ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಾಷ್ ಇಂಡಿಯಾ ಲಿಮಿಟೆಡ್‍ಗೆ 1,598 ಕೋಟಿ ನಿವ್ವಳ ಲಾಭ!

|
Google Oneindia Kannada News

ಬೆಂಗಳೂರು, ಮೇ 21: ಬೆಂಗಳೂರು - ತಂತ್ರಜ್ಞಾನ ಮತ್ತು ಸೇವೆಗಳ ಮುಂಚೂಣಿಯ ಪೂರೈಕೆದಾರ ಸಂಸ್ಥೆಯಾಗಿರುವ ಬಾಷ್ ಲಿಮಿಟೆಡ್ 2018-19ರ ಆರ್ಥಿಕ ವರ್ಷವನ್ನು ಅಂತ್ಯಗೊಳಿಸಿದ್ದು, ಕಾರ್ಯಾಚರಣೆಗಳಿಂದ ಒಟ್ಟು 12,258 ಕೋಟಿ ರೂ.ಗಳ ಆದಾಯ(1.49 ಬಿಲಿಯನ್ ಯೂರೋ) ಗಳಿಸಿದೆಯಲ್ಲದೆ, ಇದರೊಂದಿಗೆ ಇಂದಿನ ಆರ್ಥಿಕ ವರ್ಷಕ್ಕೆ ಹೋಲಿಸಿದರೆ ಶೇ.4.9 ರಷ್ಟು ಹೆಚ್ಚಳ ದಾಖಲಿಸಿದೆ.

ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ

"ಸುಸ್ಥಿರ ಮತ್ತು ಲಾಭದಾಯಕ ಬೆಳವಣಿಗೆಯನ್ನು ಸಾಧಿಸುವತ್ತ ಬಾಷ್ ಇಂಡಿಯಾ ಗಮನ ಕೇಂದ್ರೀಕರಿಸಿದೆ. ಸಂಸ್ಥೆಯೊಳಗೆ ಗುರಿಯಾಗಿಟ್ಟುಕೊಂಡ ಹೂಡಿಕೆಗಳು, ಮೂಲಸೌಕರ್ಯ ಅಭಿವೃದ್ಧಿ ಮತ್ತು ತಂತ್ರಜ್ಞಾನಗಳ ಮೂಲಕ ದೇಶದಲ್ಲಿ ವಾಹನ ಉದ್ಯಮಕ್ಕೆ ಸವಾಲಿನದ್ದಾಗಿರುವ ಸಮಯದಲ್ಲಿ ನಮ್ಮ ವ್ಯವಹಾರವನ್ನು ಸುಭದ್ರವಾಗಿಸಲು ನಾವು ಎದುರು ನೋಡುತ್ತಿದ್ದೇವೆ" ಎಂದು ಬಾಷ್ ಲಿಮಿಟೆಡ್‍ನ ವ್ಯವಸ್ಥಾಪಕ ನಿರ್ದೇಶಕರಾದ ಸೌಮಿತ್ರಾ ಭಟ್ಟಾಚಾರ್ಯ ಅವರು ಹೇಳಿದರು.

ಜರ್ಮನಿ ಕಂಪನಿಗಳಿಗೆ ಬೆಂಗಳೂರು ಅಚ್ಚುಮೆಚ್ಚು ಏಕೆ? ಜರ್ಮನಿ ಕಂಪನಿಗಳಿಗೆ ಬೆಂಗಳೂರು ಅಚ್ಚುಮೆಚ್ಚು ಏಕೆ?

ತೆರಿಗೆಪೂರ್ವ ಲಾಭ ಶೇ. 14.7 ರಷ್ಟು ಬೆಳೆದಿದ್ದು, 2,341 ಕೋಟಿ ರೂ.ಗಳನ್ನು ಅಥವಾ ಕಾರ್ಯಾಚರಣೆಯಿಂದ ಬರುವ ಒಟ್ಟಾರೆ ಆದಾಯದ ಶೇ.19.1 ರಷ್ಟನ್ನು ತಲುಪಿದೆ. ಹಿಂದಿನ ವರ್ಷದಲ್ಲಿ ಕಾರ್ಯಾಚರಣೆಯ ಕಾರ್ಯಕ್ಷಮತೆಯಲ್ಲಿ ಸುಧಾರಣೆ, ಹೂಡಿಕೆ ಆದಾಯ ಜೊತೆಗೆ ಒಂದು ಬಾರಿಯ ಅಸಾಧಾರಣ ವೆಚ್ಚಗಳು ಲಾಭದ ಬೆಳವಣಿಗೆಗೆ ಮುಖ್ಯ ಕಾರಣಗಳಾಗಿವೆ. 2018-19ರ ಆರ್ಥಿಕ ವರ್ಷದಲ್ಲಿ ತೆರಿಗೆ ನಂತರದ ನಿವ್ವಳ ಲಾಭ ಶೇ. 16.6 ರಷ್ಟು ಹೆಚ್ಚಾಗಿ 1598 ಕೋಟಿ ರೂ.ಗಳಿಗೆ ತಲುಪಿದೆ. ಕಳೆದ ವರ್ಷ ಪ್ರಮುಖ ಹೂಡಿಕೆಗಳನ್ನು ಮಾಡಲಾಗಿದ್ದು, 2018-19ರಲ್ಲಿ ಇದು ಒಟ್ಟು 597 ಕೋಟಿ ರೂ.ಗಳಾಗಿದೆ. 2018ರಲ್ಲಿ ಬಾಷ್ ಲಿಮಿಟೆಡ್ 9,400ಕ್ಕೂ ಹೆಚ್ಚಿನ ಉದ್ಯೋಗಿಗಳನ್ನು ಸೇರಿಸಿಕೊಂಡಿದೆ.

ಮಾರ್ಚ್ 31, 2019ಕ್ಕೆ ಅಂತ್ಯವಾಗುವ ತ್ರೈಮಾಸಿಕ ಅವಧಿ

ಮಾರ್ಚ್ 31, 2019ಕ್ಕೆ ಅಂತ್ಯವಾಗುವ ತ್ರೈಮಾಸಿಕ ಅವಧಿ

ಮಾರ್ಚ್ 31, 2019ಕ್ಕೆ ಅಂತ್ಯವಾಗುವ ತ್ರೈಮಾಸಿಕ ಅವಧಿಯಲ್ಲಿ ಬಾಷ್ ಲಿಮಿಟೆಡ್‍ನ ಕಾರ್ಯಾಚರಣೆಯಿಂದ ಬಂದ ಆದಾಯ ಒಟ್ಟು 2,749 ಕೋಟಿ ರೂ.ಗಳಾಗಿತ್ತು. ಕಳೆದ ಆರ್ಥಿಕ ವರ್ಷದ ಇದೇ ಅವಧಿಗೆ ಹೋಲಿಸಿದರೆ ಇದು ಶೇ.12.9 ರಷ್ಟು ಕಡಿಮೆಯಾಗಿತ್ತು.

2018-19ರ ಕೊನೆಯ ತ್ರೈಮಾಸಿಕ ಅವಧಿಯಲ್ಲಿ ತೆರಿಗೆಪೂರ್ವ ಲಾಭ 561 ಕೋಟಿ ರೂ.ಗಳಾಗಿದ್ದು, ಇದು ಕಾರ್ಯಾಚರಣೆಯಿಂದ ಬಂದ ಒಟ್ಟು ಆದಾಯದ ಶೇ.20.4 ರಷ್ಟಾಗಿದ್ದು, ಕಳೆದ ವರ್ಷ ಇದೇ ತೈಮಾಸಿಕದಲ್ಲಿ ಇದೇ ಮೊತ್ತ ಕಾರ್ಯಾಚರಣೆಯಿಂದ ಬಂದ ಆದಾಯದ ಶೇ.19.9 ರಷ್ಟಿತ್ತು.

ನಕಾರಾತ್ಮಕ ಮಾರುಕಟ್ಟೆ ಭಾವನೆಗಳು ಮತ್ತು ವಿನಿಮಯ ದರದಲ್ಲಿ ಪರವಾಗಿಲ್ಲದ ಬೆಳವಣಿಗೆಗಳಿಂದ ಉಂಟಾದ ಕಡಿಮೆ ಮಾರಾಟ ಪ್ರಮಾಣವು ಈ ಲಾಭದಲ್ಲಿನ ಇಳಿಕೆಗೆ ಮುಖ್ಯವಾಗಿ ಕಾರಣವಾಗಿರುತ್ತದೆ. ತೆರಿಗೆ ನಂತರದ ಲಾಭ ಒಟ್ಟಾರೆ ಕಾರ್ಯಾಚರಣೆಯಿಂದ ಬಂದ ಆದಾಯದ ಶೇ.15 ರಷ್ಟಿದ್ದು ಇದಕ್ಕೆ ಹೋಲಿಸಿದರೆ ಕಳೆದ ವರ್ಷ ಕೊನೆಯ ತ್ರೈಮಾಸಿಕದಲ್ಲಿ ಈ ಮೊತ್ತ ಶೇ.13.7 ರಷ್ಟಿತ್ತು.

ಏಪ್ರಿಲ್ 2020ರಿಂದ BS VI ಹೊಗೆಯುಗುಳುವ ಗುಣಮಟ್ಟ

ಏಪ್ರಿಲ್ 2020ರಿಂದ BS VI ಹೊಗೆಯುಗುಳುವ ಗುಣಮಟ್ಟ

"2018-19ರ ಆರ್ಥಿಕ ವರ್ಷದ ಕೊನೆಯ ತ್ರೈಮಾಸಿಕದ ಫಲಿತಾಂಶಗಳನ್ನು ಒಟ್ಟಾರೆ ವಾಹನ ಮಾರುಕಟ್ಟೆಯ ಪ್ರಮುಖ ದೌರ್ಬಲ್ಯದ ಹಿನ್ನೆಲೆಯಲ್ಲಿ ನೋಡಬೇಕಾಗಿದೆ. ಬಾಷ್ ಲಿಮಿಟೆಡ್ ಸಮಗ್ರ ವಾಹನ ಪರಿಹಾರಗಳ ಮುಂಚೂಣಿಯಲ್ಲಿ ಯಾವಾಗಲೂ ಇದ್ದು, ಸುಪ್ರಿಂಕೋರ್ಟ್‍ನ ಆದೇಶದಂತೆ ಏಪ್ರಿಲ್ 2020ರಿಂದ ಬರಲಿರುವ BS VI ಹೊಗೆಯುಗುಳುವ ಗುಣಮಟ್ಟಕ್ಕೆ ತಕ್ಕಂತೆ ವಾಹನಗಳನ್ನು ಉತ್ಪಾದಿಸಿ ನಮ್ಮ ಗ್ರಾಹಕರನ್ನು ನಾವು ಬೆಂಬಲಿಸುತ್ತಿದ್ದೇವೆ'' ಎಂದು ಭಟ್ಟಾಚಾರ್ಯ ಹೇಳಿದರು.

ಬಾಷ್ ಲಿಮಿಟೆಡ್‍ನ ಮೊಬಿಲಿಟಿ ಸಲ್ಯೂಷನ್ಸ್ ವ್ಯವಹಾರ ವಿಭಾಗದ ಒಟ್ಟು ಆದಾಯ ಮಾರ್ಚ್ 31, 2019ರಲ್ಲಿ ಅಂತ್ಯವಾಗುವ ತ್ರೈಮಾಸಿಕದಲ್ಲಿ ಶೇ.15.7 ರಷ್ಟು ಇಳಿಕೆ ಕಂಡಿದೆ. ಈ ವ್ಯವಹಾರ ಕ್ಷೇತ್ರದಲ್ಲಿ ಪವರ್ ಟ್ರೇನ್ ವಿಭಾಗದ ಒಟ್ಟಾರೆ ಆದಾಯ ಶೇ. 19.2ರಷ್ಟು ಕಡಿಮೆಯಾಗಿದೆ. ರಫ್ತು ಮತ್ತು ಸ್ವದೇಶಿ ಸಂಚಾರ ಪರಿಹಾರಗಳ ಉದ್ಯಮ ಮಾರುಕಟ್ಟೆಯಲ್ಲಿನ ಕಳಪೆ ಭಾವನೆಗಳಿಂದಾಗಿ ಕ್ರಮವಾಗಿ ಶೇ.6.3 ರಷ್ಟು ಮತ್ತು 16.4 ರಷ್ಟು ಇಳಿಕೆಯಾಗಿದೆ. ಸಂಚಾರ ವ್ಯವಹಾರ ಕ್ಷೇತ್ರಗಳಿಂದಾಚೆಗೆ ಬಾಷ್ ಲಾಭ ಮತ್ತು ಆದಾಯ ನಷ್ಟದ ಮಿಶ್ರ ಪ್ರದರ್ಶನವನ್ನು ಕಳೆದ ಆರ್ಥಿಕ ವರ್ಷದಲ್ಲಿ ತೋರಿದೆ.

2018-19ರಲ್ಲಿ ಬಾಷ್ ವಹಿವಾಟು ಅಭಿವೃದ್ಧಿ

2018-19ರಲ್ಲಿ ಬಾಷ್ ವಹಿವಾಟು ಅಭಿವೃದ್ಧಿ

ಆರ್ಥಿಕ ವರ್ಷದ ಮೊದಲ ಎರಡು ತ್ರೈಮಾಸಿಕ ಅವಧಿಗಳ ಸಂದರ್ಭದಲ್ಲಿ ಸಕಾರಾತ್ಮಕ ವ್ಯವಹಾರ ಭಾವನೆಗಳನ್ನಾಧರಿಸಿ ಬಾಷ್ ಲಿಮಿಟೆಡ್‍ನ ಸಂಚಾರ ಪರಿಹಾರಗಳ ವ್ಯವಹಾರ ಕ್ಷೇತ್ರ 2018-19ರಲ್ಲಿ ಒಟ್ಟಾರೆ ಆದಾಯವನ್ನು ಶೇ. 3.3 ರಷ್ಟು ಹೆಚ್ಚಿಸಿಕೊಂಡಿದೆ. ಸ್ವದೇಶಿ ಮಾರಾಟ ಶೇ.4.0 ರಷ್ಟು ಹೆಚ್ಚಾಗಿದ್ದು, ರಫ್ತು ಮಾರಾಟ ಶೇ.4.5 ರಷ್ಟು ಕಡಿಮೆಯಾಗಿದೆ.

ಸಂಚಾರ ಪರಿಹಾರಗಳ ವಹಿವಾಟಿನೊಳಗೆ, ಪವರ್‍ಟ್ರೇನ್ ಪರಿಹಾರಗಳ ವಿಭಾಗ ಮಧ್ಯಮ ಹಂತದ ಬೆಳವಣಿಗೆಯಾದ ಶೇ.2.4 ರಷ್ಟನ್ನು ದಾಖಲಿಸಿದ್ದು, ಇದಕ್ಕೆ ಆರ್ಥಿಕ ವರ್ಷದ ಅವಧಿಯಲ್ಲಿ ಒಟ್ಟಾರೆ ವಾಹನ ಮಾರುಕಟ್ಟೆಯ ಅಭಿವೃದ್ಧಿ ಚಾಲನೆ ನೀಡಿದೆ. ಸಂಚಾರ ಪರಿಹಾರಗಳಲ್ಲದೆ, ವಿದ್ಯುತ್ ಮತ್ತು ನಿರ್ಮಾಣ ತಂತ್ರಜ್ಞಾನಗಳು ಹಾಗೂ ಯಂತ್ರ ನಿರ್ಮಾಣ ವಿಭಾಗಗಳು ಎರಡಂಕಿ ಬೆಳವಣಿಗೆಯನ್ನು ತೋರಿದ್ದಲ್ಲದೆ, ಒಟ್ಟಾರೆ ಶೇ.16.4ರಷ್ಟು ಬೆಳವಣಿಗೆ ದಾಖಲಿಸಿವೆ. ಕಂಪನಿಯ ಪ್ರದರ್ಶನವನ್ನು ಪರಿಗಣಿಸಿ ನಿರ್ದೇಶಕರ ಮಂಡಳಿ ಈ 12 ತಿಂಗಳ ಅವಧಿಗೆ ಪ್ರತಿ ಷೇರಿಗೆ 105 ರೂ.ಗಳ ಲಾಭಾಂಶ ಶಿಫಾರಸ್ಸು ಮಾಡಿದೆ.

ವಾಹನ ಮಾರುಕಟ್ಟೆಯಲ್ಲಿ ಇಳಿಕೆ ಇದ್ದರೂ ಬೆಳವಣಿಗೆ

ವಾಹನ ಮಾರುಕಟ್ಟೆಯಲ್ಲಿ ಇಳಿಕೆ ಇದ್ದರೂ ಬೆಳವಣಿಗೆ

2019-2020ರ ಹೊರನೋಟ : ವಾಹನ ಮಾರುಕಟ್ಟೆಯಲ್ಲಿ ಇಳಿಕೆ ಇದ್ದರೂ ಬೆಳವಣಿಗೆ: ಮುಂಬರಲಿರುವ ಆರ್ಥಿಕ ವರ್ಷಕ್ಕೆ ಹೊರನೋಟ ಕುರಿತು ಭಟ್ಟಾಚಾರ್ಯ ಅವರು ಪ್ರತಿಕ್ರಿಯಿಸಿ ಭಾರತದ ವಾಹನ ಸಂಚಾರ ಕ್ಷೇತ್ರ ಕ್ಷಿಪ್ರಗತಿಯಲ್ಲಿ ಪರಿವರ್ತಿತವಾಗುತ್ತಿದ್ದು, ಮುಂಬರುವ ವರ್ಷಗಳಲ್ಲಿ ವಿದ್ಯುತ್ ವಾಹನ ಸಂಚಾರದೊಂದಿಗೆ ಗಮನಾರ್ಹ ಬೆಳವಣಿಗೆ ಅನುಭವಿಸುವ ನಿರೀಕ್ಷೆ ಇದೆ. ಭಾರತೀಯ ವಾಹನ ಬಿಡಿಭಾಗಗಳ ಕೈಗಾರಿಕೆ 2025ರ ಹೊತ್ತಿಗೆ ಜಗತ್ತಿನ 3ನೇ ಅತ್ಯಂತ ದೊಡ್ಡದೆಂಬ ಸ್ಥಾನ ಗಳಿಸಲಿದೆ.

2019-20ರ ಈ ಆರ್ಥಿಕ ವರ್ಷದಲ್ಲಿ ಬಾಷ್ ಕೈಗಾರಿಕೆಗೆ ಗಮನಾರ್ಹ ನವೀನತೆಗಳ ಕೊಡುಗೆಗಳನ್ನು ನೀಡುವುದು ಕಂಡುಬರಲಿದೆ. ಇಂಟರ್‍ನೆಟ್ ಆಫ್ ಥಿಂಗ್ಸ್ ಅಳವಡಿಕೆಯೊಂದಿಗೆ ಮತ್ತು ಸಂಚಾರ ಪರಿಹಾರಗಳ ವ್ಯವಹಾರ ಕ್ಷೇತ್ರಕ್ಕೆ ಚಾಲನೆ ನೀಡುವುದರೊಂದಿಗೆ ಡಿಜಿಟಲ್ ಪರಿವರ್ತನೆಯ ಭವಿಷ್ಯಕ್ಕೆ ಕಂಪನಿ ಸಿದ್ಧವಾಗುತ್ತಿದೆ'' ಎಂದರು.

ವಿದ್ಯುತ್ ಚಾಲಿತ ಸಂಚಾರ ಪರಿಹಾರ

ವಿದ್ಯುತ್ ಚಾಲಿತ ಸಂಚಾರ ಪರಿಹಾರ

ತನ್ನ ವರ್ಗದಲ್ಲಿ ಅತ್ಯುತ್ತಮ ವಾಹನ ಪರಿಹಾರಗಳನ್ನು ವಿತರಿಸಲು ಬಾಷ್ ಯಾವಾಗಲೂ ಬದ್ಧತೆ ಹೊಂದಿದೆ. ಏಪ್ರಿಲ್ 2020ರ ನಂತರ BS VI ಅನುಷ್ಠಾನ ಸಾಧಿಸಲು ಮತ್ತು ಭಾರತೀಯ ಸ್ಥಿತಿಗಳಿಗಾಗಿ ನಿರ್ಮಿತ ವಿದ್ಯುತ್ ಚಾಲಿತ ಸಂಚಾರ ಪರಿಹಾರಗಳನ್ನು ಅಳವಡಿಸಲು ಭಾರತ ಸಿದ್ಧವಾಗುತ್ತಿದ್ದರೆ, ನವೀನ ಸಂಚಾರ ಪರಿಹಾರ ಯೋಜನೆಗಳೊಂದಿಗೆ ಬಾಷ್ ಈ ನಿಯಮಗಳ ಅನುಷ್ಠಾನವನ್ನು ಬೆಂಬಲಿಸಲು ಸಿದ್ಧವಾಗಿದೆ.

ಹಾರ್ಡ್‍ವೇರ್ ಮತ್ತು ಸಾಫ್ಟ್ ವೇರ್ ಗಳಲ್ಲಿ ಪರಿಣತಿಗಳನ್ನು ಬೆರಸುವುದರೊಂದಿಗೆ ಕಂಪನಿಯು ಸಂಪರ್ಕಿತ, ಸ್ವಯಂಚಾಲಿತ ಮತ್ತು ವಿದ್ಯುತ್‍ಚಾಲಿತ ವಾಹನ ಚಲಾವಣೆಯ ಭವಿಷ್ಯವನ್ನು ರೂಪಿಸುತ್ತಿದೆ. ಕಂಪನಿಯ ಸತತ ಕೊಡುಗೆ ಮತ್ತು ಸಂಚಾರ ಪರಿಹಾರಗಳಲ್ಲಿ ನವೀನತೆಯ ನಿರ್ಮಾಣದಲ್ಲಿ ಬೆಳವಣಿಗೆಯು, ಸಮಾಜದ ಲಾಭಕ್ಕಾಗಿ ಸಮಸ್ಯೆಗಳನ್ನು ಪರಿಹರಿಸಲು ಸತತ ಬದ್ಧತೆಯ ಫಲಿತಾಂಶವಾಗಿದೆ.

2019ಕ್ಕೆ ಬಾಷ್ ಗ್ರೂಪ್ ಹೊರನೋಟ

2019ಕ್ಕೆ ಬಾಷ್ ಗ್ರೂಪ್ ಹೊರನೋಟ

2019ರಲ್ಲಿ ಜಾಗತಿಕ ಆರ್ಥಿಕ ಅಭಿವೃದ್ಧಿ ಕಡಿಮೆಯಾಗುವ ನಿರೀಕ್ಷೆಯನ್ನು ಬಾಷ್ ಗ್ರೂಪ್ ಹೊಂದಿದೆ. ಕಂಪನಿಗೆ ಮುಖ್ಯವಾದ ಪ್ರದೇಶಗಳು ಮತ್ತು ಕೈಗಾರಿಕೆಗಳಲ್ಲಿ ಕಷ್ಟದ ವಾತಾವರಣವಿದ್ದರೂ ಪ್ರಸ್ತುತ ವರ್ಷದಲ್ಲಿ ತನ್ನ ಮಾರಾಟ ಅದರ 2018ರ ಮಟ್ಟವನ್ನು ಸ್ವಲ್ಪಮಟ್ಟಿಗೆ ಮೀರುವ ನಿರೀಕ್ಷೆಯನ್ನು ಬಾಷ್ ಹೊಂದಿದೆ. ಅಲ್ಪಕಾಲೀನ ಸಂಭಾವ್ಯತೆಗಳು ಏನೇ ಇರಲಿ ಕಂಪನಿಯು ಹವಾಮಾನದಲ್ಲಿನ ಬದಲಾವಣೆಯನ್ನು ಎದುರಿಸಲು ಮತ್ತು ಗಾಳಿಯ ಗುಣಮಟ್ಟವನ್ನು ಸುಧಾರಿಸಲು ತನ್ನ ಪ್ರಯತ್ನಗಳನ್ನು ಮತ್ತಷ್ಟು ತೀವ್ರಗೊಳಿಸಲು ಸಂಸ್ಥೆ ಮುಂದಾಗಿದೆ.

ಸ್ಥಳೀಯವಾಗಿ ಲಭ್ಯವಿರುವ ನೈಸರ್ಗಿಕ ಶಕ್ತಿಮೂಲಗಳನ್ನು ಬಳಸಿ ಇಂಗಾಲದ ತಟಸ್ಥತೆಯನ್ನು ಹೊಂದಲು ಬಾಷ್ ಇಂಡಿಯಾ ಮುಂದಾಗಿದೆ. ಬಿಡದಿಯ ಘಟಕ ಫೋಟೊಓಲ್ಟಾಯಿಕ್ ವ್ಯವಸ್ಥೆಯೊಂದಿಗೆ ತನ್ನ ವಿದ್ಯುತ್ ಅಗತ್ಯದ ಶೇ.30ರಷ್ಟನ್ನು ಪೂರೈಸಿಕೊಳ್ಳುತ್ತಿದೆ. ಈ ಸ್ಥಳದಲ್ಲಿ ಮಳೆ ಕೊಯ್ಲು ಕೈಗೊಳ್ಳಲಾಗಿದ್ದು, ಈ ನೀರು ಸಣ್ಣ ಕೆರೆಗೆ ಹರಿದು ಸ್ಥಳೀಯ ಜನತೆಗೆ ನೀರು ಪೂರೈಸುತ್ತಿದೆ.

English summary
Bosch Limited, a supplier of technology and services, ended its fiscal year 2018-19 with a total revenue of Rs 12,258 crore, an increase of 4.9 per cent over the revenue made in the previous fiscal year.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X