ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2 ನೇ ತ್ರೈಮಾಸಿಕ: ಬಾಷ್ ಲಿಮಿಟೆಡ್‌ಗೆ ಶೇ. 12.4 ರಷ್ಟು ತೆರಿಗೆ ಪೂರ್ವ ಲಾಭ

|
Google Oneindia Kannada News

ಬೆಂಗಳೂರು, ನ.6: ತಂತ್ರಜ್ಞಾನ ಮತ್ತು ಸೇವೆಗಳ ಪೂರೈಕೆಯಲ್ಲಿ ಮುಂಚೂಣಿಯಲ್ಲಿರುವ ಬಾಷ್ ಲಿಮಿಟೆಡ್ 2020-21 ನೇ ಹಣಕಾಸು ಸಾಲಿನ 2 ನೇ ತ್ರೈಮಾಸಿಕದಲ್ಲಿ 2,479 ಕೋಟಿ ರೂಪಾಯಿಗಳ ಒಟ್ಟು ಆದಾಯ ಗಳಿಸಿದೆ. ಈ ಮೂಲಕ ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.7.2ರಷ್ಟು ಹೆಚ್ಚಳ ಸಾಧಿಸಿದೆ.

ಅಸಾಧಾರಣ ಉತ್ಪನ್ನದಿಂದ ತೆರಿಗೆ ಪೂರ್ವ ಲಾಭವು 309 ಕೋಟಿ ರೂಪಾಯಿಗಳಾಗಿದ್ದು, ಇದು ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ.26.8ರಷ್ಟು ಕಡಿಮೆಯಾಗಿದೆ. ಇದಕ್ಕೆ ಪ್ರಮುಖ ಕಾರಣ ಆದಾಯದಲ್ಲಿ ಕುಂಠಿತ ಮತ್ತು ಉತ್ಪನ್ನಗಳ ಬೆಲೆ ಹೆಚ್ಚಳವಾಗಿರುವುದು ಆಗಿದೆ.

ಭಾರತೀಯ ಆಟೋಮೋಟಿವ್ ಮಾರುಕಟ್ಟೆಯು ರಚನಾತ್ಮಕವಾದ ಬದಲಾವಣೆಯತ್ತ ಸಾಗುವುದನ್ನು ಮುಂದುವರಿಸಿದೆ. ಭವಿಷ್ಯಕ್ಕೆ ಸಜ್ಜುಗೊಳ್ಳುವ ನಿಟ್ಟಿನಲ್ಲಿ ಬಾಷ್ ಲಿಮಿಟೆಟ್ ಪುನರ್ ರಚನೆ, ಪುನರ್ ಕೌಶಲ್ಯ ಮತ್ತು ಇತರೆ ರೂಪಾಂತರ ಯೋಜನೆಗಳಿಗೆ ಹೂಡಿಕೆ ಮಾಡುವುದನ್ನು ಮುಂದುವರಿಸುತ್ತಿದೆ. ಇದಕ್ಕೆ ಬೆಂಬಲ ನೀಡುವ ಸಂಬಂಧ ಸಂಸ್ಥೆಯು 2020 ರ ಸೆಪ್ಟೆಂಬರ್ 30ಕ್ಕೆ ಕೊನೆಗೊಂಡ ತ್ರೈಮಾಸಿಕದ ವೇಳೆಗೆ 400 ಕೋಟಿ ರೂಪಾಯಿಗಳನ್ನು ಅಸಾಧಾರಣ ಉತ್ಪನ್ನ ರೂಪದಲ್ಲಿ ನೀಡಿದೆ.

ಅಸಾಧಾರಣ ಉತ್ಪನ್ನಕ್ಕೆ ಅವಕಾಶ ನೀಡಿದ ನಂತರ ತೆರಿಗೆ ಪೂರ್ವ ನಷ್ಟವು 91 ಕೋಟಿ ರೂಪಾಯಿ ಮತ್ತು ತೆರಿಗೆ ನಂತರದ ನಷ್ಟವು 65 ಕೋಟಿ ರೂಪಾಯಿಗಳಾಗಿದೆ. ಕಾರ್ಯಾಚರಣೆಗಳಿಂದ ಬಂದ ಒಟ್ಟು ಆದಾಯವು ಅಸಾಧಾರಣ ಉತ್ಪನ್ನಗಳ ಪೂರ್ವದ ತೆರಿಗೆ ಪೂರ್ವ ಲಾಭವು ಶೇ.9.5ರಷ್ಟಾಗಿದೆ.

 ಶೇ.31.5ರಷ್ಟು ಕಡಿಮೆ ಆದಾಯ

ಶೇ.31.5ರಷ್ಟು ಕಡಿಮೆ ಆದಾಯ

2020 ರ ಸೆಪ್ಟೆಂಬರ್ 30 ಕ್ಕೆ ಕೊನೆಗೊಂಡ ಅರ್ಧವಾರ್ಷಿಕ ಅವಧಿಯಲ್ಲಿ ಬಾಷ್ ಲಿಮಿಟೆಡ್ ಕಾರ್ಯಾಚರಣೆಗಳಿಂದ 3,471 ಕೋಟಿ ರೂಪಾಯಿಗಳ ಒಟ್ಟು ಆದಾಯವನ್ನು ಗಳಿಸಿದೆ. ಇದು ಹಿಂದಿನ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ.31.5ರಷ್ಟು ಕಡಿಮೆಯಾಗಿದೆ. ಅಸಾಧಾರಣ ಉತ್ಪನ್ನದ ಪೂರ್ವದ ಪಿಬಿಟಿ 305 ಕೋಟಿ ರೂಪಾಯಿಗಳಾಗಿದ್ದು, ಇದು ಹಿಂದಿನ ವರ್ಷದ ಇದೇ ಅವಧಿಗೆ ಹೋಲಿಸಿದರೆ, ಶೇ.67.1ರಷ್ಟು ಕಡಿಮೆಯಾಗಿದೆ. ಅಸಾಧಾರಣ ಉತ್ಪನ್ನಕ್ಕೆ ಅವಕಾಶ ನೀಡಿದ ನಂತರ ತೆರಿಗೆ ಪೂರ್ವ ನಷ್ಟವು 292 ಕೋಟಿ ರೂಪಾಯಿಗಳಾಗಿದೆ. ಅದೇ ರೀತಿ ತೆರಿಗೆ ನಂತರದ ನಷ್ಟವು 185 ಕೋಟಿ ರೂಪಾಯಿಗಳಾಗಿದೆ.

ಬಾಷ್ ಗ್ರೂಪ್ ಇನ್ ಇಂಡಿಯಾದ ಅಧ್ಯಕ್ಷ ಸೌಮಿತ್ರ

ಬಾಷ್ ಗ್ರೂಪ್ ಇನ್ ಇಂಡಿಯಾದ ಅಧ್ಯಕ್ಷ ಸೌಮಿತ್ರ

ಈ ಬಗ್ಗೆ ಮಾತನಾಡಿದ ಬಾಷ್ ಲಿಮಿಟೆಡ್‍ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಬಾಷ್ ಗ್ರೂಪ್ ಇನ್ ಇಂಡಿಯಾದ ಅಧ್ಯಕ್ಷ ಸೌಮಿತ್ರ ಭಟ್ಟಾಚಾರ್ಯ ಅವರು, ''ವಾಹನದ ಉದ್ಯಮವು ದೀರ್ಘಕಾಲದ ಕುಸಿತದ ಮೂಲಕ ಸಾಗುತ್ತಿದೆ. ಆದರೆ, ದ್ವಿಚಕ್ರ ವಾಹನಗಳು ಮತ್ತು ಟ್ರ್ಯಾಕ್ಟರ್ ಗಳ ವಿಭಾಗಗಳಲ್ಲಿ ಕಳೆದ ಕೆಲವು ತಿಂಗಳಿಂದ ಚೇತರಿಕೆ ಕಂಡುಬರುತ್ತಿದೆ. ಜಿಎಸ್ ಟಿ ಕಡಿತ ಮತ್ತು ಸ್ಕ್ರಾಪೇಜ್ ನೀತಿಯಂತಹ ಸರ್ಕಾರದ ಬೆಂಬಲ ದೊರೆತರೆ ನಾವು ಕ್ಷಿಪ್ರಗತಿಯಲ್ಲಿ ಪ್ರಗತಿಯನ್ನು ಕಾಣಲಿದ್ದೇವೆ'' ಎಂದು ತಿಳಿಸಿದರು.

''ಕಂಪನಿಯನ್ನು ಭವಿಷ್ಯಕ್ಕೆ ಸಜ್ಜುಗೊಳಿಸುವ ನಿಟ್ಟಿನಲ್ಲಿ ನಾವು ರೂಪಾಂತರಿತ ಯೋಜನೆಗಳಿಗೆ ಹೂಡಿಕೆಯನ್ನು ಮುಂದುವರಿಸುತ್ತಿದ್ದೇವೆ. ನಾವು ಹೊಸ ಸಾಮಾನ್ಯ ಸ್ಥಿತಿಗೆ ಮರಳುತ್ತಿರುವ ಈ ಸಂದರ್ಭದಲ್ಲಿ ನಮ್ಮ ನೌಕರರು, ಗ್ರಾಹಕರು ಮತ್ತು ಇತರೆ ಪಾಲುದಾರರೊಂದಿಗೆ ನಿಕಟವಾಗಿ ಸಮಾಲೋಚನೆಯಲ್ಲಿ ತೊಡಗಿದ್ದೇವೆ. ಈ ಸಂದಿಗ್ಧ ಪರಿಸ್ಥಿತಿಯಲ್ಲಿಯೂ ಈ ಹಣಕಾಸು ಸಾಲಿನಲ್ಲಿ ಮುನ್ನಡೆ ಸಾಧಿಸಲಿದ್ದೇವೆ ಎಂಬ ಆಶಾವಾದವನ್ನು ಹೊಂದಿದ್ದು, ಆ ನಿಟ್ಟಿನಲ್ಲಿ ಎಚ್ಚರಿಕೆಯ ಹೆಜ್ಜೆ ಇಟ್ಟಿದ್ದೇವೆ'' ಎಂದು ಹೇಳಿದರು.

ಎರಡನೇ ತ್ರೈಮಾಸಿಕದಲ್ಲಿ ವ್ಯವಹಾರ ವಿಭಾಗದ ಸಾಧನೆ

ಎರಡನೇ ತ್ರೈಮಾಸಿಕದಲ್ಲಿ ವ್ಯವಹಾರ ವಿಭಾಗದ ಸಾಧನೆ

2020-21 ನೇ ಸಾಲಿನ 2 ನೇ ತ್ರೈಮಾಸಿಕದಲ್ಲಿ ವ್ಯವಹಾರ ವಿಭಾಗದಲ್ಲಿನ ಪವರ್ ಟ್ರೇನ್ ಸಲೂಶನ್ಸ್ ಮಾರಾಟದಲ್ಲಿ ಹೆಚ್ಚಳವಾಗಿರುವುದು ಬಾಷ್ ಲಿಮಿಟೆಡ್ ನ ಮೊಬಿಲಿಟಿ ಸಲೂಶನ್ಸ್ ವಹಿವಾಟನ್ನು ಶೇ.7.5ರಷ್ಟು ಹೆಚ್ಚಳವಾಗಲು ನೆರವಾಗಿದೆ. ದ್ವಿಚಕ್ರ ವಾಹನ ಮತ್ತು ಪವರ್ ಸ್ಪೋರ್ಟ್ಸ್ ವ್ಯವಹಾರವು ಈ ತ್ರೈಮಾಸಿಕದಲ್ಲಿ ಎರಡಂಕಿಯನ್ನು ಕಂಡಿದೆ. ಮೊಬಿಲಿಟಿ ವಿಭಾಗದ ಹೊರತಾಗಿ ಕಂಪನಿಯ ವ್ಯವಹಾರದಲ್ಲಿ ಶೇ.4.6ರಷ್ಟು ಕಡಿಮೆಯಾಗಿದೆ. ಯೋಜನೆ ಚಾಲಿತ ವ್ಯವಹಾರಗಳಾದ ಸೋಲಾರ್ ಇಂಧನ ಮತ್ತು ಭದ್ರತಾ ತಂತ್ರಜ್ಞಾನಗಳ ವ್ಯವಹಾರದಲ್ಲಿ ಇಳಿಕೆ ಕಂಡುಬಂದಿದ್ದರಿಂದ ಈ ಹಿನ್ನಡೆ ಉಂಟಾಗಿದೆ.

ಆಟೋಮೋಟಿವ್ ಉದ್ಯಮದಲ್ಲಿನ ಕುಸಿತ

ಆಟೋಮೋಟಿವ್ ಉದ್ಯಮದಲ್ಲಿನ ಕುಸಿತ

2020 ರ ಸೆಪ್ಟೆಂಬರ್ 30ಕ್ಕೆ ಕೊನೆಗೊಂಡ ಅರ್ಧವಾರ್ಷಿಕ ಅವಧಿಯಲ್ಲಿ ಕಂಪನಿಯ ಒಟ್ಟಾರೆ ವಹಿವಾಟು ಶೇ.34.2ರಷ್ಟು ಕಡಿಮೆಯಾಗಿದೆ. ಮೊಬಿಲಿಟಿ ಸಲೂಶನ್ಸ್ ನ ಮಾರಾಟದಲ್ಲಿ ಶೇ.34.5ರಷ್ಟು ಕಡಿಮೆಯಾಗಿದ್ದರೆ, ಮೊಬಿಲಿಟಿ ಸಲೂಶನ್ಸ್ ವಿಭಾಗದ ಹೊರತಾದ ವ್ಯವಹಾರದಲ್ಲಿಯೂ ಶೇ.32.9ಇಳಿಕೆ ಕಂಡುಬಂದಿದೆ. ಇತರೆ ಉದ್ಯಮದಂತೆಯೇ ಆಟೋಮೋಟಿವ್ ಉದ್ಯಮದಲ್ಲಿನ ಕುಸಿತ ಮತ್ತು ಸಾಂಕ್ರಾಮಿಕದ ಪರಿಣಾಮವು ಬಾಷ್ ಲಿಮಿಟೆಡ್ ಮಾರಾಟದ ಮೇಲೆಯೂ ಬೀರಿದೆ.

ಮೊಬಿಲಿಟಿ ಸಲೂಶನ್ಸ್ ಮತ್ತಷ್ಟು ವಿಸ್ತರಣೆ

ಮೊಬಿಲಿಟಿ ಸಲೂಶನ್ಸ್ ಮತ್ತಷ್ಟು ವಿಸ್ತರಣೆ

ಮೊಬಿಲಿಟಿಯನ್ನು ಮತ್ತಷ್ಟು ಪರಿಣಾಮಕಾರಿ, ಸುರಕ್ಷಿತ ಮತ್ತು ಅನುಕೂಲಕರವನ್ನಾಗಿ ಮಾಡುವ ನಿಟ್ಟಿನಲ್ಲಿ ಬಾಷ್ ಲಿಮಿಟೆಡ್ ಸ್ಟಾರ್ಟಪ್ ಆದ ಬೆಂಗಳೂರಿನಿಂದ ಹೊರಗಿರುವ ವೆಂಚರ್ ಫಂಡೆಡ್ ಸಂಸ್ಥೆಯಾಗಿರುವ ರೌಟೆಮ್ಯಾಟಿಕ್ (ನಿವಾತ ಸಿಸ್ಟಮ್ಸ್ ಪ್ರೈವೇಟ್ ಲಿಮಿಟೆಡ್) ನಲ್ಲಿ ಹೂಡಿಕೆ ಮಾಡಿದೆ. ಈ ಮೂಲಕ ನಗರ ಸಾರಿಗೆ ಆವಿಷ್ಕಾರಗಳಿಗೆ ಒತ್ತು ನೀಡಲಿದೆ. ಈ ಹೂಡಿಕೆಯ ಮೂಲಕ ಬಾಷ್ ಲಿಮಿಟೆಡ್ ತನ್ನ ಕೊಡುಗೆಗಳನ್ನು ಆಟೋಮೋಟಿವ್ ಸಿಸ್ಟಮ್ಸ್ ಮತ್ತು ಕಾಂಪೋನೆಂಟ್ ತಯಾರಕರಿಂದ ತನ್ನ ಡಿಜಿಟಲ್ ಪ್ಲಾಟ್ ಫಾರ್ಮ್ ಗಳ ಮೂಲಕ ಚಲನಶೀಲತೆಯ ಜೀವನ ಚಕ್ರದಲ್ಲಿ ತಂತ್ರಜ್ಞಾನವನ್ನು ಸಕ್ರಿಯಗೊಳಿಸಲಿದೆ.

English summary
Bosch Limited, a leading supplier of technology and services, posted total revenue from operations of INR 2,479 crores in Q2 of FY 2020-21, registering an increase of 7.2 percent over the same period of previous year.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X