ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಲೇಜು ವಿದ್ಯಾರ್ಥಿಗಳಿಗೆ ಬಾಷ್ ವಿದ್ಯಾಸಾರಥಿ ಸ್ಕಾಲರ್ ಶಿಪ್

|
Google Oneindia Kannada News

ಬೆಂಗಳೂರು, ಅಕ್ಟೋಬರ್ 13: ಭಾರತದಲ್ಲಿ ಶಿಕ್ಷಣ ಹಣಕಾಸಿಗೆ ಇರುವ ಅಂತರವನ್ನು ಹೋಗಲಾಡಿಸುವ ನಿಟ್ಟಿನಲ್ಲಿ, ಅಗ್ರಗಣ್ಯ ಇಂಜಿನಿಯರಿಂಗ್ ಮತ್ತು ಟೆಕ್ನಾಲಜಿ ಕಂಪನಿಯಾದ ಬಾಷ್ ಸ್ಥಾಪಿಸಿರುವ ಪ್ರಿಮಾವೆರಾ ಇಂಡಿಯಾ ಟ್ರಸ್ಟ್, ಎನ್‍ಎಸ್‍ಡಿಎಲ್ ಇ-ಆಡಳಿತದ ವಿದ್ಯಾಸಾರಥಿ ಸ್ಕಾಲರ್ ಶಿಪ್ ವೇದಿಕೆ ಜತೆ ಕೈಜೋಡಿಸಿದೆ. 11, 12, ಪೂರ್ಣಾವಧಿ ಡಿಪ್ಲೋಮಾ ಕೋರ್ಸ್, ಬಿಎ, ಬಿಕಾಂ, ಬಿಎಸ್ಸಿ/ ಬಿಇ/ಬಿ, ತಾಂತ್ರಿಕ ಕೋರ್ಸ್‍ಗಳಲ್ಲಿ ಕಲಿಯುತ್ತಿರುವ ಅರ್ಹ, ಸೌಲಭ್ಯ ವಂಚಿತ ವಿದ್ಯಾರ್ಥಿಗಳು ಇದೀಗ ಸುಲಭವಾಗಿ ವಿದ್ಯಾಸಾರಥಿ ಮೂಲಕ ಸ್ಕಾಲರ್ ಶಿಪ್ ಗೆ ಸುಲಭವಾಗಿ ಅರ್ಜಿ ಸಲ್ಲಿಸಬಹುದಾಗಿದೆ.

ಇಂಜಿನಿಯರಿಂಗ್, ಬಿಎಸ್ಸಿ ಮತ್ತು ಬಿಕಾಂ ಮತ್ತಿತರ ವಿಷಯಗಳಲ್ಲಿ ವ್ಯಾಸಂಗ ಮಾಡುತ್ತಿರುವ ಸಾವಿರಾರು ವಿದ್ಯಾರ್ಥಿಗಳು ವಿದ್ಯಾಸಾರಥಿ ಮೂಲಕ ಅರ್ಜಿ ಸಲ್ಲಿಸಿದ್ದು, ವಿದ್ಯಾರ್ಥಿ ಸಮುದಾಯದಿಂದ ಅದ್ಭುತ ಸ್ಪಂದನೆಯನ್ನು ಪಡೆದಿದೆ. ಹೊಸ ಸ್ಕಾಲರ್‍ಶಿಪ್ ಯೋಜನೆಯು ಯುವ ಉತ್ಸಾಹಕ್ಕೆ ಮತ್ತಷ್ಟು ಶಕ್ತಿ ತುಂಬಲಿದ್ದು, ಈ ವಿದ್ಯಾರ್ಥಿಗಳು ತಮ್ಮ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಲು ನೆರವಾಗಲಿದೆ.

ಸರ್ಕಾರಿ ಐಟಿಐನಲ್ಲಿ ಬಾಷ್ ನಿಂದ ಕೌಶಲ್ಯ ಕೇಂದ್ರ ಆರಂಭಸರ್ಕಾರಿ ಐಟಿಐನಲ್ಲಿ ಬಾಷ್ ನಿಂದ ಕೌಶಲ್ಯ ಕೇಂದ್ರ ಆರಂಭ

ಇದುವರೆಗೆ ವಿದ್ಯಾಸಾರಥಿ ಪೋರ್ಟೆಲ್‍ನಲ್ಲಿ 7.5 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ನೋಂದಾಯಿಕೊಂಡಿದ್ದು, 25ಕ್ಕೂ ಹೆಚ್ಚು ಕಾರ್ಪೊರೇಟ್ ಸಂಸ್ಥೆಗಳು ಸಹಭಾಗಿತ್ವ ಹೊಂದಿವೆ. ಈ ಕಾರ್ಪೊರೇಟ್ ಕಂಪನಿಗಳಲ್ಲಿ ಪ್ರಮುಖವಾದವುಗಳೆಂದರೆ ಟಾಟಾ ಹೌಸಿಂಗ್, ಟ್ರಾನ್ಸ್‍ಯೂನಿಯನ್ ಸಿಐಬಿಐಎಲ್, ಆಲ್‍ಕೆಮ್ ಲ್ಯಾಬೋರೇಟರೀಸ್, ಎಸಿಸಿ ಸಿಮೆಂಟ್, ಜೆಎಸ್‍ಡಬ್ಲ್ಯು ಫೌಂಡೇಷನ್, ಕ್ಲಾರಿಸ್ ಲೈಫ್. ಈ ಕಂಪನಿಗಳು ಈಗಾಗಲೇ ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವಾಗಲು ಸಹಯೋಗ ನೀಡಿವೆ.

Bosch’s Primavera India Trust joins Vidyasaarathi to offer scholarships for college students

ವಿದ್ಯಾಸಾರಥಿ ಎನ್ನುವುದು ಎನ್‍ಎಸ್‍ಡಿಎಲ್‍ನ ಇ- ಆಡಳಿತ ವಿಭಾಗದ ತಂತ್ರಜ್ಞಾನ ಚಾಲಿತ ಯೋಜನೆಯಾಗಿದ್ದು, ಇದು ದುರ್ಬಲ ವರ್ಗದ ವಿದ್ಯಾರ್ಥಿಗಳು ಹಲವು ಕಾರ್ಪೊರೇಟ್ ನೆರವಿನ ಸ್ಕಾಲರ್ ಶಿಪ್ ಮೂಲಕ ಹಣಕಾಸು ನೆರವನ್ನು ಪಡೆದುಕೊಳ್ಳಲು ನೆರವಾಗುತ್ತದೆ. ಇದು ಆನ್‍ಲೈನ್ ಪ್ಲಾಟ್‍ಫಾರಂ ಮೂಲಕ ದೇಶದಲ್ಲಿ ಶಿಕ್ಷಣ ಹಣಕಾಸು ಅಂತರವನ್ನು ಕಿರಿದುಗೊಳಿಸುವ ಗುರಿಯನ್ನು ಹೊಂದಿದೆ. ವಿದ್ಯಾರ್ಥಿಗಳು ವಿವಿಧ ಶಿಕ್ಷಣ ಹಣಕಾಸು ನೆರವಿನ ಯೋಜನೆಗಳನ್ನು ಹುಡುಕಿ ಅವುಗಳಿಗೆ ಅರ್ಜಿ ಸಲ್ಲಿಸಲು ಇದು ಅವಕಾಶ ಮಾಡಿಕೊಡಲಿದೆ. ನಿಧಿಗಳನ್ನು ನೀಡುವವರು, ಉದ್ಯಮಿಗಳು ಮತ್ತು ಕಾರ್ಪೊರೇಟ್ ಕಂಪನಿಗಳು ನೀಡುವ ನೆರವನ್ನು ಪಡೆಯಲು ಅವಕಾಶವಿದೆ. ವಿದ್ಯಾಸಾರಥಿ ಪೋರ್ಟೆಲ್‍ನಲ್ಲಿ ದಾಖಲಿಸಿರುವ ಸ್ಕಾಲರ್ ಶಿಪ್ ಯೋಜನೆಗಳ ಇನ್ನಷ್ಟು ವಿವರ ಪಡೆಯಬಹುದು ಎಂದು ಎನ್‍ಎಸ್‍ಡಿಎಲ್ ಇ- ಆಡಳಿತದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮತ್ತು ವ್ಯವಸ್ಥಾಪಕ ನಿರ್ದೇಶಕ ಗಗನ್ ರಾಯ್ ಹೇಳಿದರು.

English summary
Bosch, has announced its association with NSDL e-Governance’s Vidyasaarathi scholarship platform. Deserving yet underprivileged students pursuing Class XI, XII, Full-time Diploma courses, B.A., B.Com, B.Sc and B.E/B. Tech courses can now easily apply for scholarships through Vidyasaarathi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X