ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬ್ರಿಗೇಡ್ ಗ್ರೂಪ್ ತ್ರೈಮಾಸಿಕ ಆದಾಯದಲ್ಲಿ ಭಾರಿ ಪ್ರಗತಿ

By Rajendra
|
Google Oneindia Kannada News

ಬೆಂಗಳೂರು, ಫೆ.9: ಬೆಂಗಳೂರು ಮೂಲದ ರಿಯಲ್ ಎಸ್ಟೇಟ್ ದಿಗ್ಗಜ ಬ್ರಿಗೇಡ್ ಎಂಟರ್ ಪ್ರೈಸಸ್ ಲಿಮಿಟೆಡ್ ಸಂಚಿತ ಮಾರಾಟವು 2014-15ನೇ ವಿತ್ತೀಯ ವರ್ಷದ ಮೂರನೇ ತ್ರೈಮಾಸಿಕದಲ್ಲಿ ಶೇ.109ರಷ್ಟು ಪ್ರಗತಿ ದಾಖಲಿಸಿದ್ದು, 4,116 ದಶಲಕ್ಷ ರುಪಾಯಿ ಮೊತ್ತಕ್ಕೇರಿದೆ.

ಕಳೆದ ವಿತ್ತೀಯ ವರ್ಷದ ಇದೇ ಅವಧಿಯಲ್ಲಿ ಸಂಚಿತ ಮಾರಾಟವು 1,970 ದಶಲಕ್ಷ ರುಪಾಯಿಯಾಗಿತ್ತು. ಬ್ರಿಗೇಡ್ ಎಂಟರ್ ಪ್ರೈಸಸ್ ಲಿಮಿಟೆಡ್‍ ನಿರ್ದೇಶಕರ ಮಂಡಳಿಯು ಜನವರಿ 31ರಂದು ಸಭೆ ಸೇರಿ, 2014-15ರ 3ನೇ ತ್ರೈಮಾಸಿಕದ ಆರ್ಥಿಕ ಫಲಿತಾಂಶವನ್ನು ಅಂಗೀಕರಿಸಿದ್ದಾರೆ.

ಕಂಪನಿಯ ಈ ಸಾಧನೆ ಬಗ್ಗೆ ಮಾತನಾಡಿದ ಬ್ರಿಗೇಡ್ ಎಂಟರ್ ಪ್ರೈಸಸ್ ಲಿಮಿಟೆಡ್‍ ಮುಖ್ಯಸ್ಥ ಮತ್ತು ವ್ಯವಸ್ಥಾಪಕ ನಿರ್ದೇಶಕ ಎಂ.ಆರ್. ಜೈಶಂಕರ್, ಮೂರನೇ ತ್ರೈಮಾಸಿಕದಲ್ಲಿ ಸಂಚಿತ ಆಧಾರದಲ್ಲಿ ಆದಾಯ ಮತ್ತು ಲಾಭ ಹೆಚ್ಚಾಗುವಲ್ಲಿ ವಸತಿ ವಲಯ ಪ್ರಮುಖ ಕೊಡುಗೆ ನೀಡಿದೆ ಎಂದರು. ಜತೆಗೆ, ವೈಟ್ ಫೀಲ್ಡ್ ನಲ್ಲಿರುವ- ಬ್ರಿಗೇಡ್ ಕಾಸ್ಮೋಪೊಲಿಸ್ ನಲ್ಲಿ ಬುಕಿಂಗ್ ನಲ್ಲಿ ಹಾಗೂ ಕಂಪನಿಯ ಅಭಿವೃದ್ಧಿಯಲ್ಲಿ ಹೆಚ್ಚಿನ ಪ್ರಗತಿಯಾಗಿದ್ದು, ಅಧಿಕ ಆದಾಯದ ವಲಯ ಎಂದೂ ಗುರುತಿಸಲ್ಪಟ್ಟಿದೆ ಎಂದೂ ಹೇಳಿದರು.

"ಕಳೆದ ಹಣಕಾಸು ವರ್ಷದ ಇದೇ ಅವಧಿಗೆ ಹೋಲಿಸಿದರೆ ಪ್ರಸಕ್ತ ವರ್ಷದ ಮೂರನೇ ತ್ರೈಮಾಸಿಕದಲ್ಲಿ ನಮ್ಮ ವಹಿವಾಟು ದುಪ್ಪಟ್ಟಾಗಿದೆ. ಕೇವಲ 9 ತಿಂಗಳಲ್ಲಿ ಅಂದರೆ 2014ರ ಡಿಸೆಂಬರ್ 31ರ ವೇಳೆಗೆ ನಾವು ಕಳೆದ ವರ್ಷದ ವಹಿವಾಟಿನ ಮೊತ್ತವನ್ನು ಮೀರಿದ್ದೆವು. ಕಳೆದ ವಿತ್ತೀಯ ವರ್ಷದಲ್ಲಿ ನಾವು ಈವರೆಗೆ ಶೇ.75ರಷ್ಟು ಪ್ರಗತಿ ಸಾಧಿಸಿದ್ದೇವೆ'' ಎಂದೂ ಅವರು ನುಡಿದರು.

brigade-enterprises-ltd-s-revenues-see-109-pc-growth-q3

ಕಳೆದ ತ್ರೈಮಾಸಿಕಕ್ಕೆ ಹೋಲಿಸಿದರೆ ಈ ಬಾರಿ ಹೊಸ ಕಂಪನಿ ಕಾಯ್ದೆಯ ಹಿನ್ನೆಲೆಯಲ್ಲಿ ಹೆಚ್ಚಿನ ಮೌಲ್ಯತಗ್ಗುವಿಕೆ ಆಗಿದ್ದರೂ ಲಾಭದಲ್ಲಿ ಭಾರೀ ಪ್ರಗತಿ ಸಾಧಿಸಿದ್ದೇವೆ ಎಂದೂ ಅವರು ಹೇಳಿದರು. 2014ರ ಡಿಸೆಂಬರ್ 31ಕ್ಕೆ ಅಂತ್ಯವಾದ 3ನೇ ತ್ರೈಮಾಸಿಕದಲ್ಲಿ ಕಂಪನಿಯು ಒಟ್ಟು 4,116 ದಶಲಕ್ಷ ಆದಾಯವನ್ನು ಗಳಿಸಿದೆ. ಅಂದರೆ ಕಳೆದ ತ್ರೈಮಾಸಿಕಕ್ಕಿಂತ ಶೇ.12ರಷ್ಟು ಹೆಚ್ಚು ಆದಾಯ.

ಅಷ್ಟೇ ಅಲ್ಲದೆ, ಸದ್ಯಕ್ಕೆ ನಡೆಯುತ್ತಿರುವ ರಿಯಲ್ ಎಸ್ಟೇಟ್ ಯೋಜನೆಗಳ ಮಾರಾಟವಾದ ಯುನಿಟ್ ಗಳ ಗುರುತಿಸದ ಆದಾಯವು ಸುಮಾರು 19,000 ದಶಲಕ್ಷ ರುಪಾಯಿಯಾಗಿದ್ದು, ಮುಂದಿನ ತ್ರೈಮಾಸಿಕಗಳಲ್ಲಿ ಇದು ಪ್ರತಿಫಲಿಸಲಿದೆ.

ಬಿಜೋ ಕುರಿಯನ್ ಅವರನ್ನು ಕಂಪನಿಯ ಸ್ವತಂತ್ರ ನಿರ್ದೇಶಕರಾಗಿ ಸೇರ್ಪಡೆ ಮಾಡಲಾಗಿದೆ. ಇವರು ಜೆಮ್ ಶೆಡ್ ಪುರದ ಎಕ್ಸ್‍ಎಲ್‍ಆರ್‍ಐನಲ್ಲಿ ಬಿಜಿನೆಸ್ ಮ್ಯಾನೇಜ್ ಮೆಂಟ್ ಪದವಿ ಪಡೆದವರು. ಅಲ್ಲದೆ, ಕಳೆದ 33 ವರ್ಷಗಳಿಂದ ಭಾರತದಲ್ಲಿ ವೇಗವಾಗಿ ಬೆಳೆಯುತ್ತಿರುವ ಗ್ರಹೋಪಯೋಗಿ ವಸ್ತುಗಳು, ಗ್ರಾಹಕ ಬಾಳಿಕೆ ವಸ್ತುಗಳು ಮತ್ತು ರಿಟೇಲ್ ಇಂಡಸ್ಟ್ರಿಯಲ್ಲಿ ಮಾರ್ಕ್ವೀ ಬ್ರ್ಯಾಂಡ್ ಗಳೊಂದಿಗೆ ನಿಕಟ ಸಂಬಂಧ ಹೊಂದಿದವರು.

ಪ್ರಸಕ್ತ ತ್ರೈಮಾಸಿಕದ ಪ್ರಮುಖ ಬೆಳವಣಿಗೆಗಳು
ಉತ್ತರ ಬೆಂಗಳೂರಿನಲ್ಲಿ 0.6 ದಶಲಕ್ಷ ಚದರ ಅಡಿ ಪ್ರದೇಶದಲ್ಲಿ ಬ್ರಿಗೇಡ್ ನಾರ್ತ್ ರಿಡ್ಜ್ ಮತ್ತು ಮೈಸೂರಿನಲ್ಲಿ 0.4 ದಶಲಕ್ಷ ಚದರ ಅಡಿ ಪ್ರದೇಶದಲ್ಲಿ ಬ್ರಿಗೇಡ್ ಮೌಂಟನ್ ವ್ಯೂ ಎಂಬ ವಸತಿ ಪ್ರದೇಶವನ್ನು ಅನಾವರಣ ಮಾಡಲಾಗಿದೆ.

*ಸರಿ ಸುಮಾರು 0.55 ದಶಲಕ್ಷ ಚದರ ಅಡಿ ಪ್ರದೇಶದಲ್ಲಿ ಬ್ರಿಗೇಡ್ ಗೋಲ್ಡನ್ ಟ್ರೈಯಾಂಗಲ್ ಸಿಗ್ನೇಚರ್ ಟವರ್ ಎಂಬ ವಾಣಿಜ್ಯ ಪ್ರದೇಶವನ್ನು ಅನಾವರಣಗೊಳಿಸಲಾಗಿದೆ.

*ಗ್ರೇಟ್ ಆನ್ ಲೈನ್ ಶಾಪಿಂಗ್ ಫೆಸ್ಟಿವಲ್(ಜಿಒಎಸ್‍ಎಫ್) ಜತೆಗೆ ಗ್ರಾಹಕರಿಗೆ ಆನ್‍ಲೈನ್ ಬುಕಿಂಗ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.

*ಗ್ರಾಹಕ ಪೋರ್ಟಲ್ ಅನ್ನು ಆರಂಭಿಸಲಾಗಿದೆ. ಬೆಂಗಳೂರಿನ ಡೆವಲಪರ್ ವೊಂದು ಆರಂಭಿಸುತ್ತಿರುವ ಮೊದಲ ಪೋರ್ಟಲ್ ಇದಾಗಿದೆ. ಇದರ ಮೂಲಕ ವಸತಿ ಖರೀದಿಸುವವರು ಅವರು ಖರೀದಿಸಿದ ಮನೆಯ ಎಲ್ಲ ವಿವರಗಳನ್ನೂ ಪಡೆದುಕೊಳ್ಳಬಹುದು.

*ಕಂಪನಿಯ ಎರಡು ಲಕ್ಸುರಿ ಯೋಜನೆಗಳಾದ ಬ್ರಿಗೇಡ್ ನಾರ್ತ್ ರಿಡ್ಜ್ ಮತ್ತು ಬ್ರಿಗೇಡ್ ಮೀಡೋಸ್‍ನ ವಿಸ್ಟೀರಿಯಾದಲ್ಲಿ ಕ್ರಾಂತಿಕಾರಕ ಸ್ಲೈಸ್ ವ್ಯೂ ತಂತ್ರಜ್ಞಾನದ ಮೂಲಕ ಆನ್ ಲೈನ್ ನಲ್ಲಿ ಮನೆಗಳನ್ನು ಮಾರಾಟ ಮಾಡುವ ಉದ್ದೇಶದಿಂದ ಹೌಸಿಂಗ್.ಕಾಮ್ ನೊಂದಿಗೆ ಪಾಲುದಾರಿಕೆ ಮಾಡಿಕೊಳ್ಳಲಾಗಿದೆ. (ಒನ್ಇಂಡಿಯಾ ಬಿಜಿನೆಸ್)

English summary
Brigade Enterprises Ltd's consolidated sales for the third quarter of the financial year 2014-15 has shown a 109% growth to Rs 4,116 million, up from Rs 1,970 million recorded during the same quarter of the previous fiscal.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X