ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇ ಮೊಬಿಲಿಟಿಯತ್ತ ಬಾಷ್ ಆದಾಯ, ನಿವ್ವಳ ಲಾಭ ಕುಸಿತ

|
Google Oneindia Kannada News

ಬೆಂಗಳೂರು, ಮೇ 22: ತಂತ್ರಜ್ಞಾನ ಮತ್ತು ಸೇವೆಗಳ ಮುಂಚೂಣಿಯ ಪೂರೈಕೆದಾರ ಸಂಸ್ಥೆಯಾದ ಬಾಷ್ ಲಿಮಿಟೆಡ್ 2019-20ರ ಆರ್ಥಿಕ ವರ್ಷದಲ್ಲಿ 9,842 ಕೋಟಿ ರೂ.ಗಳ(1.25 ಬಿಲಿಯನ್ ಯೂರೋ) ಒಟ್ಟಾರೆ ಆದಾಯವನ್ನು ಕಾರ್ಯಾಚರಣೆಗಳಿಂದ ಗಳಿಸಿರುವುದಾಗಿ ಪ್ರಕಟಿಸಿದೆ. ಈ ಆದಾಯ ಕಳೆದ ವರ್ಷ ಇದೇ ಅವಧಿಗೆ ಹೋಲಿಸಿದರೆ ಶೇ.18.6 ರಷ್ಟು ಇಳಿಕೆಯಾಗಿದೆ.

ನಾಲ್ಕನೇ ತ್ರೈಮಾಸಿಕ ಅವಧಿಯಲ್ಲಿ ನಿವ್ವಳ ಲಾಭ ಶೇ 80ರಷ್ಟು ಕುಸಿತಗೊಂಡಿದ್ದು, 81.14 ಕೋಟಿ ರು ಬಂದಿದೆ. 2020 ರ ಮಾರ್ಚ್ 31 ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ ಕಾರ್ಯಾಚರಣೆಯ ಒಟ್ಟು ಆದಾಯದಲ್ಲಿ ಶೇ.18.1 ರಷ್ಟು ಕಡಿಮೆಯಾಗಿದೆ. ಇದು ಕಳೆದ ವರ್ಷದ ಇದೇ ಅವಧಿಗಿಂತ ಕಡಿಮೆಯಾಗಿದೆ.

ಬಾಷ್ ನಿಂದ ವಲಸೆ ಕಾಮಿರ್ಕರಿಗೆ ದಿನಸಿ ಪ್ಯಾಕೇಟ್, 50 ಕೋಟಿ ದೇಣಿಗೆ ಬಾಷ್ ನಿಂದ ವಲಸೆ ಕಾಮಿರ್ಕರಿಗೆ ದಿನಸಿ ಪ್ಯಾಕೇಟ್, 50 ಕೋಟಿ ದೇಣಿಗೆ

ಕಾರ್ಯಾಚರಣೆಗಳಿಂದ ಕಳೆದ ಸಾಲಿಗಿಂತ ಒಟ್ಟು ಆದಾಯದಲ್ಲಿ ಶೇ.29.9 ರಷ್ಟು ಕುಸಿತವಾಗಿದೆ. ಇನ್ನು ಒಟ್ಟು ಆದಾಯದ ತೆರಿಗೆಪೂರ್ವ ಲಾಭ(ಪಿಬಿಟಿ) 1636 ಕೋಟಿ ರೂ.ಗಳಾಗಿದೆ. 2019-20 ನೇ ಸಾಲಿನಲ್ಲಿ ಒಟ್ಟು ಆದಾಯದ ಪಿಬಿಟಿ ಶೇ.16.6 ರಷ್ಟು ದಾಖಲಾಗಿದೆ.

Bosch Q4 net profit down 80% at Rs 81.14 crore

ಈ ಬಗ್ಗೆ ಮಾತನಾಡಿದ ಬಾಷ್ ಲಿಮಿಟೆಡ್‍ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಬಾಷ್ ಗ್ರೂಪ್ ಇನ್ ಇಂಡಿಯಾದ ಅಧ್ಯಕ್ಷ ಸೌಮಿತ್ರ ಭಟ್ಟಾಚಾರ್ಯ ''ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಿರ್ದೇಶನಗಳನ್ನು ಪಾಲಿಸುವ ಹಿನ್ನೆಲೆಯಲ್ಲಿ ಬಾಷ್ ಲಿಮಿಟೆಡ್ ದೇಶದಲ್ಲಿ ಕ್ರಮೇಣವಾಗಿ ಉತ್ಪಾದನೆಯನ್ನು ಹೆಚ್ಚಿಸಿಕೊಳ್ಳುತ್ತಿದೆ. ನಾವು ಸಹವರ್ತಿಗಳ ಸುರಕ್ಷತೆಗೆ ಹಲವಾರು ಕ್ರಮಗಳನ್ನು ಕೈಗೊಂಡಿದ್ದೇವೆ. ಸುಸ್ಥಿರ ಮತ್ತು ಸ್ಥಿರವಾದ ಪೂರೈಕೆಯನ್ನು ನೀಡುವ ಮೂಲಕ ನಮ್ಮ ಗ್ರಾಹಕರಿಗೆ ಎಂದಿನಂತೆ ಸೇವೆಗಳನ್ನು ಒದಗಿಸಲು ಎಲ್ಲಾ ಅಗತ್ಯ ಪ್ರಯತ್ನಗಳನ್ನು ಮಾಡುತ್ತಿದ್ದೇವೆ'' ಎಂದರು.

ಆಡುಗೋಡಿಯಿಂದ ಬಿಡದಿಗೆ, ಬಾಷ್ ಹೊಸ ಘಟಕ ಉದ್ಘಾಟನೆ ಆಡುಗೋಡಿಯಿಂದ ಬಿಡದಿಗೆ, ಬಾಷ್ ಹೊಸ ಘಟಕ ಉದ್ಘಾಟನೆ

2019-20 ನೇ ಸಾಲಿನಲ್ಲಿ ಪಿಎಟಿ 650 ಕೋಟಿ ರೂಪಾಯಿಗಳಾಗಿದೆ. ನಮ್ಮ ಬಿಡದಿ ಘಟಕ ಮತ್ತು ಆಡುಗೋಡಿ ಕ್ಯಾಂಪಸ್‍ನ ವಿಸ್ತರಣೆಗೆಂದು 399 ಕೋಟಿ ರೂಪಾಯಿಗಳನ್ನು ವಿನಿಯೋಗ ಮಾಡಲಾಗಿದೆ.

2019-20 ನೇ ಹಣಕಾಸು ಸಾಲಿನಲ್ಲಿ ಬಾಷ್ ಲಿಮಿಟೆಡ್ ಹಲವಾರು ಪುನರ್ ರಚನೆ, ಪುನರ್‍ಕೌಶಲ್ಯ ಮತ್ತು ಪುನರ್ ನಿಯೋಜನೆ ಉಪಕ್ರಮಗಳಿಗಾಗಿ 717 ಕೋಟಿ ರೂಪಾಯಿಗಳನ್ನು ಮೀಸಲಿಟ್ಟಿದೆ. ಈ ಹಣವನ್ನು ಕಂಪನಿಯ ರೂಪಾಂತರ ಯೋಜನೆಗಳು ಮತ್ತು ಎಲೆಕ್ಟ್ರೋ ಮೊಬಿಲಿಟಿ ಮತ್ತು ಇತರೆ ಸಾರಿಗೆ ಸಂಬಂಧಿತ ಯೋಜನೆಗಳಿಗೆ ಬಳಕೆ ಮಾಡಲಾಗುತ್ತದೆ.

English summary
Auto components major Bosch Ltd on Friday reported a 80.29 percent decline in consolidated net profit at Rs 81.14 crore in the fourth quarter ended March 31.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X