• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

2.5 ಲಕ್ಷ ಗ್ರಾಮ ಪಂಚಾಯಿತಿಗೆ ವೈ ಫೈ ಸಿಗುತ್ತಂತೆ!

By Mahesh
|

ಬೆಂಗಳೂರು, ನ.20: ಕರ್ನಾಟಕದಲ್ಲಿ ಡಿಜಿಟಲ್ ಕ್ರಾಂತಿ ನಡೆಸಲು ಸರ್ಕಾರ ಮುಂದಾಗಿರುವ ಬೆನ್ನಲ್ಲೇ ಕೇಂದ್ರ ಸರ್ಕಾರದಿಂದ ಚಾಲ್ತಿಯಲ್ಲಿರುವ ಮಹತ್ವದ ಯೋಜನೆಯ ವಿವರಗಳು ಬಹಿರಂಗಗೊಂಡಿದೆ. ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದ ಅಭಿವೃದ್ಧಿ ಹಾಗೂ ಪ್ರಯೋಜನಗಳನ್ನು ಎರಡನೇ ಸ್ತರಕ್ಕೆ ತರಲು ಕರ್ನಾಟಕ ಯತ್ನಿಸುತ್ತಿದೆ. ಕೇಂದ್ರ ಸರ್ಕಾರ ಗ್ರಾಮ ಪಂಚಾಯಿತಿಗಳಿಗೆ ವೈ ಫೈ ಸೌಲಭ್ಯ ಒದಗಿಸಲು ಮುಂದಾಗಿದೆ.

ಹೀಗಾಗಿ ಮುಂದಿನ ಬಾರಿ ದೂರದ ನಿಮ್ಮೂರಿಗೆ ಲ್ಯಾಪ್ ಟಾಪ್ ಹಿಡಿದುಕೊಂಡು ಹೋದರೆ ವೈಫೈ ಜಾಲ ನಿಮ್ಮನ್ನು ಸ್ವಾಗತಿಸಬಹುದು. ಗ್ರಾಮ ಗ್ರಾಮಗಳಲ್ಲೂ ಲ್ಯಾಪ್ ಟ್ಯಾಪ್, ಸ್ಮಾರ್ಟ್ ಫೋನ್ ಮೂಲಕ ಇಂಟರ್ನೆಟ್ ಜಾಲಕ್ಕೆ ಬೆಸೆದುಕೊಳ್ಳುವ ಕಾಲ ಕೂಡಿ ಬರಲಿದೆ ಎಂದು ಕೇಂದ್ರ ಸರ್ಕಾರದ ಯೋಜನೆ ಭರವಸೆ ನೀಡಿದೆ. ಸುಮಾರು 2.5 ಲಕ್ಷ ಗ್ರಾಮ ಪಂಚಾಯಿತಿಗಳಿಗೆ ವೈ ಫೈ ಒದಗಿಸುವ ಯೋಜನೆ ಹೊಂದಲಾಗಿದೆ.

ಗ್ರಾಮೀಣಾಭಿವೃದ್ಧಿ ಸಚಿವಾಲಯ ಜತೆಗೆ ಟೆಲಿಕಾಂ ಇಲಾಖೆಯ ರಾಷ್ಟ್ರೀಯ ಅಪ್ಟಿಕಲ್ ಫೈಬರ್ ಜಾಲ(NOFN) ವಿಭಾಗದ ಸಹಯೋಗದೊಂದಿಗೆ ಗ್ರಾಮಗಳಿಗೆ ಹೈ ಸ್ಪೀಡ್ ಬ್ರಾಡ್ ಬ್ಯಂಡ್ ಒದಗಿಸಲು ಸರ್ಕಾರ ಯೋಜನೆ ಹಾಕಿಕೊಂಡಿದೆ.

ಈ ಯೋಜನೆ ಸಾಕಾರಗೊಂಡ ಮೇಲೆ ಅದರ ನಿರ್ವಹಣೆಗಾಗಿ ಗ್ರಾಮೀಣಾಭಿವೃದ್ಧಿ ಸಚಿವಾಲಯ ಸುಮಾರು 2000 ಕೋಟಿ ರು ವಾರ್ಷಿಕವಾಗಿ ವೆಚ್ಚ ಮಾಡಲಿದೆ. ಬಿಸಿನೆಸ್ ಲೈನ್ ತಾಣಕ್ಕೆ ಸಿಕ್ಕಿರುವ ನೀಲಿನಕ್ಷೆ ಪ್ರಕಾರ ಗ್ರಾಮ ಪಂಚಾಯಿತಿಗಳಿಗೆ 100 Mbps ಲೈನ್ ಸಂಪರ್ಕ ಸಿಗಲಿದೆ. ಅಂದರೆ, ಉದಾಹರಣೆಗೆ 10 ಜನ ಬಳಕೆದಾರರು ವೈಫೈ ಹಾಟ್ ಸ್ಪಾಟ್ ಮೂಲಕ ಜಾಲದೊಳಗೆ ಬಂದರೆ ಪ್ರತಿಯೊಬ್ಬರಿಗೂ 10 Mbps ವೇಗದ ಸಂಪರ್ಕ ಸಿಗುತ್ತದೆ. ಇದಕ್ಕೆ ಎಷ್ಟು ಹಣ ಪಡೆಯಬೇಕು ಎಂಬುದನ್ನು ಸಚಿವಾಲಯ ಇನ್ನೂ ನಿರ್ಧರಿಸಿಲ್ಲ.

ಕೇಂದ್ರ ಸಚಿವ ಸಂಪುಟದ ಒಪ್ಪಿಗೆ ಪಡೆದ ನಂತರ ಯೋಜನೆಯ ಪೂರ್ಣ ಪರಿಪಾಠ ಸಾರ್ವಜನಿಕರಿಗೆ ಸಿಗಲಿದೆ. ಇನ್ನೊಂದು ಉಪಯೋಜನೆ ಪ್ರಕಾರ ಗ್ರಾಮೀಣ ಭಾಗದ ಸುಮಾರು 25 ಲಕ್ಷ ನಿವಾಸಿಗಳಿಗೆ ಉಚಿತ ಇಂಟರ್ನೆಟ್ ಸೌಲಭ್ಯವುಳ್ಳ ಮೊಬೈಲ್ ಫೋನ್ ಸಂಪರ್ಕ ಸಿಗಲಿದೆ.

ಒಂದು ಬಾರಿಗೆ ಸುಮಾರು 300 ರು ಪಾವತಿಸಿದರೆ ಇಂಟರ್ನೆಟ್ ಬಳಸಬಹುದು. ದಿನವೊಂದಕ್ಕೆ 1 ರು ದರದಂತೆ ತಿಂಗಳಿಗೆ 30 ರು ನೀಡಿ ಆಮೇಲೆ ರೀಚಾರ್ಚ್ ಮಾಡಿಸಿಕೊಳ್ಳಬಹುದು. 30ಎಂಬಿ ಡಾಟಾ ಒಬ್ಬರಿಗೆ ಸಿಗಲಿದೆ.

ಎಲ್ಲವೂ ಸರಿಯಾಗಿ ಆಗಿದ್ದರೆ ಈ ವೇಳೆಗೆ ಪ್ರತಿ ಗ್ರಾಮ ವೈಫೈ ಜಾಲದಲ್ಲಿ ಬೆರೆತಿರಬೇಕಾಗಿತ್ತು. ಆದರೆ, ಸುಮಾರು 20,000 ಕೋಟಿ ರು ವೆಚ್ಚದ ರಾಷ್ಟ್ರೀಯ ಆಪ್ಟಿಕಲ್ ಫೈಬರ್ ನೆಟ್ವರ್ಕ್ ಯೋಜನೆ ಎರಡು ವರ್ಷ ಮುಂದೂಡಲ್ಪಟ್ಟಿದೆ. ಬಿಎಸ್ಎನ್ಎಲ್ ,ರೈಲ್ ಟೆಲ್ ಹಾಗೂ ಪವರ್ ಗ್ರಿಡ್ ಸಹಯೋಗದೊಂದಿಗೆ ಈ ಮಹತ್ವದ ಯೋಜನೆ ಸಾಕಾರಾಗೊಳ್ಳಬೇಕಿದೆ. ಒಟ್ಟಾರೆ ಇಂದಲ್ಲ ನಾಳೆ ಹಳ್ಳಿಗಳಲ್ಲೂ ಬ್ರಾಡ್ ಬ್ಯಾಡ್ ಇಂಟರ್ನೆಟ್ ಹಾಗೂ ವೈಫೈ ಹಾಟ್ ಸ್ಪಾಟ್ ಸಂಪರ್ಕ ಸಾಧ್ಯತೆಯಿದೆ.

ಐಟಿ ಕ್ರಾಂತಿ ಎರಡನೇ ಹಂತದ ನಗರಗಳನ್ನು ತಲುಪಬೇಕು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The Government’s plans to set up Wi-Fi hotspots in nearly 2.5 lakh Gram Panchayats are executed smoothly. The ambitious Wi-Fi connectivity project is estimated to cost Rs 4,000 crore, expand high-speed broadband services to villages initiated by the Ministry of Rural Development and NOFN
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more