ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಾಷ್ Q2 ತ್ರೈಮಾಸಿಕದಲ್ಲಿ ಶೇ 14ರಷ್ಟು ಆದಾಯ ಹೆಚ್ಚಳ

|
Google Oneindia Kannada News

ಬೆಂಗಳೂರು, ನವೆಂಬರ್ 05: ತಂತ್ರಜ್ಞಾನ ಮತ್ತು ಸೇವಾ ಪೂರೈಕೆ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಬಾಷ್ ಲಿಮಿಟೆಡ್ 2018-19 ನೇ ಸಾಲಿನ 2 ನೇ ತ್ರೈಮಾಸಿಕದಲ್ಲಿ 3,201 ಕೋಟಿ ರೂಪಾಯಿಗಳ ಒಟ್ಟು ಆದಾಯ ಗಳಿಸಿದೆ. ಈ ಮೂಲಕ ಕಳೆದ ಹಣಕಾಸು ಸಾಲಿನ ಇದೇ ಅವಧಿಗಿಂತ ಶೇ.13.8 ರಷ್ಟು ಪ್ರಗತಿ ಸಾಧಿಸಿದೆ.

ತೆರಿಗೆಗೆ ಮುನ್ನ ಲಾಭ (ಪಿಬಿಟಿ) 641 ಕೋಟಿ ರೂಪಾಯಿಯಾಗಿದ್ದು, ಈ ವಿಭಾಗದಲ್ಲಿ ಕಳೆದ ವರ್ಷದ ಇದೇ ಅವಧಿಗಿಂತ ಶೇ.21.8 ರಷ್ಟು ಪ್ರಗತಿ ಸಾಧಿಸಿದೆ. ಈ ಮೂಲಕ ಕಂಪನಿಯು ಹೆಚ್ಚು ವ್ಯವಹಾರ, ಸುಧಾರಿತ ಕಾರ್ಯಾಚರಣೆ ಕ್ಷಮತೆ ಮತ್ತು ಹೆಚ್ಚು ಉತ್ಪಾದಕತೆಯಲ್ಲಿ ಸುಧಾರಣೆ ಕಂಡಿದೆ. ಉತ್ಪನ್ನಗಳ ವೆಚ್ಚದ ಮೇಲಿನ ವಿನಿಮಯ ದರ ನಕಾರಾತ್ಮಕವಾಗಿದ್ದರೂ ಕಂಪನಿಯು ಈ ಪ್ರಗತಿಯನ್ನು ಸಾಧಿಸಿದೆ.

ಬಾಷ್ ಲಾಭ ಇಳಿಕೆಯಾದರೂ ಬಿಡದಿ ಘಟಕದ ಮೇಲಿದೆ ಭರವಸೆ!ಬಾಷ್ ಲಾಭ ಇಳಿಕೆಯಾದರೂ ಬಿಡದಿ ಘಟಕದ ಮೇಲಿದೆ ಭರವಸೆ!

ಇನ್ನು ತೆರಿಗೆಗೆ ನಂತರದ ಲಾಭ (ಪಿಎಟಿ)ದಲ್ಲಿ ಕಂಪನಿಯು 420 ಕೋಟಿ ರೂಪಾಯಿಗಳ ಲಾಭವನ್ನು ಕಂಡಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ ಕಂಪನಿಯು ಶೇ.18.9 ರಷ್ಟು ಹೆಚ್ಚಳ ಸಾಧಿಸಿದೆ.

ದೀಪಾವಳಿ ವಿಶೇಷ ಪುರವಣಿ

2018-19 ರ ಸೆಪ್ಟಂಬರ್ 30 ಕ್ಕೆ ಕೊನೆಗೊಂಡ ಅರ್ಧವಾರ್ಷಿಕ ಅವಧಿಯಲ್ಲಿ ಬಾಷ್ ಲಿಮಿಟೆಡ್ ಕಾರ್ಯಾಚರಣೆಗಳಿಂದ 6,413 ಕೋಟಿ ರೂಪಾಯಿಗಳ ಆದಾಯ ಗಳಿಸಿದ್ದು, ಕಳೆದ ಸಾಲಿನ ಇದೇ ಅವಧಿಗಿಂತ ಶೇ.17.5 ರಷ್ಟು ಹೆಚ್ಚಳ ಸಾಧಿಸಿದೆ. ಇದಲ್ಲದೇ, ತೆರಿಗೆಗೆ ಮುನ್ನದ ಲಾಭ 1,290 ಕೋಟಿ ರೂಪಾಯಿಗಳಿದ್ದರೆ, ತೆರಿಗೆ ನಂತರದ ಲಾಭ 851 ಕೋಟಿ ರೂಪಾಯಿಯಾಗಿದೆ.

ವ್ಯವಸ್ಥಾಪಕ ನಿರ್ದೇಶಕ ಸೌಮಿತ್ರ ಭಟ್ಟಾಚಾರ್ಯ

ವ್ಯವಸ್ಥಾಪಕ ನಿರ್ದೇಶಕ ಸೌಮಿತ್ರ ಭಟ್ಟಾಚಾರ್ಯ

ಬಾಷ್ ಲಿಮಿಟೆಡ್ ನ ವ್ಯವಸ್ಥಾಪಕ ನಿರ್ದೇಶಕ ಸೌಮಿತ್ರ ಭಟ್ಟಾಚಾರ್ಯ ಅವರು ಮಾತನಾಡಿ, 'ಅತ್ಯುತ್ತಮ ದರ್ಜೆಯ ಆಟೋಮೋಟಿವ್ ಪರಿಹಾರಗಳನ್ನು ಪೂರೈಕೆ ಮಾಡುವ ನಮ್ಮ ಬದ್ಧತೆಯಿಂದಾಗಿ ಈ ವರ್ಷ ಪ್ರಮುಖವಾಗಿ ಸಾಧನೆ ಸಾಧಿಸಲು ಸಾಧ್ಯವಾಗಿದೆ. ಇತ್ತೀಚೆಗೆ ಸುಪ್ರೀಂಕೋರ್ಟ್ ನೀಡಿರುವ ಆದೇಶದಂತೆ ಸವಾಲುಗಳನ್ನು ಎದುರಿಸಲು ನಮ್ಮ ಗ್ರಾಹಕರಿಗೆ ನೆರವಾಗುವಲ್ಲಿ ನಾವು ಯಶಸ್ವಿಯಾಗಿದ್ದೇವೆ. ಎಲ್ಲಾ ವ್ಯವಹಾರಗಳ ಘಟಕಗಳಲ್ಲಿ ರಚನಾತ್ಮಕವಾದ ಹೂಡಿಕೆಗಳು ಉತ್ತಮ ಫಲಿತಾಂಶಗಳನ್ನು ತಂದಿವೆ. ಈ ಮೂಲಕ ಕಂಪನಿಯು ಮುನ್ನಡೆ ಸಾಧಿಸಲು ಸಾಧ್ಯವಾಗಿದೆ.

ಪ್ರಸಕ್ತ ತ್ರೈಮಾಸಿಕದಲ್ಲಿ ಬಾಷ್ ಸಾರಿಗೆ ಕ್ಷೇತ್ರವಲ್ಲದೇ ಕೈಗಾರಿಕಾ ವಲಯವನ್ನು ಮೀರಿ ಉತ್ತಮ ಸಾಧನೆಗೈದಿದೆ. ಕೈಗಾರಿಕೆಯ ಮುಂಚೂಣಿಯಲ್ಲಿರುವ ಸಂಸ್ಥೆ ಎಂಬ ಹೆಗ್ಗಳಿಕೆ ಪಡೆದಿರುವ ಕಂಪನಿಯಾಗಿ ನಾವು ವಾಹನ ಕ್ಷೇತ್ರ ಮತ್ತು ಅದನ್ನೂ ಮೀರಿ ಕೊಡುಗೆ ನೀಡುವ ಸಾಮಥ್ರ್ಯ ಹೊಂದಿದ್ದೇವೆ ಎಂದು ನಂಬಿದ್ದೇವೆ. ನಮ್ಮ ಸೇವೆಗಳು ಮತ್ತು ಸಮಗ್ರ ಸಂಚಾರ ಕೊಡುಗೆಗಳಲ್ಲಿ ಐಒಟಿ ಪರಿಹಾರಗಳನ್ನು ಬಳಸುವುದರೊಂದಿಗೆ ನವೀನತೆ ಕೈಗೊಳ್ಳುವುದನ್ನು ಮುಂದುವರಿಸಲಿದ್ದೇವೆ'' ಎಂದು ತಿಳಿಸಿದರು.

2 ನೇ ತ್ರೈಮಾಸಿಕದಲ್ಲಿ ಕಂಪನಿಯ ವಿವಿಧ ವಿಭಾಗಗಳ ಸಾಧನೆಗಳು

2 ನೇ ತ್ರೈಮಾಸಿಕದಲ್ಲಿ ಕಂಪನಿಯ ವಿವಿಧ ವಿಭಾಗಗಳ ಸಾಧನೆಗಳು

ಬಾಷ್ ಲಿಮಿಟೆಡ್‍ನ ಮೊಬಿಲಿಟಿ ಸಲೂಶನ್ಸ್ ವಿಭಾಗವು 2018-19 ನೇ ಸಾಲಿನ 2 ನೇ ತ್ರೈಮಾಸಿಕದಲ್ಲಿ ಶೇ.12.3 ರಷ್ಟು ಹೆಚ್ಚಳ ಸಾಧಿಸಿದೆ. ಈ ಪೈಕಿ ದೇಸೀಯ ಆಟೋಮೋಟಿವ್ ಮಾರಾದಲ್ಲಿ ಶೇ.15.1 ರಷ್ಟು ಕಂಡುಬಂದಿದೆ.

ಮೊಬಿಲಿಟಿ ಸಲೂಶನ್ಸ್ ವ್ಯವಹಾರಗಳಲ್ಲಿ ಪವರ್‍ಟ್ರೇನ್ ಸಲೂಶನ್ಸ್ ವಿಭಾಗವು ಶೇ.10.3 ರಷ್ಟು ಪ್ರಗತಿ ಕಾಣುವ ಮೂಲಕ ಎರಡಂಕಿ ಸಾಧನೆ ಸಾಧಿಸಿದೆ. ಕಳೆದ ವರ್ಷ ಜಿಎಸ್‍ಟಿ ಜಾರಿ ಬಂದ ನಂತರದಲ್ಲಿ ಮಾರುಕಟ್ಟೆ ಪ್ರಮಾಣದಲ್ಲಿ ಶೇ.20.9 ರಷ್ಟು ಹೆಚ್ಚಳ ಕಂಡುಬಂದಿದೆ.ಇನ್ನು ಮೊಬಿಲಿಟಿ ಕ್ಷೇತ್ರದಾಚೆಗೆ ಬಾಶ್ ವ್ಯವಹಾರದಲ್ಲಿ ಕಂಪನಿಯು ಶೇ.14.3 ರಷ್ಟು ವೃದ್ಧಿ ಸಾಧಿಸಿದೆ.

ಮರ್ಕೆಲ್ ಎಫೆಕ್ಟ್ : ಬಾಷ್ ಸಂಸ್ಥೆಯಿಂದ 650 ಕೋಟಿ ರು ಹೂಡಿಕೆಮರ್ಕೆಲ್ ಎಫೆಕ್ಟ್ : ಬಾಷ್ ಸಂಸ್ಥೆಯಿಂದ 650 ಕೋಟಿ ರು ಹೂಡಿಕೆ

ಒಟ್ಟು ವ್ಯವಹಾರದಲ್ಲಿ ಶೇ. 18.0 ರಷ್ಟು ಪ್ರಗತಿ ಕಂಡುಬಂದಿದೆ

ಒಟ್ಟು ವ್ಯವಹಾರದಲ್ಲಿ ಶೇ. 18.0 ರಷ್ಟು ಪ್ರಗತಿ ಕಂಡುಬಂದಿದೆ

2018 ರ ಸೆಪ್ಟಂಬರ್ 30 ಕ್ಕೆ ಕೊನೆಗೊಂಡ ಅರ್ಧವಾರ್ಷಿಕ ಅವಧಿಯಲ್ಲಿ ಒಟ್ಟು ವ್ಯವಹಾರದಲ್ಲಿ ಶೇ. 18.0 ರಷ್ಟು ಪ್ರಗತಿ ಕಂಡುಬಂದಿದೆ. ಮೊಬಿಲಿಟಿ ಸಲೂಶನ್‍ನ ಮಾರಾಟದಲ್ಲಿ ಶೇ.16.3 ರಷ್ಟು ಪ್ರಗತಿ ಸಾಧಿಸಿದ್ದರೆ, ಮೊಬಿಲಿಟಿ ಹೊರತಾದ ವಿಭಾಗದಲ್ಲಿ ಶೇ.30.1 ರಷ್ಟು ಪ್ರಗತಿ ಸಾಧಿಸುವ ಮೂಲಕ ಎರಡಂಕಿ ಗಡಿಯನ್ನು ದಾಟಿದೆ. ಈ ಪ್ರಗತಿಯಲ್ಲಿ ಪ್ರಮುಖವಾಗಿ ಸೋಲಾರ್ ಎನರ್ಜಿ ಮತ್ತು ಪವರ್ ಟೂಲ್ಸ್ ವ್ಯವಹಾರದಲ್ಲಿ ಬಂದಿರುವುದು ಗಮನಾರ್ಹವಾಗಿದೆ.

ಷೇರುಗಳ ನ್ನು ಬೈಬ್ಯಾಕ್ ಪಡೆಯಲು ಅವಕಾಶ

ಷೇರುಗಳ ನ್ನು ಬೈಬ್ಯಾಕ್ ಪಡೆಯಲು ಅವಕಾಶ

ಬಾಷ್ ಲಿಮಿಟೆಡ್ ನ ಆಡಳಿತ ಮಂಡಳಿ ತನ್ನ ಷೇರುದಾರರಿಗೆ 1,028,100 ಈಕ್ವಿಟಿ ಷೇರುಗಳನ್ನು ಬೈಬ್ಯಾಕ್ ಪಡೆಯಲು ಅವಕಾಶ ನೀಡಲು ಅನುಮೋದನೆ ನೀಡಿದೆ. ಕಂಪನಿಗಳ ಕಾನೂನು 2013ರ ಮತ್ತು ಸೆಬಿಯ 2018ರ ನಿಬಂಧನೆಗಳಿಗೆ ಅನುಗುಣವಾಗಿ ಪ್ರತಿ ಈಕ್ವಿಟಿ ಷೇರಿಗೆ 21,000/- ರೂಪಾಯಿಯನ್ನು ನಿಗದಿ ಮಾಡಲಾಗಿದ್ದು, 2,159.01 ರೂಪಾಯಿಗೆ ಮೀರಬಾರದು ಎಂಬ ನಿರ್ಧಾರವನ್ನು ಪ್ರಕಟಿಸಿದೆ.

ಜರ್ಮನಿ ಕಂಪನಿಗಳಿಗೆ ಬೆಂಗಳೂರು ಅಚ್ಚುಮೆಚ್ಚು ಏಕೆ?ಜರ್ಮನಿ ಕಂಪನಿಗಳಿಗೆ ಬೆಂಗಳೂರು ಅಚ್ಚುಮೆಚ್ಚು ಏಕೆ?

English summary
Bosch reported a surge of 19 percent (year on year) in its net profit for September quarter at Rs 420 crore against Rs 353 crore
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X