ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

1ನೇ ತ್ರೈಮಾಸಿಕ: ಬಾಷ್ ಲಿಮಿಟೆಡ್‌ಗೆ ಶೇ.13.7 ರಷ್ಟು ತೆರಿಗೆ ಪೂರ್ವ ಲಾಭ

|
Google Oneindia Kannada News

ಬೆಂಗಳೂರು, ಆಗಸ್ಟ್ 04: ತಂತ್ರಜ್ಞಾನ ಮತ್ತು ಸೇವೆಗಳ ಪೂರೈಕೆಯಲ್ಲಿ ಮುಂಚೂಣಿಯಲ್ಲಿರುವ ಬಾಷ್ ಲಿಮಿಟೆಡ್ 2021-2022 ನೇ ಹಣಕಾಸು ಸಾಲಿನ 1 ನೇ ತ್ರೈಮಾಸಿಕದಲ್ಲಿ ತನ್ನ ಕಾರ್ಯಾಚರಣೆಗಳಲ್ಲಿ 2,444 ಕೋಟಿ ರೂಪಾಯಿಗಳಷ್ಟು ಹೆಚ್ಚು ಆದಾಯ ಗಳಿಸಿದೆ.

ಈ ಮೂಲಕ ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.146 ರಷ್ಟು ಹೆಚ್ಚಳ ಸಾಧಿಸಿದೆ. ಕಳೆದ ಜೂನ್ ನಲ್ಲಿ ರಾಜ್ಯಗಳಲ್ಲಿ ಲಾಕ್ ಡೌನ್ ನಿರ್ಬಂಧಗಳನ್ನು ತೆರವು ಮಾಡಿದ್ದರಿಂದ ಮಾರಾಟದಲ್ಲಿ ಚೇತರಿಕೆ ಕಂಡು ಬಂದ ಹಿನ್ನೆಲೆಯಲ್ಲಿ ಈ ಹೆಚ್ಚಳ ಸಾಧಿಸಲು ಸಾಧ್ಯವಾಗಿದೆ. ತೆರಿಗೆ ಪೂರ್ವ ಲಾಭವು 335 ಕೋಟಿ ರೂಪಾಯಿಗಳಾಗಿದ್ದು, ಕಾರ್ಯಾಚರಣೆಗಳ ಒಟ್ಟು ಆದಾಯದ ಶೇ.13.7 ರಷ್ಟಾಗಿದೆ. ತೆರಿಗೆ ನಂತರದ ಲಾಭವು 260 ಕೋಟಿ ರೂಪಾಯಿಗಳಾಗಿದ್ದು, ಕಾರ್ಯಾಚರಣೆಗಳ ಒಟ್ಟು ಆದಾಯದ ಶೇ.10.6 ರಷ್ಟಾಗಿದೆ.

ಕೋವಿಡ್ ಸೋಂಕಿತರ ಚಿಕಿತ್ಸೆಗೆ ಕ್ರೀಡಾ ಸಂಕೀರ್ಣ ಬಿಟ್ಟುಕೊಟ್ಟ ಬಾಷ್ಕೋವಿಡ್ ಸೋಂಕಿತರ ಚಿಕಿತ್ಸೆಗೆ ಕ್ರೀಡಾ ಸಂಕೀರ್ಣ ಬಿಟ್ಟುಕೊಟ್ಟ ಬಾಷ್

ಬಾಷ್ ಲಿಮಿಟೆಡ್ ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಭಾರತದಲ್ಲಿ ಬಾಷ್ ಗ್ರೂಪ್ ನ ಅಧ್ಯಕ್ಷ ಸೌಮಿತ್ರ ಭಟ್ಟಾಚಾರ್ಯ, ''2020-21 ನೇ ಹಣಕಾಸು ಸಾಲಿನ ಎರಡನೇ ತ್ರೈಮಾಸಿಕದಿಂದ ಉದ್ಯಮವು ಚೇತರಿಕೆಯತ್ತ ಸಾಗಿದೆ. ಕೋವಿಡ್-19 ನ ಎರಡನೇ ಅಲೆಯ ವೇಳೆ ಎದುರಾದ ಸೋಂಕು, ಸ್ಥಳೀಯ ಲಾಕ್ ಡೌನ್ ಗಳು ಮತ್ತು ಬೇಡಿಕೆ ಕಡಿಮೆಯಾಗಿದ್ದರಿಂದ ಭಾರತೀಯ ಆಟೋಮೋಟಿವ್ ಕ್ಷೇತ್ರವನ್ನು ಬಲವಾಗಿ ಕಾಡಿತು. ಎರಡನೇ ಅಲೆಯು ದೇಶಾದ್ಯಂತ ಹಲವಾರು ಒಇಎಂಗಳಿಗೆ ಸವಾಲಾಗಿ ಪರಿಣಮಿಸಿತು. ಇದರ ಪರಿಣಾಮ ಒಇಎಂಗಳ ಉತ್ಪಾದನೆ ಕಡಿತಗೊಂಡಿತು ಅಥವಾ ಕಾರ್ಯಾಚರಣೆಗಳನ್ನು ಸ್ಥಗಿತಗೊಳಿಸಿದವು,'' ಎಂದು ತಿಳಿಸಿದರು.

ಮೊದಲ ತ್ರೈಮಾಸಿಕದಲ್ಲಿ ವ್ಯವಹಾರ ವಿಭಾಗದ ಸಾಧನೆ

ಮೊದಲ ತ್ರೈಮಾಸಿಕದಲ್ಲಿ ವ್ಯವಹಾರ ವಿಭಾಗದ ಸಾಧನೆ

2021-22 ನೇ ಸಾಲಿನ 1 ನೇ ತ್ರೈಮಾಸಿಕದಲ್ಲಿ ಮಾರಾಟದಲ್ಲಿ ಶೇ.181 ರಷ್ಟು ಹೆಚ್ಚಳವಾಗಿದ್ದು, ಪವರ್ ಟ್ರೇನ್ ಸಲೂಶನ್ಸ್ ವಿಭಾಗದಲ್ಲಿ ಶೇ.316 ರಷ್ಟು ಹೆಚ್ಚಳವಾಗಿದೆ. ಇದೇ ವೇಳೆ, 2020-21 ನೇ ಸಾಲಿನ ಮೊದಲ ತ್ರೈಮಾಸಿಕದಲ್ಲಿ ಬೇಸ್ ಕುಸಿತವಾದ ಪರಿಣಾಮ ದ್ವಿಚಕ್ರ ವಿಭಾಗದಲ್ಲಿ ಶೇ.156 ರಷ್ಟು ಹೆಚ್ಚಳ ಸಾಧಿಸಲಾಗಿದೆ. ಬಾಷ್ ಲಿಮಿಟೆಡ್ ನ ಮೊಬಿಲಿಟಿ ಸಲೂಶನ್ಸ್ ಹೊರಗೆ ವಹಿವಾಟು ಶೇ.82 ರಷ್ಟು ಹೆಚ್ಚಳವಾಗಿ ದಾಖಲೆ ಸಾಧಿಸಿದೆ. 2021 ರ ಜೂನ್ ನಲ್ಲಿ ಲಾಕ್ ಡೌನ್ ನಿರ್ಬಂಧಗಳು ತೆರವಾಗಿದ್ದರಿಂದ ಮಾರಾಟದಲ್ಲಿ ಚೇತರಿಕೆ ಕಂಡು ಬಂದಿದೆ.

ಜನವರಿ –ಮಾರ್ಚ್ 2021 ಕ್ಕೆ ಹೋಲಿಕೆ ಏಪ್ರಿಲ್-ಜೂನ್ 2021

ಜನವರಿ –ಮಾರ್ಚ್ 2021 ಕ್ಕೆ ಹೋಲಿಕೆ ಏಪ್ರಿಲ್-ಜೂನ್ 2021

2021-22 ನೇ ಹಣಕಾಸು ಸಾಲಿನ ಮೊದಲ ತ್ರೈಮಾಸಿಕದಲ್ಲಿ ಕಾರ್ಯಾಚರಣೆಯಿಂದ ಒಟ್ಟು ಆದಾಯ ಜನವರಿ-ಮಾರ್ಚ್ 2021 ಗಿಂತ ಶೇ.24ರಷ್ಟು ಇಳಿಕೆಯಾಗಿದೆ. ಜೂನ್ 2021 ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ ಕಂಪನಿಯು ತೆರಿಗೆ ನಂತರದಲ್ಲಿ 260 ಕೋಟಿ ರೂಪಾಯಿಗಳ ಲಾಭ ಗಳಿಸಿದೆ. ಇದು ಜನವರಿ-ಮಾರ್ಚ್ 2021 ರಲ್ಲಿ ಇದು 482 ಕೋಟಿ ರೂಪಾಯಿಗಳಾಗಿತ್ತು. ಇನ್ನು ಕೋವಿಡ್-19 ಲಾಕ್ ಡೌನ್ ಗಳಿಂದಾಗಿ ಹಲವಾರು ಒಇಎಂಗಳು ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದ ಹಿನ್ನೆಲೆಯಲ್ಲಿ ಮೊಬಿಲಿಟಿ ಬ್ಯುಸಿನೆಸ್ ನಲ್ಲಿನ ಉತ್ಪನ್ನ ಮಾರಾಟದಲ್ಲಿ ಶೇ.37.9ರಷ್ಟು ಕಡಿಮೆಯಾಗಿದೆ.

ಲಸಿಕಾಕರಣ ಪ್ರಮುಖ ಅಂಶ

ಲಸಿಕಾಕರಣ ಪ್ರಮುಖ ಅಂಶ

ದೇಶದಲ್ಲಿ ಆರ್ಥಿಕ ಚಟುವಟಿಕೆಗಳನ್ನು ಪುನಾರಂಭಿಸಲು, ಗ್ರಾಹಕರ ಭಾವನೆಗಳನ್ನು ಹೆಚ್ಚಿಸಲು ಮತ್ತು ವಾಹನಗಳ ಬೇಡಿಕೆಯನ್ನು ಹೆಚ್ಚಿಸಬೇಕಾದರೆ ಇರುವ ಏಕೈಕ ಮಾರ್ಗವೆಂದರೆ ಲಸಿಕಾಕರಣ. ಭಾರತ ಸರ್ಕಾರ ಮತ್ತು ಆರೋಗ್ಯ ಇಲಾಖೆಗಳು ಲಸಿಕೆಗಳನ್ನು ಪೂರೈಸಲು ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳುತ್ತಿದ್ದರೆ, ಉದ್ಯಮಗಳು ತಮ್ಮ ಕಾರ್ಮಿಕರ ಆರೋಗ್ಯ ಮತ್ತು ಯೋಗಕ್ಷೇಮವನ್ನು ಖಾತರಿಪಡಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿವೆ.

Recommended Video

ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಮನೆ ಮತ್ತು ಕಚೇರಿ ಮೇಲೆ ಐಟಿ ದಾಳಿ | Oneindia Kannada
ಸಾಮಾಜಿಕ ಹೊಣೆಗಾರಿಕೆಯ ಸಂಸ್ಥೆ

ಸಾಮಾಜಿಕ ಹೊಣೆಗಾರಿಕೆಯ ಸಂಸ್ಥೆ

ಈ ಬಗ್ಗೆ ಮಾತನಾಡಿದ ಭಟ್ಟಾಚಾರ್ಯ ಅವರು,"ಸಾಮಾಜಿಕ ಹೊಣೆಗಾರಿಕೆಯ ಸಂಸ್ಥೆಯಾಗಿರುವ ಬಾಷ್ ಲಿಮಿಟೆಡ್ ನಲ್ಲಿ ನಾವು ಶೇ.90 ರಷ್ಟು ನಮ್ಮ ಸಹವರ್ತಿಗಳು ಮತ್ತು ಕಾರ್ಮಿಕರಿಗೆ ಲಸಿಕೆಯನ್ನು ನೀಡಿದ್ದೇವೆ. ಅಲ್ಲದೇ, ಕಾರ್ಮಿಕರ ಕುಟುಂಬ ಸದಸ್ಯರು ಮತ್ತು ಕಂಟ್ರಾಕ್ಟರ್ ಗಳಿಗೂ ಉಚಿತವಾಗಿ ಲಸಿಕೆಯನ್ನು ಹಾಕಿಸಿದ್ದೇವೆ. ನಮ್ಮ ಸಹವರ್ತಿಗಳ ಆರೋಗ್ಯ ಮತ್ತು ಸುರಕ್ಷತೆ ನಮ್ಮ ಅತ್ಯಂತ ಪ್ರಮುಖವಾದ ಆದ್ಯತೆಯಾಗಿದೆ" ಎಂದರು.

''ಅನಿಶ್ಚಿತವಾದ ಆರ್ಥಿಕ ಪರಿಸ್ಥಿತಿ ಮತ್ತು ಕೋವಿಡ್-19 ರ ಮುಂಬರುವ ಮೂರನೇ ಅಲೆ ಹಾಗೂ ಅಂತಾರಾಷ್ಟ್ರೀಯ ಪೂರೈಕೆ ಸರಪಳಿಯಲ್ಲಿನ ಅನಿರೀಕ್ಷತೆಯನ್ನು ಗಮನಿಸಿದರೆ ನಾವು 2021-22 ನೇ ಹಣಕಾಸು ಸಾಲಿನ ಉಳಿದ ದಿನಗಳಲ್ಲಿ ವ್ಯವಹಾರಗಳಲ್ಲಿ ಎಚ್ಚರಿಕೆಯ ಹೆಜ್ಜೆ ಇಡುವುದನ್ನು ಬಯಸುತ್ತೇವೆ'' ಎಂದರು.

English summary
Bosch Limited, a leading supplier of technology and services, posted total revenue from operations of INR 2,444 crores in quarter 1 of FY 2021–22, an increase of 146 percent. The increase is due to lower base and recovery in sales as the lockdown restrictions eased across states in the country in June’21.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X