ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗುರುನಾನಕ್ ಜಯಂತಿ ಪ್ರಯುಕ್ತ ಇಂದು BSE ಮತ್ತು NSE ವಹಿವಾಟು ಸ್ಥಗಿತ

|
Google Oneindia Kannada News

ಮುಂಬೈ, ನವೆಂಬರ್ 30: ಇಂದು ಗುರುನಾನಕ್ ಜಯತಿ ಪ್ರಯುಕ್ತ ಮುಂಬೈ ಷೇರುಪೇಟೆ ಸೆನ್ಸೆಕ್ಸ್ ಮತ್ತು ರಾಷ್ಟ್ರೀಯ ಷೇರುಪೇಟೆ ನಿಫ್ಟಿ ವ್ಯಾಪಾರ ವಹಿವಾಟು ಸ್ಥಗಿತಗೊಂಡಿದೆ. ಜೊತೆಗೆ ಕರೆನ್ಸಿ ಮತ್ತು ಸಾಲದ ಮಾರುಕಟ್ಟೆಗಳು ಸಹ ಮುಚ್ಚಲ್ಪಡುತ್ತವೆ.

ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್ ಮತ್ತು ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ ವಹಿವಾಟು ಇಂದು ಸ್ಥಗಿತಗೊಂಡಿದ್ದರೂ ಮಲ್ಟಿ ಕಮೋಡಿಟಿ ಎಕ್ಸ್ಚೇಂಜ್ ಬೆಳಿಗ್ಗೆ 9 ರಿಂದ ಸಂಜೆ 5 ರವರೆಗೆ ಬೆಳಿಗ್ಗೆ ವಹಿವಾಟು ಮಾತ್ರ ಮುಚ್ಚಲ್ಪಟ್ಟಿರುತ್ತದೆ. ಸಂಜೆ 5 ರಿಂದ ರಾತ್ರಿ 11:55 ರವರೆಗೆ ವಹಿವಾಟು ಪುನರಾರಂಭಗೊಳ್ಳುತ್ತದೆ.

FII ಒಳಹರಿವು ಹೆಚ್ಚಳ: ನವೆಂಬರ್‌ನಲ್ಲಿ ಭಾರತೀಯ ಮಾರುಕಟ್ಟೆಗೆ ಶೇ. 11.4ರಷ್ಟು ಲಾಭFII ಒಳಹರಿವು ಹೆಚ್ಚಳ: ನವೆಂಬರ್‌ನಲ್ಲಿ ಭಾರತೀಯ ಮಾರುಕಟ್ಟೆಗೆ ಶೇ. 11.4ರಷ್ಟು ಲಾಭ

ಗುರುನಾನಕ್ ಜಯಂತಿ ಸಿಖ್ ಧರ್ಮದ ಅತ್ಯಂತ ಪವಿತ್ರ ಹಬ್ಬಗಳಲ್ಲಿ ಒಂದಾಗಿದೆ. ಗುರುನಾನಕ್ ಗುರುಪುರಬ್ ಮತ್ತು ಗುರುನಾನಕ್ಸ್‌ ಪ್ರಕಾಶ್ ಉತ್ಸವ ಎಂದೂ ಕರೆಯಲ್ಪಡುವ ಈ ಜಯಂತಿಯನ್ನು ಸಿಖ್ ಧರ್ಮ ಸಂಸ್ಥಾಪಕ ಮತ್ತು ಮೊದಲ ಸಿಖ್ ಗುರು ಗುರುನಾನಕ್ ಅವರ ಜನ್ಮದಿನದಂದು ಆಚರಿಸಲಾಗುತ್ತದೆ. ಈ ವರ್ಷ ಗುರುನಾನಕ್ ದೇವ್ ಅವರ 551 ನೇ ಜನ್ಮದಿನವಾಗಿದೆ.

BSE And NSE Market Shut Due To Guru Nanak Jayanti: Commodity Exchange Will Resume Evening Session

ಕಳೆದ ಶುಕ್ರವಾರ ಮಾರುಕಟ್ಟೆ ವಹಿವಾಟು ಮುಕ್ತಾಯದ ಬಳಿಕ ಸೆಪ್ಟೆಂಬರ್ ತ್ರೈಮಾಸಿಕದ ದೇಶದ ಒಟ್ಟು ದೇಶೀಯ ಉತ್ಪನ್ನ (ಜಿಡಿಪಿ) ಶೇಕಡಾ 7.5ಕ್ಕಿಂತ ಕಡಿಮೆಯಾಗಿದೆ ಎಂದು ಅಧಿಕೃತ ಅಂಕಿ-ಅಂಶಗಳು ಬಿಡುಗಡೆಯಾಗಿದೆ. ಹಿಂದಿನ ತ್ರೈಮಾಸಿಕದಲ್ಲಿ ಕೊರೊನಾವೈರಸ್‌ ಪ್ರೇರಿತ ಲಾಕ್‌ಡೌನ್‌ದಿಂದಾಗಿ ದಾಖಲೆಯ ಶೇಕಡಾ 23.9ರಷ್ಟು ಕುಸಿತ ಕಂಡಿದೆ.

English summary
The BSE and NSE are shut for trading today November 30 on account of Gurunanak Jayanti.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X