ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೇತರಿಕೆ ಹಾದಿ ಕಂಡುಕೊಂಡ ಬಿಟ್ ಕಾಯಿನ್ ಮೌಲ್ಯ

|
Google Oneindia Kannada News

ಬೆಂಗಳೂರು, ಮಾರ್ಚ್ 4: ಕಳೆದ ಕೆಲ ದಿನಗಳಿಂದ ಕುಸಿತ ಕಾಣುತ್ತಿದ್ದ ಬಿಟ್ ಕಾಯಿನ್ ಮೌಲ್ಯ ಮತ್ತೊಮ್ಮೆ 50, 000 ಡಾಲರ್ ಮೌಲಕ್ಕೇರಿದೆ. ಸತತವಾಗಿ ಎರಡನೇ ದಿನ ಶೇ 5ರಷ್ಟು ಮೌಲ್ಯ ಹೆಚ್ಚಿಸಿಕೊಂಡು $50,942.58ಕ್ಕೇರಿದೆ.

ಡಿಜಿಟಲ್ ದುಡ್ಡು ಬಿಟ್ ಕಾಯಿನ್ 1 ಟ್ರಿಲಿಯನ್ ಡಾಲರ್ ಮಾರುಕಟ್ಟೆ ಮೌಲ್ಯ ದಾಟಿ ಅಚ್ಚರಿ ಮೂಡಿಸಿದ ಬಳಿಕ ಭಾರಿ ಕುಸಿತ ಕಂಡಿತ್ತು. ಕಳೆದ ವರ್ಷ ಇದೇ ಅವಧಿಯಲ್ಲಿ 27,734 ಡಾಲರ್ ಮೌಲ್ಯ ಹೊಂದಿದ್ದ ಬಿಟ್ ಕಾಯಿನ್ ಶೇ 83.77ರಷ್ಟು ಏರಿಕೆ ಕಂಡಿದೆ.

ಮಾದಕ ಲೋಕದ ಮಹಾ ಅಸ್ತ್ರ ಬಿಟ್ ಕಾಯಿನ್ ! ಮಾದಕ ಲೋಕದ ಮಹಾ ಅಸ್ತ್ರ ಬಿಟ್ ಕಾಯಿನ್ !

ಈ ಸಮಯಕ್ಕೆ ಬಿಟ್ ಕಾಯಿನ್ ಮೌಲ್ಯ:
ಒಟ್ಟಾರೆ ಮಾರುಕಟ್ಟೆ ಮೌಲ್ಯ: $917,999,472,750
ಒಂದು ಬಿಟ್ ಕಾಯಿನ್ ಬೆಲೆ = 35,86,236.38 ರು
ಬಿಟ್ ಕಾಯಿನ್ ಬೆಲೆ: $50,280.32

Bitcoin Rate rises On March 04: Latest Rate Here

ಕಳೆದ 24 ಗಂಟೆಗಳಲ್ಲಿ ಶೇ 1.20ರಷ್ಟು ಏರಿಕೆ ಕಂಡಿದ್ದರೆ, ಈ ವಾರ ಶೇ2.31ರಷ್ಟು ಏರಿಕೆಯಾಗಿದೆ. ಆದಾಯಕ್ಕೆ ಸಂಬಂಧಿಸಿದಂತೆ, ಕಳೆದ ಒಂದು ವರ್ಷದಲ್ಲಿ, ಬಿಟ್‌ಕಾಯಿನ್ ಶೇಕಡಾ 83.77ರಷ್ಟು ನೀಡಿದೆ.

ಬಿಟ್ ಕಾಯಿನ್ ವಿಶ್ವಕ್ಕೆ ಭವಿಷ್ಯದ ಸೂಪರ್ ಕರೆನ್ಸಿ ! ಬಿಟ್ ಕಾಯಿನ್ ವಿಶ್ವಕ್ಕೆ ಭವಿಷ್ಯದ ಸೂಪರ್ ಕರೆನ್ಸಿ !

ಬಿಟ್‌ಕಾಯಿನ್‌: ಇದು ಅತ್ಯಂತ ಜನಪ್ರಿಯ ಕ್ರಿಪ್ಟೋಕರೆನ್ಸಿಯಾಗಿದೆ. ಡಿಜಿಟಲ್ ಕರೆನ್ಸಿಯಾಗಿರುವುದರಿಂದ ಯಾವುದೇ ರೀತಿಯಲ್ಲಿ ಮುದ್ರಣ ರೂಪದಲ್ಲಿ ಸಿಗುವುದಿಲ್ಲ. ರೂಪಾಯಿ, ಡಾಲರ್, ಯುರೋ ಗಳಂತೆ ಭೌತಿಕ ರೂಪದಲ್ಲಿ ಇರುವುದಿಲ್ಲ. ಯಾವುದೇ ದೇಶ, ಭಾಷೆ, ಬ್ಯಾಂಕುಗಳಿಗೆ ಇದು ಸೀಮಿತವಾಗಿಲ್ಲ. ಭಾರತ, ಸೌದಿ ಅರೇಬಿಯಾ, ಅಲ್ಜೀರಿಯಾ, ಬೊಲಿವಿಯಾ ಅನೇಕ ದೇಶಗಳಲ್ಲಿ ನಿಷೇಧವಾಗಿರುವ ಕ್ರಿಪ್ಟೋ ಕರೆನ್ಸಿ ಇತ್ತೀಚೆಗೆ ಭಾರಿ ಬೇಡಿಕೆ ಪಡೆದು ತನ್ನ ಮೌಲ್ಯ ಹೆಚ್ಚಿಸಿಕೊಂಡಿದೆ. ಆದರೆ, ಡಿಜಿಟಲ್ ಆಸ್ತಿ ರೂಪದಲ್ಲಿ ಕ್ರಿಪ್ಟೋ ಕರೆನ್ಸಿ ಬಳಕೆಯಾಗಬಹುದೇ ಹೊರತೂ ಸಾಮಾನ್ಯ ವ್ಯವಹಾರಕ್ಕೆ ಸೂಕ್ತವಲ್ಲ ಎಂದು ತಜ್ಞರು ಕೂಡಾ ಅಭಿಪ್ರಾಯಪಟ್ಟಿದ್ದಾರೆ.

English summary
Bitcoin Rate rises On March 04: Here the details of bitcoin Latest Rate and Market Cap:
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X