ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫೇಸ್ಬುಕ್, ಟ್ವಿಟ್ಟರ್ ಬಳಸಿ ಎಲ್ ಪಿಜಿ ಸಿಲಿಂಡರ್ ಬುಕ್ ಮಾಡಿ!

By Mahesh
|
Google Oneindia Kannada News

ಬೆಂಗಳೂರು, ಜನವರಿ 08: ಮೋದಿ ಸರ್ಕಾರದ ಡಿಜಿಟಲ್ ಇಂಡಿಯಾದ ಆಶಯಕ್ಕೆ ತಕ್ಕಂತೆ ಇಂಡಿಯನ್ ಆಯಿಲ್ ಕಾರ್ಪೊರೇಷನ್(ಐಒಸಿ) ತನ್ನ ಗ್ರಾಹಕರಿಗೆ ಹೊಸ ಸೌಲಭ್ಯವನ್ನು ನೀಡುತ್ತಿದೆ.ಗ್ರಾಹಕರು ಇನ್ಮುಂದೆ ಫೇಸ್ ಬುಕ್, ಟ್ವಿಟ್ಟರ್ ಮೂಲಕ ಅಡುಗೆ ಅನಿಲ (ಎಲ್‌ಪಿಜಿ) ಸಿಲಿಂಡರ್ ಗಳನ್ನು ಕಾಯ್ದಿರಿಸಬಹುದಾಗಿದೆ.

ಫೋನ್ ಕರೆ/ಎಸ್ಎಂಎಸ್ ಮೂಲಕ ಬುಕ್ಕಿಂಗ್ ವ್ಯವಸ್ಥೆ ಈಗಾಗಲೇ ದೇಶದ ಹಲವೆಡೆ ಜಾರಿಯಲ್ಲಿದೆ.ಈ ಎರಡು ವ್ಯವಸ್ಥೆ ಮೂಲಕ ಉದ್ದನೆಯ ಸಾಲಿನಲ್ಲಿ ನಿಂತು ಅನಿಲ ಸಿಲಿಂಡರ್ ಕಾಯ್ದಿರಿಸುವ ಸಮಸ್ಯೆಗೆ ಪರಿಹಾರ ಸಿಕ್ಕಿದೆ. ಡಿಜಿಟಲ್ ಬುಕ್ಕಿಂಗ್ ಸೌಲಭ್ಯಕ್ಕೆ ಒತ್ತು ನೀಡಲು ಐಒಸಿ ಈ ಕ್ರಮ ಕೈಗೊಂಡಿದೆ.

ಬುಕ್ ಮಾಡುವುದು ಹೇಗೆ?
* ಫೇಸ್ ಬುಕ್ ಗೆ ಲಾಗಿನ್ ಆಗಿರಿ.
* @indianoilcorplimited ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ ನ ಅಧಿಕೃತ ಪುಟಕ್ಕೆ ಭೇಟಿ ಕೊಡಿ
* Book Now ಕ್ಲಿಕ್ ಮಾಡಿ

Book LPG cylinders through Facebook, Twitter : IOC

* ಟ್ವಿಟ್ಟರ್ ಮೂಲಕ ಬುಕ್ ಮಾಡಲು refill @indanerefill ಎಂದು ಟ್ವೀಟ್ ಮಾಡಿ.
* ಒಂದು ವೇಳೆ ನೀವು ನೋಂದಾಯಿತ ಗ್ರಾಹಕರಲ್ಲದಿದ್ದರೆ ಮೊದಲ ಬಾರಿಗೆ ಟ್ವೀಟ್ ಮಾಡುತ್ತಿದ್ದರೆ, LPGID ಎಂದು ಟ್ವೀಟ್ ಮಾಡಿ ನೋಂದಾಯಿಸಿಕೊಳ್ಳಿ.

ಪ್ರಧಾನ ಮಂತ್ರಿ ಪ್ರಧಾನ ಮಂತ್ರಿ "ಉಜ್ವಲ" ಯೋಜನೆ ಎಂದರೇನು?

ಸದ್ಯ ಚಾಲ್ತಿಯಲ್ಲಿರುವ ವ್ಯವಸ್ಥೆಯಂತೆ ಗ್ರಾಹಕರು ತಮ್ಮ ಗ್ಯಾಸ್ ಏಜೆನ್ಸಿ (ಇಂಡೇನ್, ಎಚ್ ಪಿ, ಭಾರತ್) ನೋಂದಣಿ ಮಾಡಿದ ದೂರವಾಣಿ ಸಂಖ್ಯೆ ಮೂಲಕ ಕರೆ ಮಾಡಿ ಅಥವಾ ಎಸ್ಎಂಎಸ್ ಮೂಲಕ (REFILL ಎಂದು ಟೈಪಿಸಿ ನೋಂದಾಯಿತ ಸಂಖ್ಯೆಗೆ ಕಳಿಸಬಹುದು) ಅಡುಗೆ ಅನಿಲ ಸಿಲಿಂಡರ್ ಬುಕ್ ಮಾಡಬಹುದು.

ಜತೆಗೆ ಬುಕ್ಕಿಂಗ್ ಬಗ್ಗೆ ದೂರು, ಸಿಲಿಂಡರ್ ಲಭ್ಯತೆ ಮುಂತಾದ ವಿವರಗಳನ್ನು ಪಡೆಯಬಹುದಾಗಿದೆ. ಇದೆಲ್ಲ ಸೌಲಭ್ಯಗಳನ್ನು ಒಳಗೊಂಡ ಹೊಸ ವ್ಯವಸ್ಥೆಯಲ್ಲಿ ವಾಟ್ಸಾಪ್ ಮೂಲಕವೂ ಇನ್ನಷ್ಟು ಸುಲಭವಾಗಿ ಗ್ಯಾಸ್ ಸಿಲಿಂಡರ್ ಬುಕ್ಕಿಂಗ್ ಮಾಡುವ ವ್ಯವಸ್ಥೆ ಎಲ್ಲಾ ತೈಲ ಕಂಪನಿಗಳು ಮುಂದಿನ ದಿನಗಳಲ್ಲಿ ತರಲಿವೆ.

ಸಬ್ಸಿಡಿ ಅಡುಗೆ ಅನಿಲ(ಎಲ್‌ಪಿಜಿ) ಸಿಲಿಂಡರ್‌ ಬೆಲೆಯನ್ನು ಪ್ರತಿ ತಿಂಗಳು 4 ರು. ಏರಿಕೆ ಮಾಡುವಂತೆ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳಿಗೆ ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ಜುಲೈ ತಿಂಗಳಿನಲ್ಲಿ ಆದೇಶ ನೀಡಿತ್ತು. ಆದರೆ, ಡಿಸೆಂಬರ್ ತಿಂಗಳ ಅಂತ್ಯಕ್ಕೆ ಈ ಅದೇಶವನ್ನು ಹಿಂಪಡೆಯಲಾಗಿದೆ.

English summary
The Indian Oil Corporation (IOC) has come up with a facility wherein the consumers can book their gas cylinders through social media platforms - Facebook and Twitter. Earlier, consumers used telephone or messaging services to book gas cylinders.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X