ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಡುಗೋಡಿ ಬಾಷ್ ಕಚೇರಿ 2022 ರೊಳಗೆ ''ಸ್ಮಾರ್ಟ್‌ ಕ್ಯಾಂಪಸ್''

|
Google Oneindia Kannada News

ಬೆಂಗಳೂರು, ಫೆ.24: ಬಾಷ್ ಇಂಡಿಯಾ ತನ್ನ ಡಿಜಿಟಲ್ ಬಳಕೆಯ ಉಪಕರಣಗಳನ್ನು ಪ್ರದರ್ಶಿಸಲು ಯುರೋಪಿನ ಹೊರಗಿನ ಅತಿದೊಡ್ಡ ಟೆಕ್ ಕ್ಯಾಂಪಸ್ ಆಗಿರುವ ಬೆಂಗಳೂರಿನ ಅಡುಗೋಡಿ ತನ್ನ ಆವರಣವನ್ನು ಸ್ಮಾರ್ಟ್ ಕ್ಯಾಂಪಸ್ ಆಗಿ ಪರಿವರ್ತಿಸಲು ಸರಿಸುಮಾರು 800 ಕೋಟಿ ರೂ. ಹೂಡಿಕೆ ಮಾಡಿದೆ.

ಬಾಷ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಭಾರತದ ಬಾಷ್ ಗ್ರೂಪ್‌ನ ಅಧ್ಯಕ್ಷ ಸೌಮಿತ್ರಾ ಭಟ್ಟಾಚಾರ್ಯ, ''ಎಲ್ಲಾ ಕೈಗಾರಿಕೆಗಳಲ್ಲಿ ಡಿಜಿಟಲೀಕರಣ ಮತ್ತು ಸಂಪರ್ಕಿತ ತಂತ್ರಜ್ಞಾನ ಮುಂದಿನ ಮಾರ್ಗವಾಗಿದೆ. ಎಐಒಟಿ ಕಂಪನಿಯಾಗಿ, ಬಾಷ್ ಇಂಡಿಯಾ ವೈಯಕ್ತೀಕರಿಸಿದ ಮತ್ತು ಕೈಗೆಟುಕುವ ಪರಿಹಾರಗಳನ್ನು ನೀಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಭಾರತದಲ್ಲಿ 98 ವರ್ಷಗಳು ಮತ್ತು 68 ವರ್ಷಗಳ ಮೇಕ್ ಇನ್ ಇಂಡಿಯಾದೊಂದಿಗೆ, ಸ್ಥಳೀಕರಣವು (ಲೋಕಲೈಸೇಷನ್‌) ನಮ್ಮ ಆವಿಷ್ಕಾರಗಳ ಕೇಂದ್ರಬಿಂದುವಾಗಿದೆ ''ಎಂದು ಅಭಿಪ್ರಾಯಪಟ್ಟಿದ್ದಾರೆ.

ಬಾಷ್ 3ನೇ ತ್ರೈಮಾಸಿಕದಲ್ಲಿ ಆದಾಯ, ಲಾಭ ಎಲ್ಲವೂ ಏರಿಕೆಬಾಷ್ 3ನೇ ತ್ರೈಮಾಸಿಕದಲ್ಲಿ ಆದಾಯ, ಲಾಭ ಎಲ್ಲವೂ ಏರಿಕೆ

ಸದ್ಯ ಬಾಷ್ ಭಾರತದಲ್ಲಿ 31,500 ಕ್ಕೂ ಹೆಚ್ಚು ಸಹವರ್ತಿಗಳನ್ನು ನೇಮಿಸಿಕೊಂಡಿದ್ದು, 7 ಸ್ಥಳಗಳಲ್ಲಿ 18,000 ಎಂಜಿನಿಯರ್‌ಗಳಿಗೆ ನೆಲೆಯಾಗಿದೆ, ಗ್ರಾಹಕರಿಗೆ ಹೆಚ್ಚಿನ ಮೌಲ್ಯವನ್ನು ಒದಗಿಸುವ ಸಲುವಾಗಿ 5250ಕ್ಕೂ ಹೆಚ್ಚು ಸಹವರ್ತಿಗಳು ಅಂದರೆ ಸುಮಾರು ಶೇ.25ರಷ್ಟು ಉದ್ಯೋಗಿಗಳಿಗೆ ಎಐ ಮತ್ತು ಎಂಎಲ್ ಸಂಬಂಧಿತ ಕೌಶಲ್ಯಗಳಲ್ಲಿ ತರಬೇತಿ ನೀಡಲಾಗಿದೆ.

 ಭಾರಿ ಹೂಡಿಕೆ ಮಾಡಲಿರುವ ಬಾಷ್

ಭಾರಿ ಹೂಡಿಕೆ ಮಾಡಲಿರುವ ಬಾಷ್

ಬಾಷ್ ಗೃಹೋಪಯೋಗಿ ವಸ್ತುಗಳು ಮುಂದಿನ 3-4 ವರ್ಷಗಳಲ್ಲಿ 100 ಮಿಲಿಯನ್ ಯುರೋಗಳನ್ನು (ಅಂದಾಜು 8.7 ಬಿಲಿಯನ್ ರೂಪಾಯಿಗಳು) ಹೂಡಿಕೆ ಮಾಡಲಿದೆ. ಮುಂಬರುವ ವರ್ಷಗಳಲ್ಲಿ, ಬಾಷ್ ಮುಖ್ಯವಾಗಿ ತನ್ನ ಐಒಟಿ ಆಧಾರಿತ ಉತ್ಪನ್ನ ಪರಿಹಾರಗಳೊಂದಿಗೆ ಸಂಪರ್ಕದ ಮೇಲೆ ತನ್ನ ಗಮನ ಕೇಂದ್ರೀಕರಿಸಲಿದೆ.

 ಬಾಷ್ ಪವರ್ ಟೂಲ್ಸ್ ಡಿಜಿಟಲ್ ಟ್ರಾನ್ಸ್‌ಫರ್ಮೇಷನ್

ಬಾಷ್ ಪವರ್ ಟೂಲ್ಸ್ ಡಿಜಿಟಲ್ ಟ್ರಾನ್ಸ್‌ಫರ್ಮೇಷನ್

ಬಾಷ್ ಕಳೆದ 26 ವರ್ಷಗಳಲ್ಲಿ ಭಾರತವನ್ನು ತನ್ನ ಶ್ರೇಣಿಯ ವಿದ್ಯುತ್ ಉಪಕರಣಗಳೊಂದಿಗೆ ನಿರ್ಮಿಸಲು ಸಹಾಯ ಮಾಡಿದೆ. ಪ್ರೀಮಿಯಂ ಶ್ರೇಣಿಯ ಕಾರ್ಡ್‌ಲೆಸ್ ಪವರ್ ಪರಿಕರಗಳ ದೃಢ ವೇದಿಕೆ ಮತ್ತು ಮಾರಾಟದ ನಂತರದ ಸೇವಾ ಪರಿಹಾರಗಳ ಬೆಂಬಲದೊಂದಿಗೆ, ಬಾಷ್ ವಿದ್ಯುತ್ ಪರಿಕರಗಳು ಕೌಶಲ್ಯ ಮತ್ತು ಉತ್ಪಾದಕತೆಯನ್ನು ಸುಧಾರಿಸಲು ತಾಂತ್ರಿಕವಾಗಿ ಸುಧಾರಿತ ಪರಿಕರಗಳು ಮತ್ತು ಕೈಗೆಟುಕುವ ಪರಿಹಾರಗಳನ್ನು ಒದಗಿಸುತ್ತಿದೆ. ಬಾಷ್ ಪವರ್ ಟೂಲ್ಸ್ ಡಿಜಿಟಲ್ ಟ್ರಾನ್ಸ್‌ಫರ್ಮೇಷನ್ ಮತ್ತು ಸುಧಾರಿತ ಕಾರ್ಡ್‌ಲೆಸ್ ಪರಿಕರಗಳ ಮೂಲಕ ಬಳಕೆದಾರರ ಅನುಕೂಲವನ್ನು ಸುಧಾರಿಸುವ ಗುರಿಯನ್ನು ಹೊಂದಿದೆ.

 ಹೊಸ ಕ್ಯೂಆರ್ ಕೋಡ್ ಸ್ಕ್ಯಾನಿಂಗ್ ತಂತ್ರಜ್ಞಾನ

ಹೊಸ ಕ್ಯೂಆರ್ ಕೋಡ್ ಸ್ಕ್ಯಾನಿಂಗ್ ತಂತ್ರಜ್ಞಾನ

ಬಾಷ್ ತನ್ನ ಹೊಸ ಕ್ಯೂಆರ್ ಕೋಡ್ ಸ್ಕ್ಯಾನಿಂಗ್ ತಂತ್ರಜ್ಞಾನವನ್ನು ‘ಬಿ ಕನೆಕ್ಟೆಡ್‌' ಎಂದು ಹೆಸರಿಸಿದೆ. ಅದು ತನ್ನ ಬಳಕೆದಾರರಿಗೆ ಉತ್ಪನ್ನದ ಗ್ಯಾರಂಟಿಯಂತಹ ಹೆಚ್ಚುವರಿ ಪ್ರಯೋಜನಗಳ ಜೊತೆಗೆ, ಖರೀದಿಯ ಸಮಯದಿಂದ ಉತ್ಪನ್ನ ಅವಧಿ, ಮಾಹಿತಿ. ಬಾಷ್‌ನ ಇತ್ತೀಚಿನ ಆವಿಷ್ಕಾರ, ಎಕ್ಸ್-ಲಾಕ್ ತಂತ್ರಜ್ಞಾನದ ಮಾಹಿತಿಗಳನ್ನು ಒದಗಿಸುತ್ತದೆ.

Recommended Video

ಮತ್ತೆ ಜನಸಾಮಾನ್ಯರಿಗೆ ಅನಿಲಾಘಾತ- ಅಡುಗೆ ಅನಿಲ ದರ 25 ರೂಪಾಯಿ ಹೆಚ್ಚಳ..! | Oneindia Kannada

ಐಒಟಿ ಹಾಗೂ ಸಂಪರ್ಕಿತ ಹೈಡ್ರಾಲಿಕ್ಸ್

ಇಂಟರ್ನೆಟ್ ಆಫ್ ಥಿಂಗ್ಸ್ (ಐಒಟಿ) ಮತ್ತು ಸಂಪರ್ಕಿತ ಹೈಡ್ರಾಲಿಕ್ಸ್ ಭಾರತೀಯ ಮಾರುಕಟ್ಟೆಯಲ್ಲಿ ಪ್ರಾಮುಖ್ಯತೆಯನ್ನು ಪಡೆದುಕೊಳ್ಳುವುದರೊಂದಿಗೆ, ಬಾಷ್ ರೆಕ್ಸ್‌ರೋತ್ ಕಾರ್ಖಾನೆಗಳನ್ನು ಅದರ ಡ್ರೈವ್-ಅಂಡ್-ಕಂಟ್ರೋಲ್ ಪರಿಹಾರಗಳೊಂದಿಗೆ ಸಜ್ಜುಗೊಳಿಸಲು ಮುಂದಾಗಿದೆ.

ಯಂತ್ರೋಪಕರಣದ ತಯಾರಕರು ಮತ್ತು ಬಳಕೆದಾರರಿಗೆ ಬಾಷ್, ದಕ್ಷತೆ, ಉತ್ಪಾದಕತೆ ಮತ್ತು ಆರ್‌ಒಐ ಅನ್ನು ಗರಿಷ್ಠಗೊಳಿಸಲು ಮುನ್ಸೂಚಕ ವಿಶ್ಲೇಷಣೆಯೊಂದಿಗೆ ಹೈಡ್ರಾಲಿಕ್ ಮತ್ತು ವಿದ್ಯುತ್ ವ್ಯವಸ್ಥೆಗಳ ಸಾಮರ್ಥ್ಯಗಳನ್ನು ಒದಗಿಸುತ್ತಿದೆ ಎಂದು ಬಾಷ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಭಾರತದ ಬಾಷ್ ಗ್ರೂಪ್‌ನ ಅಧ್ಯಕ್ಷ ಸೌಮಿತ್ರಾ ಭಟ್ಟಾಚಾರ್ಯ ಹೇಳಿದ್ದಾರೆ.

English summary
Bosch investing Rs 800 cr for developing Adugodi headquarter in to smart campus by 2022.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X