• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬಿಟ್ ಕಾಯಿನ್ ಮೌಲ್ಯ ಮತ್ತೆ $60,000 ಗಡಿ ದಾಟಿ ಏರಿಕೆ

|

ಬೆಂಗಳೂರು, ಏಪ್ರಿಲ್ 11: ಡಿಜಿಟಲ್ ಕರೆನ್ಸಿ ಕ್ರಿಪ್ಟೋಕರೆನ್ಸಿ ಬಿಟ್ ಕಾಯಿನ್, ಇಥೆರಿಯಂ, ಕಾರ್ಡನೋ ಸೇರಿದಂತೆ ಹಲವು ಕರೆನ್ಸಿಗಳು ಇತ್ತೀಚೆಗೆ ಉತ್ತಮ ವಹಿವಾಟು ಮೂಲಕ, ಒಟ್ಟಾರೆ, ಕ್ರಿಪ್ಟೋಕರೆನ್ಸಿ ಮಾರುಕಟ್ಟೆ ಮೌಲ್ಯ $2 ಟ್ರಿಲಿಯನ್‌ಗೆ ಏರಿಕೆಯಾಗಲು ಕಾರಣವಾಗಿವೆ. ಈ ನಡುವೆ ಬಿಟ್ ಕಾಯಿನ್ ಮೌಲ್ಯ ಮತ್ತೊಮ್ಮೆ $60,000 ಗಡಿ ದಾಟಿ ಏರಿಕೆ ಕಂಡಿದೆ.

ಶನಿವಾರದಂದು ಬಿಟ್ ಕಾಯಿನ್ ಮೌಲ್ಯ $61,222.22 ದಾಟಿತ್ತು. ಆದರೆ, ಇಂದು ಬಿಟ್ ಕಾಯಿನ್ ಮಧ್ಯಾಹ್ನದ ವೇಳೆಗೆ ಶೇ 1.6ರಷ್ಟು ಇಳಿಕೆ ಕಂಡು 59 ಸಾವಿರ ಡಾಲರ್ ಮೌಲ್ಯ ಗಳಿಸಿದೆ. ಜೊತೆಗೆ ಎಲ್ಲಾ ಕ್ರಿಪ್ಟೋಕರೆನ್ಸಿಗಳ ಮೌಲ್ಯ 2,032,247,822,698 ಟ್ರಿಲಿಯನ್ ಡಾಲರ್ ದಾಟಿದೆ. ಕಳೆದ ಒಂದು ವರ್ಷದಲ್ಲಿ, ಬಿಟ್‌ಕಾಯಿನ್ ಶೇಕಡಾ 103.72ರಷ್ಟು ಲಾಭವನ್ನು ನೀಡಿದೆ. ಬಿಟ್‌ಕಾಯಿನ್ ಸಾರ್ವಕಾಲಿಕ ಹೆಚ್ಚಿನ ಬೆಲೆ 61,556.59 ಡಾಲರ್ ಆಗಿದ್ದು, ಇನ್ನೂ ಈ ದಾಖಲೆ ಮತ್ತೊಮ್ಮೆ ಮುರಿದಿಲ್ಲ.

ಏಪ್ರಿಲ್ 11ರಂದು ಈ ಸಮಯಕ್ಕೆ ಬಿಟ್ ಕಾಯಿನ್ ಮೌಲ್ಯ:
ಬಿಟ್ ಕಾಯಿನ್ ಬೆಲೆ: $59,347.54
ಒಟ್ಟಾರೆ ಮಾರುಕಟ್ಟೆ ಮೌಲ್ಯ: $1,110,839,818,753
ಒಂದು ಬಿಟ್ ಕಾಯಿನ್ ಬೆಲೆ = 44,27,516.03ರು
(1 USD=74.73 ರುಪಾಯಿ)

ಕಳೆದ 24 ಗಂಟೆಗಳಲ್ಲಿ ಶೇ 1.71ರಷ್ಟು ಏರಿಕೆ ಕಂಡಿದೆ. ಈ ವಾರ ಶೇ 2.93ರಷ್ಟು ಏರಿಕೆಯಾಗಿದೆ. ಈ ನಡುವೆ ಮತ್ತೊಂದು ಡಿಜಿಟಲ್ ಕರೆನ್ಸಿ ಇಥೆರಿಯಂ (Ethereum) ಕಳೆದ 24 ಗಂಟೆಗಳಲ್ಲಿ ಶೇ 0.97ರಷ್ಟು ಇಳಿಕೆ ಕಂಡು 2,126.40 ಡಾಲರ್ ಮೌಲ್ಯ ಪಡೆದಿದೆ. ಒಟ್ಟಾರೆ $246,075,027,351 ಮೌಲ್ಯ ಹೊಂದಿದೆ. ಅಚ್ಚರಿಯೆಂದರೆ ಕಳೆದ ಒಂದು ವಾರದಲ್ಲೇ ಅತಿ ಹೆಚ್ಚು 119.44% ಏರಿಕೆ ಕಂಡಿರುವ XRP 1.34 ಯುಎಸ್ ಡಾಲರ್ ಬೆಲೆ ಹಾಗೂ $60,338,022,605 ಮೌಲ್ಯದೊಂದಿಗೆ ಗಮನ ಸೆಳೆದಿದೆ.

''ಯುಎಸ್ ವಿರುದ್ಧ ಚೀನಾದ ವಾಣಿಜ್ಯ ಅಸ್ತ್ರವೇ ಬಿಟ್ ಕಾಯಿನ್''''ಯುಎಸ್ ವಿರುದ್ಧ ಚೀನಾದ ವಾಣಿಜ್ಯ ಅಸ್ತ್ರವೇ ಬಿಟ್ ಕಾಯಿನ್''

ಬಿಟ್‌ಕಾಯಿನ್‌: ಇದು ಅತ್ಯಂತ ಜನಪ್ರಿಯ ಕ್ರಿಪ್ಟೋಕರೆನ್ಸಿಯಾಗಿದೆ. ಡಿಜಿಟಲ್ ಕರೆನ್ಸಿಯಾಗಿರುವುದರಿಂದ ಯಾವುದೇ ರೀತಿಯಲ್ಲಿ ಮುದ್ರಣ ರೂಪದಲ್ಲಿ ಸಿಗುವುದಿಲ್ಲ. ರೂಪಾಯಿ, ಡಾಲರ್, ಯುರೋ ಗಳಂತೆ ಭೌತಿಕ ರೂಪದಲ್ಲಿ ಇರುವುದಿಲ್ಲ. ಯಾವುದೇ ದೇಶ, ಭಾಷೆ, ಬ್ಯಾಂಕುಗಳಿಗೆ ಇದು ಸೀಮಿತವಾಗಿಲ್ಲ. ಭಾರತ, ಸೌದಿ ಅರೇಬಿಯಾ, ಅಲ್ಜೀರಿಯಾ, ಬೊಲಿವಿಯಾ ಅನೇಕ ದೇಶಗಳಲ್ಲಿ ನಿಷೇಧವಾಗಿರುವ ಕ್ರಿಪ್ಟೋ ಕರೆನ್ಸಿ ಇತ್ತೀಚೆಗೆ ಭಾರಿ ಬೇಡಿಕೆ ಪಡೆದು ತನ್ನ ಮೌಲ್ಯ ಹೆಚ್ಚಿಸಿಕೊಂಡಿದೆ. ಆದರೆ, ಡಿಜಿಟಲ್ ಆಸ್ತಿ ರೂಪದಲ್ಲಿ ಕ್ರಿಪ್ಟೋ ಕರೆನ್ಸಿ ಬಳಕೆಯಾಗಬಹುದೇ ಹೊರತೂ ಸಾಮಾನ್ಯ ವ್ಯವಹಾರಕ್ಕೆ ಸೂಕ್ತವಲ್ಲ ಎಂದು ತಜ್ಞರು ಕೂಡಾ ಅಭಿಪ್ರಾಯಪಟ್ಟಿದ್ದಾರೆ.

English summary
Bitcoin rose above $60,000 to approach record highs on the weekend, breaking out of a two-week tight range.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X