ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾರ್ಚ್‌ 2021ರ ವೇಳೆಗೆ BPCL ಖಾಸಗೀಕರಣ: 1,000 ಹೊಸ ಬಂಕ್‌ಗಳ ಸ್ಥಾಪನೆ

|
Google Oneindia Kannada News

ನವದೆಹಲಿ, ಆಗಸ್ಟ್‌ 14: ಸರ್ಕಾರಿ ಸ್ವಾಮ್ಯದ ತೈಲ ಕಂಪನಿಯಾದ ಭಾರತ್ ಪೆಟ್ರೋಲಿಯಂ ಕಾರ್ಪ್ ಲಿಮಿಟೆಡ್ (ಬಿಪಿಸಿಎಲ್) ಅನ್ನು ಖಾಸಗೀಕರಣಗೊಳಿಸುವ ಪ್ರಕ್ರಿಯೆ ಭರದಿಂದ ಸಾಗಿದ್ದು, 2021 ಮಾರ್ಚ್ ಒಳಗೆ ಖಾಸಗೀಕರಣ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದು ರಾಯಿಟರ್ಸ್ ವರದಿ ಮಾಡಿದೆ.

ಕಂಪನಿಯ ಕಾರ್ಯನಿರ್ವಾಹಕರನ್ನು ಉಲ್ಲೇಖಿಸಿ 2021 ಹಣಕಾಸು ವರ್ಷದಲ್ಲಿ ಗುರಿಯನ್ನು ಈ ಹಿಂದೆ 12,500 ಕೋಟಿಯಿಂದ 8,000 ಕೋಟಿಗೆ ಇಳಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಜೂನ್ ತ್ರೈಮಾಸಿಕದಲ್ಲಿ ಕಂಪನಿಯ ಏಕೀಕೃತ ನಿವ್ವಳ ಲಾಭ ಶೇ. 21.6ರಷ್ಟು ಏರಿಕೆಯಾಗಿದ್ದು, 2,187.74 ಕೋಟಿ ರೂಪಾಯಿ ಲಾಭವಾಗಿದೆ. ಆದರೂ ಕೋವಿಡ್ -19 ಪರಿಣಾಮ ಮತ್ತು ನಂತರದ ಲಾಕ್‌ಡೌನ್ ತನ್ನ ವ್ಯವಹಾರದ ಮೇಲೆ ಪರಿಣಾಮ ಬೀರಿದೆ ಎಂದು ಕಂಪನಿ ಹೇಳಿದೆ. ಕಚ್ಚಾ ತೈಲ ಮತ್ತು ಪೆಟ್ರೋಲಿಯಂ ಉತ್ಪನ್ನಗಳಿಗೆ ಕಡಿಮೆ ಬೇಡಿಕೆಯು ಬೆಲೆಗಳ ಮೇಲೆ ಪರಿಣಾಮ ಬೀರಿದೆ ಮತ್ತು ಜಾಗತಿಕವಾಗಿ ಅಂಚುಗಳನ್ನು ಪರಿಷ್ಕರಿಸಿದೆ ಎಂದು ಅದು ಹೇಳಿದೆ.

BPCL Privatisation Likely To Be Completed By March

ಪ್ರಸಕ್ತ ಹಣಕಾಸು ವರ್ಷದಲ್ಲಿ 1,000ಕ್ಕೂ ಹೆಚ್ಚು ಬಂಕ್‌ಗಳನ್ನು ಹೊಸದಾಗಿ ತೆರೆಯಲು ಬಿಪಿಸಿಎಲ್‌ ಯೋಜಿಸಿದೆ.

English summary
PSU oil marketing major Bharat Petroleum Corp Ltd (BPCL) expects that its privatisation procedure will take place by March 2021, Reuters reported citing a company official
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X