ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕಾ ಶೇರು ಮಾರುಕಟ್ಟೆಗೆ 6 ವರ್ಷಗಳ ಕೆಟ್ಟ ದಿನ, ಜಗತ್ತಿನೆಲ್ಲೆಡೆ ತಲ್ಲಣ

By Sachhidananda Acharya
|
Google Oneindia Kannada News

ವಾಲ್ ಸ್ಟ್ರೀಟ್, ಫೆಬ್ರವರಿ 6: ಅಮೆರಿಕಾ ಶೇರು ಮಾರುಕಟ್ಟೆಗೆ ಗರ ಬಡಿದಿದೆ. ಇಲ್ಲಿನ ಹೂಡಿಕೆದಾರರಿಗೆ ಕಳೆದ ಆರು ವರ್ಷಗಳಲ್ಲೇ ಅತ್ಯಂತ ಕೆಟ್ಟ ದಿನಗಳು ಎದುರಾಗಿದ್ದು ಸೋಮವಾರ ಒಂದೇ ದಿನ ಶೇರು ಮಾರುಕಟ್ಟೆಯಲ್ಲಿ 1,175 ಅಂಕಗಳು ಪತನವಾಗಿವೆ.

ಕಪ್ಪು ಸೋಮವಾರದಂದ ಶೇಕಡಾ 4.6 ಕುಡಿತ ಕಂಡು 'ಡೊವ್ ಜೋನ್ಸ್ ಇಂಡಸ್ಟ್ರಿಯಲ್ ಅವರೇಜ್ ಇಂಡೆಕ್ಸ್' 24,345.75ಕ್ಕೆ ಬಂದು ನಿಂತಿತ್ತು. ಆರಂಭದಲ್ಲಿ ಒಟ್ಟು 1,500 ಹೆಚ್ಚು ಅಂಕಗಳ ಕುಸಿತ ಮಾರುಕ್ಟೆಯಲ್ಲಿ ಕಂಡು ಬಂದಿತ್ತು. ಆದರೆ ದಿನದಂತ್ಯಕ್ಕೆ ಸ್ವಲ್ಪ ಚೇತರಿಕೆ ಕಂಡು ಒಂದೇ ದಿನ 1,175 ಅಂಕಗಳನ್ನು ಡೊವ್ ಜೋನ್ಸ್ ಕಳೆದುಕೊಂಡಿದೆ.

ಅಮೆರಿಕಾ ಮಾರುಕಟ್ಟೆಯಲ್ಲಿ ಕಂಡು ಬಂದ ಕುಸಿತ ಜಾಗತಿಕ ಇತರ ದೇಶಗಳ ಮಾರುಕಟ್ಟೆಗೂ ವ್ಯಾಪಿಸಿದ್ದು ಒಂದೊಂದೇ ದೇಶಗಳ ಶೇರು ಮಾರುಕಟ್ಟೆಗಳು ಕುಸಿಯತೊಡಗಿವೆ. ಮುಖ್ಯವಾಗಿ ಭಾರತ ಸೇರಿದಂತೆ ಏಷ್ಯಾದ ಮಾರುಕಟ್ಟೆಗಳಲ್ಲಿ ಅಂಕಗಳ ಕುಸಿತ ಕಂಡು ಬಂದಿದ್ದು ಹೂಡಿಕೆದಾರರು ಭಾರೀ ಹಣ ಕಳೆದುಕೊಂಡಿದ್ದಾರೆ.

 'Black Monday' for America Share Market, Plunges 1,175 Points In A Single Trading

ಅಮೆರಿಕಾದ 'ಡೊವ್ ಜೋನ್ಸ್ ಇಂಡಸ್ಟ್ರಿಯಲ್ ಅವರೇಜ್ ಇಂಡೆಕ್ಸ್' 2011ರ ಆಗಸ್ಟ್ ನಲ್ಲಿ ಈ ರೀತಿ ತೀವ್ರ ಕುಸಿತ ಕಂಡಿತ್ತು. ಅದಾದ ಬಳಿಕ ಭೀಕರ ಕುಸಿತಕ್ಕೆ ಒಳಗಾಗಿದ್ದು ಇದೇ ಮೊದಲು. 'ಸ್ಟಾಂಡರ್ಟ್ ಆ್ಯಂಡ್ ಪೂವರ್ಸ್' ಅಮೆರಿಕಾದ ಕ್ರೆಡಿಟ್ ರೇಟಿಂಗ್ ನಲ್ಲಿ ಇಳಿಕೆ ಮಾಡಿದ್ದೇ ಈ ಕುಸಿತಕ್ಕೆ ಕಾರಣ ಎಂದು ವಿಶ್ಲೇಷಿಸಲಾಗಿದೆ.

English summary
The Dow Jones industrial average plunged 1,175 points on Monday trading. On Monday the America market tumbled 4.6% to close down at 24,345.75.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X