ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾರ್ಚ್ 16ರಂದು ಸ್ಥಿರತೆ ಪಡೆದುಕೊಂಡ ಬಿಟ್ ಕಾಯಿನ್ ಮೌಲ್ಯ

|
Google Oneindia Kannada News

ಬೆಂಗಳೂರು, ಮಾರ್ಚ್16: ಜನಪ್ರಿಯ ಕ್ರಿಪ್ಟೋಕರೆನ್ಸಿ ಬಿಟ್ ಕಾಯಿನ್ ಮೌಲ್ಯ ಮಂಗಳವಾರ ಸ್ಥಿರತೆ ಪಡೆದುಕೊಂಡಿದೆ. ಸತತವಾಗಿ ಏರಿಕೆ ನಂತರ ಸೋಮವಾರದಂದು ಶೇ 9.2 ರಷ್ಟು ಒಟ್ಟಾರೆ ಕುಸಿತ ಕಂಡು ಬೆಳಗ್ಗಿನ ವಹಿವಾಟಿನಲ್ಲಿ $56, 325ಕ್ಕೆ ಕುಸಿದಿತ್ತು. ಆದರೆ, ಮಂಗಳವಾರ(ಮಾರ್ಚ್ 16) ಕೊಂಚ ಇಳಿಕೆಯಾದರೂ $55,619.72 ನಂತೆ ವಹಿವಾಟು ನಡೆಸಿದೆ.

ಭಾನುವಾರ (ಮಾರ್ಚ್ 14)ರಂದು 60, 000 ಡಾಲರ್ ಗಡಿ ದಾಟಿತ್ತು. ಶನಿವಾರದಂದು ಶೇ 6.64ರಷ್ಟು ಏರಿಕೆ ಕಂಡು ಮೊದಲ ಬಾರಿಗೆ ದಾಖಲೆಯ $61,073.71 ತಲುಪಿತ್ತು.

ಡಿಜಿಟಲ್ ದುಡ್ಡು ಬಿಟ್ ಕಾಯಿನ್ 1 ಟ್ರಿಲಿಯನ್ ಡಾಲರ್ ಮಾರುಕಟ್ಟೆ ಮೌಲ್ಯ ದಾಟಿ ಅಚ್ಚರಿ ಮೂಡಿಸಿದ ಬಳಿಕ ಭಾರಿ ಕುಸಿತ ಕಂಡಿತ್ತು. ಕಳೆದ ವರ್ಷ ಇದೇ ಅವಧಿಯಲ್ಲಿ 27,734 ಡಾಲರ್ ಮೌಲ್ಯ ಹೊಂದಿದ್ದ ಬಿಟ್ ಕಾಯಿನ್ ಶೇ 120.2ರಷ್ಟು ಏರಿಕೆ ಕಂಡಿದೆ.

Bitcoin Rate decline On March 16: Latest Rate Here

ಮಾರ್ಚ್ 15ರಂದು ಈ ಸಮಯಕ್ಕೆ ಬಿಟ್ ಕಾಯಿನ್ ಮೌಲ್ಯ:
ಬಿಟ್ ಕಾಯಿನ್ ಬೆಲೆ: $55,619.72
ಒಟ್ಟಾರೆ ಮಾರುಕಟ್ಟೆ ಮೌಲ್ಯ: $1,037,617,098,149
ಒಂದು ಬಿಟ್ ಕಾಯಿನ್ ಬೆಲೆ = 39,93,297.13 ರು
(1 USD=72.52 ರುಪಾಯಿ)

ಕಳೆದ 24 ಗಂಟೆಗಳಲ್ಲಿ ಶೇ 1.87ಷ್ಟು ಇಳಿಕೆ ಕಂಡಿದೆ. ಈ ವಾರ 1.89% ರಷ್ಟು ಏರಿಕೆಯಾಗಿತ್ತು. ಈ ನಡುವೆ ಮತ್ತೊಂದು ಡಿಜಿಟಲ್ ಕರೆನ್ಸಿ ಎಥೆರೆಯಂ(Ethereum) ಕಳೆದ 24 ಗಂಟೆಗಳಲ್ಲಿ ಶೇ 0.12ರಷ್ಟು ಏರಿಕೆ ಕಂಡು 1,779.52ಡಾಲರ್ ಮೌಲ್ಯ ಪಡೆದಿದೆ. ಒಟ್ಟಾರೆ $ 203,697,141,351ಮೌಲ್ಯ ಹೊಂದಿದೆ. ಮತ್ತೊಂದು ಕರೆನ್ಸಿ ಕಾರ್ಡಾನೋ ಕಳೆದ 24 ಗಂಟೆಗಳಲ್ಲಿ ಶೇ 16ರಷ್ಟು ಏರಿಕೆ ಕಂಡಿದ್ದು, $39,525,731,248 ಮೌಲ್ಯ ಹೊಂದಿದೆ.

ಬಿಟ್‌ಕಾಯಿನ್‌: ಇದು ಅತ್ಯಂತ ಜನಪ್ರಿಯ ಕ್ರಿಪ್ಟೋಕರೆನ್ಸಿಯಾಗಿದೆ. ಡಿಜಿಟಲ್ ಕರೆನ್ಸಿಯಾಗಿರುವುದರಿಂದ ಯಾವುದೇ ರೀತಿಯಲ್ಲಿ ಮುದ್ರಣ ರೂಪದಲ್ಲಿ ಸಿಗುವುದಿಲ್ಲ. ರೂಪಾಯಿ, ಡಾಲರ್, ಯುರೋ ಗಳಂತೆ ಭೌತಿಕ ರೂಪದಲ್ಲಿ ಇರುವುದಿಲ್ಲ. ಯಾವುದೇ ದೇಶ, ಭಾಷೆ, ಬ್ಯಾಂಕುಗಳಿಗೆ ಇದು ಸೀಮಿತವಾಗಿಲ್ಲ. ಭಾರತ, ಸೌದಿ ಅರೇಬಿಯಾ, ಅಲ್ಜೀರಿಯಾ, ಬೊಲಿವಿಯಾ ಅನೇಕ ದೇಶಗಳಲ್ಲಿ ನಿಷೇಧವಾಗಿರುವ ಕ್ರಿಪ್ಟೋ ಕರೆನ್ಸಿ ಇತ್ತೀಚೆಗೆ ಭಾರಿ ಬೇಡಿಕೆ ಪಡೆದು ತನ್ನ ಮೌಲ್ಯ ಹೆಚ್ಚಿಸಿಕೊಂಡಿದೆ. ಆದರೆ, ಡಿಜಿಟಲ್ ಆಸ್ತಿ ರೂಪದಲ್ಲಿ ಕ್ರಿಪ್ಟೋ ಕರೆನ್ಸಿ ಬಳಕೆಯಾಗಬಹುದೇ ಹೊರತೂ ಸಾಮಾನ್ಯ ವ್ಯವಹಾರಕ್ಕೆ ಸೂಕ್ತವಲ್ಲ ಎಂದು ತಜ್ಞರು ಕೂಡಾ ಅಭಿಪ್ರಾಯಪಟ್ಟಿದ್ದಾರೆ.

English summary
Bitcoin Rate rises On March 16: Here the details of bitcoin Latest Rate decline after rallying 61, 074 USD for the first time. and Market Cap
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X