿ ಒಂದು. ಇದರಿಂದ ಚೀನಾ ಮೂಲದ ವಸ್ತುಗಳ ವಿರುದ್ಧ ಅಭಿಯಾನ ನಡೆಯುತ್ತಿದೆ. ಜತೆಗೆ ಸರ್ಕಾರ ಕೂಡ ಚೀನಾದ ವಸ್ತುಗಳ ಆಮದಿನ ಮೇಲೆ ಕಠಿಣ ನಿರ್ಬಂಧಗಳನ್ನು ವಿಧಿಸಿದೆ.

ಕ್ಸಿಯೋಮಿಯಂತಹ ಚೀನಾ ಮೂಲದ ಸಂಸ್ಥೆಗಳು ತಮ್ಮ ಸರಕುಗಳಿಗೆ ಭಾರತದ ಗುಣಮಟ್ಟ ನಿಯಂತ್ರಣ ಸಂಸ್ಥೆಗಳ ಅನುಮೋದನೆ ಪಡೆದುಕೊಳ್ಳುವುದು ವಿಳಂಬವಾಗುತ್ತಿವೆ ಎಂದು ತಿಳಿಸಿವೆ. ಚೀನಾದಿಂದ ಭಾರತಕ್ಕೆ ಆಮದಾಗುವ ವಸ್ತುಗಳನ್ನು ಬಹಿಷ್ಕರಿಸುವ ಮೂಲಕ ಚೀನಾಕ್ಕೆ ತಕ್ಕಪಾಠ ಕಲಿಸಬೇಕೆಂಬ ಅಭಿಯಾನ ಭಾರತದೆಲ್ಲೆಡೆ ನಡೆಯುತ್ತಿದೆ. ಅದಕ್ಕೆ ಸೆಲೆಬ್ರಿಟಿಗಳು ಕೂಡ ದನಿಗೂಡಿಸುತ್ತಿದ್ದಾರೆ.

ಚೀನಾಕ್ಕೆ ಹೊಡೆತ, ಕಲರ್ ಟಿವಿ ಆಮದಿಗೆ ಭಾರತ ನಿರ್ಬಂಧ ಚೀನಾಕ್ಕೆ ಹೊಡೆತ, ಕಲರ್ ಟಿವಿ ಆಮದಿಗೆ ಭಾರತ ನಿರ್ಬಂಧ

ಇದರ ಮಧ್ಯೆ ಚೀನಾದಿಂದ ಆಮದಾಗುವ ವಸ್ತುಗಳನ್ನು ಕಠಿಣ ಪರಿಶೀಲನೆಗೆ ಒಳಪಡಿಸಲಾಗುತ್ತಿದೆ. ಇದರಿಂದಾಗಿ ಭಾರತದಲ್ಲಿರುವ ಚೀನಾ ಮೂಲದ ವಿವಿಧ ಉತ್ಪನ್ನ ತಯಾರಿಕಾ ಕಂಪೆನಿಗಳಿಗೂ ಹಿನ್ನಡೆಯಾಗಿದೆ. ಮುಂದೆ ಓದಿ.

ವಿಳಂಬ ಮಾಡುತ್ತಿರುವ ಬಿಎಸ್‌ಐ

ವಿಳಂಬ ಮಾಡುತ್ತಿರುವ ಬಿಎಸ್‌ಐ

ಮೊಬೈಲ್ ಫೋನ್ ಮತ್ತು ಟೆಲಿವಿಷನ್ ಸಾಮಗ್ರಿಗಳು ಸೇರಿದಂತೆ ವಿವಿಧ ಎಲೆಕ್ಟ್ರಾನಿಕ್ ಉತ್ಪನ್ನಗಳಿಗೆ ಬೇಕಾಗುವ ವಸ್ತುಗಳ ಆಮದಿಗೆ ಅನುಮತಿ ನೀಡಲು ಭಾರತೀಯ ಗುಣಮಟ್ಟ ಬ್ಯೂರೋ (ಬಿಎಸ್‌ಐ) ಇತ್ತೀಚಿನ ದಿನಗಳಲ್ಲಿ ವಿಳಂಬ ಮಾಡುತ್ತಿದೆ. ಇದರಿಂದಾಗಿ ಕ್ಸಿಯೋಮಿ, ಒಪ್ಪೋ, ವಿವೋ ಮುಂತಾದ ಕಂಪೆನಿಗಳ ಯೋಜನೆಗಳಿಗೆ ತೊಂದರೆಯಾಗಿದೆ.

ಹೂಡಿಕೆಗೆ ಸಿಗದ ಅನುಮೋದನೆ

ಹೂಡಿಕೆಗೆ ಸಿಗದ ಅನುಮೋದನೆ

ಭಾರತದ ಸಂಸ್ಥೆಗಳಿಂದ ಒಪ್ಪಿಗೆ ವಿಳಂಬವಾಗುತ್ತಿರುವುದರ ಕುರಿತು ಪ್ರತಿಕ್ರಿಯೆ ನೀಡಲು ಕ್ಸಿಯೋಮಿ, ಒಪ್ಪೊ ಮುಂತಾದ ಕಂಪೆನಿಗಳು ನಿರಾಕರಿಸಿವೆ. ಹಾಗೆಯೇ ಬಿಐಎಸ್ ಪ್ರಧಾನ ನಿರ್ದೇಶಕ ಪ್ರಮೋದ್ ಕುಮಾರ್ ತಿವಾರಿ ಮತ್ತು ಚೀನಾದ ವಾಣಿಜ್ಯ ಸಚಿವಾಲಯ ಹಾಗೂ ವಿದೇಶಾಂಗ ಸಚಿವಾಲಯಗಳೂ ಈ ಬಗ್ಗೆ ಪ್ರತಿಕ್ರಿಯಿಸಿಲ್ಲ. ಚೀನಾದಿಂದ ಬರುವ ಹೂಡಿಕೆ ಕಾರ್ಯಗಳ ಮೇಲೆ ಭಾರತ ಕಳೆದ ಏಪ್ರಿಲ್‌ನಿಂದ ತೀವ್ರ ನಿಗಾ ಇರಿಸಿದೆ. ಯಾವುದೇ ಹೂಡಿಕೆಗಳಿಗೆ ತಕ್ಷಣವೇ ಅನುಮೋದನೆ ನೀಡುತ್ತಿಲ್ಲ.

ಚೀನಾ ಸೌರಶಕ್ತಿ ಉತ್ಪನ್ನಗಳ ಮೇಲೆ ಆಮದು ಸುಂಕ ಹೆಚ್ಚಳ!ಚೀನಾ ಸೌರಶಕ್ತಿ ಉತ್ಪನ್ನಗಳ ಮೇಲೆ ಆಮದು ಸುಂಕ ಹೆಚ್ಚಳ!

ಬ್ರ್ಯಾಂಡೆಡ್ ಉತ್ಪನ್ನಗಳಿಗೂ ಇಲ್ಲ ವಿನಾಯಿತಿ

ಬ್ರ್ಯಾಂಡೆಡ್ ಉತ್ಪನ್ನಗಳಿಗೂ ಇಲ್ಲ ವಿನಾಯಿತಿ

ಭಾರತ ಸರ್ಕಾರವು ಹೊಸ ಗುಣಮಟ್ಟ ನೀತಿಯನ್ನು ರೂಪಿಸುವಲ್ಲಿ ಕೆಲಸ ಮಾಡುತ್ತಿದೆ. ಈ ನೀತಿಯನ್ನು ಆಗಸ್ಟ್ ಅಂತ್ಯದ ವೇಳೆಗೆ ಪ್ರಕಟಿಸುವ ಸಾಧ್ಯತೆ ಇದೆ. ಇದು ಚೀನಾ ಮತ್ತು ಇತರೆ ದೇಶಗಳಿಂದ ಬರುವ ಕಳಪೆ ಗುಣಮಟ್ಟದ ವಸ್ತುಗಳು ಭಾರತದ ಮಾರುಕಟ್ಟೆ ಪ್ರವೇಶಿದಂತೆ ತಡೆಯುವ ಗುರಿ ಹೊಂದಿದೆ. ಆದರೆ ಪ್ರಸ್ತುತ ಚೀನಾದ ಬ್ರಾಂಡೆಡ್ ಕಂಪೆನಿಗಳ ಉತ್ಪನ್ನಗಳಿಗೂ ತಕ್ಷಣದ ಅನುಮತಿ ಸಿಗುತ್ತಿಲ್ಲ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಗುಣಮಟ್ಟದ ಮಾನದಂಡ ಉನ್ನತೀಕರಣ

ಗುಣಮಟ್ಟದ ಮಾನದಂಡ ಉನ್ನತೀಕರಣ

ಭಾರತವು ಆಮದು ಮಾಡಿಕೊಳ್ಳುವ ಉತ್ಪನ್ನಗಳ ಗುಣಮಟ್ಟದ ಸ್ಥಿತಿಯನ್ನು ಉನ್ನತೀಕರಿಸುತ್ತಿದೆ. ಅದರ ನಿಯಮಕ್ಕೆ ಅನುಗುಣವಾದ ಗುಣಮಟ್ಟವಿಲ್ಲದ ಉತ್ಪನ್ನಗಳಿಗೆ ಅನುಮೋದನೆ ಸಿಗುತ್ತಿಲ್ಲ. ಜತೆಗೆ ಉತ್ತಮ ಗುಣಮಟ್ಟದ ವಸ್ತುಗಳಿಗೂ ಒಪ್ಪಿಗೆ ನೀಡುವುದು ತಡಮಾಡಲಾಗುತ್ತಿದೆ. ಇದರಿಂದ ಭಾರತದ ಮಾರುಕಟ್ಟೆ ಪ್ರವೇಶಿಸಲು ಕಾದಿರುವ ಉತ್ಪನ್ನಗಳಿಗೆ ಹಿನ್ನಡೆಯಾಗಿದೆ.

ಚೀನಾಕ್ಕೆ ಭಾರಿ ಪೆಟ್ಟು, ಆಮದು ಶುಲ್ಕ ಹೆಚ್ಚಳಕ್ಕೆ ಸರ್ಕಾರ ಚಿಂತನೆಚೀನಾಕ್ಕೆ ಭಾರಿ ಪೆಟ್ಟು, ಆಮದು ಶುಲ್ಕ ಹೆಚ್ಚಳಕ್ಕೆ ಸರ್ಕಾರ ಚಿಂತನೆ

ಚೀನಾದ ಮೊಬೈಲ್‌ಗಳ ಮಾರಾಟ

ಚೀನಾದ ಮೊಬೈಲ್‌ಗಳ ಮಾರಾಟ

ಒಪ್ಪೊ ಮತ್ತು ಕ್ಸಿಯೋಮಿ ಸೇರಿದಂತೆ, ಭಾರತದಲ್ಲಿ ಮಾರಾಟವಾಗುವ ಪ್ರತಿ 10 ಸ್ಮಾರ್ಟ್‌ ಫೋನ್‌ಗಳಲ್ಲಿ 8 ಫೋನ್‌ಗಳು ಚೀನಾದ ಮೂಲದವೇ ಆಗಿವೆ. ಈ ಎರಡು ಕಂಪೆನಿಗಳ ಹೆಚ್ಚಿನ ಮಾಡೆಲ್‌ಗಳು ಭಾರತದಲ್ಲಿಯೇ ಸಿದ್ಧವಾಗುತ್ತವೆ. ಕೆಲವೊಂದು ಸಾಮಗ್ರಿಗಳನ್ನು ಚೀನಾದಿಂದ ಆಮದು ಮಾಡಿಕೊಳ್ಳಲಾಗುತ್ತದೆ. ಬಿಐಎಸ್‌ನ ನಿರ್ದಿಷ್ಟ ಗುಣಮಟ್ಟ ನಿಯಮದಡಿ ವಿದೇಶಿ ಅಥವಾ ಸ್ವದೇಶಿ ವಸ್ತುಗಳು ಅದರ ಗುಣಮಟ್ಟದ ಮಾನದಂಡಕ್ಕೆ ಮುಟ್ಟುವಂತಿರಬೇಕು. ಕಂಪೆನಿಗಳು ತಮ್ಮ ಉತ್ಪನ್ನಗಳನ್ನು ಪ್ರಮಾಣೀಕೃತ ಲ್ಯಾಬೋರೇಟರಿಗಳಿಂದ ಪರೀಕ್ಷೆಗೆ ಒಳಪಟ್ಟ ಬಳಿಕ ಬಿಎಸ್‌ಐ ಅದಕ್ಕೆ ಅನುಮತಿ ನೀಡುತ್ತದೆ.

English summary
Bureau of Indian Standards (BSI) is delaying approvals for mobile phone components and televisions hits firms like Xiaomi and Oppo.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X