ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬ್ರಿಗೇಡ್ ಗ್ರೂಪ್‌ 28ರ ಸಂಭ್ರಮಕ್ಕೆ ಪುಸ್ತಕದ ಮೆರುಗು

By Rajendra
|
Google Oneindia Kannada News

ಬೆಂಗಳೂರು, ಅ.16: ಬೆಂಗಳೂರು ಮೂಲದ ರಿಯಲ್ ಎಸ್ಟೇಟ್ ಕಂಪನಿಗಳಲ್ಲಿ ಮುಂಚೂಣಿಯಲ್ಲಿರುವ ಬ್ರಿಗೇಡ್ ಗ್ರೂಪ್‌ಗೆ ಈಗ 28ರ ಸಂಭ್ರಮ. ಕಳೆದ 28 ವರ್ಷಗಳಲ್ಲಿ ಸಂಸ್ಥೆ ನಡೆದು ಬಂದ ಹಾದಿ, ಈ ಅವಧಿಯಲ್ಲಿ ಸಾಧಿಸಿದ ಸಾಧನೆಗಳ ಕುರಿತಾದ ಸ್ಮರಣಿಕೆ 'ದಿ ಮೆನಿ ವರ್ಲ್ಡ್ಸ್ ಆಫ್ ಬ್ರಿಗೇಡ್' ಕಾಫಿ ಟೇಬಲ್ ಬುಕ್ ಬಿಡುಗಡೆ ಮಾಡಿದೆ.

216 ಪುಟಗಳ ಈ ಸ್ಮರಣಿಕೆಯನ್ನು ದೇಶದ ಖ್ಯಾತ ವಿಜ್ಞಾನಿ, ಇಸ್ರೋದ ಮಾಜಿ ಅಧ್ಯಕ್ಷ ಪದ್ಮ ವಿಭೂಷಣ ಡಾ.ಕೆ.ಕಸ್ತೂರಿರಂಗನ್ ಅವರು ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಮೆನಿ ವರ್ಲ್ಡ್ಸ್ ಆಫ್ ಬ್ರಿಗೇಡ್ ಗ್ರೂಪ್ ಎಂಬ ಹೆಸರನ್ನು ಸ್ಮರಣಿಕೆಗೆ ನೀಡಿರುವುದು ಸೂಕ್ತವೆನಿಸಿದೆ ಎಂದು ಸಂತಸ ವ್ಯಕ್ತಪಡಿಸಿದರು.

Brigade Group
ಈ ಪುಸ್ತಕ ಬ್ರಿಗೇಡ್ ಸಂಸ್ಥೆಯ ಸಾಧನೆಗಳನ್ನು ಎಳೆಎಳೆಯಾಗಿ ಬಿಡಿಸಿಡುತ್ತದೆ ಎಂದೂ ಹೇಳಿದರು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಸಂಸ್ಥೆಯ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಎಂ.ಆರ್.ಜೈಶಂಕರ್, ಇದು ನಮಗೆ ಹೆಮ್ಮೆಯ ವಿಚಾರವಾಗಿದೆ. 28 ವರ್ಷಗಳ ಹಿಂದೆ ಒಂದು ಸಣ್ಣ ನಿವೇಶನದಲ್ಲಿ ಒಂದೇ ಒಂದು ಯೋಜನೆಯನ್ನು ಆರಂಭಿಸಿ ಇಂದು ಹತ್ತು ಹಲವಾರು ದೃಷ್ಟಿಕೋನಗಳೊಂದಿಗೆ ಹಲವು ಯೋಜನೆಗಳನ್ನು ಜಾರಿಗೆ ತಂದಿರುವುದು ಮತ್ತು ತರುತ್ತಿರುವುದನ್ನು ಮೆನಿ ವರ್ಲ್ಡ್ಸ್ ಆಫ್ ಬ್ರಿಗೇಡ್ ಹೇಳುತ್ತದೆ ಎಂದರು.

ದಿ ಕಾಫಿ ಟೇಬಲ್ ಬುಕ್ ಬ್ರಿಗೇಡ್ ಗ್ರೂಪ್‌ನ ಸಾಧನೆಯ ಹೆಜ್ಜೆಯನ್ನು ಮತ್ತು ದಾಖಲೆಗಳನ್ನು ಛಾಯಾಚಿತ್ರಗಳ ಸಹಿತ ಮಾಹಿತಿ ನೀಡುವ ಕಣಜವಾಗಿದೆ. ಬೆಂಗಳೂರಿನಲ್ಲಿ ನಗರೀಕರಣ ನಿರೀಕ್ಷೆಗೂ ಮೀರಿ ಬೆಳೆಯುತ್ತಿದ್ದು, ಇದಕ್ಕೆ ಪೂರಕವಾಗಿ ಕಟ್ಟಡಗಳ ನಿರ್ಮಾಣದಂತಹ ಸವಾಲು ಬೆಳೆಯುತ್ತಿದೆ. ಈ ಸವಾಲನ್ನು ಎದುರಿಸುವ ವಿಚಾರದಲ್ಲಿ ರಿಯಲ್ ಎಸ್ಟೇಟ್ ಉದ್ಯಮ ಪ್ರಮುಖ ಪಾತ್ರ ವಹಿಸುತ್ತಿದೆ.

ಇಂತಹ ರಿಯಲ್ ಎಸ್ಟೇಟ್ ಉದ್ಯಮಗಳಲ್ಲಿ ಬ್ರಿಗೇಡ್ ಗ್ರೂಪ್ ಅತ್ಯುತ್ತಮ ಸಂಸ್ಥೆಯಾಗಿ ಹೊರಹೊಮ್ಮಿದ್ದು, ಬೆಂಗಳೂರು ನಗರದಲ್ಲಿ ನಾಗರಿಕ ಮೂಲಭೂತ ಸೌಲಭ್ಯ ಅಭಿವೃದ್ಧಿಯಲ್ಲಿ ಗಮನಾರ್ಹ ಸಾಧನೆ ಮಾಡಿದೆ ಎಂದು ಕಸ್ತೂರಿರಂಗನ್ ಮೆಚ್ಚುಗೆ ವ್ಯಕ್ತಪಡಿಸಿದರು.

ಬ್ರಿಗೇಡ್ ನಿರ್ಮಿಸಿರುವ ಅಪಾರ್ಟ್‌ಮೆಂಟ್‌ಗಳು, ಮಾಲ್‌ಗಳು, ಕಚೇರಿಗಳು, ಕ್ಲಬ್, ಸೇವಾ ವಸತಿ ಸಂಕಿರಣಗಳು, ಶಾಲೆಗಳು, ಸಮುದಾಯ ಕೇಂದ್ರಗಳು, ಹೊಟೇಲ್‌ಗಳು ಸಂಸ್ಥೆಯ ಕಾರ್ಯಕ್ಷಮತೆಗೆ ಹಿಡಿದ ಕನ್ನಡಿಯಾಗಿವೆ ಎಂದು ತಿಳಿಸಿದ ಕಸ್ತೂರಿ ರಂಗನ್ ಅವರು, ಇದು ಕೇವಲ ಅತ್ಯುತ್ತಮ ಗುಣಮಟ್ಟದಿಂದ ಕೂಡಿದ, ಅತ್ಯುತ್ತಮ ವಾತಾವರಣದಲ್ಲಿ ನಿರ್ಮಾಣವಾ ಕಟ್ಟಡಗಳಲ್ಲ. ಇವುಗಳ ಜತೆಗೆ ಸಾಂಸ್ಕೃತಿಕ ಮತ್ತು ಸಾಮಾಜಿಕ ಸಂಸ್ಕೃತಿಯನ್ನು ಬಿಂಬಿಸುತ್ತವೆ ಎಂದರು.

ಭಾರತದ ಅತ್ಯುತ್ತಮ ರಿಯಲ್ ಎಸ್ಟೇಟ್ ಕಂಪನಿಗಳಲ್ಲಿ ಒಂದಾದ ಬ್ರಿಗೇಡ್ ಗ್ರೂಪ್ ಕಳೆದ 28 ವರ್ಷಗಳಲ್ಲಿ ದಕ್ಷಿಣ ಭಾರತದ ನಗರಗಳಲ್ಲಿ ವಸತಿ, ಕಚೇರಿ, ರಿಟೇಲ್, ಹೊಟೇಲ್, ಶಿಕ್ಷಣ ಸಂಸ್ಥೆಗಳ ಕಟ್ಟಡಗಳು ಸೇರಿದಂತೆ ಹತ್ತು ಹಲವಾರು ಬಗೆಯ ಕಟ್ಟಡಗಳನ್ನು ನಿರ್ಮಿಸುತ್ತಾ ಬಂದಿದೆ. ಇದುವರೆಗೆ 100ಕ್ಕೂ ಹೆಚ್ಚು ಕಟ್ಟಡಗಳನ್ನು 20 ದಶಲಕ್ಷ ಚದರಡಿಯಲ್ಲಿ ನಿರ್ಮಾಣ ಮಾಡಿದ್ದು, ಮುಂದಿನ 5 ವರ್ಷದಲ್ಲಿ 30 ದಶಲಕ್ಷ ಚದರಡಿಯಲ್ಲಿ ನಿರ್ಮಾಣ ಮಾಡುವ ಗುರಿ ಹೊಂದಿದೆ. (ಒನ್ಇಂಡಿಯಾ ಬಿಜಿನೆಸ್ ಡೆಸ್ಕ್)

English summary
Bangalore-based real estate major Brigade Group has completed 28 years and to commemorate the occasion the group has released The Many Worlds of Brigade, a coffee Table book on the journey of Brigade Group.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X