• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಚಿಣ್ಣರ ಅಚ್ಚುಮೆಚ್ಚಿನ ಮ್ಯಾಗಜೀನ್ ಚಂದಮಾಮ ಮಾರಿಬಿಡಿ : ಹೈಕೋರ್ಟ್

|

ಮುಂಬೈ, ಜನವರಿ 17:ಕನ್ನಡ, ಸಂಸ್ಕೃತ ಸೇರಿದಂತೆ ಒಟ್ಟು 13 ಭಾಷೆಗಳಲ್ಲಿ ಅಚ್ಚಾಗಿ ದೇಶದ ಜನತೆಯ ಬಾಲ್ಯದ ನೆಚ್ಚಿನ ಒಡನಾಡಿಯಾಗಿ ಬೆಳೆದ ದೇಶದ ಅಚ್ಚುಮೆಚ್ಚಿನ ನಿಯತಕಾಲಿಕ ಚಂದಮಾಮ ಈಗ ಮಾರಾಟಕ್ಕಿದೆ. ಚೆನ್ನೈ ಮೂಲದ ಚಂದಮಾಮಕ್ಕೆ ಸೇರಿದ ಬೌದ್ಧಿಕ ಆಸ್ತಿ ಹಕ್ಕುಗಳನ್ನು ಹೊಂದಿದ್ದ ಜಿಯೋಡೆಸಿಕ್ ಲಿಮಿಟೆಡ್ ಸಂಸ್ಥೆಯ ಮಾಲೀಕರು ಸದ್ಯ ವಂಚನೆ ಪ್ರಕರಣವೊಂದರಲ್ಲಿ ಸಿಲುಕಿ ಜೈಲುಪಾಲಾಗಿದ್ದಾರೆ. ಹೀಗಾಗಿ, 2014ರಲ್ಲಿ ಜಿಯೋಡೆಸಿಕ್ ಸಂಸ್ಥೆ ದಿವಾಳಿಯಾಗಿ ಸ್ಥಗಿತಗೊಂಡಿದ್ದು, ಚಂದಮಾಮ ಮ್ಯಾಗಜೀನ್ ಮಾರಲು ಅಡ್ಡಿಯಿಲ್ಲ ಎಂದು ಬಾಂಬೆ ಹೈಕೋರ್ಟ್ ತನ್ನ ಆದೇಶದಲ್ಲಿ ತಿಳಿಸಿದೆ.

ಭಾರತ ಸ್ವಾತಂತ್ರ್ಯ ಪಡೆಯುವುದಕ್ಕೂ ಮುನ್ನ ಜುಲೈ, 1947ರಲ್ಲಿ ಬಿ.ನಾಗಿ ರೆಡ್ಡಿ ಹಾಗೂ ಚಕ್ರಪಾಣಿ ಅವರಿಂದ ತೆಲುಗು ಹಾಗೂ ತಮಿಳು ಭಾಷೆಯಲ್ಲಿ ಏಕಕಾಲಕ್ಕೆ ಚಂದಮಾಮ ಮಕ್ಕಳ ನಿಯತಕಾಲಿಕ ಪ್ರಕಟವಾಯಿತು. ನಂತರ ಉಳಿದ ಭಾಷೆಗಳಲ್ಲೂ ಜನಪ್ರಿಯತೆ ಗಳಿಸಿಕೊಂಡಿತು. 2004ರಲ್ಲಿ ಜಿಯೋಡೆಸಿಕ್ ಸಂಸ್ಥೆ ಆರ್ಥಿಕ ಮುಗ್ಗಟ್ಟು ಎದುರಿಸಿ ಸ್ಥಗಿತಗೊಂಡಿತು. 2010ರಲ್ಲಿ ಚಂದಮಾಮ ಪುನಃ ಹೊಸ ವಿನ್ಯಾಸದೊಂದಿಗೆ ಮಾರುಕಟ್ಟೆಯಲ್ಲಿ ಕಾಣಿಸಿಕೊಂಡಿತು. ಡಿಜಿಟಲ್ ಸಾಧ್ಯತೆಯನ್ನು ತನ್ನದಾಗಿಸಿಕೊಂಡು ಐಫೋನ್ ನಲ್ಲೂ ಕಾಣಿಸಿಕೊಂಡಿತು.

ಚಂದಮಾಮಾದ ಚೆಂದದ ಪೌರಾಣಿಕ ಕಥೆಗಳ ಯುಗಾಂತ್ಯ

ಜಿಯೊಸೆಕ್‌ನ ಮೂವರು ನಿರ್ದೇಶಕರಾದ ಕಿರಣ್ ಪ್ರಕಾಶ್ ಕುಲಕರ್ಣಿ, ಪ್ರಶಾಂತ್ ಮುಲೇಕರ್ ಹಾಗೂ ಪಂಕಜ್ ಶ್ರೀವಾಸ್ತವ ಹಾಗೂ ಕಂಪೆನಿಯ ಲೆಕ್ಕಪರಿಶೋಧಕ ದಿನೇಶ್ ಜಜೋಡಿಯಾ ಪ್ರಸ್ತುತ ಬಂಧನದಲ್ಲಿದ್ದಾರೆ.

ಮೂಲಗಳ ಪ್ರಕಾರ, ಚಂದಮಾಮ ನಿಯತಕಾಲಿಕ ಒಂದೇ 25 ಕೋ.ರೂ. ಬೆಲೆ ಬಾಳುತ್ತದೆ. ಚಂದಮಾಮವಲ್ಲದೆ ಜಾರಿನಿರ್ದೇಶನಾಲಯ ಪಿಎಂಎಲ್‌ಎ ಪ್ರಕಾರ ಜಿಯೊಡೆಸಿಕ್ ಲಿ. ನಿರ್ದೇಶಕರ 16 ಕೋ.ರೂ. ಆಸ್ತಿಯನ್ನು ಸೇರಿಸಿಕೊಂಡಿದೆ.

15ಕ್ಕೂ ಅಧಿಕ ವಿದೇಶಿ ಕರೆನ್ಸಿ ಪರಿವರ್ತಕ ಬಾಂಡ್ (FCCB) ಹೊಂದಿದವರಿಗೆ 162 ಮಿಲಿಯನ್ ಯುಎಸ್ ಡಾಲರ್ (ಸುಮಾರು 1000 ಕೋಟಿ ರು) ನೀಡಲು ವಿಫಲರಾಗಿದ್ದರಿಂದ ಜಿಯೋಸೆಡಿಕ್ ಆಸ್ತಿಯನ್ನು ಕೋರ್ಟ್ ತನ್ನ ವಶಕ್ಕೆ ತೆಗೆದುಕೊಂಡಿದೆ. ಈ ಕಂಪೆನಿ ಹಾಗೂ ಅಧಿಕಾರಿಗಳ ಮೇಲೆ ತೆರಿಗೆ ವಂಚಿಸಿದ ಆರೋಪಕ್ಕೆ ಸಂಬಂಧಿಸಿ ಇಡಿ, ಆರ್ಥಿಕ ಅಪರಾಧ ವಿಭಾಗ ಹಾಗೂ ಮುಂಬೈ ಪೊಲೀಸರು ನಿಗಾಹಿಸಿದ್ದಾರೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Intellectual property rights of the Chennai-based children's magazine Chandamama, that was off the stands after its owner Geodesic Ltd shut shop in 2014, are up for grabs following an order by the Bombay High Court, the Indian Express reported
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more