ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಷೇರುಪೇಟೆಯಲ್ಲಿ ಕರಡಿ ಕುಣಿತ: ಸೆನ್ಸೆಕ್ಸ್ 1,100 ಪಾಯಿಂಟ್ಸ್ ಕುಸಿತ

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 24: ಭಾರತೀಯ ಷೇರು ಮಾರುಕಟ್ಟೆ ಗುರುವಾರ ಅಕ್ಷರಶಃ ನಡುಗಿ ಹೋಗಿದೆ. ಮುಂಬೈ ಷೇರುಪೇಟೆ ಸೆನ್ಸೆಕ್ಸ್‌ನಲ್ಲಿ ಕರಡಿ ಕುಣಿತ ಜೋರಾಗಿದ್ದು ಬರೋಬ್ಬರಿ 1,114 ಪಾಯಿಂಟ್ಸ್ ಕುಸಿತ ಕಂಡಿದೆ. ರಾಷ್ಟ್ರೀಯ ಷೇರುಪೇಟೆ ನಿಫ್ಟಿ ಕೂಡ 326 ಪಾಯಿಂಟ್ಸ್‌ಗಳ ಕುಸಿತಕ್ಕೆ ಸಾಕ್ಷಿಯಾಗಿದೆ.

ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್ ಗುರುವಾರ ಶೇ. 3 ಅಥವಾ 1114 ಪಾಯಿಂಟ್ಸ್‌ಗಳ ಕುಸಿತದೊಂದಿಗೆ 36,553.60ಗೆ ತಲುಪಿದೆ. ಇನ್ನೂ ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ ಕೂಡ ಶೇ. 3ರಷ್ಟು ಅಥವಾ 326 ಪಾಯಿಂಟ್ಸ್‌ ಇಳಿಕೆಗೊಂಡು 10,805.55 ಪಾಯಿಂಟ್ಸ್‌ಗಳಿಗೆ ತಲುಪಿದೆ.

ಸೆನ್ಸೆಕ್ಸ್, ನಿಫ್ಟಿ ಮತ್ತೆ ಕುಸಿತ: ತಲೆ ಮೇಲೆ ಕೈ ಹೊತ್ತು ಕುಳಿತ ಹೂಡಿಕೆದಾರರುಸೆನ್ಸೆಕ್ಸ್, ನಿಫ್ಟಿ ಮತ್ತೆ ಕುಸಿತ: ತಲೆ ಮೇಲೆ ಕೈ ಹೊತ್ತು ಕುಳಿತ ಹೂಡಿಕೆದಾರರು

ಗುರುವಾರ ಎಲ್ಲಾ ವಲಯ ಸೂಚ್ಯಂಕಗಳು ಕೆಂಪು ಬಣ್ಣಕ್ಕೆ ತಿರುಗಿದವು. ಅದರಲ್ಲೂ ಐಟಿ ಕಂಪನಿ ಷೇರುಗಳು ಹೆಚ್ಚು ನಷ್ಟ ಅನುಭವಿಸಿದ್ದು, ಎಂ & ಎಂ, ಟಿಸಿಎಸ್, ಬಜಾಜ್ ಫೈನಾನ್ಸ್, ಟಾಟಾ ಮೋಟಾರ್ಸ್ ಮತ್ತು ಇಂಡಸ್ಇಂಡ್ ಬ್ಯಾಂಕ್ ನಿಫ್ಟಿಯಲ್ಲಿ ಹೆಚ್ಚು ನಷ್ಟ ಅನುಭವಿಸಿದವರಲ್ಲಿ ಸೇರಿವೆ.

ಮಾರುಕಟ್ಟೆ ಕುಸಿತದಿಂದಾಗಿ ಆರು ದಿನಗಳಲ್ಲಿ ಹೂಡಿಕೆದಾರರು 11,31,815.5 ಕೋಟಿ ರೂ.ಗಳನ್ನು ಕಳೆದುಕೊಂಡಿದ್ದಾರೆ.

ಹೆಚ್ಚು ನಷ್ಟ ಅನುಭವಿಸಿದ ಎನ್‌ಎಸ್‌ಇ ಷೇರುಗಳು

ಹೆಚ್ಚು ನಷ್ಟ ಅನುಭವಿಸಿದ ಎನ್‌ಎಸ್‌ಇ ಷೇರುಗಳು

ಅಶೋಕ್ ಲೇಲ್ಯಾಂಡ್, ಶ್ರೀರಾಮ್ ಟ್ರಾನ್ಸ್‌ಪೋರ್ಟ್ಸ್, ಇಂಡಸ್ಇಂಡ್ ಬ್ಯಾಂಕ್, ಇಂಟರ್‌ಗ್ಲೋಬ್ ಇವಿ, ಬಜಾಜ್ ಫೈನಾನ್ಸ್, ಜಿಂದಾಲ್ ಸ್ಟೀಲ್, ಟಾಟಾ ಮೋಟಾರ್ಸ್, ಎಂ&ಎಂ, ಎಲ್‌ಐಸಿ ಹೌಸಿಂಗ್ ಫೈನಾನ್ಸ್, ಟಾಟಾ ಪವರ್ ಟಿಸಿಎಸ್ ಹೆಚ್ಚು ನಷ್ಟು ಕಂಡ ಷೇರುಗಳಾಗಿವೆ.

ಹೆಚ್ಚು ಇಳಿಕೆಗೊಂಡ ಬಿಎಸ್‌ಇ ಷೇರುಗಳು

ಹೆಚ್ಚು ಇಳಿಕೆಗೊಂಡ ಬಿಎಸ್‌ಇ ಷೇರುಗಳು

ಇಂಡಸ್‌ಇಂಡ್ ಬ್ಯಾಂಕ್, ಬಜಾಜ್ ಫೈನಾನ್ಸ್, ಎಂ&ಎಂ, ಟೆಕ್ ಮಹೀಂದ್ರಾ, ಟಿಸಿಎಸ್, ಟಾಟಾ ಸ್ಟೀಲ್, ಐಸಿಐಸಿಐ ಬ್ಯಾಂಕ್, ಆ್ಕ್ಸಿಸ್ ಬ್ಯಾಂಕ್, ಬಜಾಜ್ ಫಿನ್‌ಸರ್ವ್, ಎಸ್‌ಬಿಐ, ಭಾರ್ತಿ ಏರ್‌ಟೆಲ್, ಐಟಿಸಿ , ಸನ್‌ಫಾರ್ಮ್ ಶೇಕಡಾ 3ಕ್ಕಿಂತ ಹೆಚ್ಚು ನಷ್ಟ ಅನುಭವಿಸಿದೆ.

ಷೇರುಪೇಟೆ ರಕ್ತದೋಕುಳಿ ನಡುವೆ ಲಾಭ ಪಡೆದ ಷೇರುಗಳು

ಷೇರುಪೇಟೆ ರಕ್ತದೋಕುಳಿ ನಡುವೆ ಲಾಭ ಪಡೆದ ಷೇರುಗಳು

ಅಪೊಲೊ ಹಾಸ್ಪಿಟಲ್, ಗೋದ್ರೆಜ್ ಕನ್ಸೂಮರ್, ಕೋಲ್ಗೆಟ್, ಐಸಿಐಸಿಐ ಪ್ರೊಡೆನ್ಷಿಯ, ವೇದಾಂತ, ಭಾರ್ತಿ ಇನ್ಫ್ರಾಟೆಲ್, ಬರ್ಗರ್ ಪೇಂಟ್ಸ್‌, ಮರಿಕೊ, ಹೆಚ್‌ಯುಎಲ್, ಡಾಬರ್ ಇಂಡಿಯಾ

ದುರ್ಬಲ ಜಾಗತಿಕ ಮಾರುಕಟ್ಟೆ

ದುರ್ಬಲ ಜಾಗತಿಕ ಮಾರುಕಟ್ಟೆ

ಭಾರತೀಯ ಮಾರುಕಟ್ಟೆಗಳು ಜಾಗತಿಕ ಸೂಚನೆಗಳ ಮೇಲಿನ ಏರಿಳಿತದೊಂದಿಗೆ ವಹಿವಾಟು ನಡೆಸಿದವು. ಶಾಂಘೈ ಕಾಂಪೋಸಿಟ್ ಇಂಡೆಕ್ಸ್ ಮತ್ತು ಕೋಸ್ಪಿ ಸುಮಾರು 2 ಪ್ರತಿಶತದಷ್ಟು ಕುಸಿದಿದ್ದರೆ, ನಿಕ್ಕಿ 1 ಶೇಕಡಾ ಕುಸಿಯಿತು.

ಜಾಗತಿಕ ಆರ್ಥಿಕ ಚೇತರಿಕೆ ತಡವಾಗಲಿದೆ ಎಂಬ ಹೊಸ ಆತಂಕಗಳ ಮಧ್ಯೆ ಏಷ್ಯಾದ ಷೇರುಗಳು ಗುರುವಾರ ವಾಲ್ ಸ್ಟ್ರೀಟ್ ಅಧಿವೇಶನವನ್ನು ತೀವ್ರವಾಗಿ ಕಡಿಮೆಗೊಳಿಸಿದವು.

ಹಣಕಾಸಿನ ಪ್ರಚೋದನೆಯ ಬಗೆಗಿನ ಅನಿಶ್ಚಿತತೆಯು ಆರ್ಥಿಕತೆಯ ಬಗ್ಗೆ ಕಳವಳವನ್ನು ಉಂಟುಮಾಡಿದರೂ ವ್ಯವಹಾರ ಚಟುವಟಿಕೆಗಳು ತಣ್ಣಗಾಗುತ್ತವೆ ಎಂದು ಅಂಕಿ-ಅಂಶಗಳು ತೋರಿಸಿದ ನಂತರ ಅಮೆರಿಕಾ ಷೇರುಗಳು ತೀವ್ರವಾಗಿ ಕುಸಿದವು.

ಕೋವಿಡ್ ಪ್ರಕರಣಗಳು ಉಲ್ಪಣಗೊಳ್ಳುತ್ತಿವೆ

ಕೋವಿಡ್ ಪ್ರಕರಣಗಳು ಉಲ್ಪಣಗೊಳ್ಳುತ್ತಿವೆ

ವಿಶ್ವದ ಅತಿ ಹೆಚ್ಚು ದೈನಂದಿನ ಕೋವಿಡ್-19 ಸೋಂಕು ಪ್ರಕರಣಗಳನ್ನು ಭಾರತ ಸತತವಾಗಿ ವರದಿ ಮಾಡುತ್ತಿದೆ. ಇಲ್ಲಿಯವರೆಗೆ, ಭಾರತವು 57,32,518 ದೃಢಪಡಿಸಿದ ಕೋವಿಡ್-19 ಪ್ರಕರಣಗಳನ್ನು ದಾಖಲಿಸಿದೆ. ಇದರಲ್ಲಿ 91,149 ಸಾವುಗಳು ಸೇರಿವೆ. ಮಹಾರಾಷ್ಟ್ರ, ಆಂಧ್ರಪ್ರದೇಶ ಮತ್ತು ತಮಿಳುನಾಡಿನಲ್ಲಿ ಅತಿ ಹೆಚ್ಚು ಪ್ರಕರಣಗಳು ವರದಿಯಾಗಿವೆ. ಇದು ವಿದೇಶಿ ಹೂಡಿಕೆದಾರರನ್ನು ಆತಂಕಕ್ಕೆ ಈಡುಮಾಡಿ ಬಂಡವಾಳ ಹಿಂತೆಗೆದುಕೊಳ್ಳುವಂತೆ ಪ್ರೇರೇಪಿಸಿದೆ.

English summary
Bears continued dominating the equity market as key equity indices Sensex and Nifty traded with deep cuts in morning trade on September 24.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X