ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೀನೀ ಸರಕು ಬಹಿಷ್ಕರಿಸಿದರೆ ಭಾರತಕ್ಕೇ ಹೆಚ್ಚು ಹೊಡೆತ!

ಭಾರತ- ಚೀನಾ ನಡುವೆ ಗಡಿ ವಿವಾದ ಭುಗಿಲೆದ್ದ ಹಿನ್ನೆಲೆ. ಭಾರತದಲ್ಲಿ ಚೀನಾ ಸರಕುಗಳ ಮಾರಾಟ ಬಹಿಷ್ಕಾರಕ್ಕೆ ಎದ್ದ ಕೂಗು. ಚೀನೀ ಸರಕು ನಿಷೇಧದಿಂದ ಯಾವುದೇ ಪ್ರಯೋಜನವಿಲ್ಲ ಎನ್ನುವ ಆರ್ಥಿಕ ತಜ್ಞರು.

|
Google Oneindia Kannada News

ಭಾರತ ಹಾಗೂ ಚೀನಾ ಗಡಿ ಭಾಗದಲ್ಲಿ ಉಭಯ ದೇಶಗಳ ನಡುವೆ ಯುದ್ಧದ ಭೀತಿ ಆವರಿಸಿದೆ. ಯಾವುದೇ ಕ್ಷಣದಲ್ಲಿ ಚೀನಾ ದೇಶವು ಭಾರತದ ಮೇಲೆ ಯುದ್ಧ ಸಾರುವ ಆತಂಕ ಸೃಷ್ಟಿಯಾಗಿದೆ.

ಈ ಬೆಳವಣಿಗೆ ಬೆನ್ನಲ್ಲೇ ಭಾರತದಲ್ಲಿ ಮಾರಾಟವಾಗುತ್ತಿರುವ ಚೀನಾದ ಸರಕುಗಳನ್ನು ಭಾರತೀಯರು ಬಹಿಷ್ಕರಿಸಿದರೆ ಚೀನಾಕ್ಕೆ ತಕ್ಕ ಪಾಠ ಕಲಿಸಿದಂತಾಗುತ್ತದೆ ಎಂಬ ಕೂಗೂ ಕೇಳಿಬರುತ್ತಿದೆ.

ರಾಹುಲ್, ಚೀನಾ ರಾಯಭಾರಿ ಭೇಟಿ: ಬಹಿರಂಗವಾಯ್ತು 'ಕೈ' ಜಗನ್ನಾಟಕ!ರಾಹುಲ್, ಚೀನಾ ರಾಯಭಾರಿ ಭೇಟಿ: ಬಹಿರಂಗವಾಯ್ತು 'ಕೈ' ಜಗನ್ನಾಟಕ!

ಆದರೆ, ವಾಸ್ತವದಲ್ಲಿ ಇದು ಹಾಗೆ ಆಗುವುದಿಲ್ಲ ಎನ್ನುತ್ತಾರೆ ಆರ್ಥಿಕ ತಜ್ಞರು. ಆದರೆ, ಮತ್ತೂ ಕೆಲವು ಆರ್ಥಿಕ ತಜ್ಞರ ಪ್ರಕಾರ, ಇಂದು ನಾವು ಚೀನೀ ಸರಕುಗಳನ್ನು ಬಹಿಷ್ಕರಿಸಿದರೆ, ಈಗಲ್ಲದಿದ್ದರೂ ಮುಂದೊಂದು ದಿನ ಚೀನಾದ ಆರ್ಥಿಕತೆಗೆ ಭಾರತದ ಈ ನಿರ್ಧಾರ ಪೆಟ್ಟು ಕೊಡುವುದಂತೂ ನಿಶ್ಚಿತ ಎಂದು ಹೇಳುತ್ತಿದ್ದಾರೆ.

ಹಾಗಾದರೆ, ಇದರಲ್ಲಿ ಯಾವುದು ಸತ್ಯ? ಚೀನೀ ಸರಕುಗಳ ಬಹಿಷ್ಕಾರದಿಂದ ಭಾರತಕ್ಕೆ ಆಗುವ ಲಾಭ ನಷ್ಟಗಳೇನು ಎಂಬಿತ್ಯಾದಿ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.

ಟ್ವಿಟರ್ ನಲ್ಲಿ ಪ್ರಧಾನಿ ಮೋದಿಯನ್ನು ಕುಟುಕಿದ ರಮ್ಯಾಟ್ವಿಟರ್ ನಲ್ಲಿ ಪ್ರಧಾನಿ ಮೋದಿಯನ್ನು ಕುಟುಕಿದ ರಮ್ಯಾ

ಚೀನಾ ಸರಕುಗಳಿಂದ ನಮಗೇ ಹೆಚ್ಚು ಲಾಭ

ಚೀನಾ ಸರಕುಗಳಿಂದ ನಮಗೇ ಹೆಚ್ಚು ಲಾಭ

ಚೀನಾ ದೇಶದ ಸರಕುಗಳನ್ನು ಭಾರತೀಯ ಮಾರುಕಟ್ಟೆಯಿಂದ ನಿಷೇಧಿಸಿದರೆ ಅದು ಚೀನಾಕ್ಕಿಂತ ಹೆಚ್ಚಾಗಿ ಭಾರತೀಯ ಹಣಕಾಸು ಪರಿಸ್ಥಿತಿಯ ಮೇಲೆ ದುಷ್ಪರಿಣಾಮ ಬೀರುತ್ತದೆ. ಏಕೆಂದರೆ, ಭಾರತದ ಒಟ್ಟಾರೆ ಆರ್ಥಿಕ ವ್ಯವಹಾರಗಳಲ್ಲಿ ಚೀನಾದಿಂದ ಆಮದಾಗುವ ಸರಕುಗಳಿಂದ ಬರುವ ಪಾಲು ಸಾಕಷ್ಟಿದೆ. ಹಾಗಾಗಿ, ಚೀನಾದ ಸಾಮಗ್ರಿಗಳನ್ನು ಬಹಿಷ್ಕರಿಸಿದೆ ನಮಗೇ ಹೆಚ್ಚು ನಷ್ಟ ಎನ್ನುತ್ತಿದ್ದಾರೆ ಆರ್ಥಿಕ ತಜ್ಞರು.

ಭಾರತದ ರಫ್ತು ಪ್ರಮಾಣ ಆಶಾದಾಯಕವಾಗಿಲ್ಲ!

ಭಾರತದ ರಫ್ತು ಪ್ರಮಾಣ ಆಶಾದಾಯಕವಾಗಿಲ್ಲ!

ಚೀನಾದಿಂದ ಆಮದಾಗುವ ಸರಕುಗಳ ವಹಿವಾಟು, 3 ಲಕ್ಷದ 70 ಸಾವಿರ ಕೋಟಿ ರು. ಮೌಲ್ಯವನ್ನು ದಾಟಿದೆ. ಇದು ಕಳೆದ ವರ್ಷಕ್ಕೆ ಹೋಲಿಸಿದರೆ, ಶೇ.0.2ರಷ್ಟು ಏರಿಕೆ ಎಂದು ಹೇಳಲಾಗಿದೆ. ಆದರೆ, ಚೀನಾಕ್ಕೆ ಭಾರತ ರಫ್ತು ಮಾಡುವ ವ್ಯವಹಾರದಲ್ಲಿ ಶೇ. 12ರಷ್ಟು ಕುಸಿತ ಕಂಡಿದೆ. ಭಾರತವು ಚೀನಾಕ್ಕೆ ರಫ್ತು ಮಾಡುವ ಸರಕುಗಳ ಒಟ್ಟಾರೆ ವಹಿವಾಟು ಈಗ ಬರೀ 76 ಸಾವಿರ ಕೋಟಿ ರು. ಇದೆ. ಹಾಗಾಗಿ, ಚೀನೀ ಸರಕುಗಳ ನಿಷೇಧವು ನಮಗೆ ನೀಡುವ ಹೊಡೆತವೇ ಹೆಚ್ಚು.

ಶೇ. 2ರಷ್ಟು ಮಾತ್ರ ಭಾರತದಲ್ಲಿ ಆ ದೇಶದ ವಹಿವಾಟು!

ಶೇ. 2ರಷ್ಟು ಮಾತ್ರ ಭಾರತದಲ್ಲಿ ಆ ದೇಶದ ವಹಿವಾಟು!

ಹೋಗಲಿ ಬಿಡಿ. ಆ ದೇಶದಿಂದ ಯಾವುದೇ ಆದಾಯ ಬೇಡ. ನಾವು ಚೀನಾ ಸರಕುಗಳನ್ನು ಬಹಿಷ್ಕರಿಸೋಣ. ಆ ದೇಶಕ್ಕೆ ಬಿಸಿ ಮುಟ್ಟಿಸೋಣ ಎಂದೆಣಿಸಿದರೂ, ಅದೂ ಪರಿಣಾಮ ಬೀರದ ವಿಚಾರ. ಏಕೆಂದರೆ, ಜಾಗತಿಕ ಮಟ್ಟದಲ್ಲಿ ಚೀನಾ ಕಂಪನಿಗಳು ನಡೆಸುತ್ತಿರುವ ಒಟ್ಟಾರೆ ವ್ಯವಹಾರಗಳಲ್ಲಿ ಭಾರತದಲ್ಲಿ ನಡೆಯುತ್ತಿರುವ ಶೇ. 2ರಷ್ಟು ವ್ಯವಹಾರ ಮಾತ್ರ. ಹಾಗಾಗಿ, ನಾವು ಆ ದೇಶದ ಸರಕುಗಳನ್ನು ಬಹಿಷ್ಕರಿಸಿದರೆ ಆ ದೇಶದ ಆರ್ಥಿಕತೆಗೆ ಅಂಥಾ ಬಿಸಿ ತಟ್ಟುವುದೇ ಇಲ್ಲ ಎನ್ನುತ್ತಾರೆ ಪಂಡಿತರು.

ದೀರ್ಘಕಾಲದಲ್ಲಿ ತೊಡಕಾಗಲಿದೆ!

ದೀರ್ಘಕಾಲದಲ್ಲಿ ತೊಡಕಾಗಲಿದೆ!

ಆದರೆ, ಇಲ್ಲೂ ಒಂದು ಆಶಾಕಿರಣವಿದೆ. ಏಷ್ಯಾ ಮಟ್ಟದಲ್ಲಿ ಚೀನಾ ದೇಶ ಸೂಪರ್ ಪವರ್ ಆಗುತ್ತಾ ಬೆಳೆಯುತ್ತಿರುವುದರಿಂದ ಹಾಗೂ ಆ ದೇಶದ ಎಲೆಕ್ಟ್ರಾನಿಕ್ ಪರಿಕರಗಳಿಗೆ ಭಾರತದಲ್ಲಿ ಒಳ್ಳೇ ಮಾರುಕಟ್ಟೆ ಇರುವುದರಿಂದ ಈಗ ನಾವು ಚೀನೀ ಸರಕುಗಳನ್ನು ನಿಷೇಧಿಸಿದರೆ ಸದ್ಯಕ್ಕಲ್ಲದಿದ್ದರೂ ಮುಂಬರುವ ವರ್ಷಗಳಲ್ಲಿ ಆ ದೇಶಕ್ಕೆ ತೊಡಕಾಗಿ ಪರಿಣಮಿಸುತ್ತದೆ.

ಪಾಶ್ಚಿಮಾತ್ಯ ಕಂಪನಿಗಳು ಕೈತಪ್ಪುವ ನಿರೀಕ್ಷೆ

ಪಾಶ್ಚಿಮಾತ್ಯ ಕಂಪನಿಗಳು ಕೈತಪ್ಪುವ ನಿರೀಕ್ಷೆ

ಭಾರತದ ಮಾರುಕಟ್ಟೆ ಕೈ ತಪ್ಪಿದರೆ ಅದು ದಕ್ಷಿಣ ಏಷ್ಯಾ ಹಾಗೂ ಆಫ್ರಿಕಾದ ಇತರ ದೇಶಗಳಲ್ಲಿ ತನಗೆ ಹೊಂದಿಕೊಳ್ಳಬಹುದಾದ ಹೊಸ ಮಾರುಕಟ್ಟೆ ದೇಶಗಳನ್ನು ಹುಡುಕಲು ಅದು ಆರಂಭಿಸಬಹುದು. ಆದರೆ, ಎಲ್ಲೂ ಆ ದೇಶಕ್ಕೆ ಭಾರತದಂಥ ಅಧಿಕ ಗ್ರಾಹಕರು ಸಿಗುವುದು ಕಷ್ಟ. ಇದಲ್ಲದೆ, ಚೀನಾದಲ್ಲಿ ತಮ್ಮದೊಂದು ಶಾಖೆ ತೆರೆದು ಅಲ್ಲಿ ತಮ್ಮ ಸರಕುಗಳನ್ನು ಉತ್ಪಾದಿಸಿ, ಭಾರತ ಸೇರಿದಂತೆ ದಕ್ಷಿಣ ಏಷ್ಯಾ ರಾಷ್ಟ್ರಗಳಿಗೆ ರಫ್ತು ಮಾಡುತ್ತಿರುವ ಪಾಶ್ಚಿಮಾತ್ಯ ಕಂಪನಿಗಳಿಗೆ ಇದು ಹೊಡೆತ ಬೀಳುತ್ತದೆ. ಹಾಗಾಗಿ, ಆ ಎಲ್ಲಾ ಕಂಪನಿಗಳಿಗೆ ಭಾರತದಲ್ಲೇ ತಮ್ಮ ಉತ್ಪಾದನಾ ಘಟಕಗಳನ್ನು ತೆರೆಯುವುದು ಅನಿವಾರ್ಯವಾಗುತ್ತದೆ. ಇದು ದೀರ್ಘಕಾಲದಲ್ಲಿ ಚೀನಾದ ಆರ್ಥಿಕತೆಗೆ ಹೊಡೆತ ಬೀಳುವುದು ಗ್ಯಾರಂಟಿ.

English summary
In a mistaken belief, many Indians think boycotting Chinese goods will put pressure on China. On the contrary, it will harm India as India is dependent on Chinese imports.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X