ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬ್ರಿಗೇಡ್ ಗ್ರೂಪ್ ನಿಂದ ರು.500 ಕೋಟಿ ಹೂಡಿಕೆ

By Rajendra
|
Google Oneindia Kannada News

ಬೆಂಗಳೂರು, ನ.3 : ಮುಂದಿನ ಐದು ವರ್ಷಗಳಲ್ಲಿ ಜಾಗತಿಕವಾಗಿ ಮಾನದಂಡವಾಗಲಿರುವ ಭಾರತದ ಪ್ರಥಮ ಅಂತಾರಾಷ್ಟ್ರೀಯ ಹಣಕಾಸು ಸೇವಾ ಕೇಂದ್ರ (ಐಎಫ್‍ಎಸ್ ಸಿ), ಗುಜರಾತ್ ಇಂಟರ್ ನ್ಯಾಶನಲ್ ಫೈನಾನ್ಸ್ ಟೆಕ್ ಸಿಟಿ (ಗಿಫ್ಟ್ ಸಿಟಿ)ಯಲ್ಲಿ ಬ್ರಿಗೇಡ್ ಗ್ರೂಪ್ 500 ಕೋಟಿ ರೂ. ಹೂಡಿಕೆ ಮಾಡಲಿದೆ.

ಗಿಫ್ಟ್ ಸಿಟಿಯ ಎಸ್‍ಇಝೆಡ್ ಮತ್ತು ಎಸ್‍ಇಝ್ ಡ್ಯೇತರ ಪ್ರದೇಶದಲ್ಲಿ ಕಮರ್ಷಿಯಲ್, ರೆಸಿಡೆನ್ಶಿಯಲ್, ರಿಟೈಲ್ ಮಾಲ್ ಮತ್ತು ಹೋಟೆಲ್ ಪ್ರಾಜೆಕ್ಟ್ ಗಳ ಅಭಿವೃದ್ಧಿಗಾಗಿ ಈ ಗ್ರೂಪ್ ಗೆ 1.1 ಮಿಲಿಯನ್ ಚದರ ಅಡಿಯಷ್ಟು ಬಿಲ್ಟ್ ಅಪ್ ಏರಿಯಾ (ಬಿಯುಎ)ದ ಅಭಿವೃದ್ಧಿ ಹಕ್ಕು ನೀಡಲಾಗಿದೆ.

ಹೆಚ್ಚುವರಿಯಾಗಿ 2.8 ಮಿಲಿಯನ್ ಚದರ ಅಡಿಯಷ್ಟು ಬಿಯುಎ ಪಡೆದುಕೊಳ್ಳುವ ಮೂಲಕ ಗಿಫ್ಟ್ ಸಿಟಿಯಲ್ಲಿನ ಭಾರತದ ಪ್ರಥಮ ಜಾಗತಿಕ ಹಣಕಾಸು ಹಬ್‍ನಲ್ಲಿ ಒಂದು ದೀರ್ಘ ಅಸ್ತಿತ್ವ ಪಡೆದುಕೊಳ್ಳುವತ್ತ ಈ ಗ್ರೂಪ್ ತನ್ನ ಆಸಕ್ತಿ ಪ್ರಕಟಿಸಿದೆ.

Brigade Group to invest Rs. 500 crores in GIFT City

ಬ್ರಿಗೇಡ್ ಗ್ರೂಪ್ ಬೆಂಗಳೂರು, ಚೆನ್ನೈ, ಹೈದರಾಬಾದ್, ಕೊಚ್ಚಿ ಮತ್ತಿತರೆ ನಗರಗಳೂ ಸೇರಿದಂತೆ ದಕ್ಷಿಣ ಭಾರತದಲ್ಲಿ ಪ್ರಬಲ ಅಸ್ತಿತ್ವ ಹೊಂದಿದೆ ಮತ್ತು ವಿವಿಧ ಸೌಲಭ್ಯಗಳ ಅಭಿವೃದ್ಧಿಯಲ್ಲಿ ಉನ್ನತ ಸ್ಟಾಂಡರ್ಡ್ ಮತ್ತು ಗುಣಮಟ್ಟಕ್ಕೆ ಇದು ಹೆಸರುವಾಸಿಯಾಗಿದೆ.

ಗುಜರಾತ್ ಸರ್ಕಾರದ ಗೌರವಾನ್ವಿತ ಸಚಿವರಾದ (ಹಣಕಾಸು ಮತ್ತು ಇಪಿಡಿ), ಸೌರಭ್ ಭಾಯಿ ಪಟೇಲ್, ಅವರು ಬೆಂಗಳೂರಿನಲ್ಲಿ ನಡೆದ ವೈಬ್ರೆಂಟ್ ಗುಜರಾತ್ ನ ರೋಡ್ ಶೋದಲ್ಲಿ ಮಾತನಾಡಿ, "ಬ್ರಿಗೇಡ್ ಎಂಟರ್ ಪ್ರೈಸಸ್ ಲಿ. ಬೆಂಗಳೂರು ಮೊದಲ ಬಾರಿಗೆ ಗುಜರಾತ್ ನಲ್ಲಿ ಭಾಗವಹಿಸುತ್ತಿದ್ದು ಗಿಫ್ಟ್ ಸಿಟಿ, ಗುಜರಾತ್ ನ ಫೈನಾನ್ಶಿಯಲ್ ಸರ್ವೀಸ್ ಮತ್ತು ಐಟಿ, ರೆಸಿಡೆನ್ಶಿಯಲ್, ರಿಟೈಲ್ ಮಾಲ್ ಮತ್ತು ಹೋಟೆಲ್‍ಗಳು ಅಭಿವೃದ್ಧಿಯಲ್ಲಿ ಬೃಹತ್ ಪಾಲು ಪಡೆದು ಅಂದಾಜು 500 ಕೋಟಿ ರೂ.ನಷ್ಟು ಹೂಡಿಕೆ ನಡೆಸುತ್ತಿರುವುದು ನಮಗೆ ಸಂತಸ ತಂದಿದೆ'' ಎಂದು ಹೇಳಿದರು.

ಗಿಫ್ಟ್ ಕಂಪನಿ ಲಿ.ನ ಎಂಡಿ ಮತ್ತು ಗ್ರೂಪ್ ಸಿಇಒ ರಮಾಕಾಂತ್ ಝಾ ಮಾತನಾಡಿ, "ದಕ್ಷಿಣ ಭಾರತ ಮೂಲದ ಗ್ರೂಪ್ ಒಂದು ಇಷ್ಟೊಂದು ಬೃಹತ್ ಪ್ರಮಾಣದಲ್ಲಿ ಹೂಡಿಕೆ ನಡೆಸುತ್ತಿರುವುದು ಈ ಪ್ರಾಜೆಕ್ಟ್ ಆಫರ್ ಮಾಡುತ್ತಿರುವ ಅವಕಾಶಗಳ ಸೂಚನೆಯಾಗಿದೆ.

ರಿಯಲ್ ಎಸ್ಟೇಟ್ ಸಂಸ್ಥೆಗಳು ದೇಶದ ಮೊದಲ ಐಎಫ್‍ಎಸ್ ಸಿ ಅಭಿವೃದ್ಧಿಯ ಭಾಗವಾಗಿ ನಡೆಸುವ ಹೂಡಿಕೆ ಹಾಗೂ ಪ್ರಗತಿಗೆ ರಿಟರ್ನ್ ಪಡೆಯಲಿವೆ. ಎಲ್ಲಾ ರಿಯಲ್ ಎಸ್ಟೇಟ್ ಸಂಸ್ಥೆಗಳ ಮಧ್ಯೆ ಗ್ರೇಡ್ 'ಎ' ಪ್ರಾಪರ್ಟಿಗಳ ಅಭಿವೃದ್ಧಿಗೊಳಿಸುವ ಬ್ರಿಗೇಡ್ ಗ್ರೂಪ್‍ನ ಪ್ರತಿಷ್ಠೆ ಹಾಗೂ ಅನುಭವವು ಗಿಫ್ಟ್ ಸಿಟಿ ನೀಡಲಿರುವ ವಿಶ್ವ ದರ್ಜೆ ಸೇವೆಗಳು ಮತ್ತು ಮೂಲಸೌಕರ್ಯಕ್ಕೆ ಅನುಕೂಲವಾಗಲಿದೆ'' ಎಂದು ಹೇಳಿದರು.

ಅಭಿವೃದ್ಧಿಯ ಕುರಿತು ಮಾತನಾಡಿದ ಬ್ರಿಗೇಡ್ ಗ್ರೂಪ್ ಸಿಎಂಡಿ ಎಂ.ಆರ್.ಜೈಶಂಕರ್, "ದೇಶದ ಒಂದು ನಿಜವಾದ ಸ್ಮಾರ್ಟ್ ಸಿಟಿಯಾಗಲಿದೆ ಎಂದು ನಾವು ಪರಿಗಣಿಸಿರುವ ಗಿಫ್ಟ್ ಸಿಟಿಯ ಸಹ ಡೆವಲಪರ್ ಆಗುತ್ತಿರುವುದಕ್ಕೆ ನಮಗೆ ಸಂತಸವಾಗುತ್ತಿದೆ. 800 ಎಕರೆಗಳಿಗೂ ಹೆಚ್ಚು ಪ್ರದೇಶವನ್ನು ವ್ಯಾಪಿಸಲಿರುವ ಈ ಅಭಿವೃದ್ಧಿಯನ್ನು ವಿಶ್ವದರ್ಜೆ ಮೂಲಸೌಕರ್ಯದೊಂದಿಗೆ ಸುಂದರವಾಗಿ ಯೋಜಿಸಲಾಗಿದ್ದು ಇದು ದೇಶದ ರಿಯಲ್ ಎಸ್ಟೇಟ್ ಅಭಿವೃದ್ಧಿಯಲ್ಲಿ ಒಂದು ಮಾನದಂಡವನ್ನು ಸೃಷ್ಟಿಸಲಿದೆ ಎಂದು ನಾವು ನಂಬಿದ್ದೇವೆ.

ಹೂಡಿಕೆದಾರರಾಗಿ ಹಾಗೂ ಕಾರ್ಯಾಚರಣೆಯನ್ನು ಆರಂಭಿಸುವ ಅಂತಾರಾಷ್ಟ್ರೀಯ ಕಂಪನಿಗಳಿಗೆ ಗಿಫ್ಟ್ ಸಿಟಿಯು ಭಾರತದ ಸ್ಥಾನವನ್ನು ನಿರೂಪಿಸುವ ಒಂದು ಅದ್ಭುತ ವೇದಿಕೆಯಾಗಲಿದೆ. ಗೌರವಾನ್ವಿತ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಕಲ್ಪನೆಯಂತೆ ನಮ್ಮ ದೇಶದಲ್ಲಿ 100 ಸ್ಮಾರ್ಟ್ ಸಿಟಿಗಳನ್ನು ನಿರ್ಮಿಸುವ ಯೋಜನೆಯ ಭಾಗವಾಗುತ್ತಿರುವುದಕ್ಕೆ ನಮಗೆ ಸಂತಸವಾಗುತ್ತಿದೆ ಹಾಗೂ ಇದನ್ನು ಯಶಸ್ವಿಗೊಳಿಸುವತ್ತ ನೋಡುತ್ತೇವೆ'' ಎಂದು ಹೇಳಿದರು. (ಒನ್ಇಂಡಿಯಾ ಬಿಜಿನೆಸ್)

English summary
Brigade Group will invest Rs. 500 crores in Gujarat International Finance Tec-City (GIFT City), India’s first globally benchmarked International Financial Services Centre (IFSC) over next few years. Allotment of Development Rights for 1.1 mn. sq. ft. of Built Up Area (BUA) has been made to the Group for development of Commercial, Residential, Retail Mall and Hotel projects in SEZ & Non-SEZ Area in GIFT City.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X